Kudachi Constituency: ಕುಡಚಿಯಲ್ಲಿ ಮೂರು ಪಕ್ಷಗಳ ತೀವ್ರ ಜಿದ್ದಾ ಜಿದ್ದಿ ಸಾಧ್ಯತೆ, ರಾಜೀವ್‌ಗೆ ಮರಳಿ ಅಧಿಕಾರ ಕಷ್ಟಸಾಧ್ಯ?

ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕುಡಚಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ಪಿ.ರಾಜೀವ್ ಅವರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಆದರೆ ಶಾಸಕರ ವರ್ತನೆಯ ಕಾರಣಗಳಿಂದ ಈ ಸಲ ಗೆಲುವು ಕಷ್ಟ ಸಾಧ್ಯ ಎನ್ನಲಾಗುತ್ತಿದೆ.

ಬೆಳಗಾವಿ, ಮಾರ್ಚ್ 13: ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 'ಕುಡಚಿ' ಕ್ಷೇತ್ರವು ಒಂದು. ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾಗವಾಗಿದೆ. ಇಲ್ಲಿ ಸದ್ಯ ಈ ಹಿಂದಿನ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್‌ ಹಿಡಿತದಲ್ಲಿದ್ದ ಈ ಕ್ಷೇತ್ರವು ಸದ್ಯ ಬಿಜೆಪಿ ಆಡಳಿತಕ್ಕೆ ಒಳಪಟ್ಟಿದೆ.

ಕುಡುಚಿಯು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕು ವ್ಯಾಪ್ತಿಗೆ ಬರುತ್ತದೆ. ಇಲ್ಲಿ ಸಹ ಅನೇಕ ಮಂದಿ ಕೃಷಿಯನ್ನೇ ಅವಲಂಬಿಸಿದವರು ಇದ್ದಾರೆ. ಗ್ರಾಮದ ಶೇಕಡಾ 40 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯ ನೀರು ನೀರಾವರಿಗೆ ಪೂರಕವಾಗಿ ಬಳಕೆ ಮಾಡಲಾಗುತ್ತದೆ. ಇಲ್ಲಿ ಮುಖ್ಯವಾಗಿ ಕಬ್ಬು, ಮೆಕ್ಕೆಜೋಳ, ಜೋಳ, ದ್ರಾಕ್ಷಿ , ದಾಳಿಂಬೆ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು, ಪಪ್ಪಾಯ, ಶೇಂಗಾ (ಕಡಲೆಕಾಯಿ), ಅರಿಶಿನ, ನೆಲಕಡಲೆ, ಸೂರ್ಯಕಾಂತಿ, ಗೋಧಿ ಸೇರಿದಂತೆ ಇನ್ನಿತರ ಆಹಾರ ಬೆಳೆಗಳನ್ನು ಬೆಳೆಯಲಾಗುತ್ತದೆ.

ಈ ಕುಡುಚಿಯಲ್ಲಿ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಪಿ.ರಾಜೀವ್ ಅವರು ಶಾಸಕರಾಗಿ ಆಯ್ಕೆಯಾದರು. ಅವರ ವಿರುದ್ಧ ಕಾಂಗ್ರೆಸ್‌ ಪಕ್ಷದಿಂದ ಕಣಕ್ಕಿಳಿದಿದ್ದ ಅಮಿತ್ ಶಾಮ ಘಾಟಿಗೆ ಅವರ ವಿರುದ್ಧ 67, 781 ಮತಗಳನ್ನು ಪಡೆಯುವ ಮೂಲಕ ಜಯಶಾಲಿಯಾದರು. ಜೆಡಿಎಸ್ ನಿಂದ ರಾಜೇಂದ್ರ ಅಣ್ಣಪ್ಪ ಸ್ಪರ್ಧಿಸಿದ್ದರು.

ಕುಡಚಿ ಕ್ಷೇತ್ರದ ರಾಜಕೀಯ ಇತಿಹಾಸ,

ಕುಡಚಿ ಕ್ಷೇತ್ರದ ರಾಜಕೀಯ ಇತಿಹಾಸ,

ರಾಜಕೀಯ ಇತಿಹಾಸ ನೋಡುವುದಾರೆ, ಈ ಕ್ಷೇತ್ರದಲ್ಲಿ 1967ರಿಂದಲೂ ಸತತ ಪ್ರಯತ್ನಿಸುತ್ತಾ ಬಂದ ಕಾಂಗ್ರೆಸ್‌ಗೂ ಸುಲಭವಾಗಿ ಗೆಲುವು ಸಾಧ್ಯವಾಗಿಲ್ಲ. ಆಗೆಲ್ಲ ಸಿಪಿಐ, ಜೆಎನ್‌ಪಿ ಪಕ್ಷಗಳದ್ದೆ ಗೆಲುವಿನ ಆರ್ಭಟ ವಿತ್ತು. ನಂತರ 1983ರ ಚುನಾವಣೆಯಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ ಗೆದ್ದು ಬೀಗಿತು. ಬಳಿಕ ಎರಡು ಚುನಾವಣೆಯಲ್ಲೂ ಕಾಂಗ್ರೆಸ್‌ ಪ್ರತಿನಿಧಿಗಳೇ ಗೆದ್ದರು. 1999ರಲ್ಲಿ ಒಮ್ಮೆ ಬಿಜೆಪಿ ಅಲ್ಲಿ ಗೆದ್ದಿದ್ದು ಬಿಟ್ಟರೆ, 2018ರಲ್ಲೇ ವಿಜಯ ಸಾಧಿಸಿತು. ಈ ಮಧ್ಯೆ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದ ಜೆಡಿಎಸ್ ಸಹ ಗೆಲುವಿನ ನಗೆ ಬೀರಿತ್ತು.

ಕುಡಚಿ: ಮೂರು ಪಕ್ಷಗಳಿಂದ ತೀವ್ರ ಜಿದ್ದಾ ಜಿದ್ದಿ

ಕುಡಚಿ: ಮೂರು ಪಕ್ಷಗಳಿಂದ ತೀವ್ರ ಜಿದ್ದಾ ಜಿದ್ದಿ

ಬಿಜೆಪಿಯು ಈ ಕ್ಷೇತ್ರದಲ್ಲಿ ಒಂದೆರಡು ಭಾರಿ ಗೆದ್ದಿದೆ ಬಿಟ್ಟರೆ ಇದು, ಕಾಂಗ್ರೆಸ್‌ ಹಾಗೂ ಜೆಡಿಎಸ್ ಪ್ರಾಬಲ್ಯ ಹೊಂದಿದ್ದ ವಿಧಾನಸಭಾ ಕ್ಷೇತ್ರವು ಆಗಿತ್ತು. ಸದ್ಯ ಅಲ್ಲಿ ಮತ್ತೆ ಹಿಡಿತ ಸಾಧಿಸಲು ಜೆಡಿಎಸ್‌ನ ಎಚ್‌ ಡಿ ಕುಮಾರಸ್ವಾಮಿಯವರು ಪಂಚರತ್ನ ಯಾತ್ರೆ ಮೂಲಕ ಹಲವು ಘೋಷಣೆಗಳನ್ನು ನೀಡಿದ್ದಾರೆ. ಮತ್ತೆ ಗೆಲ್ಲುವ ತವಕ ಅವರಲ್ಲಿ ಕಾಣಬಹುದಾಗಿದೆ. ಇತ್ತ ಆಡಳಿತಾರೂಢ ಬಿಜೆಪಿಯಿಂದ ಹಾಲಿ ಶಾಸಕರೇ ಮತ್ತೆ ಸ್ಪರ್ಧಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ಮೂರು ಪಕ್ಷಗಳಿಂದಲೂ ತೀವ್ರ ಜಿದ್ದಾ ಜಿದ್ದಿ ಬೀಳಲಿದೆ.

 ಶಾಸಕರ ನಡೆಯಿಂದ ಕುಡುಚಿಯಲ್ಲಿ ಗೆಲುವು ಕಷ್ಟ ಸಾಧ್ಯ

ಶಾಸಕರ ನಡೆಯಿಂದ ಕುಡುಚಿಯಲ್ಲಿ ಗೆಲುವು ಕಷ್ಟ ಸಾಧ್ಯ

ಪಿ.ರಾಜೀವ್ ಕುಡುಚಿ ಶಾಸಕರಾದ ಬಳಿಕ ಬಿಜೆಪಿಯು ಅವರನ್ನು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ 2019ರಲ್ಲಿ ನೇಮಕ ಮಾಡಿತ್ತು. ಕಳೆದ ವರ್ಷ 2022ರಲ್ಲಿ ಕುಡುಚಿ ಕ್ಷೇತ್ರದಾದ್ಯಂತ ಕೈಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂಬ ಆರೋಪ ಕೇಳಿ ಬಂದಿತ್ತು. ಆ ಬಗ್ಗೆ ಪ್ರಶ್ನೆ ಮಾಡಿದವರ ಬಂಧನಕ್ಕೆ ಶಾಸಕರೂ ಸೂಚಿಸಿದ್ದರು. ಅವರ ನಡೆ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇದಾದ ನಂತರ ಬೇಡ ಜಂಗಮರಿಗೆ ಪ್ರಮಾಣ ಪತ್ರ ನೀಡಬಾರದು ಎಂದು ಹೇಳುವ ಮೂಲಕ ಆ ಸಮುದಾಯದ ಆಕ್ರೋಶಕ್ಕೆ ಕಾರಣರಾಗಿದ್ದರು. ಇದು ಸೇರಿದಂತೆ ವಿವಿಧ ಕಾರಣಗಳಿಂದ ಈ ಸಲ ಚುನಾವಣೆ ಕುಡುಚಿಯಲ್ಲಿ ಬಿಜೆಪಿ ಗೆಲುವುಗೆ ಹೊಡೆತ ಬೀಳುವ ಸಾಧ್ಯತೆ ಇದೆ. ಇದು ವಿಪಕ್ಷಗಳಿಗೆ ವರದಾನವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಕುಡಚಿ: ಟಿಕೆಟ್ ಆಕಾಂಕ್ಷಿಗಳು

ಕುಡಚಿ: ಟಿಕೆಟ್ ಆಕಾಂಕ್ಷಿಗಳು

ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿಯು ಬಿಜೆಪಿಯಿಂದ ಹಾಲಿ ಶಾಸಕ ಪಿ.ರಾಜೀವ್ ಅವರೇ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿದೆ. ಇನ್ನೂ ಇತ್ತೀಚೆಗೆ ಈ ಶಾಸಕರನ್ನು ಚಿತ್ತಾಪುರ ಕ್ಷೇತ್ರದಿಂದ ಕಣಕ್ಕಿಳಿಸಿ, ಪ್ರಿಯಾಂಕ್ ಖರ್ಗೆ ಅವರನ್ನು ಕಟ್ಟಿಹಾಕಲು ಪ್ಲಾನ್ ನಡೆದಿದೆ ಎನ್ನಲಾಗಿತ್ತು. ಆದರೆ ಪಿ.ರಾಜೀವ್ ಅದನ್ನು ತಳ್ಳಿಹಾಕಿದ್ದರು. ಸದ್ಯಕ್ಕೆ ಅವರೇ ಸ್ಪರ್ಧಿಸಲಿದ್ದಾರೆ. ಇನ್ನೂ ಸಲ ಅತೀ ಕಡಿಮೆ ಅಂತರದಲ್ಲಿ ಸೋತಿದ್ದ ಕಾಂಗ್ರೆಸ್‌ನ ಅಮಿತ್ ಶಾಮ ಘಾಟಗೆ ಅವರು ಇನ್ನೋಮ್ಮೆ ಅದೃಷ್ಟ ಪರೀಕ್ಷೆ ಬಯಸಿದ್ದಾರೆ. ಇದರ ಹೊರತಾಗಿಯೂ ಕಾಂಗ್ರೆಸ್‌ ಹಾಗೂ ಇತ್ತ ಜೆಡಿಎಸ್ ಯಾರನ್ನು ನಿಲ್ಲಿಸಲಿದೆ ಎಂದು ತಿಳಿಯಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+