Karnataka Elections 2023 : ಸಂತೆಭಾಷಣದಲ್ಲಿ ಸಿದ್ದ ಹಸ್ತರಾಗಿರುವವರು ಎಂದು ಸಿದ್ದರಾಮಯ್ಯರನ್ನು ಗೇಲಿ ಮಾಡಿದ ಜೆಡಿಎಸ್
ರಾಜ್ಯ ರಾಜಕೀಯ ಚುನಾವಣಾ ಕಣ ರಂಗೇರುತ್ತಿದ್ದು, ಕೋಲಾರ ಕ್ಷೇತ್ರ ಹೆಚ್ಚು ಗಮನ ಸೆಳೆಯುತ್ತಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಇಲ್ಲಿಂದ ಸ್ಪರ್ಧಿಸುತ್ತಿರುವುದು ಇದಕ್ಕೆ ಕಾರಣ. ಈ ಬಗ್ಗೆ ಜೆಡಿಎಸ್ ಕೂಡ ಮಂಗಳವಾರ ವ್ಯಂಗ್ಯವಾಡಿದೆ. ಏಕೆ ಎಂಬುದನ್ನು ತಿಳಿಯೋಣ.
ಬೆಂಗಳೂರು, ಜನವರಿ. 24: ಸದ್ಯಕ್ಕೆ ರಾಜ್ಯ ಚುನಾವಣಾ ಪ್ರಚಾರದಲ್ಲಿ ಎಲ್ಲಾ ಪಕ್ಷಗಳ ರಾಜಕೀಯ ನಾಯಕರು ತೊಡಗಿಸಿಕೊಂಡಿದ್ದಾರೆ. ತಮ್ಮದೇ ಪಕ್ಷಗಳ ಅಡಿಯಲ್ಲಿ ಯಾತ್ರೆಗಳ್ನು ಮಾಡುತ್ತಾ ಜನರ ಗಮನ ಸೆಳೆಯಲು ಯತ್ನಿಸುತ್ತಿವೆ. ಇದರ ನಡುವೆ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆಯನ್ನು ಜೆಡಿಎಸ್ ಟೀಕಿಸಿದ್ದು, ಸಿದ್ದರಾಮಯ್ಯ ಅವರ ಕ್ಷೇತ್ರ ಆಯ್ಕೆಯ ಕುರಿತು ವ್ಯಂಗ್ಯವಾಡಿದೆ.
ಕೋಲಾರದಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಸಾಕಷ್ಟು ಸಂಖ್ಯೆಯಲ್ಲಿ ಸೇರಿಲ್ಲ ಎಂಬ ಸ್ಥಳೀಯ ಪತ್ರಿಕೆಯ ವರದಿಯನ್ನು ಹಂಚಿಕೊಂಡಿರುವ ಜೆಡಿಎಸ್, 'ಪ್ರಜಾಧ್ವನಿ' ಸಮಾವೇಶಗಳು ಜನರಿಲ್ಲದೆ ಎಷ್ಟು ಪೇಲವವಾಗಿವೆ ಎಂದು ಅಣುಕಿಸಿದೆ.
"ಅಧಿಕಾರ ಹಿಡಿಯಲು ಸುಳ್ಳು, ಅಪಪ್ರಚಾರ, ಊಸರವಳ್ಳಿಯಂತೆ ಬಣ್ಣ ಬದಲಾಯಿಸುವುದನ್ನೇ ಕರಗತ ಮಾಡಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಪಕ್ಷದ 'ಪ್ರಜಾಧ್ವನಿ' ಸಮಾವೇಶಗಳು ಜನರಿಲ್ಲದೆ ಎಷ್ಟು ಪೇಲವವಾಗಿವೆ ಎಂಬುದಕ್ಕೆ ಕೋಲಾರದಲ್ಲಿ ನಿನ್ನೆ ನಡೆದ ಕಾರ್ಯಕ್ರಮ ಸಾಕ್ಷಿ. ಕಾಂಗ್ರೆಸ್ ನವರು ಜನತೆಯ ನಿರುತ್ಸಾಹದಿಂದಾಗಿ ಭಯಗೊಂಡಿರಬೇಕಷ್ಟೆ..!" ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಅಧಿಕಾರ ಹಿಡಿಯಲು ಸುಳ್ಳು, ಅಪಪ್ರಚಾರ, ಊಸರವಳ್ಳಿಯಂತೆ ಬಣ್ಣ ಬದಲಾಯಿಸುವುದನ್ನೇ ಕರಗತ ಮಾಡಿಕೊಂಡಿರುವ @INCKarnataka ಪಕ್ಷದ 'ಪ್ರಜಾಧ್ವನಿ' ಸಮಾವೇಶಗಳು ಜನರಿಲ್ಲದೆ ಎಷ್ಟು ಪೇಲವವಾಗಿವೆ ಎಂಬುದಕ್ಕೆ ಕೋಲಾರದಲ್ಲಿ ನಿನ್ನೆ ನಡೆದ ಕಾರ್ಯಕ್ರಮ ಸಾಕ್ಷಿ. ಕಾಂಗ್ರೆಸ್ ನವರು ಜನತೆಯ ನಿರುತ್ಸಾಹದಿಂದಾಗಿ ಭಯಗೊಂಡಿರಬೇಕಷ್ಟೆ!
— Janata Dal Secular (@JanataDal_S) January 24, 2023
1/4 pic.twitter.com/GN9zrwKTHG
"ಸಂತೆಭಾಷಣದಲ್ಲಿ 'ಸಿದ್ದ ಹಸ್ತ'ರಾಗಿರುವ ವ್ಯಕ್ತಿಯು ಕೋಲಾರ ಮತಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಸಜ್ಜಾಗಿರುವ ವೇಳೆ ಕನಿಷ್ಠ ಜನರು ಕೂಡ ಸಮಾವೇಶಕ್ಕೆ ಸೇರದಿರುವುದನ್ನು ಕಂಡು ದಿಗಿಲಾಗಿರುವುದು ಖಚಿತ. ಐದು ವರ್ಷಗಳ ಕಾಲ ಅಧಿಕಾರ ನಡೆಸಿದ ಮುಖ್ಯಮಂತ್ರಿ ಎಂದು ಬೀಗುವವರೆ, ಜನರು ನಿಮ್ಮ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ" ಎಂದು ಟೀಕಿಸಿದೆ.

"ಕಪಟತನದಿಂದ ಅಧಿಕಾರ ನಡೆಸಿ, ಬೊಬ್ಬಿರಿದಿದ್ದು ಬಿಟ್ಟರೆ ಸಾಧಿಸಿದ್ದೇನು ಎಂಬುದಕ್ಕೆ ನಿಮ್ಮ ಬಳಿ ಉತ್ತರವಿಲ್ಲ. ಈಗ ಮತ್ತೆ ಕಿವಿಮೇಲೆ ಹೂವಿಡುವ ಆಶ್ವಾಸನೆಗಳನ್ನು ಕೊಡುತ್ತಿದ್ದೀರಿ. ಜನರು ಮೂರ್ಖರಲ್ಲ. ನಮ್ಮ ಪಕ್ಷದ 'ಪಂಚರತ್ನ' ಯೋಜನೆಯನ್ನು ಟೀಕಿಸುವ ನಿಮಗೆ, ಅದರಲ್ಲಿನ ಕಾರ್ಯಕ್ರಮಗಳ ಮಹತ್ವದ ಅರಿವಿದೆಯೆ..?" ಎಂದು ಪ್ರಶ್ನಿಸಿದೆ.
"'ಸಿದ್ದ ಹಸ್ತ'ರನ್ನು ಕರೆತಂದರೆ ಕೋಲಾರದಲ್ಲಿ ತಮ್ಮ ನೆಲೆ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದ್ದವರಿಗೆ ಸೋಲಿನ ಅಂದಾಜು ಸಿಕ್ಕಿರಲು ಸಾಕು. ಒಟ್ಟಿನಲ್ಲಿ,ಕೋಲಾರದಲ್ಲಿ ಕಾಂಗ್ರೆಸ್ ಮುಗ್ಗರಿಸುವುದು ಖಚಿತ. ಜೆಡಿಎಸ್ ವಿರುದ್ದ ಮನಬಂದಂತೆ ಟೀಕಿಸುವುದನ್ನ ಈಗಲಾದರೂ ಬಿಡಿ,ಇಲ್ಲದಿದ್ದರೆ ಸಿಗುವ ನಾಲ್ಕು ಮತಗಳನ್ನು ಕಳೆದುಕೊಳ್ಳುತ್ತೀರಿ..!" ಎಂದು ಎಚ್ಚರಿಸಿದೆ.
'ಸಿದ್ದ ಹಸ್ತ'ರನ್ನು ಕರೆತಂದರೆ ಕೋಲಾರದಲ್ಲಿ ತಮ್ಮ ನೆಲೆ ಉಳಿಸಿಕೊಳ್ಳಬಹುದು ಎಂಬ ಲೆಕ್ಕಾಚಾರದಲ್ಲಿದ್ದವರಿಗೆ ಸೋಲಿನ ಅಂದಾಜು ಸಿಕ್ಕಿರಲು ಸಾಕು. ಒಟ್ಟಿನಲ್ಲಿ,ಕೋಲಾರದಲ್ಲಿ ಕಾಂಗ್ರೆಸ್ ಮುಗ್ಗರಿಸುವುದು ಖಚಿತ. ಜೆಡಿಎಸ್ ವಿರುದ್ದ ಮನಬಂದಂತೆ ಟೀಕಿಸುವುದನ್ನ ಈಗಲಾದರೂ ಬಿಡಿ,ಇಲ್ಲದಿದ್ದರೆ ಸಿಗುವ ನಾಲ್ಕು ಮತಗಳನ್ನು ಕಳೆದುಕೊಳ್ಳುತ್ತೀರಿ!
— Janata Dal Secular (@JanataDal_S) January 24, 2023
4/4
ಸೋಮವಾರವಷ್ಟೇ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ, ಸುಮ್ಮನೆ ನಾಟಕವಾಡುತ್ತಿದ್ದಾರೆ. ಅವರು ಹಳೇ ಮೈಸೂರು ಭಾಗದಿಂದ ಸ್ಪರ್ಧಿಸುತ್ತಾರೆ ಎಂದ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಹೊಸ ವಿಷಯ ಬಹಿರಂಗಪಡಿಸಿದ್ದರು. ಬಳಿಕ ಸಿದ್ದರಾಮಯ್ಯ ಕೂಡ ತಾನು ಕೋಲಾರದಿಮದಲೇ ಸ್ಪರ್ಧಿಸುವುದಾಗಿ ಮತ್ತೊಮ್ಮೆ ಘೋಷಿಸಿದ್ದರು.












Click it and Unblock the Notifications