ಬಿಜೆಪಿ ಕುಟುಂಬ ರಾಜಕಾರಣದ ಪಟ್ಟಿ ಹರಿಬಿಟ್ಟ ದಳಪತಿ: ಮೋದಿ, ಅಮಿತ್‌ ಶಾಗೆ ಠಕ್ಕರ್‌

ಬೆಂಗಳೂರು,ಏಪ್ರಿಲ್13:‌ ರಾಜ್ಯ ವಿಧಾನಸಭಾ ಚುನಾವಣಾ ರಣಕಣ ರಂಗೇರಿದೆ. ಇತ್ತ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಆಡಳಿತರೂಢ ಬಿಜೆಪಿ ಅಳೆದು ತೂಗಿ ಮೊದಲು ಹಾಗೂ ಎರಡನೇ ಪಟ್ಟಿಯಲ್ಲಿ 212 ಅಭ್ಯರ್ಥಿಗಳನ್ನ ಚುನಾವಣಾ ಕಣಕ್ಕಿಳಿಸಿದೆ.

ಇತ್ತ ಬಿಜೆಪಿ ಹೈಕಮಾಂಡ್‌ ನಾಯಕರು ಕರ್ನಾಟಕಕ್ಕೆ ಬಂದಾಗೆಲ್ಲಾ ಕುಟುಂಬ ರಾಜಕಾರಣ ಎಂದು ನಿರಂತರ ಬೊಬ್ಬಿರಿಯುವ ಕೇಂದ್ರ ಸಚಿವ ಅಮಿತ್‌ ಶಾ ಹಾಗೂ ಪ್ರಧಾನಿ ನರೇಂದ್ರ ಮೋದಿ ನಾಯಕ ವಿರುದ್ದ ಟಾಂಗ್‌ ನೀಡಿದ್ದು, ಬಿಜೆಪಿ ಹೇಳುವುದು ಒಂದು, ಮಾಡುವುದು ಒಂದು. ಈ ಕೆಳೆಗೆ ರಾಜ್ಯ ಚುನಾವಣೆಗೆ ಬಿಜೆಪಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವ ಪಟ್ಟಿ ನೀಡಿದ್ದೇವೆ, ಬಿಜೆಪಿ ನಾಯಕರು ನೈತಿಕತೆಯನ್ನು ಪ್ರಶ್ನಿಸಿಕೊಳ್ಳಲಿ ಎಂದು ಜೆಡಿಎಸ್‌ ಟ್ವೀಟ್‌ ಮಾಡಿದೆ.

karnataka Assembly Elections 2023 JDS Released The List Of BJP Family Politics

ವಂಶಪಾರಂಪರ್ಯ, ಪರಿವಾರ ಅಂತೆಲ್ಲ ಉದ್ದುದ್ದ ಭಾಷಣ ಮಾಡುವ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಜನತೆಯನ್ನು ಮೂರ್ಖ ಮಾಡಿದ್ದೇ ಹೆಚ್ಚು. ಜೆಡಿಎಸ್ ಬಗ್ಗೆ ಇದೇ ವಾದ ಇಟ್ಟುಕೊಂಡು, ಅಪಪ್ರಚಾರ ಮಾಡಿದ ಈ ಎರಡೂ ಪಕ್ಷಗಳು ಹೇಗೆ ಟಿಕೆಟ್ ಹಂಚಿಕೆ ಮಾಡಿವೆ ಎಂಬುದನ್ನು ನೋಡಿದರೆ ಸಾಕು, ಇವರ ಬಣ್ಣ ಬಯಲಾಗುತ್ತದೆ ಎಂದು ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದೆ.

ದೆಹಲಿ ಹೈಕಮಾಂಡ್ ಗುಲಾಮಗಿರಿಯಲ್ಲಿ ಕಾಯುತ್ತಾ ಕೊನೆಗೂ ಬಿಜೆಪಿ ಪಕ್ಷದ ಎರಡು ಪಟ್ಟಿ ಬಿಡುಗಡೆಯಾಗಿದೆ. ಮಕ್ಕಳು, ಸಹೋದರರು, ಹೆಂಡತಿ ಹೀಗೆ ಅಧಿಕಾರದಲ್ಲಿದ್ದ, ಇರುವ ರಾಜಕಾರಣಿಗಳ ಕುಟುಂಬಕ್ಕೆ ಧಾರಾಳವಾಗಿ ಟಿಕೆಟ್ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಹಿಡಿದು, ರಾಜ್ಯದ ಬಿಜೆಪಿ ಮುಖಂಡರು ಈಗ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದೆ.

ನೈತಿಕತೆ, ಪ್ರಜ್ಞೆ ಇಲ್ಲದ, ಗುಲಾಮಿ ಮನಸ್ಥಿತಿಯ ಈ ಹೈಕಮಾಂಡ್ ಪಕ್ಷಗಳು ಹೇಳಿದ್ದೆಲ್ಲವನ್ನೂ ಕೇಳುವಷ್ಟು ಮುಗ್ಧರಲ್ಲ ಕನ್ನಡಿಗರು. ಜೆಡಿಎಸ್ ಬಗ್ಗೆ ಇವರ ಅಪಪ್ರಚಾರ ಎಷ್ಟೇ ಇದ್ದರೂ, ಪ್ರಾದೇಶಿಕ ಅಸ್ಮಿತೆ ಮುಖ್ಯವಾಗಿಸಿಕೊಂಡ ಪಕ್ಷದ ಮಹತ್ವ ಜನತೆಗೆ ತಿಳಿದಿದೆ. ಈ ಎರಡೂ ಪಕ್ಷಗಳ ದುರಹಂಕಾರ, ಸುಳ್ಳುಗಳಿಗೆ ಈ ಸಲದ ಚುನಾವಣೆ ಉತ್ತರವಾಗಲಿದೆ ಎಂದು ಜೆಡಿಎಸ್‌ ಟ್ವೀಟ್‌ ಮಾಡಿದೆ.

karnataka Assembly Elections 2023 JDS Released The List Of BJP Family Politics

ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿರುವ ಪಟ್ಟಿ ಬಿಡುಗಡೆ ಮಾಡಿದ ದಳಪತಿಗಳು

1. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಕುಟುಂಬ ರಾಜಕಾರಣದ ಕೂಸು, ಅವರ ತಂದೆ ಮಾಜಿ ಸಿಎಂ ಆಗಿದ್ದವರು.

2. ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರು ತಮ್ಮ ಪುತ್ರನಿಗೆ ಶಾಸಕ ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದು, ಅವರ ಮತ್ತೊಬ್ಬ ಪುತ್ರ ಸಂಸದರಾಗಿದ್ದಾರೆ.

3. ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದ್ದು, ಅವರ ಸೋದರನ ಮಗ ತೇಜಸ್ವಿ ಸೂರ್ಯ ಸಂಸದರಾಗಿದ್ದಾರೆ.

4. MLA ಜ್ಯೋತಿ ಗಣೇಶ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ, ಅವರ ತಂದೆ ಬಸವರಾಜ್ ಸಂಸದರಾಗಿದ್ದಾರೆ.

5. ಇಬ್ಬರು ಜಾರಕಿಹೊಳಿ ಸಹೋದರರಿಗೆ ಮತ್ತೆ MLA ಟಿಕೆಟ್ ನೀಡಲಾಗಿದೆ.

6. ಕತ್ತಿ ಕುಟುಂಬದಲ್ಲಿ, ಉಮೇಶ್ ಕತ್ತಿ ಅವರ ಮಗ ಹಾಗೂ ಸಹೋದರನಿಗೆ MLA ಟಿಕೆಟ್ ನೀಡಲಾಗಿದೆ.

7. ಇಬ್ಬರು ರೆಡ್ಡಿ ಸಹೋದರರಿಗೆ ಎಂಎಲ್ಎ ಟಿಕೆಟ್ ನೀಡಲಾಗಿದೆ.

8. ಹರ್ಷವರ್ಧನ್‌ಗೆ MLA ಟಿಕೆಟ್ ನೀಡಲಾಗಿದ್ದು, ಅವರ ಮಾವ ಶ್ರೀನಿವಾಸ್ ಪ್ರಸಾದ್ ಸಂಸದರಾಗಿದ್ದಾರೆ.

9. ಬಿಜೆಪಿ ಸಂಸದ ಅಣ್ಣಾಸಾಹೇಬರ ಪತ್ನಿ ಶಶಿಕಲಾ ಜೊಲ್ಲೆಗೆ ಟಿಕೆಟ್ ನೀಡಲಾಗಿದೆ.

10. ಮಾಜಿ ಸಚಿವರ ಪುತ್ರ ಪ್ರೀತಂ ನಾಗಪ್ಪ ಅವರಿಗೆ ಟಿಕೆಟ್ ನೀಡಲಾಗಿದೆ.

11. ಸಂಸದ ಉಮೇಶ್ ಜಾಧವ್ ಮಗ ಅವಿನಾಶ್ ಜಾಧವ್‌ಗೆ ಟಿಕೆಟ್ ನೀಡಲಾಗಿದೆ.

12. ಮಾಜಿ ಸಿಎಂ ಮಗ ಕುಮಾರ್ ಬಂಗಾರಪ್ಪ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ.

13. ಮಾಜಿ ಸಚಿವರ ಮಗ ದತ್ತಾತ್ರೇಯ ಪಾಟೀಲ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ.

14. ಸುರೇಶ್ ಬಾಬು ಮತ್ತು ಶ್ರೀರಾಮುಲು, ಅವರ ಸೋದರಳಿಯ ಮತ್ತು ಚಿಕ್ಕಪ್ಪನಿಗೆ ಟಿಕೆಟ್ ನೀಡಲಾಗಿದೆ.

15. ಮಾಜಿ ಶಾಸಕನ ಪುತ್ರ ಅರವಿಂದ್ ಬೆಲ್ಲದ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ.

16. ಚಂದ್ರಕಾಂತ ಪಾಟೀಲ್‌ಗೆ ಟಿಕೆಟ್ ನೀಡಲಾಗಿದ್ದು, ಅವರು ತಂದೆ MLC.

17. ಮಾಜಿ ಸಚಿವರ ಮಗ ಸಪ್ತಗಿರಿ ಗೌಡರಿಗೆ ಟಿಕೆಟ್.

18. ಮಾಜಿ ಶಾಸಕರ ಪುತ್ರ ಅಮೃತ್ ದೇಸಾಯಿಗೆ ಮತ್ತೆ ಟಿಕೆಟ್.

19. ಸಚಿವ ಆನಂದ್ ಸಿಂಗ್ ಅವರ ಮಗ ಸಿದ್ದಾರ್ಥ್ ಸಿಂಗ್‌ಗೆ ಟಿಕೆಟ್.

20. ಮಾಜಿ ಸಚಿವರ ಪುತ್ರಿ ಪೂರ್ಣಿಮಾ ಶ್ರೀನಿವಾಸ್‌ಗೆ ಮತ್ತೆ ಟಿಕೆಟ್ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+