Jamkhandi Constituency Profile: ಕಾಂಗ್ರೆಸ್- ಬಿಜೆಪಿ ಮಧ್ಯೆ ತೀವ್ರ ಹಣಾಹಣಿ, ನ್ಯಾಮಗೌಡರ ವಿರುದ್ಧ ಗೆಲ್ಲವವರು ಯಾರು?
ಬಾಗಲಕೋಟೆ ಜಿಲ್ಲೆಯ 'ಜಮಖಂಡಿ' ವಿಧಾನಸಭಾ ಕ್ಷೇತ್ರವು ಒಂದು. ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಕಳೆದ ಬಾರಿ ಕಾಂಗ್ರೆಸ್ ಗೆದ್ದಿದೆ. ಈ ಬಾರಿ ತೀವ್ರ ಪೈಪೋಟಿ ಒಡ್ಡಿ ಗೆಲ್ಲಲ್ಲು ಬಿಜೆಪಿ ಸಿದ್ಧತೆ ನಡೆಸಿದೆ.
ಬಾಗಲಕೋಟೆ, ಮಾರ್ಚ್ 14: ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಪೈಕಿ ಬಾಗಲಕೋಟೆ ಜಿಲ್ಲೆಯ 'ಜಮಖಂಡಿ' ವಿಧಾನಸಭಾ ಕ್ಷೇತ್ರವು ಒಂದು. ಈ ಕ್ಷೇತ್ರದಿಂದ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದೆ. ಹಿಂದಿನಿಂದಲೂ ಇದು ಕಾಂಗ್ರೆಸ್ ಭದ್ರಕೊಟೆಯಾಗಿದೆ. ಇಲ್ಲಿ ಚುನಾವಣಾ ಅಖಾಡ ರಂಗೇರುತ್ತಿದೆ.
ಜಮಖಂಡಿಯ ಐತಿಹಾಸಿಕತೆ ತಿಳಿಯುವುದಾದರೆ, ಇಲ್ಲಿ ಪ್ರಾಚೀನ ಕಾಲದ ಜಂಬುಕೇಶ್ವರ ದೇವಸ್ಥಾನ ವಿದ್ದು, ಅದು ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದೆ. ಇಲ್ಲಿ ಹೆಚ್ಚು ಕತ್ತೆಗಳು ಇಂದಿಗೂ ಕಂಡು ಬರುತ್ತಿದ್ದು, ಅದಕ್ಕೆ ಅದರದ್ದೇ ಆದ ಹಿನ್ನೆಲೆ ಇದೆ. ಇಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನಿಂದ 22ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಜರುಗಿದೆ.
ಈ ಜಮಖಂಡಿ ಪಟ್ಟಣದಲ್ಲಿ ನ್ಯಾಕ್ 'ಎ' ಮಾನ್ಯತೆ ಪಡೆದ ಬಿಲ್‌ಡಿಇ ಸಂಸ್ಥೆ, ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಪದವಿ ಪೂರ್ವ ಕಾಲೇಜು ಸೇರಿದಂತೆ ಖ್ಯಾತ ಶಿಕ್ಷಣ ಸಂಸ್ಥೆಗಳು ಇವೆ. ಸರ್ವ ಧರ್ಮಿಯರು ಇಲ್ಲಿದ್ದಾರೆ. ಸಂಗೀತ ಕಲೆಗೆ ಆದ್ಯತೆ ಇರುವ ಇಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಜನಿಸಿದ ಸ್ಥಳ ಇದಾಗಿದೆ. ಬಹುವರ್ಷಗಳಿಂದಲೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತ ಬೇರೂರಿದೆ.

ಕಾಂಗ್ರೆಸ್ ಅನ್ನು ಹಿಮ್ಮೆಟ್ಟಿಸಲಾಗದ ಬಿಜೆಪಿ, ಏನಿದು?
ಸ್ವಾತಂತ್ರ್ಯಾ ನಂತರ ನಡೆದ ವಿಧಾನಸಭಾ ಚುನಾವಣೆಗಳಿಂದ ಕಳೆದ 2018ರ ಚುನಾವಣೆಯ ವರೆಗೂ ಬಹುತೇಕ ಸಲ ಸ್ಪರ್ಧಿಸಿ ಗೆದ್ದದ್ದು ಕಾಂಗ್ರೆಸ್. ಮೊದಲಿಂದಲೂ ಇದು ಕಾಂಗ್ರೆಸ್‌ನ ಭದ್ರಕೋಟೆ. 1957, 1962, 1972, 1978 ಸೇರಿದಂತೆ ಅನೇಕ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಜಯಬೇರಿ ಭಾರಿಸಿದ್ದಾರೆ. ಕಳೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಅದರ ಹಿಂದಿನ ಎರಡು ಬಾರಿ (2004 & 2008)ರಲ್ಲಿ ಮಾತ್ರವೇ ಬಿಜೆಪಿ ಗೆಲುವ ಸಾಧಿಸಿತ್ತು. ಅದಾದ ಬಳಿಕ ಶತಪ್ರಯತ್ನ ಪಟ್ಟರೂ ಇಲ್ಲಿ ಬಿಜೆಪಿ ಗೆದ್ದಿಲ್ಲ. ಈ ಬಾರಿಯು ಬಿಜೆಪಿ ಅದೃಷ್ಟದ ಪರೀಕ್ಷೆಗೆ ಇಳಿಯಲಿದೆ.

ಜಮಖಂಡಿ: ನ್ಯಾಮಗೌಡರ ಕುಟುಂಬದ ಪ್ರಾಬಲ್ಯ
ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರಾದ ನ್ಯಾಮಗೌಡರ ಕುಟುಂಬದ ಪ್ರಾಬಲ್ಯವಿದೆ. ದಿವಂಗತ ಸಿದ್ದು ಬಿ.ನ್ಯಾಮಗೌಡರು 2008ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆದರೆ ಸೋಲು ಕಂಡರು. ಬಳಿಕ 2013 ಹಾಗೂ 2018ರಲ್ಲಿ ನಡೆದ ಈ ಎರಡು ಚುನಾವಣೆಯಲ್ಲಿ ಅವರ ಯತ್ನ ಫಲಿಸಿತ್ತು. ಅವರೇ ಶಾಸಕರಾಗಿ ಚುನಾಯಿತರಾದರು. ಆದರೆ ಅವರ ಅಕಾಲಿಕ ಮರಣದ ಬಳಿಕ ಆ ಸ್ಥಾನಕ್ಕೆ ಉಪಚುನಾವಣೆ (2018ರಲ್ಲಿ) ನಡೆದಾಗ ಅವರ ಪುತ್ರ ಆನಂದ್ ಸಿದ್ದು ನ್ಯಾಮಗೌಡ ಅವರು ಸ್ಪರ್ಧಿಸಿ ಗೆದ್ದರು. ಕಾರಣದ ಕ್ಷೇತ್ರದಲ್ಲಿ ಹಾಲಿ ಶಾಸಕರ ಕುಟುಂಬದ ಪ್ರಾಬಲ್ಯ ಅಷ್ಟರಮಟ್ಟಿಗಿದೆ ಎಂಬುದು ಗೊತ್ತಾಗುತ್ತದೆ.
ಹೀಗಾಗಿ ಈ ಭಾರಿ ಬಿಜೆಪಿಗೆ ಕಾಂಗ್ರೆಸ್ ತೀವ್ರ ಪೈಪೋಟಿ ಒಡ್ಡಲಿದೆ.

ಈ ಸಲವು ಬಿಜೆಪಿಯಿಂದ ತೀವ್ರ ಪೈಪೋಟಿ, ಗೆಲುವು ಯಾರಿಗೆ?
ಪ್ರತಿ ಚುನಾಣೆಯಲ್ಲೂ ಜಮಖಂಡಿಯಲ್ಲಿ ಕಾಂಗ್ರೆಸ್ ಹಿಡಿತ ಸಡಿಲಿಸಲು ಬಿಜೆಪಿ ರಣತಂತ್ರ ರೂಪಿಸುತ್ತಲೇ ಇದೆ. ಆದರೆ ಅದು ಸಾಧ್ಯವಾಗಿಲ್ಲ. ಈ ಭಾರಿಯು ಪ್ರಬಲ ನಾಯಕರೊಬ್ಬರನ್ನು ಕಣಕ್ಕಿಳಿಸಿ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ ಇದೆ. ಉಪ ಚುನಾವಣೆಯಂತೆ ಈ ಬಾರಿಯು ಸಿದ್ದು ನ್ಯಾಮಗೌಡರು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಕಾಂಗ್ರೆಸ್ ತನ್ನ ಹುಮ್ಮಸ್ಸನ್ನು ಕಳೆದುಕೊಳ್ಳದೇ ಅಗತ್ಯ ಸಿದ್ಧತೆಯಲ್ಲಿ ತೊಡಗಿದೆ.

ಜಮಖಂಡಿ ಟಿಕೆಟ್ ಆಕಾಂಕ್ಷಿಗಳು ಯಾರು?
ಕಾಂಗ್ರೆಸ್ ನಾಯಕರಾದ ದಿ.ಸಿದ್ದು ನ್ಯಾಮಗೌಡರ ಪ್ರಭಾವವಿದೆ. ಹೀಗಾಗಿ ಅವರ ಪುತ್ರ ಆನಂದ್ ಸಿದ್ದು ನ್ಯಾಮಗೌಡರೇ ಇಲ್ಲಿನ ಅಭ್ಯರ್ಥಿ ಎಂಬುದು ಬಹುತೇಕ ಖಚಿತವಾಗಿದೆ. ಇತ್ತ ಕಳೆದು ಎರಡು ಬಾರಿಯು ಸೋಲು ಕಂಡಿರುವ ಬಿಜೆಪಿ ಈ ಸಲ ಈ ಭಾಗದ ಪ್ರಭಾವಿ ನಾಯಕನಿಗೆ ಮಣೆ ಹಾಕುವ ಸಾಧ್ಯತೆ ಇದೆ. ಕಳೆದ ಬಾರಿ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸೋತ ಶ್ರೀಕಾಂತ್ ಕುಲಕರ್ಣಿ ಈ ಬಾರಿಯು ಟಿಕೆಟ್ ಬಯಸಿದ್ದಾರೆ. ಆದರೆ ಕಮಲ ಯಾರನ್ನು ಕಣಕ್ಕಿಳಿಸಲಿದೆ ಎಂದು ಗೊತ್ತಾಗಬೇಕಿದೆ. ಇನ್ನೂ ಜೆಡಿಎಸ್ ಇಲ್ಲಿಂದ ಸ್ಪರ್ಧಿಸುವ ಗೋಜಿಗೆ ಹೋದಂತಿಲ್ಲ.












Click it and Unblock the Notifications