ಕರ್ನಾಟಕ ವಿಧಾನಸಭೆ ಚುನಾವಣೆ: ಮುಸ್ಲಿಮರಿಗಾಗಿ ಬಿಜೆಪಿಯ ಚುನಾವಣಾ ರಣತಂತ್ರ, ವಿವರಗಳು

ರಾಜ್ಯದಲ್ಲಿ ಸಣ್ಣ ಸಮುದಾಯವಾಗಿರುವ ಪಸ್ಮಾಂಡ ಮುಸ್ಲಿಮರ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಹಲವು ನಾಯಕರು ಪ್ರಚಾರ ಆರಂಭಿಸಿದ್ದಾರೆ.

ಬೆಂಗಳೂರು, ಫೆಬ್ರವರಿ. 14: ಕಳೆದ ಜುಲೈ 2022 ಮತ್ತು ಜನವರಿ 2023 ರಲ್ಲಿ ಹೈದರಾಬಾದ್ ಮತ್ತು ನವದೆಹಲಿಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಪಸ್ಮಾಂಡ ಮುಸ್ಲಿಮರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸುವಂತೆ ಮಾಡಲು ಕಾರ್ಯಕರ್ತರಿಗೆ ಸೂಚನೆ ನಿಡಿದ್ದರು. ಈ ಸಮುದಾಯ ಮತ ಚಲಾಯಿಸಲಿ ಅಥವಾ ಮತ ಚಲಾಯಿಸದೆ ಇರಲಿ ಅವರನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗುವಂತೆ ಮಾಡಬೇಕು ಎಂದಿದ್ದರು. ಇದು ಈಗ ಹೊಸ ರೂಪವನ್ನು ಪಡೆಯುತ್ತಿದೆ.

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಸಮುದಾಯದ ಬಗ್ಗೆ ಬಿಜೆಪಿ ನಾಯಕರು ಆಸಕ್ತಿ ತೋರುತ್ತಿದ್ದಾರೆ. ಕರ್ನಾಟಕದಲ್ಲಿ ಪಸ್ಮಾಂಡ ಮುಸ್ಲಿಮರನ್ನು 'ಮುಸ್ಲಿಮರು' ಎಂಬ ಸಾಮಾನ್ಯ ಟ್ಯಾಗ್‌ನಡಿಯಲ್ಲಿ ಗುರುತಿಸಲ್ಪಟ್ಟ ಸಣ್ಣ ಸಮುದಾಯವಾಗಿದೆ. ಆದರೂ, ಕೆಲವು ಬಿಜೆಪಿ ನಾಯಕರು ಸಮುದಾಯದಲ್ಲಿ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.

ದೇಶದಲ್ಲಿ ಮುಸ್ಲಿಮರನ್ನು ಮೂರು ಸಾಮಾಜಿಕ ಗುಂಪುಗಳಾಗಿ ವರ್ಗೀಕರಿಸಲಾಗಿದೆ. ಅಶ್ರಫ್ಸ್ (ಧಾರ್ಮಿಕ ಮುಖಂಡರು) ಅಜ್ಲಾಫ್ (ಹಿಂದುಳಿದ ಮುಸ್ಲಿಮರು) ಮತ್ತು ಅರ್ಜಾಲ್ (ದಲಿತ ಮುಸ್ಲಿಮರು). ಅಜ್ಲಾಫ್ ಮತ್ತು ಅರ್ಜಲ್ ಅವರನ್ನು ಒಟ್ಟಾಗಿ ಪಸ್ಮಾಂಡ ಮುಸ್ಲಿಮರು ಎಂದು ಕರೆಯಲಾಗುತ್ತದೆ. ಪಸ್ಮಾಂಡ ಪರ್ಷಿಯನ್ ಪದವಾಗಿದ್ದು, ಹಿಂದೆ ಬಿಟ್ಟವರು ಅಥವಾ ತುಳಿತಕ್ಕೊಳಗಾದವರು ಎಂಬ ಅರ್ಥ ಬರುತ್ತದೆ. ಉತ್ತರ ಪ್ರದೇಶ 3.5 ಕೋಟಿ ಮತ್ತು ಬಿಹಾರದಲ್ಲಿ 1.5 ಕೋಟಿ ಪಸ್ಮಾಂಡ ಮುಸ್ಲಿಮರಿದ್ದಾರೆ.

ಕರ್ನಾಟಕದಲ್ಲಿ, ಉತ್ತರ ಕರ್ನಾಟಕದಲ್ಲಿ ವೃತ್ತಿಯಲ್ಲಿ ಹಾಸಿಗೆಗಳನ್ನು ತಯಾರಿಸುವ ನದಾಫ್‌ಗಳು ಅಥವಾ ಪಿಂಜಾರರನ್ನು ಪಸ್ಮಾಂಡಗಳು ಎಮದು ಕರೆಯಬಹುದು. ಚುನಾವಣೆಗೆ ಮುಂಚಿತವಾಗಿ ರಾಜ್ಯದಲ್ಲಿ ಮುಸ್ಲಿಮರನ್ನು ತಲುಪುವ ಪಕ್ಷದ ಪ್ರಯತ್ನಗಳ ಭಾಗವಾಗಿ, ಬಿಜೆಪಿ ರಾಜ್ಯಸಭಾ ಸಂಸದ ಲೆಹರ್ ಸಿಂಗ್ ಸಿರೋಯಾ ಅವರು ಜನವರಿಯಲ್ಲಿ ಕರ್ನಾಟಕದ ಅಮೀರ-ಎ-ಶರೀಯತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಅವರನ್ನು ಭೇಟಿ ಮಾಡಿ, ಸೌಹಾರ್ದ ಭೋಜನವನ್ನು ಆಯೋಜಿಸಿದ್ದರು.

ಜನವರಿ ಮತ್ತು 2022 ರ ನವೆಂಬರ್‌ನಲ್ಲಿ ಲೆಹರ್ ಸಿಂಗ್ ಸಿರೋಯಾ ಅವರು ಮುಸ್ಲಿಂ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಶಿವಾಜಿನಗರ ಮತ್ತು ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸಿದ್ದರು. ಮತ್ತೊಂದು ಪ್ರಚಾರದ ಪ್ರಯತ್ನವಾಗಿ, ಅಲ್ಪಸಂಖ್ಯಾತ ಜನಸಂಖ್ಯೆಯ ಮತ್ತೊಂದು ಕ್ಷೇತ್ರವಾದ ಚಿಕ್ಕಪೇಟೆಯ ಬಿಜೆಪಿ ಶಾಸಕ ಉದಯ್ ಬಿ ಗರುಡಾಚಾರ್ ಅವರು ಚಾಮರಾಜಪೇಟೆಯ ಹಜರತ್ ಸಯ್ಯದ್ ಸಫ್ದರ್ ಅಲಿ ಶಾ ಖಾದ್ರಿ ದರ್ಗಾಕ್ಕೆ ಭೇಟಿ ನೀಡಿ ಚದ್ದರ್ ಅರ್ಪಿಸಿದ್ದರು.

ಕಲಬುರಗಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿ ಚಂದ್ರಕಾಂತ್‌ ಬಿ ಪಾಟೀಲ್‌ ಕೊರೊನಾ ಸಂದರ್ಭದಲ್ಲಿ ತಾವು ಮಾಡಿದ ಕೆಲಸಗಳ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಕಲಬುರಗಿ ಉತ್ತರವು ಮುಸ್ಲಿಂ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಪ್ರಸ್ತುತ ಕಾಂಗ್ರೆಸ್ ಶಾಸಕಿ ಕನೀಜ್ ಫಾತಿಮಾ ಪ್ರತಿನಿಧಿಸುತ್ತಿದ್ದಾರೆ.

ರಾಜ್ಯದ ಮುಸ್ಲಿಮರೊಳಗೆ ಯಾವುದೇ ಆಂತರಿಕ ಶ್ರೇಣಿ ವ್ಯವಸ್ಥೆ ಇಲ್ಲ

ರಾಜ್ಯದ ಮುಸ್ಲಿಮರೊಳಗೆ ಯಾವುದೇ ಆಂತರಿಕ ಶ್ರೇಣಿ ವ್ಯವಸ್ಥೆ ಇಲ್ಲ

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ನೇತೃತ್ವ ವಹಿಸಿದ್ದಾಗ ರಾಜ್ಯದಲ್ಲಿ ಅಲ್ಪಸಂಖ್ಯಾತರ ಸಾಮಾಜಿಕ-ಆರ್ಥಿಕ ಸ್ಥಿತಿಯ ಸಮೀಕ್ಷೆಯನ್ನು ನಡೆಸಿದ್ದ ರಾಜ್ಯಸಭಾ ಮಾಜಿ ಉಪಸಭಾಪತಿ ಮತ್ತು ಕಾಂಗ್ರೆಸ್ ರಾಜಕಾರಣಿ ಕೆ.ರೆಹಮಾನ್ ಖಾನ್, ಪಸ್ಮಾಂಡ ಮತ್ತು ಬೋಹ್ರಾ ಮುಸ್ಲಿಮರ ಬ್ಗೆಗ ಮಾತಾಡಿರುವ ಪ್ರಧಾನಿ ಮೊದಿ ಅವರ ವಿರುದ್ಧ ಕಿಡಿಕಾರಿದ್ದಾರೆ.

"ಕರ್ನಾಟಕದಲ್ಲಿ ಮುಸ್ಲಿಮರೊಳಗೆ ಯಾವುದೇ ಆಂತರಿಕ ಶ್ರೇಣಿ ವ್ಯವಸ್ಥೆ ಇಲ್ಲ. ಮೋದಿ ಅವರು ಮುಸ್ಲಿಂ ಸಮುದಾಯದೊಳಗೆ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ. ಬಹುಪಾಲು ಮುಸ್ಲಿಮರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಕರ್ನಾಟಕದಲ್ಲಿ ಪಸ್ಮಾಂಡ ಮುಸ್ಲಿಮರಿಲ್ಲ. ಶೋಷಣೆಯ ಭಯ ಎಲ್ಲ ಮುಸ್ಲಿಮರಲ್ಲೂ ಇದೆ'' ಎಂದು ಹೇಳಿದ್ದಾರೆ.

ಬೋಹ್ರಾಗಳು ವ್ಯಾಪಾರ ಸಮುದಾಯವಾಗಿರುವುದರಿಂದ ಅವರನ್ನು ತುಳಿತಕ್ಕೊಳಗಾದವರು ಎಂದು ಕರೆಯಲಾಗುವುದಿಲ್ಲ. ಮೋದಿಯವರ ವಿಭಜಕ ರಾಜಕಾರಣಕ್ಕೆ ಯಾರೂ ಮರುಗಬಾರದು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರು ಜಾಮಿಯಾ ಮಸೀದಿಯ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಹೇಳುವಂತೆ, ಮೋದಿಯವರ ಒಳಗೊಳ್ಳುವ ರಾಜಕೀಯದ ಉದ್ದೇಶ ಒಳ್ಳೇಯದೇ ಆದರೆ, ಭರವಸೆ ನೀಡಿ ನಿರಾಶೆಗೊಳಿಸುತ್ತಾರೆ ಎಂದು ಹೇಳಿದ್ದಾರೆ. ಕರ್ನಾಟಕ ಸರ್ಕಾರವು ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಎರಡು ಕೇಂದ್ರ ಪ್ರಾಯೋಜಿತ ವಿದ್ಯಾರ್ಥಿವೇತನವನ್ನು ರದ್ದುಗೊಳಿಸಿದೆ. ಶುಲ್ಕ ಮರುಪಾವತಿಯನ್ನು ಸರ್ಕಾರ ನಿಲ್ಲಿಸಿರುವುದರಿಂದ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಯೋಜನೆಯಡಿ ದಾಖಲಾದ ಮಕ್ಕಳನ್ನು ಸರ್ಕಾರಿ ಸಂಸ್ಥೆಗಳಿಗೆ ವಾಪಸ್ ಸೇರಲು ಸೂಚಿಸಲಾಗಿದೆ" ಎಂದು ಆರೋಪಿಸಿದ್ದಾರೆ. "

ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಮತ ಸಿಗುವುದಿಲ್ಲ!

ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಮತ ಸಿಗುವುದಿಲ್ಲ!

ಬಿಜೆಪಿಯ ಹಿರಿಯ ಪದಾಧಿಕಾರಿಯೊಬ್ಬರ ಪ್ರಕಾರ, "ಪಕ್ಷವನ್ನು ಒಪ್ಪಿಕೊಳ್ಳಲು ಮುಸ್ಲಿಮರು ನಿರಾಕರಿಸುತ್ತಾರೆ ಇದು ಪಕ್ಷಕ್ಕೆ ದೊಡ್ಡ ಅಡಚಣೆಯಾಗಿದೆ. ಬೇರೆ ಪಕ್ಷಗಳ ಮುಸ್ಲಿಮರು ಬಿಜೆಪಿಗೆ ಸೇರುತ್ತಾರೆ. ಕೆಲವು ಸ್ಥಾನಗಳನ್ನು ಪಡೆಯುತ್ತಾರೆ, ಆದರೆ ಹೆಚ್ಚು ಕಾಲ ಉಳಿಯುವುದಿಲ್ಲ. ಅವರು ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಕೆಲವು ಸಾಮಾನ್ಯ ಅಂಶಗಳಿರಬೇಕು. ಆ ಅಂಶವನ್ನು ಗುರುತಿಸುವುದು ಸವಾಲಾಗಿದೆ" ಎಂದು ಹೇಳಿದ್ದಾರೆ.

"ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ 10,000 ರಿಂದ 50,000 ಮತಗಳನ್ನು ಹೊಂದಿರುವ ಮುಸ್ಲಿಮರಿದ್ದಾರೆ. ಬಿಜೆಪಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ ಕೂಡ ಮುಸ್ಲಿಮರು ಅವರಿಗೆ ಮತ ಹಾಕುವುದಿಲ್ಲ,'' ಎಂದು ಬಿಜೆಪಿ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳು ಆಸಕ್ತಿ ತೋರಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಚುನಾವಣಾ ಪ್ರಕ್ರಿಯೆಯಲ್ಲಿ ಸಮುದಾಯವನ್ನು ತೊಡಗಿಸಿಕೊಳ್ಳುವ ಮೋದಿ ಹೇಳಿಕೆ ಹಿನ್ನೆಲೆಯಲ್ಲಿ ಈ ಆಕಾಂಕ್ಷಿಗಳು ಟಿಕೆಟ್ ಸಿಗುವ ಭರವಸೆಯಲ್ಲಿದ್ದಾರೆ. ಅಲ್ಲದೆ, ಫೆಬ್ರವರಿ 4 ರಂದು ನಡೆದ ಬಿಜೆಪಿಯ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳನ್ನು ಎತ್ತಿ ಹಿಡಿಯಲು ಅಲ್ಪಸಂಖ್ಯಾತರಿಗೆ ಸಭೆಗಳು ಮತ್ತು ರ್ಯಾಲಿಗಳನ್ನು ಆಯೋಜಿಸಲು ಪಕ್ಷದ ನಾಯಕತ್ವವು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ನದಾಫ್, ಪಿಂಜಾರರಿಗೆ ಇಲ್ಲ ಸರ್ಕಾರದ ಮನ್ನಣೆ!

ರಾಜ್ಯದ ನದಾಫ್, ಪಿಂಜಾರರಿಗೆ ಇಲ್ಲ ಸರ್ಕಾರದ ಮನ್ನಣೆ!

ರಾಜ್ಯದ ನದಾಫ್‌ಗಳು ಅಥವಾ ಪಿಂಜಾರರು ಸರ್ಕಾರಕ್ಕೆ ಸಲ್ಲಿಸಿದ ಮನವಿಗಳಿಗೆ ಈವರೆಗೂ ಯಾವುದೇ ಉತ್ತರವನ್ನು ಪಡೆದಿಲ್ಲ. ಸಮುದಾಯಗಳು ಸಾಂಪ್ರದಾಯಿಕವಾಗಿ ಹತ್ತಿ ಹಾಸಿಗೆ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದವು. ಆದರೆ, ಜನರು ಬ್ರಾಂಡೆಡ್ ಮತ್ತು ಯಂತ್ರ ನಿರ್ಮಿತ ಹಾಸಿಗೆಗಳಿಗೆ ಆದ್ಯತೆ ನೀಡಲು ಪ್ರಾರಂಭಿಸಿದ ನಂತರ ಅವರ ಉತ್ಪನ್ನಕ್ಕೆ ಬೇಡಿಕೆ ಇಲ್ಲ ಎಂದು ಕರ್ನಾಟಕ ರಾಜ್ಯ ನದಾಫ್, ಪಿಂಜಾರ ಸಂಘದ ಅಧ್ಯಕ್ಷ ಎಚ್.ಜಲೀಲಸಾಬ್ ಹೇಳಿದ್ದಾರೆ.

"ಹಿಂದೆ, ನಾವು ಹತ್ತಿ ಹಾಸಿಗೆಗಳನ್ನು ತಯಾರಿಸಲು ಮನೆಗಳಿಗೆ ಭೇಟಿ ನೀಡುತ್ತಿದ್ದೇವು, ಆದರೆ ಈಗ ಯಾರೂ ಅವುಗಳಿಗೆ ಬೇಡಿಕೆ ಇಡುತ್ತಿಲ್ಲ. ಸಮುದಾಯದ ಯುವ ಪೀಳಿಗೆಯು ಸೈಕಲ್ ರಿಪೇರಿ ಅಂಗಡಿಗಳನ್ನು ಪ್ರಾರಂಭಿಸಿದ್ದರು. ಅದೂ ನಿಧಾನವಾಗಿ ಸಾಯುತ್ತಿದ್ದು, ಮೆಕ್ಯಾನಿಕ್ ಅಥವಾ ಕೃಷಿ ಕಾರ್ಮಿಕರಾಗುತ್ತಿದೆ. ಸಂಘದ ಅಧ್ಯಕ್ಷರಾಗಿ, ಒಂದು ದಿನದ ಕೂಲಿಯನ್ನು ಪಡೆಯಲು ಕಷ್ಟಪಡುತ್ತಿರುವ ಅವರನ್ನು ಕರೆದುಕೊಂಡು ಪ್ರತಿಭಟನೆಯನ್ನು ಆಯೋಜಿಸುವುದು ಕಷ್ಟಕರವಾಗಿದೆ. ಸರಕಾರಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಎರಡು ವರ್ಷಗಳ ಹಿಂದೆ ನಾವು ಬಿಜೆಪಿ ಸರ್ಕಾರಕ್ಕೆ ಮತ್ತು ಆರ್‌ಎಸ್‌ಎಸ್ ಮುಖಂಡರನ್ನು ಸಂಪರ್ಕಿಸಿ ಮನವಿ ಸಲ್ಲಿಸಿದ್ದೇವೆ. ಆದರೆ, ಇಲ್ಲಿಯವರೆಗೆ ಏನೂ ಆಗಿಲ್ಲ" ಎಂದು ಸಂಕಷ್ಟ ತೋಡಿಕೊಂಡಿದ್ದಾರೆ.

ಶಿಗ್ಗಾಂವ, ಹಾವೇರಿ, ಗದಗ, ಬೀದರ್, ಬೆಳಗಾವಿ, ಕಲಬುರಗಿ ಜಿಲ್ಲೆಗಳಲ್ಲಿ 25 ಲಕ್ಷದಿಂದ 30 ಲಕ್ಷ ಜನ ನದಾಫರು ಇದ್ದಾರೆ ಎಂದು ಜಲೀಲಸಾಬ್ ಹೇಳಿದ್ದಾರೆ. ಕರ್ನಾಟಕದ ಮೀಸಲಾತಿ ನೀತಿಯ ವರ್ಗ ಒಂದರ ಅಡಿಯಲ್ಲಿ ಇವರನ್ನು ಇರಿಸಲಾಗಿದೆ ಇದರಲ್ಲಿ 95 ಇತರ ಜಾತಿಗಳೊಂದಿಗೆ 4% ಮೀಸಲಾತಿಯನ್ನು ಹಂಚಿಕೊಂಡಿದ್ದಾರೆ. ಶಾಸಕಾಂಗದಲ್ಲಾಗಲಿ, ಅಧಿಕಾರಶಾಹಿಯಲ್ಲಾಗಲಿ ನಮ್ಮ ಸಮುದಾಯಕ್ಕೆ ಪ್ರಾತಿನಿಧ್ಯವಿಲ್ಲ. 1978 ಮತ್ತು 1983ರಲ್ಲಿ ಶಿಗ್ಗಾಂವ್‌ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಹಮ್ಮದ್‌ ಕಾಸಿಂಸಾಬ್‌ ಎಂ ನದಾಫ್‌ ಹಾಗೂ 1972ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಎನ್‌ಎನ್‌ ಮರ್ದನಸಾಬ್‌ ನಮ್ಮ ಸಮುದಾಯದ ಕೊನೆಯ ಪ್ರತಿನಿಧಿಗಳು" ಎಂದು ತಿಳಿಸಿದ್ದಾರೆ.

ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ ಮುಸ್ಲಿಮರ ಪ್ರಾತಿನಿಧ್ಯ

ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ ಮುಸ್ಲಿಮರ ಪ್ರಾತಿನಿಧ್ಯ

ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ ಅಥವಾ ಜೆಡಿಎಸ್‌ನಿಂದ ಮುಸ್ಲಿಂ ಶಾಸಕರ ಪ್ರಾತಿನಿಧ್ಯವು ಕ್ಷೀಣಿಸುತ್ತಿದೆ. 1978 ರಲ್ಲಿ 17 ಮುಸ್ಲಿಂ ಶಾಸಕರಿಂದ, 1983 ರಲ್ಲಿ ಇಬ್ಬರಿಗೆ ಇಳಿದಿತ್ತು. ಪ್ರಸ್ತುತ ವಿಧಾನಸಭೆಲ್ಲಿ ಏಳು ಮಂದಿ ಶಾಸಕರಿದ್ದು, ಇವರೆಲ್ಲ ಕಾಂಗ್ರೆಸ್‌ನಿಂದ ಗೆದ್ದು ಬಂದವರು.

ಮುಂಬರುವ ಚುನಾವಣೆಯಲ್ಲಿ ವಿಜಯಪುರ ನಗರದಲ್ಲಿ ಪ್ರಸ್ತುತ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿನಿಧಿಸುತ್ತಿರುವ ಮುಸ್ಲಿಂ ಆಕಾಂಕ್ಷಿಗಳಿಂದ ಕಾಂಗ್ರೆಸ್ 109 ಅರ್ಜಿಗಳನ್ನು ಸ್ವೀಕರಿಸಿದೆ. ಈ ಸ್ಥಾನವು ಅತಿ ಹೆಚ್ಚು (26) ಮುಸ್ಲಿಂ ಟಿಕೆಟ್ ಆಕಾಂಕ್ಷಿಗಳನ್ನು ಹೊಂದಿದೆ. ನಂತರ ಹಾವೇರಿ ಮತ್ತು ಹುಬ್ಬಳ್ಳಿ-ಧಾರವಾಡ ತಲಾ ಎಂಟು ಅರ್ಜಿಗಳನ್ನು ಪಡೆದರೆ, ಬೆಂಗಳೂರು ಜಿಲ್ಲೆಯಲ್ಲಿ ಏಳು ಮತ್ತು ಬೀದರ್ ಆರು ಅರ್ಜಿಗಳನ್ನು ಸ್ವೀಕರಿಸಿದೆ.

ಅಲ್ಪಸಂಖ್ಯಾತರ ಹಕ್ಕುಗಳು, ಪ್ರಜಾಪ್ರಭುತ್ವ ಮತ್ತು ರಾಜಕೀಯ ಸಬಲೀಕರಣಕ್ಕಾಗಿ ವೇದಿಕೆಯೊಂದಿಗೆ ಕೆಲಸ ಮಾಡುತ್ತಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೆಹ್ರೋಜ್ ಖಾನ್, ಸಮುದಾಯದಲ್ಲಿ ಮತದಾನ ಜಾಗೃತಿ ಮೂಡಿಸುವತ್ತ ಈಗ ಗಮನ ಹರಿಸಲಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 697 ಮತಗಳಿಂದ ಸೋತಿರುವ ಉದಾಹರಣೆಯನ್ನು ಅವರು ಉಲ್ಲೇಖಿಸಿದ್ದಾರೆ. 3,845 ಮತಗಳನ್ನು ಹೊಂದಿರುವ 10 ಮುಸ್ಲಿಂ ಪ್ರಾಬಲ್ಯದ ಬೂತ್‌ಗಳಲ್ಲಿ ಯಾವುದೇ ಮುಸ್ಲಿಂ ಮತದಾರ ಮತ ಚಲಾಯಿಸಲಿಲ್ಲ ಎಂಬುದನ್ನು ಗಮನಸೆಳೆದರು.

(ಮಾಹಿತಿ ಕೃಪೆ: ದಿ ನ್ಯೂಸ್ ಮಿನಿಟ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+