ರವಿvsಬಿಎಸ್‌ವೈ, ಈಶ್ವರಪ್ಪvsಆಯನೂರು, ಬಿಎಸ್‌ವೈvsಸಂತೋಷ್: BJPvsBJP ಧಾರಾವಾಹಿಯ ಹೊಸ ಎಪಿಸೋಡ್‌ಗಳು- ಕಾಂಗ್ರೆಸ್ ಟ್ವೀಟ್
ಬೆಂಗಳೂರು, ಮಾರ್ಚ್ 23: ಕರ್ನಾಟಕ ಚುನಾವಣೆಗೆ ( Karnataka Assembly Elections 2023 ) ಕೆಲ ದಿನಗಳು ಬಾಕಿ ಇವೆ. ಈ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಆಡಳಿತಾರೂಢ ಬಿಜೆಪಿಯೊಳಗೆ ( BJP ) ಅಸಮಾಧಾನದ ಕಿಡಿ ಹೊತ್ತಿಕೊಂಡಿದೆ. ಬಿಜೆಪಿ ವರ್ಸಸ್ ಬಿಜೆಪಿ ಎನ್ನುವಂತಹ ಘಟನೆಗಳು ನಡೆಯುತ್ತಿವೆ. ಈ ವಿಚಾರವಾಗಿ ಕಾಂಗ್ರೆಸ್ ( Congress ) ಸರಣಿ ಟ್ವೀಟ್ ಮಾಡಿದೆ.
'#BJPvsBJP ಧಾರಾವಾಹಿಯ ಹೊಸ ಹೊಸ ಎಪಿಸೋಡ್‌ಗಳು ಹೊರಬರುತ್ತಲೇ ಇವೆ. ಸದಾ ದ್ವೇಷ ಕಾರುವ ಬಿಜೆಪಿಯ ಹರಕು ಬಾಯಿಯವರನ್ನು ಕಂಡು ಸ್ವತಃ ಬಿಜೆಪಿಯವರಿಗೆ ಅಸಹ್ಯ ಹುಟ್ಟಿದೆ. BSY ವಿರುದ್ಧದ ಸಂತೋಷ ಕೂಟದ ಅಸ್ತ್ರವಾಗಿರುವ ಈಶ್ವರಪ್ಪರಿಗೆ BSY ಅವರು ಆಯನೂರು ಅಸ್ತ್ರ ಬಿಟ್ಟಿದ್ದಾರೆಯೇ?' ಎಂದು ಕಾಂಗ್ರೆಸ್ ಬಿಜೆಪಿಯನ್ನು ಪ್ರಶ್ನಿಸಿದೆ.

'ಒಂದೆಡೆ ಸಿಟಿ ರವಿ BSY ಬಣದವರ ವಿರೋಧ ಎದುರಿಸುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಕಾರ್ಯಕರ್ತರೇ ತಿರುಗಿಬಿದ್ದಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಕಾರ್ಯಕರ್ತರೇ ಬಿಜೆಪಿ ಶಾಸಕರ ವಿರುದ್ಧ ಬಂಡೆದ್ದಿರುವುದು ಬಿಜೆಪಿಯ ಅವನತಿಗೆ ಹಿಡಿದ ಕನ್ನಡಿ. ಅಲ್ಲವೇ ಬಿಜೆಪಿ?' ಎಂದು ಕೆಪಿಸಿಸಿ ಕೇಳಿದೆ.
'ಮಾಜಿ ಸಿಎಂ ಯಡಿಯೂರಪ್ಪನವರ ನಂತರ ಮತ್ತೊಬ್ಬ ಲಿಂಗಾಯತ ನಾಯಕನಿಗೆ ಕಣ್ಣೀರು ಹಾಕಿಸಿದೆ ಬಿಜೆಪಿ. ಬಿಜೆಪಿಯಲ್ಲಿ ಲಿಂಗಾಯತ ನಾಯಕರಿಗೆ ಉಸಿರು ಕಟ್ಟುವ ವಾತಾವರಣ ಸೃಷ್ಟಿಸಲಾಗುತ್ತಿದೆಯೇ? BSY ಬಣದ ನಾಯಕರನ್ನು ಬಗ್ಗುಬಡಿಯಲು ಹೊರಟಿರುವ ಸಂತೋಷ ಕೂಟದ ಆಟಕ್ಕೆ ಸಿಲುಕಿದ ಲಿಂಗಾಯತ ನಾಯಕರು ತರಗೆಲೆಯಂತೆ ಹಾರಿ ಹೋಗುತ್ತಿದ್ದಾರೆ' ಎಂದು ಕಾಂಗ್ರೆಸ್ ಟೀಕಿಸಿದೆ.
'ರಾಜ್ಯ ಬಿಜೆಪಿಯ ಕಲಹ ಸಂಕಲ್ಪ ಯಾತ್ರೆ ಜೋರಾಗಿ ನಡೆಯುತ್ತಿದೆ. ಬಿಜೆಪಿ ಈಗ ಸಂತೋಷ ಕೂಟದ ಹಿಡಿತದಲ್ಲಿದೆ, ಬಿಜೆಪಿಗೆ BSY ನಗಣ್ಯ ಎಂಬ ಸಂದೇಶ ಕೊಟ್ಟ ಸಿಟಿ ರವಿಗೆ ಮಾತಿನ ಗುದ್ದು ಕೊಟ್ಟ ಬಿವೈ ವಿಜಯೇಂದ್ರ. ಬಿಜೆಪಿ ಎಂಬ ಕಲಹದ ಮನೆಯಲ್ಲಿ ಯಾರು ಯಾರಿಗೆ ಶತ್ರುಗಳು ಎಂದು ಸ್ವತಃ ಬಿಜೆಪಿಗೇ ತಿಳಿಯದೆ ಗೊಂದಲದಲ್ಲಿದೆ' ಎಂದು ಹೇಳಿದೆ.

ರಾಹುಲ್ ಗಾಂಧಿ ಬಾಯಿ ಮುಚ್ಚಿಸುವ ಯತ್ನ
'ಸರ್ವಾಧಿಕಾರಿ ಕಳ್ಳನ ಇಮೇಜ್ ಕಾಪಾಡಲು ಪೊಲೀಸ್, ಐಟಿ, ಇಡಿ, ಸಿಬಿಐಗಳ ಜೊತೆ ದುರುದ್ದೇಶಪೂರ್ವಕ ಪ್ರಕರಣ ದಾಖಲಿಸುವ ಮೂಲಕವೂ ಸತ್ಯದ ಕತ್ತು ಹಿಸುಕಲು, ರಾಹುಲ್ ಗಾಂಧಿ ಅವರ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದೆ ಕಳ್ಳರ ಕೂಟ. ಆದರೆ ರಾಹುಲ್ ಗಾಂಧಿಯವರ ಸತ್ಯಗಳನ್ನು ಅನಾವರಣಗೊಳಿಸುವ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಸತ್ಯಮೇವ ಜಯತೆ' ಎಂದೂ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ
'ಅಕ್ರಮ ಕಾಕಂಬಿ ರಫ್ತು ಹಗರಣದ ಪ್ರಾಮಾಣಿಕ ತನಿಖೆ ನಡೆದರೆ ಬಿಜೆಪಿಯ ಮತ್ತೊಬ್ಬ ಮುಖ್ಯಮಂತ್ರಿ ಜೈಲಿಗೆ ಹೋಗುವ ಮೂಲಕ ಇತಿಹಾಸ ಸೃಷ್ಟಿಸುವುದು ನಿಶ್ಚಿತ. ಕಾಕಂಬಿ ಹಗರಣದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ತುಟಿ ಬಿಚ್ಚದೆ ಗಾಢ ಮೌನಕ್ಕೆ ಜಾರಿರುವುದು ಜೈಲಿನ ಭಯದಿಂದಲೇ? ಬೊಮ್ಮಾಯಿಯವರಿಗೆ ಈ ಹಗರಣದಲ್ಲಿ ಸಿಕ್ಕ ಕಿಕ್ ಬ್ಯಾಕ್ ಎಷ್ಟು?' ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಕಿವಿ ಮೇಲೆ ಹೂವಿಟ್ಟಿದೆ ಬಿಜೆಪಿ
ಪರಿಶಿಷ್ಟ ವರ್ಗಗಳ ಮೀಸಲಾತಿ ಹೆಚ್ಚಳದ ಕುರಿತು ಹಿಂದೆ ಅಬ್ಬರಿಸಿ ಬೊಬ್ಬಿರಿದಿದ್ದ ಒಳಗೊಳಗೇ ದ್ರೋಹದ ಚೂರಿ ಹಾಕಿದೆ. ಮೀಸಲಾತಿ ಹೆಚ್ಚಳದ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನೇ ಸಲ್ಲಿಸದೆ ಕಿವಿ ಮೇಲೆ ಹೂವಿಟ್ಟಿದೆ ಬಿಜೆಪಿ. ಜನರನ್ನು ಮೋಸಗೊಳಿಸುವುದರಲ್ಲಿ ಬಿಜೆಪಿ ಪಿಹೆಚ್‌ಡಿ ಮಾಡಿರುವಂತಿದೆ ಎಂದೂ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.












Click it and Unblock the Notifications