Congress Ticket: ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುಂದೂಡಿಕೆ: ಪಟ್ಟಿ ಬಿಡುಗಡೆ ಕುರಿತು ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ಯುಗಾದಿಯಂದೇ ಕಾಂಗ್ರೆಸ್ ಟಿಕೆಟ್ ಬಿಡುಗಡೆಗೆ ಸಿದ್ದತೆ ನಡೆಸಿದ್ದ ಕಾಂಗ್ರೆಸ್, ಇದೀಗ ಪಟ್ಟಿ ಬಿಡುಗಡೆಯನ್ನ ಮುಂದೂಡಿದಿದೆ.
ಬೆಂಗಳೂರು, ಮಾರ್ಚ್ 21: 2023 ರ ವಿಧಾನಸಬಾ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ಆರಂಭಿಸಿರುವ ರಾಜ್ಯ ಕಾಂಗ್ರೆಸ್ ನಾಯಕರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಆದರೆ, ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಟ್ಟಿಯನ್ನು ಯುಗಾದಿ ಹಬ್ಬದಂದು (ಬುಧವಾರ) ಬಿಡುಗಡೆ ಮಾಡುವುದಾಗಿ ಹೇಳಿದ್ರು , ಆದರೆ ಅದೀಗ ಮುಂದೂಡಿಕೆಯಾಗಿದೆ.
ಹೌದು, ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗುವುದು ಸಂಶಯ, ಇಂದು ಯುಗಾದಿ ಹಬ್ಬವಾಗಿರುವುದರಿಂದ ರಜೆಯಿರುವುದರಿಂದ ನಾಳೆ ಪತ್ರಿಕೆಗಳು ಮುದ್ರಣವಾಗದಿರುವುದರಿಂದ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಹಬ್ಬದ ಪ್ರಯುಕ್ತ ಬೆಂಗಳೂರಿಗೆ ಇಂದು ಬಿಡುಗಡೆಯಾಗುವುದಿಲ್ಲ. ಇನ್ನು ಎರಡು -ಮೂರು ದಿನಗಳಲ್ಲಿ ಮೊದಲ ಪಟ್ಟಿ ಬಿಡುಗಡೆಯಾಗಬಹುದು ಎಂದಿದ್ದಾರೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ಮುಂದಿನ ಎರಡು-ಮೂರು ದಿನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 124 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇನ್ನೂ ಯಾವುದೇ ಗೊಂದಲಗಳಿಲ್ಲ ಕ್ಷೇತ್ರಗಳು ಸೇರಿದಂತೆ ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗುವುದು. ಸದ್ಯ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯೊಂದು ಇಲ್ಲಿದೆ ನೋಡಿ.
ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ
ಚಿಕ್ಕೋಡಿ : ಗಣೇಶ ಹುಕ್ಕೇರಿ
ಯಮಕನಮರಡಿ : ಸತೀಶ್ ಜಾರಕಿಹೊಳಿ
ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳಕರ್
ಖಾನಾಪುರ : ಅಂಜಲಿ ನಿಂಬಾಳ್ಕರ್
ಬೈಲಹೊಂಗಲ : ಮಹಾಂತೇಶ
ಜಮಖಂಡಿ : ಸಿದ್ದು ಆನಂದ ನ್ಯಾಮಗೌಡ
ಬಬಲೇಶ್ವರ : ಎಂ. ಬಿ. ಪಾಟೀಲ

ಬಸವನಬಾಗೇವಾಡಿ : ಶಿವಾನಂದ ಪಾಟೀಲ್
ಇಂಡಿ : ಯಶವಂತಗೌಡ ಪಾಟೀಲ
ಅಫಜಲಪುರ : ಎಂ. ವೈ. ಪಾಟೀಲ
ಅಳಂದ : ಬಿ. ಆರ್. ಪಾಟೀಲ
ಜೇವರ್ಗಿ : ಅಜಯ್ ಸಿಂಗ್
ಚಿತ್ತಾಪುರ : ಪ್ರಿಯಾಂಕ ಖರ್ಗೆ
ಷಹಾಪುರ : ಶರಣಪ್ಪ ದರ್ಶನಾಪುರ
ಹುಮ್ನಾಬಾದ್ : ರಾಜಶೇಖರ ಪಾಟೀಲ
ಬಾಲ್ಕಿ : ಈಶ್ವರ ಖಂಡ್ರೆ
ಬೀದರ್ : ರಹೀಂಖಾನ್
ಮಸ್ಕಿ : ಬಸವನಗೌಡ ತುರ್ವಿಹಾಳ
ಕುಷ್ಟಗಿ : ಅಮರೇಗೌಡ ಬಯ್ಯಾಪುರ
ಯಲಬುರ್ಗ : ಬಸವರಾಜ ರಾಯರೆಡ್ಡಿ
ಕೊಪ್ಪಳ : ರಾಘವೇಂದ್ರ ಹಿಟ್ನಾಳ
ಗಂಗಾವತಿ : ಇಕ್ಬಾಲ್ ಅನ್ಸಾರಿ
ಕನಕಗಿರಿ : ಶಿವರಾಜ ತಂಗಡಗಿ
ಗದಗ : ಹೆಚ್. ಕೆ. ಪಾಟೀಲ
ರೋಣ : ಜೆ. ಎಸ್. ಪಾಟೀಲ
ಕಲಘಟಗಿ ಸಂತೋಷ್ ಲಾಡ್
ಹುಬ್ಬಳ್ಳಿ -ಧಾರವಾಡ (ಪೂರ್ವ) : ಪ್ರಸಾದ ಅಬ್ಬಯ್ಯ
ಹಾನಗಲ್ : ಶ್ರೀನಾಸ್ ಮಾನೆ
ಬ್ಯಾಡಗಿ : ಬಸವರಾಜ ಶಿವಣ್ಣನವರ
ಹಿರೇಕೆರೂರ : ಯು. ಬಿ. ಬಣಕಾರ
ಹೂವಿನ ಹಡಗಲಿ : ಪರಮೇಶ್ವರನಾಯ್ಕ
ಹಗರಿ ಬೊಮ್ಮನಹಳ್ಳಿ : ಭೀಮಾನಾಯ್ಕ
ಕಂಪ್ಲಿ : ಗಣೇಶ್
ಬಳ್ಳಾರಿ ಗ್ರಾಮೀಣ : ನಾಗೇಂದ್ರ
ಚಿತ್ರದುರ್ಗ : ಕೆ ಸಿ ವೀರೇಂದ್ರ
ಮೊಳಕಾಲ್ಮೂರು : ಯೋಗೀಶ್ ಬಾಬು
ಚಳ್ಳಕೆರೆ : ರಘುಮೂರ್ತಿ
ದಾವಣಗೆರೆ ದಕ್ಷಿಣ : ಶಾಮನೂರು ಶಿವಶಂಕರಪ್ಪ
ದಾವಣಗೆರೆ ಉತ್ತರ : ಎಸ್. ಎಸ್. ಮಲ್ಲಿಕಾರ್ಜುನ
ಭದ್ರಾವತಿ : ಸಂಗಮೇಶ್
ಸೊರಬ : ಮಧು ಬಂಗಾರಪ್ಪ
ಶೃಂಗೇರಿ : ರಾಜೇಗೌಡ
ಕುಣಿಗಲ್ : ರಂಗನಾಥ್
ಕೊರಟಗೆರೆ : ಡಾ. ಪರಮೇಶ್ವರ
ಗೌರಿಬಿದನೂರು : ಶಿವಶಂಕರರೆಡ್ಡಿ
ಬಾಗೇಪಲ್ಲಿ : ಸುಬ್ಬಾರೆಡ್ಡಿ
ಶಿಡ್ಲಘಟ್ಟ : ವಿ. ಮುನಿಯಪ್ಪ
ಶ್ರೀನಿವಾಸಪುರ : ರಮೇಶ್ ಕುಮಾರ್
ಕೆಜಿಎಫ್ : ರೂಪಕಲಾ
ಬಂಗಾರಪೇಟೆ : ನಾರಾಯಣಸ್ವಾಮಿ
ಮಾಲೂರು : ನಂಜೇಗೌಡ
ಬ್ಯಾಟರಾಯನಪುರ : ಕೃಷ್ಣಭೈರೇಗೌಡ
ಹೆಬ್ಬಾಳ : ಸುರೇಶ್ (ಭೈರತಿ)
ಸರ್ವಜ್ಙನಗರ : ಕೆ. ಜೆ. ಜಾರ್ಜ್
ಶಾಂತಿನಗರ : ಎನ್ ಎ ಹ್ಯಾರಿಸ್
ಶಿವಾಜಿನಗರ : ರಿಜ್ವಾನ್ ಹರ್ಷದ್
ಗಾಂಧಿನಗರ : ದಿನೇಶ್ ಗುಂಡೂರಾವ್
ವಿಜಯನಗರ : ಎಂ. ಕೃಷ್ಣಪ್ಪ
ಗೋವಿಂದರಾಜನಗರ : ಪ್ರಿಯಾಕೃಷ್ಣ
ಬಿಟಿಎಂ ಲೇಔಟ್ : ರಾಮಲಿಂಗಾರೆಡ್ಡಿ
ಜಯನಗರ : ಸೌಮ್ಯರೆಡ್ಡಿ
ಆನೇಕಲ್ : ಬಿ. ಶಿವಣ್ಣ
ಹೊಸಕೋಟೆ : ಶರತ್ ಬಚ್ಚೇಗೌಡ
ಕನಕಪುರ : ಡಿ. ಕೆ. ಶಿವಕುಮಾರ್
ಮಾಗಡಿ : ಬಾಲಕೃಷ್ಣ
ಮಂಗಳೂರು : ಯು.ಟಿ. ಖಾದರ್
ಮೂಡುಬಿದರೆ : ಮಿಥುನ್ ರೈ
ಬೆಳ್ತಂಗಡಿ : ರಕ್ಷಿತ್ ಶಿವರಾಂ
ಬಂಟ್ವಾಳ : ರಮಾನಾಥ ರೈ
ಪುತ್ತೂರು : ಅಶೋಕ್ ರೈ
ನಾಗಮಂಗಲ : ಚಲುವರಾಯಸ್ವಾಮಿ
ಹುಣಸೂರು : ಹೆಚ್. ಪಿ. ಮಂಜುನಾಥ
ಪಿರಿಯಾಪಟ್ಟಣ : ವೆಂಕಟೇಶ್
ಕೆ. ಆರ್. ನಗರ : ರವಿಶಂಕರ್
ಹೆಚ್.ಡಿ. ಕೋಟೆ : ಅನಿಲ್
ಚಾಮರಾಜನಗರ- ಪುಟ್ಟರಂಗಶೆಟ್ಟಿ
ಹನೂರು : ನರೇಂದ್ರ












Click it and Unblock the Notifications