ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ಬಂತು... ಸೀರೆಗಳ ಕಾರುಬಾರು ಜೋರೋ ಜೋರು!

|
Google Oneindia Kannada News

Recommended Video

ಕರ್ನಾಟಕ ಚುನಾವಣೆ 2018 : ಮಹಿಳಾ ಮತದಾರರನ್ನ ಸೆಳೆಯಲು ಸೀರೆ ಹಂಚಲು ಹೊರಟ ರಾಜಕೀಯ ಮುಖಂಡರು

ಬೆಂಗಳೂರು, ಮಾರ್ಚ್ 06: ಕರ್ನಾಟಕ ವಿಧಾನಸಭೆ ಚುನಾವಣೆ ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಮುಂದಾಗಿವೆ. ಅದರ ಭಾಗವಾಗಿ ಬೆಂಗಳೂರಿನ ಪ್ರಸಿದ್ಧ ಮಾರುಕಟ್ಟೆಗಳಲ್ಲಿ ಸೀರೆಗಳ ಮಾರಾಟ ಜೋರಾಗಿ ಸಾಗುತ್ತಿದೆ!

ಬೆಂಗಳೂರಿನಲ್ಲಿ ಹೋಲ್ ಸೇಲ್ ಸೀರೆಗಳಿಗೆ ಪ್ರಸಿದ್ಧಿ ಪಡೆದ ಚಿಕ್ಕ ಪೇಟೆಯಲ್ಲಿ ಈಗ ವ್ಯಾಪಾರವೋ ವ್ಯಾಪಾರ! ಕಡಿಮೆ ಬೆಲೆಯ ಗುಜರಾತ್ ಸೂರತ್ ಎಲ್ಲಿಲ್ಲದ ಬೇಡಿಕೆ. ಡಿಲರ್ ಗಳ ಮೂಲಕ ಸೀರೆಗಳನ್ನು ಕೊಂಡು ಹಂಚಲಾಗುತ್ತದೆ. ಡೀಲರ್ ಗಳಿಗೆ ಪ್ರತಿ ಸೀರೆಗೆ 20-40 ರೂ. ಕಮಿಶನ್ ಕೊಡಲಾಗುತ್ತದೆ. ಮಳಿಗೆಗಳಲ್ಲಿ ಸೀರೆಗಳನ್ನು ಆರಿಸಿ, ಮುಂಗಡ ಹಣ ನೀಡಿ ಚುನಾವಣೆಯ ಸಮಯದಲ್ಲಿ ಡೀಲರ್ ಗಳ ಮೂಲಕ ಕಳಿಸಲು ಈಗಾಗಲೇ ರಾಜಕೀಯ ಮುಖಂಡರ ಹಿಂಬಾಲಕರು ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಕೆಲವು ಮೂಲಗಳ ಮಾಹಿತಿ.

ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಇಬ್ಬರು ಮುಖ್ಯಮಂತ್ರಿಗಳುಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದರೆ ಇಬ್ಬರು ಮುಖ್ಯಮಂತ್ರಿಗಳು

ಈಗಾಗಲೇ ಅಂದಾಜು 250 ರಿಂದ 300 ಕೋಟಿ ರೂ. ಮೌಲ್ಯದ ಸೀರೆಗಳನ್ನು ಖರೀದಿಸಲಾಗಿದೆ! ಮಹಿಳೆಯರಿಗಾಗಿ ಸೀರೆ, ಕುಕ್ಕರ್, ಮೂಗುತಿ, ಕಾಲುಗೆಜ್ಜೆ, ಪುರುಷರಿಗಾಗಿ ಪ್ಯಾಂಟು ಶರ್ಟ್ ಪಂಚೆ, ವಾಚ್, ಯುವಕರಿಗೆ ಕ್ರಿಕೆಟ್ ಕಿಟ್, ವಾಚ್, ಗಡಿಯಾರ, ಪ್ಲಾಸ್ಟಿಕ್ ಸಾಮಗ್ರಿಗಳನ್ನು ಹಂಚಲು ನಿರ್ಧರಿಸಲಾಗಿದೆ.

Karnataka assembly elections 2018: saree distribution to women voters!

ಇನ್ನೊಂದು ಮಾಹಿತಿಯ ಪ್ರಕಾರ ಪ್ರತಿ ಅಭ್ಯರ್ಥಿಗಾಗಿ ಅಂದಾಜು 1 ರಿಂದ 1.5 ಕೋಟಿ ರೂ. ಮೌಲ್ಯದ ಸೀರೆಗಳನ್ನು ಖರೀದಿಸಿ ಕ್ಷೇತ್ರದಲ್ಲಿ ಹಂಚಲಾಗುತ್ತದೆ. ಒಂದೇ ಬಾರಿ ಸಾಕಷ್ಟು ಸೀರೆ ಖರೀದಿಸುವುದರಿಂದ ಬೆಲೆಯೂ ಕಡಿಮೆಯಾಗುತ್ತದೆ. ಬಡವರಿಗಾಗಿ ಯಾರದೋ ಹೆಸರಿನಲ್ಲಿ ಸೀರೆ ಕೊಂಡು, ಟ್ರಸ್ಟ್ ನಿಂದ ದಾನ ಕೊಡುತ್ತಿರುವಂತೆ ನಾಟಕ ಮಾಡುವುದು. ಲೆಕ್ಕ ನೀಡಬೇಕಾಗುತ್ತದಲ್ಲ ಎಂದು ನಗದು ವ್ಯವಹಾರ ಮಾಡುವುದು, ಬಿಲ್ ಪಡೆಯದಿರುವುದು! ಒಂದೇ ಅಂಗಡಿಯಲ್ಲಿ ಖರೀದಿಸಿದರೆ ಅನುಮಾನ ಬಂದೀತೆಂದು ಬೇರೆ ಬೇರೆ ಅಂಗಡಿಗಳಲ್ಲಿ ಸೀರೇ ಖರೀದಿಸುವುದು. ಈ ಅವ್ಯವಹಾರವೂ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

English summary
The Karnataka Assembly elections 2018 are likely to be held in the first week of May 2018. Now political leaders started distributing sarees to the female voters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X