Karnataka Elections 2023: ಚುನಾವಣಾ ಆಯೋಗದ ಅಧಿಕಾರಿಗಳಿಗೆ ರಾಜಕೀಯ ಪಕ್ಷಗಳ ಮನವಿ

ಬೆಂಗಳೂರು ಮಾರ್ಚ್ 10: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಸಿದ್ಧತೆಯನ್ನು ಪರಿಶೀಲಿಸಲು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಗುರುವಾರ ನಗರಕ್ಕೆ ಆಗಮಿಸಿದೆ. ರಾಜ್ಯ ರಾಜಧಾನಿ ತಲುಪಿದ ನಂತರ ತಂಡ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಅವರ ಸಲಹೆ, ಅಭಿಪ್ರಾಯ ಮತ್ತು ದೂರುಗಳನ್ನು ಪಡೆಯಲು ಸಂವಾದ ನಡೆಸಿದೆ. ಈ ವೇಳೆ ರಾಜ್ಯದ ರಾಜಕೀಯ ಪಕ್ಷಗಳು ಹಲವಾರು ಬೇಡಿಕೆಗಳನ್ನು ಆಯೋಗದ ಮುಂದಿಟ್ಟಿವೆ.

ವಿಕಾಸ ಸೌಧದಲ್ಲಿ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ (ಸಿಇಒ) ಮನೋಜ್ ಕುಮಾರ್ ಮೀನಾ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಪಕ್ಷಗಳೊಂದಿಗೆ ಸಭೆ ನಡೆಸಿತು. ಬಳಿಕ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ಮಾಡಿದೆ. ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ಬೇಡಿಕೆಗಳು ಇಂತಿವೆ.

Karnataka Assembly Election 2023 : Political parties Request to Election Commission of India

ಕಾಂಗ್ರೆಸ್ ರಾಜಕೀಯ ಪಕ್ಷಗಳ ಬೇಡಿಕೆಗಳು

1.ಗುಜರಾತ್, ಯುಪಿ ಅಥವಾ ಯಾವುದೇ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಳಸುವ ಇವಿಎಂಗಳನ್ನು ಬಳಸುವುದನ್ನು ತಪ್ಪಿಸಿ

2. ತಕ್ಷಣದಿಂದ ಜಾರಿಗೆ ಬರುವಂತೆ ಡಿಜಿಪಿ ಅವರನ್ನು ಕರ್ನಾಟಕಕ್ಕೆ ವರ್ಗಾಯಿಸಿ

3.ತಕ್ಷಣ ನೀತಿ ಸಂಹಿತೆ ಪ್ರಕಟಿಸಿ

4. ಅಳಿಸಲಾದ 33 ಲಕ್ಷ ಮತದಾರರನ್ನು ಮರುಸ್ಥಾಪಿಸಿ

Karnataka Assembly Election 2023 : Political parties Request to Election Commission of India

ಬಿಜೆಪಿ ಬೇಡಿಕೆಗಳು:-

1. ಕರ್ನಾಟಕದಾದ್ಯಂತ ಕಾಂಗ್ರೆಸ್ ಪ್ರಾಬಲ್ಯದ ಮತಗಟ್ಟೆಗಳಲ್ಲಿ 98-99% ಮತದಾನದ ಬಗ್ಗೆ ತನಿಖೆ ಮಾಡಿಸಿ

2. ಪ್ರಣಾಳಿಕೆಯನ್ನು ಹೊರತುಪಡಿಸಿ ಚುನಾವಣಾ ಪೂರ್ವ ಭರವಸೆಯ ಘೋಷಣೆಗಳನ್ನು ನಿಯಂತ್ರಿಸಿ

3.ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣಗಳ ಕುರಿತು ಪ್ರಕಟಿಸುವ ವೆಚ್ಚವನ್ನು ಹೊರತುಪಡಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+