ಶಿಗ್ಗಾವಿಯಿಂದಲೇ ನನ್ನ ಸ್ಪರ್ಧೆ: ಬಿಜೆಪಿ ಮೊದಲ ಪಟ್ಟಿ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ನವದೆಹಲಿ, ಏಪ್ರಿಲ್ 10: ಕರ್ನಾಟಕ ವಿಧಾನಸಭಾ ಚುಣಾವಣೆಯ ಅಭ್ಯರ್ಥಿಗಳ ಅಂತಿಮಗೊಳಿಲು ಈಗಷ್ಟೇ ಬಿಜೆಪಿ ಮುಖ್ಯ ಚುನಾವಣಾ ಸಮಿತಿ (ಸಿಇಸಿ) ಸಭೆ ಮುಗಿದಿದ್ದು, ಸೋಮವಾರ ಪಟ್ಟಿ ಬಿಡುಗಡೆಯಾಗಲಿದೆ. ನಾನು ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನವದೆಹಲಿಯಲ್ಲಿ ವರಿಷ್ಠರ ಜೊತೆಗೆ ಅಭ್ಯರ್ಥಿಗಳ ಅಂತಿಮಗೊಳಿಲು ಭಾನುವಾರ ನಡೆದ ಬಿಜೆಪಿ ಮುಖ್ಯ ಚುನಾವಣಾ ಸಮಿತಿ (ಸಿಇಸಿ) ಬಳಿಕ ಮುಖ್ಯಮಂತ್ರಿಗಳು ಸುದ್ದಿಗಾರರ ಜೊತೆಗೆ ಮಾತನಾಡಿದರು. ಈ ಮೂಲಕ ತಮಗೆ ಶಿಗ್ಗಾಂವ್ ಸ್ವ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಹಾಗೂ ಅಲ್ಲಿಂದಲೇ ತಮಗೆ ಟಿಕೆಟ್ ಸಿಗುವ ಬಗ್ಗೆ ಅವರು ಖಚಿತಪಡಿಸಿದರು.

Karnataka Assembly Election 2023: CM Basavaraj Bommai contest from Shiggaon constituency, confirm

ಕರ್ನಾಟಕ ಚುನಾವಣೆಯ 224 ಕ್ಷೇತ್ರಗಳ ಅಭ್ಯರ್ಥಿಗಳ ಒಟ್ಟಾರೆ ಪಟ್ಟಿಯ ಬಗ್ಗೆ ಚರ್ಚೆ ನಡೆಸಲಾಗಿದೆ. ಸೋಮವಾರ ಮತ್ತೆ ಸಭೆ ಸೇರಲಿದ್ದೇವೆ. ಅಂದೇ ಇಲ್ಲವೇ ಮರುದಿನ ಮೊದಲ ಪಟ್ಟಿ ಪ್ರಕಟಿಸಲಿದ್ದೇವೆ ಎಂದರು.

ಮುಂದಿನ ತಿಂಗಳು ಮೇ 10ರಂದು ಕರ್ನಾಟಕ ಸಾರ್ವತ್ರಿಕ ಸಭೆ ನಡೆಯಲಿದೆ. ಈ ಸಂಬಂಧ ಪಟ್ಟಿ ಅಂತಿಮಗೊಳಿಸು ಸಿಇಸಿ ಸಭೆಯಲ್ಲಿ ಬಿಜೆಪಿಯ ಹಿರಿಯ ನಾಯಕರು ರಾಷ್ಟ್ರ ರಾಜಧಾನಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆಯಿತು. ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಚರ್ಚಿಸಿದರು.

ಸೋಮವಾರವೇ ಬಿಜೆಪಿ ಮೊದಲ ಪಟ್ಟಿ ಪ್ರಕಟ?

ಇದಕ್ಕೂ ಮುನ್ನ ಶನಿವಾರವೇ ಅಮಿತ್ ಶಾ ಅವರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಬಿಜೆಪಿ ಅಧ್ಯಕ್ಷ ಜೆ.ಬಿ.ನಡ್ಡಾ ಅವರ ನಿವಾಸದಲ್ಲಿ ಮೇ 10 ರ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಚರ್ಚಿಸಲು ಹಾಗೂ ಹೆಸರುಗಳನ್ನು ಅಂತಿಮಗೊಳಿಸಲು ಸಭೆ ನಡೆಸಿದ್ದರು.

Karnataka Assembly Election 2023: CM Basavaraj Bommai contest from Shiggaon constituency, confirm

ಜೆ.ಪಿ.ನಡ್ಡಾ ಅವರ ನಿವಾಸದಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಮನ್ಸುಖ್ ಮಾಂಡವಿಯ ಮತ್ತು ಇತರ ಕೆಲವೇ ಕೆಲವು ನಾಯಕರು ಮಾತ್ರವೇ ಪಾಲ್ಗೊಂಡಿದ್ದರು. ಮರುದಿನ ಭಾನುವಾರ ಬೃಹತ್ ಮಟ್ಟದಲ್ಲಿ ಸಭೆ ನಡೆಯಿತು. ಬಿಜೆಪಿಯೇ ಹೇಳಿರುವಂತೆ ಸೋಮವಾರವೇ ಪಟ್ಟಿ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

ಕಳೆದ 2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಗೆಲ್ಲುವ ಮೂಲಕ ಇತರ ಪಕ್ಷಗಳಿಗಿಂತ ಬಹುಮತ ಪಡೆದು ಅತಿದೊಡ್ಡ ಏಕೈಕ ಪಕ್ಷವಾಗಿ ಹೊರ ಹೊಮ್ಮಿತ್ತು. ಕಾಂಗ್ರೆಸ್ 80 ಮತ್ತು ಜೆಡಿಎಸ್ 37 ಸ್ಥಾನಗಳನ್ನು ಪಡೆದುಕೊಂಡಿದ್ದವು. ಈ ಸಲದ ವಿಧಾನಸಭಾ ಚುನಾವಣೆಯಲ್ಲಿ (2023) 224 ಕ್ಷೇತ್ರಗಳಿಗೆ ಒಂದು ಹಂತದಲ್ಲಿ ಮುಂದಿನ ತಿಂಗಳ ಮೇ 10 ರಂದು ಚುನಾವಣೆ ನಡೆಯಲಿದೆ, ನಂತರ ಮೇ 13 ರಂದು ಬೆಳಗ್ಗೆ ಮತದ ಎಣಿಕೆ ಆರಂಭವಾಗಲಿದೆ.

ಬಿಜೆಪಿ ಸೇರಿದಂತೆ ಕಾಂಗ್ರೆಸ್‌ ನಾಯಕ

ಇತ್ತೀಚೆಗೆ ಕಾಂಗ್ರೆಸ್‌ 42 ಕ್ಷೇತ್ರಗಳಿಂದ ಕಣಕ್ಕಿಳಿಯುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ವೇಳೆ ಕಲಘಟಿಗಿಯ ಟಕೆಟ್ ಕ್ಷೇತ್ರ ಆಕಾಂಕ್ಷಿ ನಾಗರಾಜ ಛಬ್ಬಿ ಅವರಿಗೆ ಕೈತಪ್ಪಿತು. ಸಂತೋಷ್ ಲಾಡ್ ಅವರಿಗೆ ನೀಡಲಾಯಿತು. ಇದರಿಂದ ಮನನೊಂದ ಛಬ್ಬಿ ಅವರು ಕರ್ನಾಟಕದ ಬಿಜೆಪಿ ನಾಯಕರು ದೆಹಲಿಯಲ್ಲಿ ಇರುವಾಗಲೇ ದೆಹಲಿಗೆ ತೆರಳಿ ಅಲ್ಲಿ ಬಿಜೆಪಿಯನ್ನು ಸೇರ್ಪಡೆಯಾಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಸಮ್ಮುಖದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಜಲ ಸಂಪನ್ಮೂಲ ಸಚಿವ ಗೋವಿಂದ‌ ಕಾರಜೋಳ ಅವರ ಉಪಸ್ಥಿತಿಯಲ್ಲಿ ಬಿಜೆಪಿ ಸೇರಿದರು.

ಕಾಂಗ್ರೆಸ್‌ನಿಂದ ಇನ್ನೊಂದು ಪಟ್ಟಿ ಬರುವುದು ಹಾಗೂ ಜೆಡಿಎಸ್ ಶೀಘ್ರವೇ ಎರಡನೇ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+