Get Updates
Get notified of breaking news, exclusive insights, and must-see stories!

ಕಾಪ್ಸ್ ಸಮೀಕ್ಷೆ: ಕರ್ನಾಟಕಲ್ಲಿ ಮತ್ತೆ ಅರಳಲಿದೆ ಕಮಲ

ಬೆಂಗಳೂರು, ಸೆ. 06: ಸಿ ಫೋರ್ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ನಂತರ ಕಾಪ್ಸ್ ಸಂಸ್ಥೆ ತನ್ನ ವರದಿಯನ್ನು ಪ್ರಕಟಿಸಿದೆ.

ಸಿ ಫೋರ್ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಂತೆ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಪ್ಸ್ ಸಂಸ್ಥೆ ಬುಧವಾರ ಪ್ರಕಟಿಸಿರುವ ವರದಿಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಒಂದು ವೇಳೆ ಈಗ ಚುನಾವಣೆ ನಡೆದರೆ ಯಾವ ಪಕ್ಷಕ್ಕೆ ಬಹುಮತ ಸಿಗಲಿದೆ? ಎಂಬ ಪ್ರಶ್ನೆ ಹೊತ್ತು ಕಾಪ್ಸ್ ಸಂಸ್ಥೆ ಸಮೀಕ್ಷೆ ನಡೆಸಿತ್ತು.

Creative Center for Political and Social Studies (COPS) ವರದಿಯಂತೆ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ 113 ಸ್ಥಾನಗಳು ಲಭಿಸಲಿದೆ. 2008ರಲ್ಲಿ ರಾಜ್ಯದಲ್ಲಿ ಕಮಲ ಅರಳಿದಾಗಲೂ ಇಷ್ಟೇ ಸ್ಥಾನಗಳನ್ನು ಗಳಿಸಿತ್ತು ಎಂಬುದು ಗಮನಾರ್ಹ. ಕರ್ನಾಟಕದ ಕರಾವಳಿ ಭಾಗದಲ್ಲಿ ಪರಿಸ್ಥಿತಿ ಹದಗೆಟ್ಟ ಸಂದರ್ಭದಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು. ಸಮೀಕ್ಷೆಯ ವಿವರಗಳು ಮುಂದಿದೆ...

ಸಮೀಕ್ಷೆ ನಡೆಸಿದ್ದು ಯಾವಾಗ

ಸಮೀಕ್ಷೆ ನಡೆಸಿದ್ದು ಯಾವಾಗ

ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಹಾಗೂ ನಂತರ ನಡೆದ ಘಟನೆಗಳಿಂದ ಕರಾವಳಿಯ ಶಾಂತಿ ಕದಡಿದ ಸಂದರ್ಭದಲ್ಲಿ ಸಮೀಕ್ಷೆ ನಡೆಸಲಾಗಿದೆ. ಎಸ್ ಡಿ ಪಿಐ ಹಾಗೂ ಕೆಎಫ್ ಡಿ ನಿಷೇಧಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆಗಳನ್ನು ಹಮ್ಮಿಕೊಂಡಿತ್ತು. ಜುಲೈ ತಿಂಗಳ ತನಕದ ಅಭಿಪ್ರಾಯ ಸಂಗ್ರಹಿಸಿ ವರದಿಯನ್ನು ನೀಡಲಾಗಿದೆ.

ಕಾಪ್ಸ್ ವರದಿಯಲ್ಲಿ ಏನಿದೆ?

ಕಾಪ್ಸ್ ವರದಿಯಲ್ಲಿ ಏನಿದೆ?

ಕಾಪ್ಸ್ ನೀಡಿರುವ ಚುನಾವಣಾ ಪೂರ್ವ ಸಮೀಕ್ಷೆಯಂತೆ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿಗೆ 117 ಸ್ಥಾನಗಳು ಲಭಿಸಲಿವೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ 86 ಸ್ಥಾನಗಳು ಹಾಗೂ ಎಚ್ಡಿ ಕುಮಾರಸ್ವಾಮಿ ನಾಯಕತ್ವದ ಜೆಡಿಎಸ್ ಗೆ 25 ಸ್ಥಾನಗಳು ಲಭಿಸಲಿವೆ. ಬಹುತೇಕ 2008ರ ಚುನಾವಣಾ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ಹೇಳಲಾಗಿದೆ.

ಯಾವ ಪ್ರದೇಶ ಯಾರ ಪಾಲು?

ಯಾವ ಪ್ರದೇಶ ಯಾರ ಪಾಲು?

ಹಳೆ ಮೈಸೂರು ಪ್ರದೇಶ: 37 ಸ್ಥಾನಗಳಲ್ಲಿ 21 ಸ್ಥಾನಗಳು ಕಾಂಗ್ರೆಸ್ ಪಾಲು.
ಬೆಂಗಳೂರು ಪ್ರದೇಶ: 32 ಸ್ಥಾನಗಳಲ್ಲಿ 16 ಸ್ಥಾನ ಕಾಂಗ್ರೆಸ್ ಗಳಿಸಲಿದೆ. ಬಿಜೆಪಿ 14 ಹಾಗೂ ಜೆಡಿಎಸ್ 2 ಸ್ಥಾನಕ್ಕೆ ತೃಪ್ತಿ ಪಡಬೇಕಿದೆ.

ಆದರೆ, ಕರಾವಳಿ, ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಪಡೆಯಲಿದೆ. ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸಮಬಲ ಸಾಧಿಸಲಿದೆ
ಹೈ-ಕ ಪ್ರದೇಶ: 40 ಸ್ಥಾನಗಳಲ್ಲಿ 25 ಸ್ಥಾನಗಳು ಬಿಜೆಪಿ ಪಾಲು.
ಮುಂಬೈ-ಕರ್ನಾಟಕ: 56 ಸ್ಥಾನಗಳಲ್ಲಿ 36 ಬಿಜೆಪಿ ಗೆಲ್ಲಬಹುದು.

ಸಿ ಫೋರ್ ಸಮೀಕ್ಷೆ

ಸಿ ಫೋರ್ ಸಮೀಕ್ಷೆ

ಸಿ ಫೋರ್ ಸಮೀಕ್ಷೆಯಂತೆ ಅತಿ ಹೆಚ್ಚು ಶೇಕಡಾವಾರು ಮತಗಳನ್ನು ಪಡೆಯುವ ನಿರೀಕ್ಷೆ ಹೊಂದಿರುವ ಕಾಂಗ್ರೆಸ್ ಪಕ್ಷವು 114ರ ಮ್ಯಾಜಿಕ್ ನಂಬರ್ ದಾಟುವ ನಿರೀಕ್ಷೆಯಿದೆ.

* ಕಾಂಗ್ರೆಸ್ 120 ರಿಂದ 132ರವರೆಗೆ ಸ್ಥಾನ
* ಬಿಜೆಪಿಗೆ 60 ರಿಂದ 72 ಸ್ಥಾನಗಳು ಸಿಗಲಿವೆ.
* ಜೆಡಿಎಸ್ 24ರಿಂದ 30 ಸ್ಥಾನಗಳನ್ನು ಪಡೆಯಲಿದೆ.
* ಇತರೆ ಪಕ್ಷಗಳಿಗೆ 1ರಿಂದ 6 ಸ್ಥಾನಗಳು ಬರಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+