• search
For Quick Alerts
ALLOW NOTIFICATIONS  
For Daily Alerts

  ಕರ್ನಾಟಕ ವಿಧಾನಸಭೆ ಇತಿಹಾಸ ನಿಮಗೆಷ್ಟು ಗೊತ್ತು? ಮುಖ್ಯಮಂತ್ರಿಗಳು ಯಾರ್ಯಾರು?

  By Nayana
  |

  ಬೆಂಗಳೂರು, ಮೇ 13: ಕರ್ನಾಟಕದ ವಿಧಾನಸಭೆ ಇತಿಹಾಸವೇ ಒಂದು ರೋಚಕ ಅಧ್ಯಾಯ. ಜಗತ್ತಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ಎಷ್ಟೊಂದು ಹಳೆಯದೋ ಕರ್ನಾಟಕದಲ್ಲೂ ಶಾಸಕಾಂಗ ವ್ಯವಸ್ಥೆ ಮೈಸೂರು ಸಂಸ್ಥಾನದಿಂದಲೇ ಬೆಳೆದು ಬಂದ ಬಳುವಳಿ. ಹೀಗಾಗಿ ಕರ್ನಾಟಕದ ಶಾಸನಸಭೆಯ ಹಿರಿಮೆ ಪ್ರಜಾಪ್ರಭುತ್ವದಷ್ಟೇ ಪವಿತ್ರವಾದುದು.

  ಕರ್ನಾಟಕದ, ಅಂದರೆ ಅಂದಿನ ಮೈಸೂರು ರಾಜ್ಯದ ಮೊಟ್ಟಮೊದಲ ವಿಧಾನಸಭೆ ಸಮಾವೇಶಗೊಂಡದ್ದು1952ರ ಜೂನ್ 18ರ ಬೆಳಗ್ಗೆ 11 ಗಂಟೆಗೆ. ಹೀಗಾಗಿ ಇತ್ತೀಚಿನವರೆಗೂ ವಿಧಾನಸಭೆ ಕಲಾಪ ಬೆಳಗ್ಗೆ 11 ಗಂಟೆಗೆ ಆರಂಭವಾಗುತ್ತಿತ್ತು.

  ವಿಠ್ಠಲಮೂರ್ತಿ ಕಾಲಂ: ವಂಶ ಪಾರಂಪರ್ಯ ರಾಜಕಾರಣದ ಇತಿಹಾಸ

  ಇತ್ತೀಚೆಗಷ್ಟೇ ಅದು 10.30ಕ್ಕೆ ಎಂದು ತಿದ್ದುಪಡಿಗೊಂಡಿತ್ತು. ಮೊಟ್ಟಮೊದಲ ವಿಧಾನಸಭೆ1952ರಲ್ಲಿ ನಡೆದದ್ದು ಇಂದಿನ ಕರ್ನಾಟಕ ಹೈಕೋರ್ಟ್ ಕಟ್ಟಡ, ಅಂದಿನ ಪಬ್ಲಿಕ್ ಆಫೀಸ್ ಬಿಲ್ಡಿಂಗ್‌ನ ಕಾನ್ಫರೆನ್ಸ್ ಹಾಲ್‌ನಲ್ಲಿ.

  1947ರಲ್ಲಿ ಭಾರತ ಸ್ವತಂತ್ರಗೊಂಡ ನಂತರ ರಾಜರುಗಳ ಆಳ್ವಿಕೆ ಕೊನೆಗೊಳಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೊಳಿಸಲೆಂದೇ ಅಂದಿನ ಮೈಸೂರು ಅರಸರು 1949ರ ಡಿಸೆಂಬರ್ 16ರಂದು ತಾತ್ಕಾಲಿಕ ಶಾಸನಸಭೆಯನ್ನು ರದ್ದುಪಡಿಸಿದರು. ಅದಾದ ಬಳಿಕ 1952ರಲ್ಲಿ ಮೈಸೂರು ರಾಜ್ಯದಲ್ಲಿ ಚುನಾವಣೆ ನಡೆಸಲಾಯಿತು.

  ಮೊಟ್ಟಮೊದಲ ಚುನಾವಣೆಯಲ್ಲಿ 99 ಚುನಾಯಿತ ಸದಸ್ಯರು ಹಾಗೂ ಒಬ್ಬರು ನಾಮನಿರ್ದೇಶಿತ ಸದಸ್ಯರ ಆಯ್ಕೆ ಮಾಡಲಾಯಿತು. ಮೊದಲ ವಿಧಾನಸಭೆಯ ಗೌರವ ಸ್ಪೀಕರ್ ಆಗಿ ವಿ.ವೆಂಕಟಪ್ಪ ಕಾರ್ಯನಿರ್ವಹಿಸಿ,ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ಎಲ್ಲ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.

  ಸ್ಪೀಕರ್ ಹುದ್ದೆಗೆ ಚುನಾವಣೆ ನಡೆದು ಸೋಷಲಿಸ್ಟ್ ಪಕ್ಷದ ಮುಖಂಡ ಶಾಂತವೇರಿ ಗೋಪಾಲಗೌಡರ ವಿರುದ್ಧ ಎಚ್.ಸಿದ್ದಯ್ಯ ಅವರು 74 ಮತಗಳನ್ನು ಪಡೆದು ಆಯ್ಕೆಯಾದರು. ಆಗ ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಭಾಷಣ ಮಾಡಿದರು.

  ಬಳಿಕ 1953ರಲ್ಲಿ ಆಂಧ್ರ ರಾಜ್ಯ ರಚನೆಯಾದ ಬಳಿಕ ಮದ್ರಾಸ್ ರಾಜ್ಯದಿಂದ ಬಳ್ಳಾರಿ ಜಿಲ್ಲೆಯು ಮೈಸೂರು ರಾಜ್ಯಕ್ಕೆ ಸೇರ್ಪಡೆಯಾಯಿತು. ಆಗ ವಿಧಾನಸಭೆ ಸದಸ್ಯರ ಸಂಖ್ಯೆ ಹೊಸದಾಗಿ ಐದು ಸ್ಥಾನ ಹೆಚ್ಚಿಸುವ ಮೂಲಕ 104ಕ್ಕೆ ತಲುಪಿತು.

  1956ರ ನವೆಂಬರ್ 1ರಂದು ರಾಜ್ಯ ಪುನರ್ ರಚನೆ ಬಳಿಕ ಮೈಸೂರು ರಾಜ್ಯಕ್ಕೆ ಬಾಂಬೆ ರಾಜ್ಯದಿಂದ 4ಜಿಲ್ಲೆಗಳು, ಹೈದರಾಬಾದ್ ರಾಜ್ಯದಿಂದ ಮೂರು ಜಿಲ್ಲೆಗಳು,ಹಳೆ ಮದ್ರಾಸ್ ರಾಜ್ಯದಿಂದ ಮೈಸೂರು ಮತ್ತು ಕೊಡಗಿನ ಒಂದು ಜಿಲ್ಲೆ ಹಾಗೂ ಒಂದು ತಾಲೂಕು ಸೇರ್ಪಡೆಗೊಂಡವು. 1956ರ ಡಿಸೆಂಬರ್ 19ರಂದು ನೂತನವಾಗಿ ನಿರ್ಮಿಸಲಾದ ವಿಧಾನಸೌಧದಲ್ಲಿ ಮೊದಲ ವಿಧಾನಸಭೆ ಅಧಿವೇಶನ ನಡೆಯಿತು.

  1957ರಲ್ಲಿ ವಿಧಾನಸಭೆ ಸದಸ್ಯರ ಸಂಖ್ಯೆ 208ಕ್ಕೆ ಹೆಚ್ಚಿಸಲಾಯಿತು. 1967ರಲ್ಲಿ 216ಕ್ಕೆ ಏರಿಕೆಯಾಯಿತು.ಬಳಿಕ 1973ರಲ್ಲಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಗಿ ಪುನರ್ ನಾಮಕರಣಗೊಂಡಿತು. 1979ರಲ್ಲಿ ಸದನದ ಸದಸ್ಯರ ಸಂಖ್ಯೆ 224ಕ್ಕೆ ತಲುಪಿತು. ಆಗ ನಾಮನಿರ್ದೇಶಿತ ಸದಸ್ಯರೊಬ್ಬರನ್ನು ಒಳಗೊಂಡು ಭರ್ತಿ 225 ಆಯಿತು.

  1952ರಿಂದ 2005ರವರೆಗೆ ಕೇವಲ ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿದ್ದ ವಿಧಾನಮಂಡಲ ಅಧಿವೇಶನ 2006ರ ಸೆಪ್ಟೆಂಬರ್ 25ರಿಂದ 29ರವರೆಗೆ ಬೆಳಗಾವಿಯಲ್ಲಿ ನಡೆಯಿತು. ನಂತರ 2009ರ ನಂತರ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರತಿವರ್ಷ ಅಧಿವೇಶನ ನಡೆಯುವ ಸಂಪ್ರದಾಯ ಬೆಳೆದು ಬಂದಿದೆ.

  ಮೊದಲ ವಿಧಾನಸಭೆ ಎಂದು ರಚನೆಯಾಗಿದ್ದು ಗೊತ್ತೇ?

  ಮೊದಲ ವಿಧಾನಸಭೆ ಎಂದು ರಚನೆಯಾಗಿದ್ದು ಗೊತ್ತೇ?

  1) ಮೊದಲ ವಿಧಾನಸಭೆ 18 ಜೂನ್ 1952ರಿಂದ 31 ಮಾರ್ಚ್1957

  2) ಎರಡನೇ ವಿಧಾನಸಭೆ 10 ಜೂನ್ 1957ರಿಂದ 1 ಮಾರ್ಚ್1962

  3) ಮೂರನೇ ವಿಧಾನಸಭೆ 15 ಮಾರ್ಚ್ 1962ರಿಂದ 28ಫೆಬ್ರವರಿ 1967

  4) ನಾಲ್ಕನೇ ವಿಧಾನಸಭೆ 15 ಮಾರ್ಚ್ 1967ರಿಂದ 14ಏಪ್ರಿಲ್ 1971

  5) ಐದನೇ ವಿಧಾನಸಭೆ 24 ಮಾರ್ಚ್ 1972ರಿಂದ 31ಡಿಸೆಂಬರ್ 1977 (ವಿಸರ್ಜನೆ)

  6) ಆರನೇ ವಿಧಾನಸಭೆ 17 ಮಾರ್ಚ್ 1978ರಿಂದ 8 ಜೂನ್1983

  7) ಏಳನೇ ವಿಧಾನಸಭೆ 24 ಜುಲೈ 1983ರಿಂದ 2 ಜನವರಿ1985 (ವಿಸರ್ಜನೆ)

  8) ಎಂಟನೇ ವಿಧಾನಸಭೆ 18 ಮಾರ್ಚ್ 1985ರಿಂದ 21ಏಪ್ರಿಲ್ 1989 (ವಿಸರ್ಜನೆ)

  9) ಒಂಬತ್ತನೆ ವಿಧಾನಸಭೆ 18 ಡಿಸೆಂಬರ್ 1989ರಿಂದ 20ಡಿಸೆಂಬರ್ 1994 (ವಿಸರ್ಜನೆ)

  10) 10ನೇ ವಿಧಾನಸಭೆ 25 ಡಿಸೆಂಬರ್ 1994ರಿಂದ 22 ಜುಲೈ1999 (ವಿಸರ್ಜನೆ)

  11) 11ನೇ ವಿಧಾನಸಭೆ 25 ಅಕ್ಟೋಬರ್ 1999ರಿಂದ 28 ಮೇ2004

  12) 12ನೇ ವಿಧಾನಸಭೆ 28 ಮೇ 2004ರಿಂದ 19 ನವೆಂಬರ್2007 (ವಿಸರ್ಜನೆ)

  13) 13ನೇ ವಿಧಾನಸಭೆ 30 ಮೇ 2008ರಿಂದ 5 ಮೇ 2013

  14) 14ನೇ ವಿಧಾನಸಭೆ 13 ಮೇ 2013ರಿಂದ ಮೇ 2018

  ಮೊದಲ ಮುಖ್ಯಮಂತ್ರಿಯಾರು?

  ಮೊದಲ ಮುಖ್ಯಮಂತ್ರಿಯಾರು?

  ಕೆ.ಸಿ.ರೆಡ್ಡಿ 25 ಅಕ್ಟೋಬರ್ 1947ರಿಂದ 30 ಮಾರ್ಚ್ 1952

  ಕೆಂಗಲ್ ಹನುಮಂತಯ್ಯ 30 ಮಾರ್ಚ್ 1952ರಿಂದ 19ಆಗಸ್ಟ್ 1956

  ಕಡಿದಾಳ ಮಂಜಪ್ಪ ಆಗಸ್ಟ್ 19 1956ರಿಂದ 31ಅಕ್ಟೋಬರ್ 1956

  ಮೈಸೂರು ರಾಜ್ಯದ ಮುಖ್ಯಮಂತ್ರಿಗಳಿವರು

  ಮೈಸೂರು ರಾಜ್ಯದ ಮುಖ್ಯಮಂತ್ರಿಗಳಿವರು

  ಎಸ್.ನಿಜಲಿಂಗಪ್ಪ 1 ನವೆಂಬರ್ 1956ರಿಂದ 16 ಮೇ1958

  ಬಿ.ಡಿ.ಜತ್ತಿ 16 ಮೇ 1958ರಿಂದ 9 ಮಾರ್ಚ್ 1962

  ಎಸ್.ಆರ್.ಕಂಠಿ 14 ಮಾರ್ಚ್ 1962ರಿಂದ 20 ಜೂನ್1962

  ಎಸ್.ನಿಜಲಿಂಗಪ್ಪ 21 ಜೂನ್ 1962ರಿಂದ 28 ಮೇ 1968

  ವೀರೇಂದ್ರ ಪಾಟೀಲ್ 29 ಮೇ 1968ರಿಂದ 18 ಮಾರ್ಚ್1971

  ಕರ್ನಾಟಕದ ಮೊದಲ ಮುಖ್ಯಮಂತ್ರಿಗಳ ಪಟ್ಟಿ

  ಕರ್ನಾಟಕದ ಮೊದಲ ಮುಖ್ಯಮಂತ್ರಿಗಳ ಪಟ್ಟಿ

  ಡಿ.ದೇವರಾಜ ಅರಸು 20 ಮಾರ್ಚ್ 1972ರಿಂದ 31ಡಿಸೆಂಬರ್ 1977

  ಡಿ.ದೇವರಾಜ ಅರಸು 28 ಫೆಬ್ರವರಿ 1978ರಿಂದ 7 ಜನವರಿ1980

  ಆರ್.ಗುಂಡೂರಾವ್ 12 ಜನವರಿ 1980ರಿಂದ 6 ಜನವರಿ1983

  ರಾಮಕೃಷ್ಣ ಹೆಗಡೆ 10 ಜನವರಿ 1983ರಿಂದ 29 ಡಿಸೆಂಬರ್1984

  ರಾಮಕೃಷ್ಣ ಹೆಗಡೆ 8 ಮಾರ್ಚ್ 1985ರಿಂದ 13ಫೆಬ್ರವರಿ1986

  ರಾಮಕೃಷ್ಣ ಹೆಗಡೆ 16 ಫೆಬ್ರವರಿ 1986ರಿಂದ 10 ಆಗಸ್ಟ್1988

  ಎಸ್.ಆರ್.ಬೊಮ್ಮಾಯಿ 13 ಆಗಸ್ಟ್ 1988ರಿಂದ 21ಏಪ್ರಿಲ್ 1989

  ವೀರೇಂದ್ರ ಪಾಟೀಲ್ 30 ನವೆಂಬರ್ 1989ರಿಂದ 10ಅಕ್ಟೋಬರ್ 1990

  ಎಸ್.ಬಂಗಾರಪ್ಪ 17 ಅಕ್ಟೋಬರ್ 1990ರಿಂದ 19ನವೆಂಬರ್ 1992

  ಎಂ.ವೀರಪ್ಪ ಮೊಯ್ಲಿ 19 ನವೆಂಬರ್ 1992ರಿಂದ 11ಡಿಸೆಂಬರ್ 1994

  ಎಚ್.ಡಿ.ದೇವೇಗೌಡ 11 ಡಿಸೆಂಬರ್ 1994ರಿಂದ 31 ಮೇ1996

  ಜೆ.ಎಚ್.ಪಟೇಲ್ 31 ಮೇ 1996ರಿಂದ 7 ಅಕ್ಟೋಬರ್1999

  ಎಸ್.ಎಂ.ಕೃಷ್ಣ 11 ಅಕ್ಟೋಬರ್ 1999ರಿಂದ 28 ಮೇ2004

  ಎನ್.ಧರ್ಮಸಿಂಗ್ 28 ಮೇ 2004ರಿಂದ 28 ಜನವರಿ2006

  ಎಚ್.ಡಿ.ಕುಮಾರಸ್ವಾಮಿ 3 ಫೆಬ್ರವರಿ 2006ರಿಂದ 8ಅಕ್ಟೋಬರ್ 2007

  ಬಿ.ಎಸ್.ಯಡಿಯೂರಪ್ಪ 12 ನವೆಂಬರ್ 2007ರಿಂದ 19ನವೆಂಬರ್ 2007

  ಬಿ.ಎಸ್.ಯಡಿಯೂರಪ್ಪ 30 ಮೇ 2008ರಿಂದ 31 ಜುಲೈ2011

  ಡಿ.ವಿ.ಸದಾನಂದಗೌಡ 4 ಆಗಸ್ಟ್ 2011ರಿಂದ 12 ಜುಲೈ2012

  ಜಗದೀಶ್ ಶೆಟ್ಟರ್ 12 ಜುಲೈ 2012ರಿಂದ 12 ಮೇ 2013

  ಸಿದ್ದರಾಮಯ್ಯ 13 ಮೇ 2013ರಿಂದ ಈ ತನಕ

  ವಿರೋಧ ಪಕ್ಷದ ನಾಯಕರು

  ವಿರೋಧ ಪಕ್ಷದ ನಾಯಕರು

  ಎಸ್.ಶಿವಪ್ಪ 22 ಮಾರ್ಚ್ 1962ರಿಂದ 28 ಜನವರಿ 1967

  ಎಸ್.ಶಿವಪ್ಪ 15 ಮಾರ್ಚ್ 1967ರಿಂದ 22 ೆಬ್ರವರಿ 1970

  ಎಸ್.ಶಿವಪ್ಪ 23 ಫೆಬ್ರವರಿ 1970ರಿಂದ 22 ಡಿಸೆಂಬರ್1970

  ಎಚ್.ಸಿದ್ದವೀರಪ್ಪ 23 ಡಿಸೆಂಬರ್ 1970ರಿಂದ 14 ಏಪ್ರಿಲ್1971

  ಎಚ್.ಡಿ.ದೇವೇಗೌಡ 24 ಮಾರ್ಚ್ 1972ರಿಂದ 17ಮಾರ್ಚ್ 1976

  ಎಚ್.ಟಿ.ಕೃಷ್ಣಪ್ಪ 18 ಮಾರ್ಚ್ 1976ರಿಂದ 25 ಅಕ್ಟೋಬರ್1976

  ಎಚ್.ಡಿ.ದೇವೇಗೌಡ 18 ನವೆಂಬರ್ 1976ರಿಂದ 31ಡಿಸೆಂಬರ್ 1977

  ಎಸ್.ಆರ್.ಬೊಮ್ಮಾಯಿ 18 ಮಾರ್ಚ್ 1978ರಿಂದ 17ಜುಲೈ 1979

  ಆರ್.ಗುಂಡೂರಾವ್ 17 ಡಿಸೆಂಬರ್ 1979ರಿಂದ 22ಜನವರಿ1980

  ಡಿ.ದೇವರಾಜ ಅರಸು 23 ಜನವರಿ 1980ರಿಂದ 11 ಜೂನ್1981

  ಎ.ಲಕ್ಷ್ಮೀಸಾಗರ್ 10 ೆಬ್ರವರಿ 1982ರಿಂದ 8 ಜನವರಿ1983

  ಎಂ.ವೀರಪ್ಪ ಮೊಯ್ಲಿ 24 ಜನವರಿ 1983ರಿಂದ 2 ಜನವರಿ1985

  ಎಸ್.ಬಂಗಾರಪ್ಪ 18 ಮಾರ್ಚ್ 1985ರಿಂದ 11 ಜೂನ್1986

  ಎಚ್.ಡಿ.ಚೌಡಯ್ಯ 18 ಆಗಸ್ಟ್ 1986ರಿಂದ 28 ಜನವರಿ1987

  ಕೆ.ಎಸ್.ನಾಗರತ್ನಮ್ಮ 29 ಜನವರಿ 1983ರಿಂದ 21 ಏಪ್ರಿಲ್1989

  ಡಿ.ಬಿ.ಚಂದ್ರೇಗೌಡ 18 ಡಿಸೆಂಬರ್ 1989ರಿಂದ 18 ಆಗಸ್ಟ್1992

  ಆರ್.ವಿ.ದೇಶಪಾಂಡೆ 18 ಆಗಸ್ಟ್ 1992ರಿಂದ 16ಡಿಸೆಂಬರ್ 1994

  ಬಿ.ಎಸ್.ಯಡಿಯೂರಪ್ಪ 27 ಡಿಸೆಂಬರ್ 1994ರಿಂದ 18ಡಿಸೆಂಬರ್ 1996

  ಮಲ್ಲಿಕಾರ್ಜುನ ಖರ್ಗೆ 19 ಡಿಸೆಂಬರ್ 1996ರಿಂದ 22 ಜುಲೈ1999

  ಜಗದೀಶ ಶೆಟ್ಟರ್ 25 ಅಕ್ಟೋಬರ್ 1999ರಿಂದ 23ೆಬ್ರವರಿ 2004

  ಬಿ.ಎಸ್.ಯಡಿಯೂರಪ್ಪ 10 ಜೂನ್ 2004ರಿಂದ 3ೆಬ್ರವರಿ 2006

  ಎನ್.ಧರ್ಮಸಿಂಗ್ 8 ಫೆಬ್ರವರಿ 2006ರಿಂದ 28 ನವೆಂಬರ್2007

  ಮಲ್ಲಿಕಾರ್ಜುನ ಖರ್ಗೆ 23 ಜೂನ್ 2008ರಿಂದ 28 ಮೇ2009

  ಸಿದ್ದರಾಮಯ್ಯ 8 ಜೂನ್ 2009ರಿಂದ 9 ಮೇ 2013

  ಎಚ್.ಡಿ.ಕುಮಾರಸ್ವಾಮಿ 31 ಮೇ 2013ರಿಂದ 22 ಜನವರಿ2014

  ಜಗದೀಶ ಶೆಟ್ಟರ್ 23 ಜನವರಿಂದ 2014ರಿಂದ ಈ ತನಕ

  ಸ್ಪೀಕರ್ ಪಕ್ಷ ಅವಧಿ

  ಸ್ಪೀಕರ್ ಪಕ್ಷ ಅವಧಿ

  ವಿ.ವೆಂಕಟಪ್ಪ ಕಾಂಗ್ರೆಸ್ 1952

  ಎಚ್.ಸಿದ್ದಯ್ಯ ಕಾಂಗ್ರೆಸ್ 18 ಜೂನ್ 1952ರಿಂದ 14 ಮೇ1954

  ಎಚ್.ಎಸ್.ರುದ್ರಪ್ಪ ಕಾಂಗ್ರೆಸ್ 13 ಅಕ್ಟೋಬರ್ 1954ರಿಂದ1 ನವೆಂಬರ್ 1956

  ಎಸ್.ಆರ್.ಕಂಠಿ ಕಾಂಗ್ರೆಸ್ 19 ಡಿಸೆಂಬರ್ 1956ರಿಂದ 9ಮಾರ್ಚ್ 1962

  ಬಿ.ವೈಕುಂಟ ಬಾಳಿಗಾ ಕಾಂಗ್ರೆಸ್ 15 ಮಾರ್ಚ್ 1962ರಿಂದ6 ಜೂನ್ 1968

  ಎಸ್.ಡಿ.ಕೊಟವಳೆ ಕಾಂಗ್ರೆಸ್ 5 ಸೆಪ್ಟೆಂಬರ್ 1968ರಿಂದ 24ಮಾರ್ಚ್ 1972

  ಕೆ.ಎಸ್.ನಾಗರತ್ನಮ್ಮ ಕಾಂಗ್ರೆಸ್ 34 ಮಾರ್ಚ್ 1972ರಿಂದ17 ಮಾರ್ಚ್ 1978

  ಪಿ.ವೆಂಕಟರಮಣ ಕಾಂಗ್ರೆಸ್ 17 ಮಾರ್ಚ್ 1978ರಿಂದ 3ಅಕ್ಟೋಬರ್ 1980

  ಕೆ.ಎಚ್.ರಂಗನಾಥ ಕಾಂಗ್ರೆಸ್ 30 ಜನವರಿ 1981ರಿಂದ 24ಜನವರಿ 1983

  ಡಿ.ಬಿ.ಚಂದ್ರೇಗೌಡ ಜನತಾ ಪಾರ್ಟಿ 24 ಜನವರಿಂದ1981ರಿಂದ 17 ಮಾರ್ಚ್ 1985

  ಬಿ.ಜಿ.ಬಣಕಾರ್ ಜನತಾ ಪಾರ್ಟಿ 18 ಮಾರ್ಚ್ 1985ರಿಂದ17 ಡಿಸೆಂಬರ್ 1989

  ಎಸ್.ಎಂ.ಕೃಷ್ಣ ಕಾಂಗ್ರೆಸ್ 18 ಡಿಸೆಂಬರ್ 1989ರಿಂದ 20ಜನವರಿಂದ 1993

  ವಿ.ಎಸ್.ಕೌಜಲಗಿ ಕಾಂಗ್ರೆಸ್ 15 ೆಬ್ರವರಿ 1993ರಿಂದ 26ಡಿಸೆಂಬರ್ 1994

  ರಮೇಶ್‌ಕುಮಾರ್ ಜನತಾ ದಳ 27 ಡಿಸೆಂಬರ್ 1994ರಿಂದ24 ಅಕ್ಟೋಬರ್ 1999

  ಎಂ.ವಿ.ವೆಂಕಟಪ್ಪ ಕಾಂಗ್ರೆಸ್ 26 ಅಕ್ಟೋಬರ್ 1999ರಿಂದ 7ಜೂನ್ 2004

  ಎನ್.ಕೃಷ್ಣ ಜೆಡಿಎಸ್ 10 ಜೂನ್ 2004ರಿಂದ 4 ಜೂನ್2008

  ಜಗದೀಶ್ ಶೆಟ್ಟರ್ ಬಿಜೆಪಿ 5 ಜೂನ್ 2008ರಿಂದ 16ನವೆಂಬರ್ 2009

  ಕೆ.ಜಿ.ಬೋಪಯ್ಯ ಬಿಜೆಪಿ 17 ನವೆಂಬರ್ 2009ರಿಂದ 30ಮೇ 2013

  ಕಾಗೋಡು ತಿಮ್ಮಪ್ಪ ಕಾಂಗ್ರೆಸ್ 31 ಮೇ 2013ರಿಂದ 19ಜೂನ್ 2016

  ಕೆ.ಬಿ.ಕೋಳಿವಾಡ ಕಾಂಗ್ರೆಸ್ 5 ಜುಲೈ 2015ರಿಂದ ಮೇ2018

  ಪಕ್ಷಗಳ ಬಲಾಬಲ 1957

  ಪಕ್ಷಗಳ ಬಲಾಬಲ 1957

  ಕಾಂಗ್ರೆಸ್ 150

  ಪಕ್ಷೇತರ 35

  ಭಾರತೀಯ ಜನ ಸಂಘ 00

  ಪ್ರಜಾ ಸೋಷಲಿಸ್ಟ್ ಪಾರ್ಟಿ 18

  ಪೀಸಂಟ್ಸ್ ಆಂಡ್ ವರ್ಕರ್ಸ್ ಪಾರ್ಟಿ 02

  ಸಿಪಿಐ 01

  ಆಲ್ ಇಂಡಿಯಾ ಶೆಡ್ಯೂಲ್ಡ್ ಕಾಸ್ಟ್ಫೆಡರೇಶನ್ 02

  ಪಕ್ಷಗಳ ಬಲಾಬಲ 1962

  ಪಕ್ಷಗಳ ಬಲಾಬಲ 1962

  ಕಾಂಗ್ರೆಸ್ 138

  ಭಾರತೀಯ ಜನ ಸಂಘ 00

  ಪ್ರಜಾ ಸೋಷಲಿಸ್ಟ್ ಪಾರ್ಟಿ 20

  ಸೋಷಲಿಸ್ಟ್ 01

  ಸ್ವತಂತ್ರ 09

  ಸಿಪಿಐ 03

  ಲೋಕ ಸೇವಕ ಸಂಘ 04

  ಮಹಾರಾಷ್ಟ್ರ ಏಕೀಕರಣ ಸಮಿತಿ 06

  ಪಕ್ಷೇತರರು 27

  ಪಕ್ಷಗಳ ಬಲಾಬಲ 1967

  ಪಕ್ಷಗಳ ಬಲಾಬಲ 1967

  ಕಾಂಗ್ರೆಸ್ 126

  ಪಿಎಸ್‌ಪಿ 20

  ಸ್ವತಂತ್ರ 16

  ಎಸ್‌ಎಸ್‌ಪಿ 06

  ಭಾರತೀಯ ಜನಸಂಘ 04

  ಸಿಪಿಐ 01

  ಸಿಪಿಎಂ 01

  ಪಕ್ಷೇತರ 41

  ಪಕ್ಷಗಳ ಬಲಾಬಲ 1972

  ಪಕ್ಷಗಳ ಬಲಾಬಲ 1972

  ಕಾಂಗ್ರೆಸ್ 165

  ಸಂಸ್ಥಾ ಕಾಂಗ್ರೆಸ್ 24

  ಎಸ್‌ಓಪಿ 03

  ಸಿಪಿಐ 03

  ಜೆಪಿಪಿ 01

  ಪಕ್ಷೇತರ 20

  ಪಕ್ಷಗಳ ಬಲಾಬಲ 1978

  ಪಕ್ಷಗಳ ಬಲಾಬಲ 1978

  ಸಿಪಿಐ 03

  ಕಾಂಗ್ರೆಸ್ 149

  ಸಂಸ್ಥಾ ಕಾಂಗ್ರೆಸ್ 02

  ಜನತಾ ಪಾರ್ಟಿ 59

  ಆರ್‌ಪಿಐ 01

  ಪಕ್ಷೇತರ 10

  ಪಕ್ಷಗಳ ಬಲಾಬಲ 1983

  ಪಕ್ಷಗಳ ಬಲಾಬಲ 1983

  ಬಿಜೆಪಿ 18

  ಸಿಪಿಐ 03

  ಸಿಪಿಎಂ 03

  ಕಾಂಗ್ರೆಸ್ 82

  ಜನತಾಪಕ್ಷ 95

  ಎಡಿಎಂಕೆ 01

  ಪಕ್ಷೇತರ 22

  ಪಕ್ಷಗಳ ಬಲಾಬಲ 1985

  ಪಕ್ಷಗಳ ಬಲಾಬಲ 1985

  ಬಿಜೆಪಿ 02

  ಸಿಪಿಐ 03

  ಸಿಪಿಎಂ 02

  ಕಾಂಗ್ರೆಸ್ 65

  ಜನತಾಪಕ್ಷ 139

  ಪಕ್ಷೇತರ 13

  ಪಕ್ಷಗಳ ಬಲಾಬಲ 1989

  ಪಕ್ಷಗಳ ಬಲಾಬಲ 1989

  ಬಿಜೆಪಿ 04

  ಕಾಂಗ್ರೆಸ್ 178

  ಜನತಾದಳ 24

  ಜನತಾಪಕ್ಷ (ಜೆಪಿ) 02

  ಎಡಿಕೆ 01

  ಕೆಆರ್‌ಎಸ್ 02

  ಎಂಯುಎಲ್ 01

  ಪಕ್ಷೇತರ 12

  ಪಕ್ಷಗಳ ಬಲಾಬಲ 1994

  ಪಕ್ಷಗಳ ಬಲಾಬಲ 1994

  ಬಿಜೆಪಿ 40

  ಬಿಎಸ್‌ಪಿ 01

  ಸಿಪಿಎಂ 01

  ಕಾಂಗ್ರೆಸ್ 34

  ಜನತಾದಳ 115

  ಎಡಿಎಂಕೆ 01

  ಕೆಸಿಪಿ 10

  ಬಿಆರ್‌ಪಿ 01

  ಐಎನ್‌ಎಲ್ 01

  ಕೆಸಿವಿಪಿ 01

  ಕೆಆರ್‌ಆರ್‌ಎಸ್ 01

  ಪಕ್ಷೇತರ 18

  ಪಕ್ಷಗಳ ಬಲಾಬಲ 1999

  ಪಕ್ಷಗಳ ಬಲಾಬಲ 1999

  ಬಿಜೆಪಿ 44

  ಕಾಂಗ್ರೆಸ್ 132

  ಜೆಡಿಎಸ್ 10

  ಜೆಡಿಯು 18

  ಎಡಿಎಂಕೆ 01

  ಪಕ್ಷೇತರ 19

  ಪಕ್ಷಗಳ ಬಲಾಬಲ 2004

  ಪಕ್ಷಗಳ ಬಲಾಬಲ 2004

  ಬಿಜೆಪಿ 79

  ಸಿಪಿಎಂ 01

  ಕಾಂಗ್ರೆಸ್ 65

  ಜೆಡಿಎಸ್ 58

  ಜೆಡಿಯು 05

  ಕೆಸಿವಿಪಿ 01

  ಕೆಎನ್‌ಡಿಪಿ 01

  ಆರ್‌ಪಿಐ 01

  ಪಕ್ಷೇತರ 13

  ಪಕ್ಷಗಳ ಬಲಾಬಲ 2008

  ಪಕ್ಷಗಳ ಬಲಾಬಲ 2008

  ಬಿಜೆಪಿ 110

  ಕಾಂಗ್ರೆಸ್ 80

  ಜೆಡಿಎಸ್ 28

  ಪಕ್ಷೇತರ 06

  ಪಕ್ಷಗಳ ಬಲಾಬಲ 2013

  ಪಕ್ಷಗಳ ಬಲಾಬಲ 2013

  ಬಿಎಸ್‌ಆರ್ ಕಾಂಗ್ರೆಸ್ 04

  ಬಿಜೆಪಿ 40

  ಕಾಂಗ್ರೆಸ್ 122

  ಜೆಡಿಎಸ್ 40

  ಕೆಜೆಪಿ 06

  ಕೆಎಂಪಿ 01

  ಎಸ್‌ಪಿ 01

  ಸರ್ವೋದಯ 01

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Karnataka assembly has a tremendous history of democracy and public administration of new Indian era. Here is the beautiful story of its beginning and growth.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more