ಸಿದ್ದು, ಡಿಕೆಶಿ ಜೊತೆ ಸುರ್ಜೇವಾಲಾ ಗೌಪ್ಯ ಮಾತುಕತೆ: ಮುಜುಗರ ತಪ್ಪಿಸಲು ಮುಂದುವರಿದ ಯತ್ನ? ಇಲ್ಲಿದೆ ವರದಿ
ಬೆಂಗಳೂರು, ಫೆಬ್ರವರಿ 02: ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯ ಮುನ್ನಾದಿನದಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ತಯಾರು ಮಾಡುವ ಕುರಿತು ಬುಧವಾರ ಮ್ಯಾರಥಾನ್ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಗುರುವಾರ ದೇವನಹಳ್ಳಿಯ ರೆಸಾರ್ಟ್‌ನಲ್ಲಿ ನಡೆಯಲಿರುವ 36 ಸದಸ್ಯರ ಚುನಾವಣಾ ಸಮಿತಿ ಸಭೆಯಲ್ಲಿ ಯಾವುದೇ ಮುಜುಗರ ತಪ್ಪಿಸಲು ಸಭೆ ನಡೆಸಲಾಯಿದೆ.
ತಮ್ಮ ನಿಷ್ಠಾವಂತರ ಹಿತಾಸಕ್ತಿಗಳನ್ನು ಕಾಪಾಡಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾಜುನ ಖರ್ಗೆ ಅವರು ಭಿನ್ನಾಭಿಪ್ರಾಯಗಳನ್ನು ಮೊದಲೇ ಪರಿಹರಿಸಲು ಉಭಯರೊಂದಿಗೆ ಸಭೆ ನಡೆಸುವಂತೆ ಸುರ್ಜೇವಾಲಾ ಅವರಿಗೆ ಸೂಚಿಸಿದ್ದಾರೆ.
ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಎಐಸಿಸಿ ನಿಯೋಜಿಸಿದ ಖಾಸಗಿ ಏಜೆನ್ಸಿಗಳು ನಡೆಸಿದ ವಿವಿಧ ಸಮೀಕ್ಷೆಗಳ ವರದಿಗಳನ್ನು ಮೂವರೂ ಚರ್ಚಿಸಿದ್ದಾರೆ ಎಂದು ಮೂಲಗಳು 'ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಇದಕ್ಕೂ ಮೊದಲು, ಸುರ್ಜೇವಾಲಾ ಅವರು ಮಧ್ಯಾಹ್ನ ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಗೌಪ್ಯ ಸಭೆ ನಡೆಸಿದರು. ಕೊರಟಗೆರೆ ಇನ್ನೂ ಸಂಕೀರ್ಣವಾದ ವಿಧಾನಸಭಾ ಕ್ಷೇತ್ರವಾಗಿರುವುದರಿಂದ ಪರಮೇಶ್ವರ ಅವರು ಸುರಕ್ಷಿತ ಸ್ಥಾನವನ್ನು ನೋಡುವಂತೆ ಕೇಳಬಹುದು. ಸಮೀಕ್ಷೆಯ ವರದಿಯನ್ನು ಆಧರಿಸಿ ಸುರ್ಜೇವಾಲಾ ಅವರಿಗೆ ಈ ಸಲಹೆಯನ್ನು ನೀಡಿರಬಹುದು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ 130-140 ಸೀಟುಗಳನ್ನು ಗೆಲ್ಲಲಿದೆ: ಎಂಬಿ ಪಾಟೀಲ್
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ 130 ಸ್ಥಾನಗಳಿಗಿಂತ ಹೆಚ್ಚು ಗಳಿಸಲಿದೆ ಎಂದು ಕರ್ನಾಟಕ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಮಂಗಳವಾರ ಹೇಳಿದ್ದಾರೆ.
60 ಸೀಟು ದಾಟುವುದಿಲ್ಲ ಎಂದು ಬಿಜೆಪಿಗೆ ಗೊತ್ತಿದೆ. ಸದ್ಯಕ್ಕೆ ಕಾಂಗ್ರೆಸ್ 130-140 ಸೀಟುಗಳನ್ನು ಗೆಲ್ಲಲಿದೆ. 130ಕ್ಕಿಂತ ಕಡಿಮೆ ಇಲ್ಲ ಎಂದು ಪಾಟೀಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಂಚಮಸಾಲಿ ಲಿಂಗಾಯತರಲ್ಲಿನ ಹತಾಶೆಯನ್ನು ಕಾಂಗ್ರೆಸ್ ಬಂಡವಾಳವನ್ನಾಗಿ ಮಾಡಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪಾಟೀಲ್, ಜನಸಂಖ್ಯೆ ಮತ್ತು ಗೆಲುವಿನ ಆಧಾರದ ಮೇಲೆ ಪಕ್ಷ ನಿರ್ಧರಿಸುತ್ತದೆ. ಪಂಚಮಸಾಲಿಗಳಷ್ಟೇ ಅಲ್ಲ, ದಲಿತರು, ಅಲ್ಪಸಂಖ್ಯಾರನ್ನು ಹಿಂದುಳಿದ ವರ್ಗಗಳು ಮತ್ತು ಬ್ರಾಹ್ಮಣರನ್ನು ನಾವು ಬಂಡವಾಳವನ್ನಾಗಿ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.
ಜನರು ಬಿಜೆಪಿಗೆ ಮತ ಹಾಕದಿರಲು ನಿರ್ಧರಿಸಿದ್ದಾರೆ. ಪ್ರಧಾನಿ ಮೋದಿ ಅಥವಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಯಾವುದೇ ವ್ಯತ್ಯಾಸವನ್ನು ಮಾಡುವುದಿಲ್ಲ ಎಂದು ಅವರು ಹೇಳಿದರು. 'ರಾಜ್ಯದಲ್ಲಿ ನಾಯಕತ್ವವಿದ್ದರೆ, ಅವರು ಗೆಲ್ಲಲು ಮೋದಿ ಅಥವಾ ಶಾ ಅವರನ್ನು ಏಕೆ ಅವಲಂಬಿಸಿದ್ದಾರೆ?' ಎಂದೂ ಎಂಬಿ ಪಾಟೀಲ್ ಕೇಳಿದ್ದಾರೆ.
'ಹಲವು ಜೆಡಿ (ಎಸ್) ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ ಮತ್ತು ಇನ್ನೂ ಹೆಚ್ಚಿನವರು ಬರುತ್ತಾರೆ. ಬಿಜೆಪಿ ನಾಯಕರು ಕೂಡ ಬರುತ್ತಾರೆ' ಎಂದು ತಿಳಿಸಿದ್ದಾರೆ.












Click it and Unblock the Notifications