ಮಳೆ.. ಮಳೆ.. ಮತ್ತೆ ಮಳೆ ಆರ್ಭಟದ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ! Rain Alert
ಮುಂಗಾರು ಮಳೆ ತನ್ನ ಆರ್ಭಟ ಶುರು ಮಾಡಿ ಹಲವು ದಿನಗಳೇ ಕಳೆದಿದೆ, ಆರಂಭದಲ್ಲಿ ಸರಿಯಾಗಿ ಮಳೆ ಬಿದ್ದರೂ ಇದೀಗ ಕರ್ನಾಟಕ & ಬೆಂಗಳೂರಿನಲ್ಲಿ ಮಳೆ ಅಬ್ಬರ ಒಂದಷ್ಟು ಕಡಿಮೆ ಆಗಿದೆ. ಅದರಲ್ಲೂ ಮೇ ತಿಂಗಳಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದು ಸುದ್ದಿಯಾಗಿತ್ತು, ಆದರೆ ಇದೀಗ ಕೆಲವು ದಿನಗಳಿಂದ ಮಳೆಯೇ ಪತ್ತೆ ಇಲ್ಲ ಎನ್ನಬಹದು. ಇಂತಹ ಸಮಯದಲ್ಲೇ, ಮತ್ತೆ ಭರ್ಜರಿ ಮಳೆ ಆರ್ಭಟದ ಬಗ್ಗೆ ಮುನ್ಸೂಚನೆ ಸಿಕ್ಕಿದೆ.
ಅಂದಹಾಗೆ ಮಳೆರಾಯ ಭಾರಿ ದೊಡ್ಡ ಮಟ್ಟದಲ್ಲಿ ಅಬ್ಬರಿಸುತ್ತಿದ್ದು, ಮಳೆ ಹಿನ್ನೆಲೆಯಲ್ಲಿ ಸಾಲು ಸಾಲು ಸಮಸ್ಯೆ ಕೂಡ ಉಂಟಾಗುತ್ತಿವೆ. ಮಳೆ ಆರ್ಭಟಕ್ಕೆ ಇನ್ನೂ ಬ್ರೇಕ್ ಬಿದ್ದಿಲ್ಲ, ಬೆಂಗಳೂರು ಸೇರಿ ನಮ್ಮ ರಾಜ್ಯದ ಹಲವು ಜಿಲ್ಲೆಗಳಿಗೆ ಈಗಲೂ ಮಳೆಯ ಭಯ ಕಾಡುತ್ತಲೇ ಇದೆ. ಯಾಕಂದ್ರೆ ಮುಂಗಾರು ಮಳೆ ಮೋಡಗಳು ಎಂಟ್ರಿ ಕೊಟ್ಟಿದ್ದು, ಭಾರಿ ದೊಡ್ಡ ಮಳೆ ಸುರಿಯುವ ನಿರೀಕ್ಷೆ ಮೂಡಿದೆ. ಹಾಗಾದ್ರೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ? ಸಂಪೂರ್ಣ ಮಾಹಿತಿಗಾಗಿ ಮುಂದೆ ಓದಿ...

ಮತ್ತೆ ಭಾರಿ ಮಳೆ ಮುನ್ನೆಚ್ಚರಿಕೆ!
ಮಳೆ.. ಮಳೆ.. ಮಳೆ.. ಹೀಗೆ ಯಾವುದೇ ಜಿಲ್ಲೆಗೆ ಹೋದರೂ ಬರೀ ಮಳೆಯದ್ದೇ ಚರ್ಚೆ. ಮಳೆ ಎಲ್ಲೆಲ್ಲೂ ಅಬ್ಬರಿಸ್ತಿದ್ದು, ಮುಂಗಾರು ಮಳೆ ಅಬ್ಬರಕ್ಕೆ ಜನರು ಕೂಡ ಬೆಚ್ಚಿ ಬಿದ್ದಿದ್ದು ಪರದಾಟ ನೋಡಲು ಆಗುತ್ತಿಲ್ಲ. ಉತ್ತರ ಕರ್ನಾಟಕ ಟು ದಕ್ಷಿಣ ಕರ್ನಾಟಕ, ಮಲೆನಾಡು ಟು ಕರಾವಳಿ ಪ್ರದೇಶ ಹೀಗೆ ಕರ್ನಾಟಕದ ಪ್ರತಿಯೊಂದು ಜಾಗಕ್ಕೂ ಮಳೆ ಅಬ್ಬರ ಭಾರಿ ಸಮಸ್ಯೆ ಉಂಟು ಮಾಡಿ ಸ್ವಲ್ಪ ದಿನಗಳ ಕಾಲ ಸೈಲೆಂಟ್ ಆಗಿತ್ತು. ಆದರೆ ಇದೀಗ ಮತ್ತೆ ಭಾರಿ ಮಳೆ ಮುನ್ನೆಚ್ಚರಿಕೆ ನೀಡಲಾಗಿದೆ.
ಮತ್ತೆ ಸುರಿಯಲಿದೆ ಭರ್ಜರಿ ಮಳೆ!
ಹೌದು, ಹವಾಮಾನ ಇಲಾಖೆ ನೀಡಿರುವ ಮಾಹಿತಿಯಂತೆ, ಜೂನ್ 06ರಿಂದ 09 ತನಕ ಮುಂಗಾರು ಮಳೆ ಹಂತ ಹಂತವಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಚುರುಕಾಗಲಿದೆ. ಇಂದು ಶುಕ್ರವಾರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆ ನಿರೀಕ್ಷೆ ಮಾಡಲಾಗಿದೆ. ಬಿರುಗಾಳಿ ಸಹಿತ ಸಾಧಾರಣ ಮಳೆ ಸುರಿಯುವ ಸೂಚನೆ ಇದ್ದು, ಪ್ರತಿ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ ಎಂಬ ಮುನ್ಸೂಚನೆ ಇದೆ. ಜೂನ್ 7 & 8ನೇ ತಾರೀಖು ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಭಾಗ ಬಿಟ್ಟು ಉಳಿದ 28 ಜಿಲ್ಲೆಗಳಿಗೂ ಅಲ್ಲಲ್ಲಿ ಹಗುರ ಹಾಗೂ ಸಾಧಾರಣ ಮಳೆ ಸುರಿಯಲಿದೆ. ಗಾಳಿ ವೇಗ ಹೆಚ್ಚಿರಲಿದ್ದು, ಇದೇ ವೇಳೆ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜೋರು ಗಾಳಿ ಬೀಸಲಿದೆ ಎಂದು ಎಚ್ಚರಿಕೆಯ ನೀಡಲಾಗಿದೆ. ಈ ಮೂಲಕ ಮತ್ತೆ ಮಳೆರಾಯ ವೈಲೆಂಟ್ ಆಗುತ್ತಿದ್ದು, ಭಾರಿ ಮಳೆಯ ನಿರೀಕ್ಷೆ ಮಾಡಲಾಗುತ್ತಿದೆ.












Click it and Unblock the Notifications