ಕನ್ನಡಿಗರನ್ನು ರಾತ್ರೋರಾತ್ರಿ ಗುಜರಾತ್‌ಗೆ ಕರೆದುಕೊಂಡು ಹೋಗಿ ಕಿರುಕುಳ!

ಕನ್ನಡ ರಾಜ್ಯೋತ್ಸವಕ್ಕೆ ಇನ್ನು ಎರಡು ದಿನ ಮಾತ್ರ ಬಾಕಿ ಉಳಿದಿದೆ. ಈ ನಡುವೆ ಕನ್ನಡಿಗರ ಮೇಲೆ ಹಲ್ಲೆ ಹಾಗೂ ಕನ್ನಡಿಗರಿಗೆ ಕಿರುಕುಳ ನೀಡುವ ಸುದ್ದಿಗಳು ಹೆಚ್ಚಾಗುತ್ತಲ್ಲೇ ಇವೆ. ಇದೀಗ ಕನ್ನಡದ ನೆಲೆದಲ್ಲೇ ಕನ್ನಡಿಗರಿಗೆ ಅನ್ಯಾಯ ಹಾಗೂ ಕಿರುಕುಳ ನೀಡುವ ಸುದ್ದಿಯೊಂದು ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಕನ್ನಡಿಗರನ್ನು ಕರ್ನಾಟಕದಿಂದ ಗುಜರಾತ್‌ಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿರುವ ಸುದ್ದಿ ಆಘಾತಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಖಾಸಗಿ ಕಂಪನಿಯೊಂದು ಇಲ್ಲಿನ ಸಾವಿರಾರು ಕುಟುಂಬಗಳಿಗೆ ಈ ಕಂಪನಿಯು ಆಧಾರಸ್ತಂಭವಾಗಿತ್ತು. ಆದರೆ, ಈಗ ಏಕಾಏಕಿ ಕಾರ್ಮಿಕರನ್ನು ಕರ್ನಾಟಕದಿಂದ ಗುಜರಾತ್ ಕರೆದುಕೊಂಡು ಹೋಗಿ ಕಿರುಕುಳ ನೀಡುತ್ತಿದೆ ಎನ್ನುವ ಗಂಭೀರವಾದ ಆರೋಪವೊಂದು ಕೇಳಿ ಬಂದಿದೆ.

Kannadigas were taken to Gujarat overnight and harassed

ಕರ್ನಾಟಕದ ಸ್ಥಳೀಯರನ್ನು ಗುಜರಾತ್‌ಗೆ ಕರೆದುಕೊಂಡು ಹೋಗಿ ಹಿಂಸೆ ನೀಡಲಾಗುತ್ತಿದೆ ಎಂದು ಇಲ್ಲಿನ ಕನ್ನಡಿಗರು ಅಳಲು ತೋಡಿಕೊಂಡಿದ್ದಾರೆ. ಈ ಖಾಸಗಿ ಕಂಪನಿಯು ಕನ್ನಡಿಗರಿಗೆ ಕಿರುಕುಳ ನೀಡುತ್ತಿದೆ ಎನ್ನುವ ಗಂಭೀರ ಆರೋಪವು ಇದೀಗ ಕೇಳಿ ಬಂದಿದೆ.

ಕನ್ನಡಿಗರನ್ನು ಏಕಾಏಕಿ ಗುಜರಾತ್‌ಗೆ ವರ್ಗಾವಣೆ ಮಾಡುವ ಮೂಲಕ ಈ ಖಾಸಗಿ ಕಂಪನಿಯು ಕನ್ನಡಿಗರ ವಿರೋಧಿ ಹಾಗೂ ಕಾರ್ಮಿಕರನ್ನು ಒಕ್ಕಲೆಬ್ಬಿಸುವ ಹುನ್ನಾರ ಮಾಡಿದೆ ಎಂದು ಕನ್ನಡಿಗರು ಆರೋಪ ಮಾಡಿದ್ದಾರೆ.

ಈ ಕಂಪನಿಯು ಸ್ಥಳೀಯ ಕಾರ್ಮಿಕರ ಮೇಲೆ ನಿರಂತರವಾಗಿ ಕಿರುಕುಳ ನೀಡುತ್ತಿದೆ. ಇದೀಗ ಏಕಾಏಕಿ ನೂರಾರು ಕಾರ್ಮಿಕರನ್ನ ವರ್ಗಾವಣೆ ಮಾಡುವ ಮೂಲಕ ಅನ್ಯಾಯ ಮಾಡುತ್ತಿದೆ‌ ಎಂದು ಆಡಳಿತ ಮಂಡಳಿ ಧೋರಣೆ ಖಂಡಿಸಿ ನವೆಂಬರ್‌ 4 ರಂದು ಅನಿರ್ದಿಷ್ಟಾವಧಿ ಧರಣಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಇನ್ನು ಸರೋಜಿನಿ ಮಹಿಷಿ ವರದಿಯಂತೆ ಯಾವುದೇ ಕಾರ್ಖಾನೆ, ‌ಕಂಪನಿ ಹಾಗೂ ಸಂಸ್ಥೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ನಿಯಮವಿದೆ. ಅಲ್ಲದೇ ಅನೇಕ ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿವೆ. ರಾಜ್ಯ ಸರ್ಕಾರವು ಕಾರ್ಖಾನೆ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿನ ಕಾರ್ಮಿಕರ ಒತ್ತಾಯಿಸಿದ್ದಾರೆ.

ಹುಬ್ಬಳ್ಳಿಯ ವೇರ್ ಬಿಡಿಕೆ ವ್ಯಾಟ್ಸ್ ಕಾರ್ಖಾನೆ ( ಬಿಡಿಕೆ)ಯಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕಂಪನಿಯು

ಗುಜರಾತ ಮೂಲದ ಮೆಹತಾ ಎನ್ನುವವರಿಗೆ ಸೇರಿದ್ದು ಎಂದು ಹೇಳಲಾಗಿದೆ. ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 41 ಜನ ಕನ್ನಡಿಗರನ್ನು ರಾತ್ರೋರಾತ್ರಿ ಗುಜರಾತಿನಲ್ಲಿ ನೋಂದಣಿಯೇ ಇಲ್ಲದ ಕಾರ್ಖಾನೆಗೆ ವರ್ಗಾವಣೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಅಲ್ಲದೇ ಕಾರ್ಮಿಕ ಯೂನಿಯನ್ ಮುಖಂಡರು ಸೇರಿ 12 ಜನರನ್ನು ಅಮಾನತು ಮಾಡಲಾಗಿದೆ. 100 ಜನ ಕಾರ್ಮಿಕರನ್ನು ಗುಜರಾತಿನಿಂದ ಕರೆದುಕೊಂಡು ಬಂದು ಹೆಚ್ಚು ಸಮಯ ಕೆಲಸ ಮಾಡಿಸಿಕೊಂಡು, ಹೆಚ್ಚು ವೇತನ ನೀಡುತ್ತಿದ್ದಾರೆ. ಕಾರ್ಖಾನೆಗೆ ನೆಲ, ಜಲ ನೀಡದೇ ಸ್ಥಳೀಯರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ಕಾರ್ಮಿಕ ಮುಖಂಡ ಅಶೋಕ ಬಾರ್ಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಬೆಳಗಾವಿಯ ಕಾರ್ಮಿಕ ಇಲಾಖೆಯ ಉಪ ಆಯುಕ್ತರಿಗೆ ದೂರು ನೀಡಲಾಗಿದೆ. ದಾಖಲೆಗಳನ್ನು ಸಲ್ಲಿಸುವಂತೆ ಮಾಲೀಕರಿಗೆ ಸೂಚನೆ ನೀಡಿದ್ದರೂ, ಅಸಡ್ಡೆ ತೋರುತ್ತಿದ್ದಾರೆ. ನಮ್ಮ ಜಿಲ್ಲೆಯವರೇ ಆಗಿರುವ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಈ ಕುರಿತು ಜಿಲ್ಲಾಧಿಕಾರಿ, ಮಾಲೀಕರು, ಕಾರ್ಮಿಕರೊಂದಿಗೆ ಸಭೆ ನಡೆಸಿ ಯಾವುದೇ ಅನ್ಯಾಯವಾದರೂ ಸಹಿಸುವುದಿಲ್ಲ ಎಂದು ಸೂಚನೆ ನೀಡಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದೂರಿದ್ದಾರೆ.

ಕಾರ್ಖಾನೆ ವ್ಯಾಪ್ತಿಗೆ ಬರುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಶಾಸಕ ಮಹೇಶ್ ಟೆಂಗಿನಕಾಯಿ ಅವರಿಗೆ ಮನವಿ ಮಾಡಿದ್ದೇವೆ. ಕಾರ್ಖಾನೆ ಮಾಲೀಕರ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಎಲ್ಲಾ ಕಾರ್ಮಿಕರು ಕುಟುಂಬ ಸಮೇತ ಕಂಪನಿ ಎದುರು ಧರಣಿ ನಡೆಸಲಿದ್ದೇವೆ ಎಂದು ಕಾರ್ಮಿಕರು ಎಚ್ಚರಿಸಿದ್ದಾರೆ.

ನವೆಂಬರ್ ಒಂದು ಕನ್ನಡ ರಾಜ್ಯೋತ್ಸವ ಈ ಸಂದರ್ಭದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ರಾಜ್ಯೋತ್ಸವ ಆಚರಣೆ ಮಾಡಬೇಕು. ಆದರೆ, ಈ ಸಂದರ್ಭದಲ್ಲೇ ಈ ರೀತಿಯ ಬೆಳವಣಿಗೆ ನಡೆದಿರುವುದು ಕನ್ನಡಿಗರ ಅಸಮಾಧಾನಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+