Kannada vs Tulu: ಸೋಷಿಯಲ್ ಮೀಡಿಯಾದಲ್ಲಿ ಕನ್ನಡ vs ತುಳು: ರಕ್ಷಿತಾ ಶೆಟ್ಟಿ ಬಿಗ್‌ಬಾಸ್ ಎಲಿಮಿನೇಟ್ ಕಾರಣ!
Kannada vs Tulu: ಕನ್ನಡ vs ತುಳು, ಕರ್ನಾಟಕ vs ತುಳುನಾಡು ಎನ್ನುವ ವಿವಾದ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. ಇದಕ್ಕೆ ಮುಖ್ಯ ಕಾರಣ ಈ ಬಾರಿಯ ಬಿಗ್‌ಬಾಸ್‌ನಲ್ಲಿ ಸೋಷಿಯಲ್ ಮೀಡಿಯಾ ಇನ್ಪ್ಲೂಯೆನ್ಸರ್ ಹಾಗೂ ಕರಾವಳಿ ಮೂಲದ ರಕ್ಷಿತಾ ಶೆಟ್ಟಿ ಅವರನ್ನು ಒಂದೇ ದಿನಕ್ಕೆ ಎಲಿಮಿನೇಟ್ ಆಗಿರುವುದು. ಅಲ್ಲದೇ ರಕ್ಷಿತಾ ಅವರು ಬಿಗ್‌ಬಾಸ್‌ನಲ್ಲಿ ಜೈ ತುಳುನಾಡು ಎಂದಿದ್ದರು. ಇದೂ ಸಹ ಅವರಿಗೆ ಮೈನಸ್ ಪಾಯಿಂಟ್ ಆಗಿದೆ ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.
ತುಳು ಭಾಷೆಯನ್ನು ರಾಜ್ಯದ ಎರಡನೇ ಭಾಷೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆದಿದೆ. ತುಳು ಭಾಷೆ ಹಾಗೂ ತುಳುನಾಡಿನ ಬಗ್ಗೆ ಮಂಗಳೂರು ಭಾಗದ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ದನಿ ಎತ್ತಿದ್ದಾರೆ. ಉದ್ದೇಶಪೂರ್ವಕವಾಗಿ ರಕ್ಷಿತಾ ಶೆಟ್ಟಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಹಲವರು ದೂರಿದ್ದಾರೆ.

ರೋಷನ್ ಎನ್ನುವವರು, ತುಳು ಭಾಷೆಯ ಮೇಲೆ ರಕ್ಷಿತಾಗೆ ಇರುವ ಪ್ರೀತಿ ಕಾಣಿಸ್ತಿದೆ. ಇನ್ನಷ್ಟು ದೊಡ್ಡ ಬೇಡಿಕೆ ಸಿಗಲಿ. ಜೈ ತುಳುನಾಡು ಈ ಸಲ ಬಿಗ್ ಬಾಸ್ ನೋಡುವ ಅಂತಿದ್ದೆ ಮಣ್ಣು ಹಾಕಿದರು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಹಲವರು ಬೆಂಬಲ ಸೂಚಿಸಿ ಕಮೆಂಟ್ ಮಾಡಿದ್ದಾರೆ. ಶಿವಕುಮಾರ್ ಎನ್ನುವವರು ನಾನು ಇಲ್ಲಿಯ ವರೆಗೆ ಬಿಗ್‌ಬಾಸ್ ನೋಡಿದ್ದು ವಿರಳ.. ಈ ಬಾರಿ ನಮ್ಮ ತುಳುನಾಡಿನ ಮುಗ್ದ ಯುವತಿಯೊಬ್ಬಳ್ಳು ಬಿಗ್‌ಬಾಸ್‌ಗೆ ಬಂದಿದ್ದಕ್ಕೆ ಅವಳ ಆಟ ನೋಡುವಾ ಎಂದು ಬಿಗ್‌ಬಾಸ್ ನೋಡಲು ಶುರು ಮಾಡಿದೆ. ಕೆಲವೇ ಕ್ಷಣಗಳಲ್ಲಿ ಅವಳು ಎಲಿಮಿನೇಟ್ ಎಂದಿದ್ದಾರೆ.
ರಾಜೇಶ್ ಕುಮಾರ್ ಎನ್ ಎನ್ನುವವರು, ಕಳಿಸಿದ್ದು ಒಳ್ಳೆದೆ ಆಯಿತು. ಇಲ್ಲದೆ ಇದ್ದರೆ ತುಳುನಾಡಿನ ಮರ್ಯಾದೆ ತೆಗಿತಿದ್ರು. ಸುಮ್ಮನೇ ಫೇಮಸ್ ಆಗೋಕೆ ಪೆರ್ಚಿ (ಹುಚ್ಚು) ಕಟ್ಟಿದರೆ ಇದೆ ಆಗೋದು, ಅಲ್ಲ ಈಕೆಯನ್ನು ವಹಿಸಿಕೊಂಡು ತುಳುನಾಡಿಗೆ ಅಪಮಾನ ಅನ್ನುವಿರಲ್ಲ, ನಿಮಗೇನು ಹೇಳಬೇಕು. ಆಕೆ ಪ್ರಚಾರಕ್ಕಾಗಿ ಪೆರ್ಚಿ ಕಟ್ಟುವ ಯ್ಯೂಟಬರ್..ಇದರಿಂದ ತುಳುವಿಗಾಗಲಿ, ತುಳುನಾಡಿಗಾಗಲಿ ಒಂದು ಪೈಸೆಯ ಲಾಭ ಇಲ್ಲ.. ಈಕೆಯನ್ನು ತುಳುನಾಡಿನವಳೆಂದು ವಹಿಸಿ ಮಾತನಾಡೋದೆ ತುಳುನಾಡಿಗೆ ಮಾಡುವ ಅಪಮಾನ ಎಂದಿದ್ದಾರೆ.
ಒಟ್ಟಾರೆ ರಕ್ಷಿತಾ ಶೆಟ್ಟಿ ಅವರ ಬಿಗ್‌ಬಾಸ್ ಎಲಿಮಿನೇಟ್ ಆಗಿರುವುದು ಸೋಷಿಯಲ್ ಮೀಡಿಯಾದಲ್ಲಿ ಅನವಶ್ಯಕ ಚರ್ಚೆಯನ್ನು ಹುಟ್ಟುಹಾಕಿದೆ.












Click it and Unblock the Notifications