ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯ ಸಮ್ಮೇಳನ; ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಆದೇಶ

|
Google Oneindia Kannada News

ಬೆಂಗಳೂರು, ಜನವರಿ 01; ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಷರತ್ತು ಬದ್ಧ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.

ಜನವರಿ 6,7 ಮತ್ತು 8 ರಂದು ನಡೆಯುವ 86ನೇ‌ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಏಲಕ್ಕಿ ನಗರಿ ಹಾವೇರಿ ಸಿದ್ಧವಾಗುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಷರತ್ತುಬದ್ಧ ವಿಶೇಷ ಸಾಂದರ್ಭಿಕ ರಜೆ ನೀಡಲಾಗುತ್ತದೆ.

Government Employee; ಗಳಿಕೆ ರಜೆ ಕುರಿತು ಸರ್ಕಾರದ ಆದೇಶGovernment Employee; ಗಳಿಕೆ ರಜೆ ಕುರಿತು ಸರ್ಕಾರದ ಆದೇಶ

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಸಂಖ್ಯೆ 100ಕ್ಕೆ ಮೀರದಂತೆ ವಿಶೇಷ ಸಾಂದರ್ಭಿಕ ರಜೆ ಸೌಲಭ್ಯವನ್ನು ನೀಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಕಾರ್ಯದರ್ಶಿಗಳ ಪತ್ರದ ಅನ್ವಯ ಪ್ರತಿ ವರ್ಷವೂ ಈ ರಜೆಯನ್ನು ನೀಡಲಾಗುತ್ತದೆ.

ಸರ್ಕಾರಿ ನೌಕರರ ರಜೆ; ಶಿಶುಪಾಲನಾ, ಗಳಿಕೆ ರಜೆಗಳ ವಿವರಗಳುಸರ್ಕಾರಿ ನೌಕರರ ರಜೆ; ಶಿಶುಪಾಲನಾ, ಗಳಿಕೆ ರಜೆಗಳ ವಿವರಗಳು

Kannada Sahitya Sammelana Special Occasion Leave For Government Employees

ದಿನಾಂಕ 11-2-1986ರ ಸರ್ಕಾರಿ ಆದೇಶ ಸಂಖ್ಯೆ ಅನ್ವಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಪ್ರತಿ ವರ್ಷ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜದ ಸೌಲಭ್ಯವನ್ನು ಮಂಜೂರು ಮಾಡುವಂತೆ ಕೋರಿದ್ದಾರೆ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ: ಗೋಡೆಗಳ ಮೇಲೆ ಚಿತ್ತಾರಗಳ ಹಬ್ಬ86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರ್ಜರಿ ಸಿದ್ಧತೆ: ಗೋಡೆಗಳ ಮೇಲೆ ಚಿತ್ತಾರಗಳ ಹಬ್ಬ

ಕನ್ನಡ ಆಡಳಿತ ಭಾಷೆಯಾಗಿರುವ ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯದ ಜ್ಞಾನದ ಅಭಿರುಚಿ ಮತ್ತು ಆಸಕ್ತಿಯುಳ್ಳ, ನೌಕರರು ಈ ಸಮ್ಮೇಳನದಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸಲು ಅನುಕೂಲ ವಾಗುವಂತೆ ಈಗಿರುವ 100 ಮಿತಿಯನ್ನು ತೆಗೆದು ಹೆಚ್ಚಿನ ಸರ್ಕಾರಿ ನೌಕರರಿಗೆ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ರಜೆಯ ಸೌಲಭ್ಯವನ್ನು ವಿಸ್ತರಿಸಲು ಕೋರಲಾಗಿತ್ತು.

ಸರ್ಕಾರವು ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲು ಅನುಮತಿಯನ್ನು ನೀಡಿತ್ತು. ಆದೇಶದಲ್ಲಿ ಕೆಲವೊಂದು ಆಕಸ್ಮಿಕ ತಪ್ಪುಗಳಿದ್ದು ಅದರಿಂದಾಗಿ ಮರುಪರಿಶೀಲಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ಸರಕಾರಿ ನೌಕರರಿಗೆ ಈ ಕೆಳಗಿನ ಷರತ್ತುಗಳಿಗೊಳಪಟ್ಟು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಸರ್ಕಾರವು ಆದೇಶ ನೀಡಿದೆ.

ಷರತ್ತುಗಳು

* ವಿಶೇಷ ಸಾಂದರ್ಭಿಕ ರಜೆಯು, ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವ ನೌಕರರು ಅವರ ಆಸಕ್ತಿಯ ಒಂದು ಅಥವಾ ಎರಡು ದಿನಗಳ ಅವಧಿಗೆ ಮತ್ತು ಹೋಗಿಬರುವ ಪ್ರಯಾಣಕ್ಕೆ ಬೇಕಾಗುವ ಅವಧಿಗೆ ಸೀಮಿತವಾಗಿರಬೇಕು.

* ಕನ್ನಡ ಸಾಹಿತ್ಯದ ಜ್ಞಾನ ಮತ್ತು ಅಭಿರುಚಿ ಇದ್ದು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಮಂತ್ರಿಸಲ್ಪಟ್ಟ ಸರ್ಕಾರಿ ನೌಕರರಿಗೆ ಈ ರಜೆಯ ಸೌಲಭ್ಯ ನೀಡುವುದು.

* ಕನ್ನಡ ಸಾಹಿತ್ಯದ ಅಭಿರುಚಿಯುಳ್ಳ ನೌಕರರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದರೆ ಅವರಿಗೂ ಈ ಸೌಲಭ್ಯ
ನೀಡುವುದು.

* ಯಾವುದೇ ವಿಶೇಷ ಗುರುತರ ಸರ್ಕಾರಿ ಕೆಲಸದ ಮೇಲೆ ನೇಮಿಸಲ್ಪಟ್ಟ ನೌಕರರಿಗೆ ಸಮ್ಮೇಳನದಲ್ಲಿ ಭಾಗವಹಿಸಲು ಅನುಮತಿ
ಕೊಡಬಾರದು.

ಈ ಸಮ್ಮೇಳನ ಮುಗಿದಮೇಲೆ ಸಮ್ಮೇಳನದಲ್ಲಿ ಭಾಗವಹಿಸಿದ ಸರ್ಕಾರಿ ನೌಕರರಿಗೆ ಸಾಹಿತ್ಯ ಪರಿಷತ್ತಿನವರು ಅಧಿಕೃತ ಹಾಜರಿಪತ್ರ ಕೊಡಬೇಕು. ಈ ಆಧಾರದ ಮೇಲೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಅಧಿಕಾರವುಳ್ಳ ಅಧಿಕಾರಿಗಳು ಈ ರಜೆಯನ್ನು ಮಂಜೂರು ಮಾಡುವುದು, ಹಾಗೂ ಈ ರಜೆ ಪಡೆಯಲಿಚ್ಛಿಸುವ ನೌಕರರು ರಜೆ ಮಂಜೂರು ಮಾಡುವ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಈ ಆದೇಶವನ್ನು ಸರ್ಕಾರದ ಉಪ ಕಾರ್ಯದರ್ಶಿ ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು) ಹ. ಮ. ಚಿಕ್ಕಬಸವಯ್ಯ ಈ ಕುರಿತು ಆದೇಶ ಹೊರಡಿಸಿದ್ದಾರೆ.

English summary
Karnataka government order on special occasion leave for government employees who will participate in 86th Akhil Bharath Kannada Sahitya Sammelana at Haveri on January 6, 7 and 8, 2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X