Kannada Dhruva Thare: ವೀಕೆಂಡ್ ವಿಥ್ ರಮೇಶ್ ಖ್ಯಾತಿಯ 'ರಮೇಶ್ ಅರವಿಂದ್' 'ಕನ್ನಡದ ಧ್ರವತಾರೆ'ಯ ಮೊದಲ ಅತಿಥಿ: ಕಸಾಪ
ಬೆಂಗಳೂರು, ಆಗಸ್ಟ್ 17: ಜಾತಿ, ಧರ್ಮ, ಇತಿ-ಮಿತಿಗಳ ಗೊಡವೆ ಇಲ್ಲದೇ ತಮ್ಮದೇ ಆದ ಕ್ಷೇತ್ರಗಳಲ್ಲಿ ಅನೇಕರು ಸಾಧನೆ ಮಾಡಿರುತ್ತಾರೆ. ಅಂತವರ ಜೀವನಗಾತೆ, ಅನುಭವ ಹಂಚಿಕೊಂಡರೆ ಅದು ಇತರರಿಗೆ ಸ್ಪೂರ್ತಿಯಾಗಬಹದು. ಭವಿಷ್ಯದ ಅನೇಕ ಸಾಧನೆಗಳಿಗೆ ಸಾಧಕರ ಮಾತುಗಳು ನಾಂದಿ ಹಾಡಬಹುದು. ಇಂತದ್ದೊಂದು ವೇದಿಕೆಗೆ 'ಕನ್ನಡ ಸಾಹಿತ್ಯ ಪರಿಷತ್ತು' ಅವಕಾಶ ಕಲ್ಪಿಸಿದೆ. ಪರಿಷತ್ತಿನ ನೇತೃತ್ವದಲ್ಲಿ ಮೊದಲ ಬಾರಿಗೆ ವಿನೂತನ ''ಕನ್ನಡದ ಧ್ರುವತಾರೆ'-ಸಾಧಕರೊಂದಿಗೆ ಮಾತುಕತೆ ಕಾರ್ಯಕ್ರಮ ರೂಪಿಸಿದೆ.
ಈ ಕುರಿತು ಮಾಹಿತಿ ನೀಡಿರುವ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರು, ಇದೇ ಆಗಸ್ಟ್ 19ರಂದು 'ಕನ್ನಡದ ಧ್ರುವತಾರೆ' ಕಾರ್ಯಕ್ರಮ ಚಾಮರಾಜಪೇಟೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣಾ ಪರಿಷ್ಮಂದಿರದಲ್ಲಿ ಆರಂಭಗೊಳ್ಳಲಿದೆ.

ವಿಶೇಷವೆಂದರೆ ಬೆಳ್ಳಿತೆರೆಯಲ್ಲಿ ವೀಕೆಂಡ್ ವಿಥ್ ರಮೇಶ್ ಶೋ ಮೂಲಕ ಸಾಧಕರ ಸಾಧನೆ, ನೆನಪು, ವ್ಯಕ್ತಿತ್ವ ಹಾಗೂ ಸಾಧಕರ ತೆರೆ ಹಿಂದಿನ ನೆನಪುಗಳನ್ನು ಅನಾವರಣಗೊಳಿಸುತ್ತಿದ್ದ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು ಕನ್ನಡದ ಧ್ರುವತಾರೆ' ಕಾರ್ಯಕ್ರಮದ ಮೊದಲ (ಅತಿಥಿ) ಧ್ರುವತಾರೆ ಆಗಲಿದ್ದಾರೆ. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು ಅಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.
ಅಜ್ಞಾತ ಸಾಧಕರ ಅನಾವರಣ
ಕನ್ನಡ ನಾಡಿನ ವಿವಿಧ ಕ್ಷೇತ್ರದಲ್ಲಿ ಅಜ್ಞಾತವಾಗಿ ಅಗಣಿತ ಸೇವೆ ಸಲ್ಲಿಸುತ್ತಿರುವವರನ್ನು ಪರಿಷತ್ತು ಗುರುತಿಸಲಿದೆ. ಅವರೊಂದಿಗೆ ಪರಿಷತ್ತು ಹಾಗೂ ಸಾರ್ವಜನಿಕರು ಸಂವಾದ ನಡೆಸಿ ಸಾಧಕರ ಅನುಭವಗಳನ್ನು ನಾಡಿನ ಜನರಿಗೆ ತಿಳಿಸುವ ಕೆಲಸಕ್ಕೆ ಮುಂದಾಗಿದ್ದೇವೆ.

ಕನ್ನಡ-ಕನ್ನಡಿಗ-ಕರ್ನಾಟಕದ ಅಭ್ಯುದಯವನ್ನು ತನ್ನ ಧ್ಯೇಯವಾಗಿ ಹೊಂದಿರುವ ಕನ್ನಡಿಗರ ಹೆಮ್ಮೆಯ ಕನ್ನಡ ಸಾಹಿತ್ಯ ಪರಿಷತ್ತು ʻಕನ್ನಡದ ಧ್ರುವತಾರೆʼ ಎನ್ನುವ ಹೆಸರಿನಲ್ಲಿ ನಡೆಸುವ ಕಾರ್ಯಕ್ರಮ ಪರಿಷತ್ತಿನ ಮಾದರಿ ಕಾರ್ಯಕ್ರಮವಾಗಲಿದೆ ಎಂದರು.
ಸಾಧಕರ ಜತೆ ಸಂವಾದ
ಕನ್ನಡಿಗರು ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಬೆರಗು ಹುಟ್ಟಿಸುವಂತಹ ಸಾಧನೆಯನ್ನು ಮಾಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಕುರಿತು ಮಾಹಿತಿ ಲಭ್ಯವಿರುತ್ತದೆ. ಇನ್ನೂ ಕೆಲವು ಕ್ಷೇತ್ರಗಳಲ್ಲಿನ ಸಾಧಕರು 'ಎಲೆ ಮರೆಯ ಮರ'ಗಳಂತೆ ಅಪಾರ ಸಾಧನೆಯನ್ನು ಮಾಡಿದ್ದಾರೆ. ಮಾಹಿತಿ ಇದ್ದರೂ ಸಾಧಕರನ್ನು ನೇರವಾಗಿ ನೋಡುವ ಅವರ ಜೊತೆ ಸಂವಾದ ಮಾಡುವ ಅವಕಾಶ ಸಾರ್ವಜನಿಕರಿಗೆ ಸಿಕ್ಕಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ಅಂಥವರಿಗಾಗಿಯೇ ಕನ್ನಡ ಸಾಹಿತ್ಯ ಪರಿಷತ್ತು'ಕನ್ನಡದ ಧ್ರುವತಾರೆ' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ರೂಪಿಸಿದೆ ಎಂದು ಡಾ. ಮಹೇಶ ಜೋಶಿ ಅವರು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಪ್ರತಿ ತಿಂಗಳು ನಡೆಯಲಿರುವ ಕಾರ್ಯಕ್ರಮ
ತಿಂಗಳಿಗೆ ಒಮ್ಮೆ ಈ ಕಾರ್ಯಕ್ರಮ ಪರಿಷತ್ತಿನ ಸಭಾಂಗಣದಲ್ಲಿ ನಡೆಯಲಿದೆ. ವಿವಿಧ ಕ್ಷೇತ್ರದ ಸಾಧಕರೇ ಅತಿಥಿಗಳಾಗಲಿದ್ದಾರೆ. ನಾಡಿನ ಕನ್ನಡ ಮೂಲದ ಸಾಧಕರು ಪರಿಷತ್ತು ಆಯೋಜಿಸುವ 'ಕನ್ನಡದ ಧ್ರುವತಾರೆ' ವಿಶಿಷ್ಠ ಮಾದರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಇಲ್ಲಿ ಸಾರ್ವಜನಿಕರು ಪ್ರಶ್ನೆಗಳನ್ನು ಕೇಳಲಿದ್ದಾರೆ.
ಪರಿಷತ್ತಿನ 'ಕನ್ನಡದ ಧ್ರುವತಾರೆ' ಕಾರ್ಯಕ್ರಮವು ಸಾಧಕರ ಮತ್ತು ಸಾರ್ವಜನಿಕರ ನಡುವೆ ಸುವರ್ಣ ಸೇತುವೆಯಾಗುವ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಆಗಿರಲಿದೆ. ಪರಿಷತ್ತಿನ 'ಕನ್ನಡದ ಧ್ರುವತಾರೆ' ಕಾರ್ಯಕ್ರಮಕ್ಕೆ ಮೊದಲ ಅತಿಥಿಯಾಗಿ ಖ್ಯಾತ ಕಲಾವಿದ ರಮೇಶ್ ಅರವಿಂದ್ ಭಾಗವಹಿಸಲಿದ್ದಾರೆ ಎಂದರು.
ರಮೇಶ್ ಅರವಿಂದ ಅವರು ನಟನೆ, ನಿರೂಪಣೆ, ನಿರ್ದೇಶನ, ಸಾಹಿತ್ಯದ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಅವರು ತಮ್ಮ ಪ್ರತಿಭೆ ಮೆರೆದವರು. 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಅವರು ಕಳೆದ ನಾಲ್ಕು ದಶಕಗಳಿಂದಲೂ ಚಿತ್ರರಂಗದಲ್ಲಿದ್ದಾರೆ.
ಅತಿರಥ ಮಹಾರಥರ ಪರಿಚಯಿಸುವ ಕಾರ್ಯ
ವಿವಿಧ ರಂಗದ ಅತಿರಥ ಮಹಾರಥರನ್ನು ಆತ್ಮೀಯವಾಗಿ ಸಂದರ್ಶಿಸಿ ಪರಿಚಯ ಮಾಡಿಕೊಡುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಮನನೀಯವಾದದ್ದು. ರಮೇಶ್ ಅರವಿಂದ್ ಉತ್ತಮ ಬರಹಗಾರರೂ ಹೌದು ಅವರು ರಚಿಸಿದ ಕೃತಿಗಳು ಅಪಾರ ಜನಪ್ರಿಯತೆಯನ್ನು ಪಡೆದಿವೆ. ಉತ್ತಮ ಭಾಷಣಕಾರರೂ ಆಗಿರುವ ರಮೇಶ್ ದೇಶ-ವಿದೇಶಗಳಲ್ಲಿ ತಮ್ಮ ಸ್ಪೂರ್ತಿಧಾಯಕ ಮಾತುಗಳಿಂದಲೂ ಕೂಡ ಪ್ರಸಿದ್ಧರಾಗಿದ್ದಾರೆ ಎಂದು ಹೇಳಿದರು.
ಇಂಥಹ ಮಹಾನ್ ಸಾಧಕರು ಕನ್ನಡ ಸಾಹಿತ್ಯ ಪರಿಷತ್ತಿನ 'ಕನ್ನಡ ಧ್ರುವತಾರೆ' ಕಾರ್ಯಕ್ರಮದ ಮೂಲಕ ಕನ್ನಡಿಗರ ಮುಂದೆ ಬರಲಿದ್ದಾರೆ. ಈ ಸಂವಾದದಲ್ಲಿ ಎಲ್ಲ ಕನ್ನಡಿಗರು ಭಾಗವಹಿಸುವಂತೆ ಪರಿಷತ್ತಿನ ಅಧ್ಯಕ್ಷರು ಕೋರಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications