ಎಸ್ಎಲ್ ಭೈರಪ್ಪನವರ ವೆಬ್ ತಾಣ ಬೀಟಾ ಆವೃತ್ತಿ ನೋಡಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 09: ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ(ಎಸ್ ಎಲ್ ಭೈರಪ್ಪ) ಅವರ ಬದುಕು ಬರಹ ಕುರಿತ ಅಧಿಕೃತ ವೆಬ್ ತಾಣದ ಬೀಟಾ ಆವೃತ್ತಿ ಈಗ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ.

ಪ್ರಸ್ತುತ ಈ ವೆಬ್ ತಾಣವು ಇಂಗ್ಲೀಷ್ ಮತ್ತು ಕನ್ನಡದಲ್ಲಿ ಲಭ್ಯವಿದ್ದು, ಶೀಘ್ರದಲ್ಲಿ ಹಿಂದಿ ಮತ್ತು ಮರಾಠಿಯಲ್ಲೂ ದೊರೆಯಲಿದೆ. ಈ ಜಾಲತಾಣದಲ್ಲಿ ಡಾ. ಎಸ್. ಎಲ್. ಭೈರಪ್ಪನವರ ಬದುಕು- ಬರಹ ಗಳ ಕುರಿತ ಸಮಗ್ರ ವಿವರಗಳು, ಅಪರೂಪದ ಫೋಟೋಗಳು, ಭೈರಪ್ಪನವರೊಂದಿಗಿನ ಸಂವಾದದ ವೀಡಿಯೋಗಳು, ಮುಂಬರುವ ಕಾರ್ಯಕ್ರಮಗಳು ಇತ್ಯಾದಿ ವಿವರಗಳಿವೆ.

Kannada Novelist SL Bhyrappa Website beta version launched

ಈ ವೆಬ್ ತಾಣವನ್ನು ಬೆಂಗಳೂರಿನ ಧ್ಯೇಯ ಸಾಫ್ಟ್ ವೇರ್ ನ ರವಿನಾರಾಯಣ ಮತ್ತು ತಂಡ ಅಭಿವೃದ್ಧಿಪಡಿಸಿದ್ದಾರೆ. ವೆಬ್ ಸೈಟ್ ನಲ್ಲಿರುವ ಪ್ರತಿ ಅಕ್ಷರಗಳನ್ನು ಡಾ. ಶತಾವಧಾನಿ ಆರ್. ಗಣೇಶರು ನೋಡಿ ಸೂಕ್ತ ಸಲಹೆ, ಮಾರ್ಗದರ್ಶನ ನೀಡಿದ್ದಾರೆ.

ಈ ವೆಬ್ಸೈಟ್ ಇನ್ನೂ ಅಭಿವೃದ್ಧಿಯ ಪ್ರಥಮ ಹಂತವಾಗಿದ್ದು, ಇದನ್ನು ಮತ್ತಷ್ಟು ಉತ್ತಮಗೊಳಿಸಲು/ ತಪ್ಪುಗಳನ್ನು ತಿದ್ದಲು ನಿಮ್ಮೆಲ್ಲರ ಸಲಹೆ ಸೂಚನೆಗಳಿಗೆ ಸ್ವಾಗತವಿದೆ ಎಂದು ರವಿ ನಾರಾಯಣ ಅವರು ಹೇಳಿದ್ದಾರೆ. ವೆಬ್ ತಾಣ : http://www.slbhyrappa.in

ಈ ಜಾಲತಾಣವನ್ನು ಮತ್ತಷ್ಟು ಆಕರ್ಷಕವಾಗಿ ಮಾಡಲು ನಿಮ್ಮ ಸಲಹೆ/ ಸೂಚನೆಗಳಿಗೆ ಸ್ವಾಗತವಿದೆ. ನಿಮ್ಮ ಬಳಿ ಯಾವುದಾದರೂ ಉತ್ತಮ ಗುಣಮಟ್ಟದ ಫೋಟೋಗಳು ಲಭ್ಯವಿದ್ದರೆ ದಯವಿಟ್ಟು ನಮಗೆ ಇಮೇಲ್ ಅಥವಾ ಕೊರಿಯರ್ ಮುಖಾಂತರ ಕಳುಹಿಸಲು ವೆಬ್ ನಿರ್ವಾಹಕರು ಮನವಿ ಮಾಡಿದ್ದಾರೆ.ವೆಬ್ ಸೈಟ್ ನ ಇದರಲ್ಲಿರುವ ಲೋಪ ದೋಷಗಳ ಕುರಿತಾಗಿ ನಿರ್ವಾಹಕರಿಗೆ ತಿಳಿಸಲು ಈ ಸಂಪರ್ಕ ಕೊಂಡಿಯನ್ನು ಬಳಸಿ slbhyrappawebsite@gmail.com

ಶಶಾಂಕ ಪರಾಶರ : +91-99866 88607

(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada writer SL Bhyrappa is widely regarded as one of modern India's foremost novelists. A website based on his works and life has been launched. Here is a beta version of website take a tour and send your feedback.
Please Wait while comments are loading...