ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡಿನಲ್ಲಿ ಕನ್ನಡದ ಧಾನ, ಎರಡು ದಿನಗಳ ಸಮ್ಮೇಳನ

ಮಾರ್ಚ್ 4,5ನೇ ತಾರೀಕು ಚೆನ್ನೈನಲ್ಲಿರುವ ಮದ್ರಾಸ್ ವಿವಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವಿದೆ. ಅಧ್ಯಕ್ಷರಾಗಿ ಸಾಹಿತಿ ಪ್ರೊ ದೊಡ್ಡರಂಗೇಗೌಡ ಆಯ್ಕೆಯಾಗಿದ್ದಾರೆ. ಸಮ್ಮೇಳನದ ಜತೆಗೆ ಹಾಸ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 24: ಕನ್ನಡ ಸಾಹಿತ್ಯ ಪರಿಷತ್ ನ ತಮಿಳುನಾಡು ಘಟಕ ಹಾಗೂ ಮದ್ರಾಸ್ ವಿವಿ ಕನ್ನಡ ಸಾಹಿತ್ಯ ವಿಭಾಗದಿಂದ ಮಾರ್ಚ್ 4, 5ರಂದು ತಮಿಳುನಾಡು ಕನ್ನಡಿಗರ ಐದನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಸಾಂಸ್ಕೃತಿಕ ಸಮಾವೇಶ ನಡೆಯಲಿದೆ.

ಸಮ್ಮೇಳನಾಧ್ಯಕ್ಷರಾಗಿ ಸಾಹಿತಿ ಪ್ರೊ.ದೊಡ್ಡರಂಗೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಮದ್ರಾಸ್ ವಿವಿಯ ಪ್ಲಾಟಿನಂ ಜ್ಯೂಬಿಲಿ ಸಭಾ ಭವನ ಮರೀನಾ ಆವರಣದಲ್ಲಿ ಸಮ್ಮೇಳನ ನಡೆಯಲಿದೆ. ಮಾರ್ಚ್ 4ರ ಬೆಳಗ್ಗೆ 8.30ಕ್ಕೆ ಅಯನಾವರಂಅನಲ್ಲಿರುವ ಸರ್ವಜ್ಞನ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಮೆರವಣಿಗೆ ಮೂಲಕ ಸಮಾವೇಶಕ್ಕೆ ಚಾಲನೆ ದೊರೆಯಲಿದೆ.[ದುರ್ಯೋಧನನ ಹೆಸರು ಕೇಳುತ್ತಿದ್ದಂತೆ ಆತನ ಕಣ್ಣಲ್ಲಿ ನೀರು ಬಂದಿದ್ದೇಕೆ?]

Kannada literature convention in Chennai Madras VV on March 4th, 5th

ಉದ್ಘಾಟನಾ ಸಮಾರಂಭ ಅಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ವಿಶೇಷ ಅತಿಥಿಗಳಾಗಿ ಕವಿ ಪೇರರಸು ವೈರಮುತ್ತು ಅವರು ಭಾಗವಹಿಸಲಿದ್ದಾರೆ. ಅದೇ ದಿನ ಸ್ಮರಣ ಸಂಚಿಕೆ "ಸಾಮರಸ್ಯ' ಬಿಡುಗಡೆಯಾಗಲಿದೆ. ಕನ್ನಡ, ತೆಲುಗು ಹಾಗೂ ತಮಿಳು ಕವಿಗೋಷ್ಠಿ ನಡೆಯಲಿದ್ದು, ಜರಗನಹಳ್ಳಿ ಶಿವಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಾರ್ಚ್ 5ರಂದು ಬೆಳಗ್ಗೆ 10ಕ್ಕೆ ಹಾಸ್ಯ ಕಾರ್ಯಕ್ರಮ, ಅಂದು ಸಮಾರೋಪ ಸಮಾರಂಭ ನಡೆಯಲಿದೆ.[ಎಸ್ ಎಲ್ ಭೈರಪ್ಪ ಹೊಸ ಕಾದಂಬರಿ ಉತ್ತರ ಕಾಂಡ ವಿಮರ್ಶೆ]

ಎರಡು ದಿನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದ್ದು, ರುಕ್ಮೋಜಿ ಅವರು ರಾಜಕುಮಾರ್ ಅವರ ಬಗ್ಗೆ ಬರೆದಿರುವ ಪುಸ್ತಕವನ್ನು ನಟ 'ಸಂಚಾರಿ' ವಿಜಯ್ ಮತ್ತೊಮ್ಮೆ ಲೋಕಾರ್ಪಣೆ ಮಾಡುತ್ತಾರೆ.

English summary
Kannada literature convention at Madras VV, Chennai on March 4th, 5th under the auspicious of Kannada Sahitya Parishath, Karnataka. Poet and a teacher Prof Doddarange Gowda will preside over the convention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X