Mata Guruprasad : ಕನ್ನಡ ಚಿತ್ರ ನಿರ್ದೇಶಕ ಮಠ ಗುರು ಪ್ರಸಾದ್ ಬಂಧನ
ಬೆಂಗಳೂರು, ಜನವರಿ 13; ಕನ್ನಡದ ಖ್ಯಾತ ನಿರ್ದೇಶಕ ಮಠ ಗುರು ಪ್ರಸಾದ್ ಬಂಧಿಸಲಾಗಿದೆ. ಬೆಂಗಳೂರಿನ ಪೊಲೀಸರು ಶುಕ್ರವಾರ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಠ ಗುರು ಪ್ರಸಾದ್ ಬಂಧಿಸಿದ್ದಾರೆ. ಬಂಧನವಾದ ಮೂರು ಗಂಟೆಯಲ್ಲಿಯೇ ಗುರು ಪ್ರಸಾದ್‌ಗೆ ಜಾಮೀನು ಮಂಜೂರು ಮಾಡಲಾಗಿದೆ.
ಶುಕ್ರವಾರ ಬೆಂಗಳೂರಿನ ಗಿರಿನಗರ ಪೊಲೀಸರು ಮಠ ಗುರು ಪ್ರಸಾದ್ ಬಂಧಿಸಿದ್ದಾರೆ. ನ್ಯಾಯಾಲಯದ ವಾರೆಂಟ್ ಹಿನ್ನಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. 'ಮಠ' ಸಿನಿಮಾ ನಿರ್ದೇಶನ ಮಾಡಿದ್ದ ಗುರು ಪ್ರಸಾದ್ ಮಠ ಗುರು ಪ್ರಸಾದ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.

ಶ್ರೀನಿವಾಸ್ ಎಂಬುವವರ ಜೊತೆ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಠ ಗುರು ಪ್ರಸಾದ್ ಬಂಧನವಾಗಿದೆ. ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಗುರು ಪ್ರಸಾದ್ ನೀಡಿದ ಚೆಕ್ ಬೌನ್ಸ್ ಆಗಿತ್ತು. ಈ ಕುರಿತು ಪ್ರಕರಣ ದಾಖಲಾಗಿತ್ತು.
ಚೆಕ್ ಬೌನ್ಸ್ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ವಿಚಾರಣೆಗೆ ಮಠ ಗುರು ಪ್ರಸಾದ್ ಪದೇ ಪದೇ ಗೈರು ಹಾಜರಾಗಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿತ್ತು.
ಬೆಂಗಳೂರಿನ ಗಿರಿನಗರ ಠಾಣೆ ಪೊಲೀಸರು ಕೋರ್ಟ್ ವಾರೆಂಟ್ ಆದೇಶದಂತೆ ಕ್ರಮ ಕೈಗೊಂಡಿದ್ದಾರೆ. ಶುಕ್ರವಾರ ಮಠ ಗುರು ಪ್ರಸಾದ್ ಬಂಧಿಸಿದ್ದಾರೆ.
ಗಿರಿನಗರ ಠಾಣೆ ಪೊಲೀಸರು ಮಠ ಗುರು ಪ್ರಸಾದ್‌ರನ್ನು 21ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಸಿದ್ದರು. ಬಳಿಕ ನ್ಯಾಯಾಲಯ ಗುರು ಪ್ರಸಾದ್‌ಗೆ ಜಾಮೀನು ಮಂಜೂರು ಮಾಡಿತು.
2015-16ರಲ್ಲಿ ಮಠ ಗುರು ಪ್ರಸಾದ್ ಶ್ರೀನಿವಾಸ್ ಬಳಿ 30 ಲಕ್ಷ ರೂ. ಸಾಲವನ್ನು ಪಡೆದಿದ್ದರು. ಗುರು ಪ್ರಸಾದ್ ಸಾಲ ಮರುಪಾವತಿ ಮಾಡಲು ನೀಡಿದ್ದ ಮೂರು ಚೆಕ್‌ಗಳು ಬೌನ್ಸ್ ಆಗಿದ್ದವು. ಆದ್ದರಿಂದ ಶ್ರೀನಿವಾಸ್ ಕೋರ್ಟ್ ಮೊರೆ ಹೋಗಿದ್ದರು.












Click it and Unblock the Notifications