ಗೋವಾದಿಂದ ಕರ್ನಾಟಕಕ್ಕೆ ಬಸ್ ಸಂಚಾರ ಇಲ್ಲ

ಬೆಂಗಳೂರು, ಜುಲೈ, 28: ಕರ್ನಾಟಕದಲ್ಲಿ ಕಳಸಾ ಬಂಡೂರಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಗೋವಾದಿಂದ ಕರ್ನಾಟಕಕ್ಕೆ ಬರುತ್ತಿದ್ದ ಬಸ್ ಗಳ ಸಂಚಾರವನ್ನು ಬಂದ್ ಮಾಡಲಾಗಿದೆ.

ಎರಡು ರಾಜ್ಯಗಳ ನಡುವೆ ಗೊಂದಲ ಏರ್ಪಟ್ಟಿರುವ ಕಾರಣ ಗುರುವಾರದಿಂದ ಬಸ್ ಸಂಚಾರ ಬಂದ್ ಆಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎರಡು ದಿನ ಕರ್ನಾಟಕಕ್ಕೆ ಬಸ್ ಸಂಚಾರ ನಿಲ್ಲಿಸಲಾಗಿದೆ ಎಂದು ಗೋವಾದ ಸಾರಿಗೆ ಸಚಿವ ಸುದಿನ್ ಧವಳೀಕರ್ ತಿಳಿಸಿದ್ದಾರೆ.[ಕಳಸಾ ಬಂಡೂರಿಗಾಗಿ ರಾಜ್ಯದಲ್ಲಿ ನಡೆದ ಬಂದ್‌ಗಳೆಷ್ಟು?]

Kalasa Banduri: Goa suspends bus services to Karnataka

ಗೋವಾ ಮತ್ತು ಕರ್ನಾಟಕದ ಕನಡುವೆ ಪ್ರತಿದಿನ ನೂರಾರು ಖಾಸಗಿ ಮತ್ತು ಸರ್ಕಾರಿ ಬಸ್ ಗಳು ಸಂಚರಿಸುತ್ತವೆ. ಗೊವಾ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ರೈತರ ಹೋರಾಟ ತೀವ್ರ ಸ್ವರೂಪದಲ್ಲಿ ಇರುವ ಕಾರಣ ಸಂವಚಾರ ಬಂದ್ ಮಾಡಲಾಗಿದೆ.[ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?]

ಪರಿಸ್ಥಿತಿ ನಿಯಂತ್ರಣಕ್ಕೆ ಬರುವವವರೆಗೆ ಬಸ್ ಸಂಚಾರವನ್ನು ಸ್ಥಗಿತ ಮಾಡಲಾಗಿರುತ್ತದೆ ಎಂದು ಧವಳೀಕರ್ ತಿಳಿಸಿದ್ದಾರೆ. ಬೆಳಗಾಗವಿ, ಕಾರವಾರ, ಮತ್ತು ದಕ್ಷಿಣ ಕನ್ನಡದ ಜನರಿಗೆ ಈ ಸುದ್ದಿ ಪ್ರಮುಖವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+