ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ; ಅಗತ್ಯ ದಾಖಲೆಗಳು, ಅರ್ಹತೆಗಳ ವಿವರ

ಬೆಂಗಳೂರು, ಡಿಸೆಂಬರ್ 11; ಶ್ರೀ ಜೆ. ಪಿ. ನಾರಾಯಣಸ್ವಾಮಿ ಪ್ರತಿಷ್ಠಾನ (ರಿ.), ಬೆಂಗಳೂರು, 2023-2024 ಸಾಲಿನ ವಿದ್ಯಾರ್ಥಿ ವೇತನಕ್ಕೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲು ಡಿಸೆಂಬರ್ 15 ಕೊನೆಯ ದಿನವಾಗಿದೆ.

2023-2024ನೇ ಸಾಲಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಮತ್ತು B.ED ಓದುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಸಾಮಾನ್ಯ ಮಾಹಿತಿಯನ್ನು ಸಹ ಪ್ರಕಟಣೆಯಲ್ಲಿ ನೀಡಲಾಗಿದೆ.

JP Narayanaswamy Pratisthana Students Scholarship Details

ಹಿಂದಿನ ವರ್ಷದ (2022-23) ವ್ಯಾಸಂಗದಲ್ಲಿ ಶೇ 65ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿ ವೇತನಕ್ಕಾಗಿ ಪರಿಗಣಿಸಲಾಗುತ್ತದೆ. ಶಿವಮೊಗ್ಗ, ಉತ್ತರ-ಕನ್ನಡ, ದಕ್ಷಿಣ-ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಶೇ 75ಕ್ಕಿಂತ ಹೆಚ್ಚಿನ ಅಂಕ ಹೊಂದಿರಬೇಕು.

ಅರ್ಜಿ ಸಲ್ಲಿಸಲು ಅರ್ಹತೆಗಳು; ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು ಅವರ ಕುಟುಂಬವು ಬಿಪಿಎಲ್ ಕಾರ್ಡ್ ಅನ್ನು ಹೊಂದಿರಬೇಕು. ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್‌ನಲ್ಲಿರುವ ವಿಳಾಸದ ಜಿಲ್ಲೆಯಿಂದ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಕಾಲೇಜುಗಳಲ್ಲಿ ನಿಯಮಿತವಾಗಿ ಓದುತ್ತಿರುವ ಮತ್ತು ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಿಗೆ ಸಂಯೋಜಿತವಾಗಿರುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಆರ್ಥಿಕವಾಗಿ ದುರ್ಬಲ ವರ್ಗ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಾತ್ರ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ.

ವೆಬ್ ಸೈಟ್ (jpnp.org.in) ಮೂಲಕ ಆನ್‌ಲೈನ್ ಅರ್ಜಿ ಭರ್ತಿ ಮಾಡಲು ಕೊನೆಯ ದಿನಾಂಕ 15/12/2023. ಆನ್ ಲೈನ್ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಇ-ಮೈಲ್ ಐಡಿಗೆ ಬರುವ ಸ್ವೀಕೃತಿ ಪತ್ರ (acknowledgement letter) ದೊಂದಿಗೆ ಅರ್ಜಿಗಳಲ್ಲಿ ಕೇಳಿರುವ ಎಲ್ಲಾ ದಾಖಲೆಗಳ ಜೆರಾಕ್ಸ್ ಪ್ರತಿಗಳೊಂದಿಗೆ ನಿಮ್ಮ ತಾಲ್ಲೂಕಿಗೆ ಸಂಭಂದಪಟ್ಟ ತಾಲ್ಲೂಕು ಸಮಿತಿಗೆ ದಿನಾಂಕ 20/12/2023 ಒಳಗೆ ಸಲ್ಲಿಸಬೇಕು.

ತಾಲ್ಲೂಕು ಸಮಿತಿಯು ಸ್ವೀಕರಿಸಿದ ಅರ್ಜಿ ಮತ್ತು ಮೂಲ ದಾಖಲೆಗಳನ್ನು ಪರಿಶೀಲಿಸಿದ ನಂತರ ತಾಲ್ಲೂಕು ಮುಖ್ಯ ಸಂಚಾಲಕರ ಸಹಿ ಮತ್ತು ಮೊಹರುವಿನೊಂದಿಗೆ ದೃಢೀಕರಿಸಿ ಮುಂದಿನ ಅಗತ್ಯ ಕ್ರಮಕ್ಕಾಗಿ ಜಿಲ್ಲಾ ಸಂಚಾಲಕರ ಸಮಿತಿಗೆ ದಿನಾಂಕ 25/12/2023 ಒಳಗೆ ತಲುಪಿಸಬೇಕು.

ಜಿಲ್ಲಾ ಸಂಚಾಲಕ ಸಮಿತಿಯು ಎಲ್ಲಾ ತಾಲ್ಲೂಕುಗಳಿಂದ ಸ್ವೀಕರಿಸಿದಂತಹ ಅರ್ಜಿಗಳನ್ನು ಮತ್ತೊಮ್ಮೆ ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಜಿಲ್ಲಾ ಮುಖ್ಯ ಸಂಚಾಲಕರ ಸಹಿ ಮತ್ತು ಮೊಹರುವಿನೊಂದಿಗೆ ಜೆ.ಪಿ.ಎನ್.ಪಿ ಬೆಂಗಳೂರು, ಕೇಂದ್ರ ಕಛೇರಿಗೆ ದಿನಾಂಕ 31/12/2023 ಒಳಗೆ ತಲುಪಿಸಬೇಕು.

ತಾಲ್ಲೂಕು ಮತ್ತು ಜಿಲ್ಲಾ ಸಂಚಾಲಕ ಸಮಿತಿಯ ವಿವರಗಳನ್ನು jpnp.org.in ನೀಡಲಾಗಿದೆ. ಅದರಲ್ಲಿ ಇರುವ ತಾಲ್ಲೂಕು/ ಜಿಲ್ಲಾ ಮುಖ್ಯ ಸಂಚಾಲಕರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಅವರ ನಿರ್ದೇಶನದಂತೆ ಅವರಿಗೆ ಅರ್ಜಿಯನ್ನು ಸಲ್ಲಿಸಬೇಕು.

ವಿದ್ಯಾರ್ಥಿವೇತನ ಅರ್ಜಿಗಳನ್ನು ಟ್ರಸ್ಟಿಗಳೇ ಪರಿಶೀಲಿಸುತ್ತಾರೆ. ಅರ್ಜಿದಾರರಿಗೆ ಯಾವುದೇ ವಿವರಣೆಯನ್ನು ನೀಡದೆಯೇ ಅರ್ಜಿಯನ್ನು ಸ್ವೀಕರಿಸುವ/ ತಿರಸ್ಕರಿಸುವ ಅಧಿಕಾರವನ್ನು ಟ್ರಸ್ಟಿನ ಕಾರ್ಯಕಾರಿ ಮಂಡಳಿಯು ಹೊಂದಿರುತ್ತದೆ, ನಮ್ಮ ಜನಾಂಗದ ಇತರೆ ಸಂಸ್ಥೆಗಳಿಂದ ವಿದ್ಯಾರ್ಥಿವೇತನವನ್ನು ಪಡೆದಿದ್ದರೆ ಅಂತಹ ವಿದ್ಯಾರ್ಥಿಗಳ ಹೆಸರುಗಳನ್ನು ಪರಿಗಣಿಸುವುದಿಲ್ಲ.

ವಿದ್ಯಾರ್ಥಿಗಳು ಆನ್ ಲೈನ್ ಅರ್ಜಿಯಲ್ಲಿ ಭರ್ತಿಮಾಡಿದಂತಹ ವಿವರ ಮತ್ತು ಮೂಲದಾಖಲಾತಿಯೊಂದಿಗೆ ನೀಡಿದಂತಹ ವಿವರದಲ್ಲಿ ವ್ಯತ್ಯಾಸವಿದ್ದಲ್ಲಿ ಅಂತಹ ಅರ್ಜಿಯನ್ನು ಪರಿಗಣಿಸುವುದಿಲ್ಲ. ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳ ಪಟ್ಟಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುತ್ತದೆ.

ಲಗತಿಸಬೇಕಾದ ದಾಖಲೆಗಳು; ವಿಳಾಸದ ಪುರಾವೆ, ವಿದ್ಯಾಸಂಸ್ಥೆಯು ನೀಡಿದ ಗುರುತಿನ ಚೀಟಿ, ವಿದ್ಯಾರ್ಥಿಯ ಬ್ಯಾಂಕ್ ವಿವರ, ಆಧಾರ್ ಕಾರ್ಡ್, ಕುಟುಂಬದ ಬಿಪಿಎಲ್ ಕಾರ್ಡ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+