ಮೋದಿ ಒಬ್ಬ ಮೋಸಗಾರ ಎಂದು ನಿಂದಿಸಿದ ರಾಮ್ ಜೇಠ್ಮಲಾನಿ
ಬೆಂಗಳೂರು, ಮೇ 07: ಮೋದಿ ಮೋಸಗಾರ. ಜನರು ಈ ಮೋಸಗಾರನಿಗೆ ತಕ್ಕ ಪಾಠ ಕಲಿಸಬೇಕು. ಆತನಿಗೆ ಬುದ್ಧಿ ಕಲಿಸುವತನಕ ಹಾಗೂ ನನ್ನ ಕೊನೆ ಉಸಿರು ಇರುವತನಕ ಹೋರಾಡುತ್ತೇನೆ. ಮೋದಿ ವಿರುದ್ಧ ರಾಜ್ಯಸಭಾ ಸದಸ್ಯ, ಹಿರಿಯ ನ್ಯಾಯವಾದಿ ರಾಮ್ ಜೇಠ್ಮಲಾನಿ ಗುಡುಗಿದರು.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಹಾಗೂ ಬೆಂಗಳೂರು ವರದಿಗಾರರ ಕೂಟದಿಂದ ಆಯೋಜನೆ ಮಾಡಿದ್ದ ಮಾತು ಮಂಥನ ಸಂವಾದದಲ್ಲಿ ಮಾತನಾಡಿದ ಅವರು, ಮೋದಿಯ ಮೇಲೆ ನಂಬಿಕೆ ಇಡಿ, ಮೋದಿಯನ್ನು ಪ್ರಧಾನಿ ಮಾಡಿ ಎಂದು ಹೇಳಿ ಜೀವನದಲ್ಲಿ ದೊಡ್ಡ ತಪ್ಪು ಮಾಡಿ ಮೂರ್ಖನಾಗಿದ್ದೇನೆ.
ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುತ್ತೇನೆಂದು ಪ್ರಣಾಳಿಕೆಯಲ್ಲಿ ನನ್ನಿಂದ ಬರೆಯಿಸಿಕೊಂಡ ಜನ ಇಂದು ಅದರ ಕುರಿತು ಚಕಾರ ಎತ್ತುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಅಮಿತ್ ಶಾನಂಥವರು ಉಡಾಫೆಯ ಮಾತುಗಳನ್ನಾಡುತ್ತಾರೆ. ಇಂಥವರಿಗೆ ಏನೆನ್ನಬೇಕು ಎಂದು ಪ್ರಶ್ನಿಸಿದರು.

ಕರ್ನಾಟಕದ ಜನರು ಈ ಚುನಾವಣೆಯಲ್ಲಿ ಮೋದಿಯ ಮೋಡಿ ಮಾತುಗಳಿಗೆ ಮರುಳಾಗದಂತೆ ಎಚ್ಚರಿಕೆ ನೀಡಿದ ಜೇಠ್ಮಲಾನಿ, ನಿಮಗಿಷ್ಟ ಬಂದವರಿಗೆ ಮತ ನೀಡಿ. ಆದರೆ ಮೋದಿಯಂಥ ಕುಕೃತ್ಯಗಾರನ ಮೋಸಗಳನ್ನು ಮರೆಯಬೇಡಿ ಎಂದು ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ನರೇಂದ್ರ ಮೋದಿ ಪ್ರಧಾನಿಯಾಗಲು ಅರ್ಹ ಎಂದು ಆರಂಭದಲ್ಲಿ ಧ್ವನಿ ಎತ್ತಿದವನು ನಾನು ಅವತ್ತು ನಾನು ಕೆಟ್ಟ ನಿರ್ಧಾರ ಮಾಡಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಪ್ಯಾರಾಗಟ್ಟಲೆ ಕಪ್ಪು ಹಣದ ಹಿಂತರುವ ಬಗ್ಗೆ ಉಲ್ಲೇಖ ಮಾಡಿದ್ದರು ಆದರೆ ಇಲ್ಲಿಯವರೆಗೂ ಕಪ್ಪು ಹಣ ಬಂದಿದೆಯಾ ಮೋದಿ ಸರ್ಕಾರ ಅದ್ರ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಅಮಿತ್ ಶಾ ತಮ್ಮ ಸಾರ್ವಜನಿಕ ಭಾಷಣದಲ್ಲಿ ಕಪ್ಪು ಹಣದ ಬಗ್ಗೆ ಮಾತನಾಡ್ತಾರೆ ಎಷ್ಟು ಹಾಸ್ಯಾಸ್ಪದ ಅನ್ನಿಸುತ್ತೆ ಎಂದರು.
ಈ ನಾಲ್ಕು ವರ್ಷದ ಅವಧಿಯಲ್ಲಿ ಜನರಿಗೆ ಮೋಸ ಮಾಡಿದ್ದಾರೆ ನಾನು ಇಲ್ಲಿಗೆ ಬಂದ ಉದ್ದೇಶವೇ ಮೋದಿ ಬಣ್ಣ ಮಾಡೋದಕ್ಕೆ , ಬಿಜೆಪಿಗೆ ವೋಟು ಮಾಡಬೇಡಿ, ಕಾಂಗ್ರೆಸ್ ಗೆ ವೋಟು ಮಾಡಿ ಅಂತಾ ನಾನು ಯಾಕೆ ಹೇಳಲಿ. ಯಾರಿಗೆ ಮತ ಹಾಕಬೇಕು ಅನ್ನೋದು ಜನರಿಗೆ ಬಿಟ್ಟ ವಿಚಾರ. ಅವರಿಗೆ ಯಾರನ್ನು ಅಧಿಕಾರಕ್ಕೆ ತರಬೇಕು ಅನಿಸುತ್ತದೆಯೋ ಅವರಿಗೆ ಮತ ಹಾಕಲಿ ದೇಶದ ಜನ ತಪ್ಪಿತಸ್ಥರಿಗೆ ಶಿಕ್ಷೆ ಕೊಡ್ತಾರೆ ಆ ದಿನವನ್ನು ತಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.












Click it and Unblock the Notifications