ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; ಮೈಸೂರಲ್ಲಿ ಜೆಡಿಎಸ್ ಕಾರ್ಯಾಗಾರ, ಜಿ. ಟಿ. ದೇವೇಗೌಡ ಗೈರು!

|
Google Oneindia Kannada News

ಮೈಸೂರು, ಅಕ್ಟೋಬರ್ 19; ಮೈಸೂರು ನಗರದಲ್ಲಿ ಜೆಡಿಎಸ್ ಪಕ್ಷದ ಎರಡು ದಿನಗಳ ಪಕ್ಷ ಸಂಘಟನೆ ಕಾರ್ಯಾಗಾರ ಆರಂಭವಾಗಿದೆ. ಶಾಸಕ ಜಿ. ಟಿ. ದೇವೇಗೌಡರು ಕಾರ್ಯಾಗಾರಕ್ಕೆ ಗೈರಾಗಿದ್ದಾರೆ. ಈ ಮೂಲಕ ಮತ್ತೆ ದಳಪತಿಗಳಿಂದ ದೂರವಾಗಿದ್ದಾರೆ.

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಬುಧವಾರ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ಸಿಕ್ಕಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಗಾರ ನಡೆಯುತ್ತಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಜೆಡಿಎಸ್ ಶಾಸಕ!ಭಾರತ್ ಜೋಡೋ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಜೆಡಿಎಸ್ ಶಾಸಕ!

ಜಿ. ಟಿ. ದೇವೇಗೌಡರು ಮಂಗಳವಾರ ರಾತ್ರಿಯೇ ಕ್ಷೇತ್ರ ಬಿಟ್ಟು ಬೇರೆಡೆ ಹೋಗಿದ್ದಾರೆ. ಎಚ್. ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಜಿ. ಟಿ. ದೇವೇಗೌಡರ ಮನವೊಲಿಕೆ ಮಾಡಲು ಪ್ರಯತ್ನ ನಡೆಸಿದ್ದು, ಅದು ವಿಫಲವಾಗಿದೆ.

ಮೈಸೂರು; ಜೆಡಿಎಸ್‌ ಟಿಕೆಟ್ ಆಕಾಂಕ್ಷಿಗಳಿಗೆ 2 ದಿನದ ಕಾರ್ಯಾಗಾರ ಮೈಸೂರು; ಜೆಡಿಎಸ್‌ ಟಿಕೆಟ್ ಆಕಾಂಕ್ಷಿಗಳಿಗೆ 2 ದಿನದ ಕಾರ್ಯಾಗಾರ

JDS Workshop In Mysuru GT Devegowda Absent

ಈ ಕಾರ್ಯಾಗಾರ ಆಯೋಜನೆ ಜವಾವ್ದಾರಿಯನ್ನು ಕೆ. ಆರ್. ನಗರ ಶಾಸಕ ಸಾ. ರಾ. ಮಹೇಶ್‌ಗೆ ನೀಡಲಾಗಿದೆ. ಇದು ಜಿ. ಟಿ. ದೇವೇಗೌಡರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ ಎಂಬ ಮಾಹಿತಿ ಇದೆ.

ಚುನಾವಣೆ ವೇಳೆ ಮುಂದಿನ ರಾಜಕೀಯ ತೀರ್ಮಾನ: ಜಿಟಿ ದೇವೇಗೌಡ ಚುನಾವಣೆ ವೇಳೆ ಮುಂದಿನ ರಾಜಕೀಯ ತೀರ್ಮಾನ: ಜಿಟಿ ದೇವೇಗೌಡ

ಈ ಕುರಿತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ, "ಜಿ. ಟಿ. ದೇವೇಗೌಡರು ನನ್ನ ಅನುಮತಿ ಪಡೆದು ಕಾರ್ಯಾಗಾರಕ್ಕೆ ಗೈರಾಗಿದ್ದಾರೆ. ಮುಂದಿನ ದಿನಗಳಲ್ಲಿ ನಡೆಯುವ ಕಾರ್ಯಾಗಾರಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.

ಪಕ್ಷದ ಚಟುವಟಿಕೆಯಿಂದ ದೂರ; ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ದೂರವಾಗಿದ್ದಾರೆ. ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು.

ಮುಂದಿನ ಚುನಾವಣೆಯಲ್ಲಿ ಪುತ್ರ ಮತ್ತು ಅವರಿಗೆ ಟಿಕೆಟ್ ನೀಡಿದರೆ ಜಿ. ಟಿ. ದೇವೇಗೌಡರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಇತ್ತು. 2018ರ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿಸಿದ್ದ ಅವರು ಕಾಂಗ್ರೆಸ್‌ ಸೇರುವುದು ಕುತೂಹಲಕ್ಕೆ ಕಾರಣವಾಗಿತ್ತು.

JDS Workshop In Mysuru GT Devegowda Absent

ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೊಗಳುವ ಜಿ. ಟಿ. ದೇವೇಗೌಡರು ಬಿಜೆಪಿ ಸೇರಲಿದ್ದಾರೆ ಎಂದು ಸಹ ವಿಶ್ಲೇಷಿಸಲಾಗುತ್ತಿದೆ. ಆದರೆ ಅವರು ಜೆಡಿಎಸ್ ತೊರೆಯುವ ಕುರಿತು ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ.

2 ದಿನದ ಕಾರ್ಯಾಗಾರ; ಜೆಡಿಎಸ್ ಪಕ್ಷ ಸಂಘಟನಾ ಕಾರ್ಯಾಗಾರ ಬುಧವಾರ ಆರಂಭವಾಗಿದೆ. ಶಾಸಕರು, ಮುಂದಿನ ವಿಧಾನಸಭೆ ಚುನಾವಣಾ ಟಿಕೆಟ್ ಆಕಾಂಕ್ಷಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದಾರೆ.

English summary
Janata Dal (Secular) has started a two-day workshop at Mysuru from October 19th. Chamundeshwari MLA G. T. Devegowda absent for the workshop.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X