ಮೈಸೂರಿನ 11 ವಿಧಾನಸಭಾ ಕ್ಷೇತ್ರವೇ ನಮ್ಮ ಟಾರ್ಗೆಟ್: ಎಚ್ಡಿಕೆ
Recommended Video

ಮೈಸೂರು, ಮಾರ್ಚ್ 28: "ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಟಾರ್ಗೆಟ್ ಮಾಡಿದ್ದೇನೆ. ಮೈಸೂರು ಜಿಲ್ಲೆಯಲ್ಲಿ ಈ ಚುನಾವಣೆಯಲ್ಲಿ ಹೆಚ್ಚಿನ ಬೆಂಬಲ ಜೆಡಿಎಸ್ ಗೆ ಸಿಗಲಿದೆ" ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೂರು ದಿನಗಳ ಮೈಸೂರು ಪ್ರವಾಸ ಕೈಗೊಂಡಿರುವ ಅವರು ಇಂದು(ಮಾ.28) ಸುತ್ತೂರು ಮಠಕ್ಕೆ ಭೇಟಿನೀಡಿದರು. ಈ ಸಂದರ್ಭದಲ್ಲಿ ಸುತ್ತೂರು ಶ್ರೀಗಳಿಂದ ಆಶೀರ್ವಾದ ಪಡೆದ ಅವರು ನಂತರ ಪತ್ರಕರ್ತರೊಂದಿಗೆ ಕೆಲ ಸಮಯ ಮಾತನಾಡಿದರು.
"ಮೈಸೂರು ಜಿಲ್ಲೆಯಲ್ಲಿ 40% ನಗರ ಗ್ರಾಮೀಣ ಪ್ರದೇಶದ ಜನ ಸಿದ್ದರಾಮಯ್ಯ ಗೆ ಉತ್ತರ ಕೊಡ್ತಾರೆ. ಸಿ ಪೋರ್ ಕಂಪನಿ ಮಾಲಿಕ ಸಿದ್ದರಾಮಯ್ಯ ಜೊತೆಗೆ ಇರ್ತಾರೆ. ಸಿ ಪೋರ್ ಸಮೀಕ್ಷೆ ಬಗ್ಗೆ ನನಗೆ ಯಾವುದೇ ಆತಂಕ ಇಲ್ಲ. ಕರ್ನಾಟಕದ ಜನ ಸಮೀಕ್ಷೆ ಬುಡಮೇಲು ಮಾಡ್ತಾರೆ." ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.

"ಇಂದು ಬನ್ನೂರು, ಟಿ.ನರಸೀಪುರ ಪ್ರವಾಸ ಮಾಡುತ್ತೇನೆ. ಈ ಭಾರಿ ನಾನು ಮತದಾರನ ಹತ್ತಿರ ಹೋಗುತ್ತಿದ್ದೇನೆ. ಸಮೀಕ್ಷೆಗಳು ಸಿದ್ದರಾಮಯ್ಯ ಅವರಿಗೆ ಫಲ ಕೊಡಲ್ಲ. ಮೈಸೂರು ಜನತೆ ನಾಡಿ ಮಿಡಿತ ನನಗೆ ಅರ್ಥವಾಗಿದೆ. ನಮ್ಮ ತಪ್ಪುಗಳಿಂದ ಮೈಸೂರಿನಲ್ಲಿ ಕಡಿಮೆ ಗೆದ್ದಿದ್ದೇವೆ. ಈ ಬಾರಿ ಹಾಸನ ಜಿಲ್ಲೆ, ಮಂಡ್ಯ ಜಿಲ್ಲೆಯಲ್ಲಿ 14 ಕ್ಷೇತ್ರಗಳಲ್ಲಿ ನಾವೇ ಗೆಲ್ಲೊದು. ಕಾಂಗ್ರೆಸ್ ಗೆ ಮಂಡ್ಯ,ಹಾಸನದಲ್ಲಿ ಶೂನ್ಯ ಸಿಗುತ್ತದೆ" ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ಸಂದರ್ಭದಲ್ಲಿ ಬಿಜೆಪಿ ವಿರುದ್ಧವೂ ಹರಿಹಾಯ್ದ ಅವರು, "ಅಮಿತ್ ಶಾ ಗೆ ಈಗ ತೆಂಗು, ಅಡಿಗೆ ಬೆಳೆಗಾರರ ನೆನಪಾಗಿದೆ. ದೇಶದ ನಂ 1 ಭ್ರಷ್ಟ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಅವರೇ ಸತ್ಯ ಒಪ್ಪಿಕೊಂಡಿದ್ದಾರೆ" ಎಂದು ವ್ಯಂಗ್ಯವಾಡಿದರು.
ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರೊಂದಿದಗೆ ಮಾಜಿ ಸಂಸದ ಎಚ್.ವಿಶ್ವನಾಥ್, ಶಸಕ ಸಾ.ರಾ.ಮಹೇಶ್, ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಭೀಷೇಕ್, ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಮಲ್ಲೇಶ್ ಭಾಗಿಯಾಗಿದ್ದರು.












Click it and Unblock the Notifications