ಕಾಂಗ್ರೆಸ್ ಪಕ್ಷಕ್ಕೆ ಕಚೇರಿ ಬೀಗ ನೀಡಿದ ದೇವೇಗೌಡರು

ಬೆಂಗಳೂರು, ಫೆ. 15: ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಕಚೇರಿ ವಿವಾದಕ್ಕೆ ತಾರ್ಕಿಕ ಅಂತ್ಯ ಕಂಡಿದೆ. ರೇಸ್ ಕೋರ್ಸ್ ರಸ್ತೆಯ ಜೆಡಿಎಸ್ ಪ್ರಧಾನ ಕಚೇರಿಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಕಾಂಗ್ರೆಸ್ ಗೆ ಬಿಟ್ಟುಕೊಡುತ್ತೇನೆ ಎಂದು ದೇವೇಗೌಡರು ಘೋಷಿಸಿದ್ದಾರೆ.

ಇಲ್ಲಿಯವರೆಗೆ ಜೆಡಿಎಸ್ ಪ್ರಧಾನ ಕಚೇರಿಯಾಗಿದ್ದ ಕಟ್ಟಡವನ್ನು ಜೆಡಿಎಸ್ ಕಾಂಗ್ರೆಸ್ ಗೆ ಅಧಿಕೃತವಾಗಿ ವಹಿಸಿಕೊಡಲಿದೆ. ಕಚೇರಿಯ ಬೀಗವನ್ನು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಅವರಿಗೆ ನೀಡಲಾಗುವುದು ಎಂದು ದೇವೇಗೌಡರು ತಿಳಿಸಿದ್ದಾರೆ.[ಒಕ್ಕಲಿಗರ ಭವನದಲ್ಲಿ ಜೆಡಿಎಸ್ ತಾತ್ಕಾಲಿಕ ಕಚೇರಿ]

jds

ನಮಗೂ ಆತ್ಮಾಭಿಮಾನ ಇದೆ ಹಾಗೂ ನಾವೂ ಯಾರ ಹಂಗಿನಲ್ಲೂ ಇರಲು ಬಯಸುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನನ್ನ ಮನವಿ ಎಂದರೆ ನಮಗೆ ಹೊಸ ಜಾಗ ಸಿಗುವವರೆಗೂ ಒಂದು ಮೂಲೆಯಲ್ಲಿ ನಮ್ಮ ಕಡತಗಳು ಮತ್ತು ಪೀಠೋಪಕರಣಗಳನ್ನು ಇಟ್ಟುಕೊಳ್ಳಲು ಅವಕಾಶ ನೀಡಿ ಎಂದಿದ್ದಾರೆ.[ಬೆಂಗಳೂರಿನ ಜೆಡಿಎಸ್ ಕಚೇರಿ ವಿವಾದವೇನು?]

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿರುವ ಒಕ್ಕಲಿಗರ ಸಂಘದ ಕಟ್ಟಡದ ಒಂದು ಭಾಗವನ್ನು ಕಚೇರಿಯಾಗಿ ಬಳಸಿಕೊಳ್ಳಲು ನನ್ನ ಮನಃಸಾಕ್ಷಿ ಒಪ್ಪಲಿಲ್ಲ. ಈಗ ಬೇಸಿಗೆ ಕಾಲವಾಗಿರುವುದರಿಂದ ಇಲ್ಲೆ ಹೊರಗೆ ಸಭೆ ನಡೆಸುತ್ತೇವೆ. ಇದಕ್ಕೆ ಕಾಂಗ್ರೆಸ್ ಆಕ್ಷೇಪಣೆ ಇಲ್ಲ ಎಂದು ತಿಳಿದುಕೊಂಡಿದ್ದೇನೆ ಎಂದು ಗೌಡರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+