• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2019ರ ಲೋಕಸಭಾ ಚುನಾವಣೆ: ದೇವೇಗೌಡ್ರ ಕುಟುಂಬದ ಮಹತ್ವದ ನಿರ್ಧಾರ?

By Balaraj Tantry
|

ಇದೇ ನನ್ನ ಕೊನೆಯ ಚುನಾವಣೆಯೆಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರು ಪ್ರತೀ ಚುನಾವಣೆಯ ಸಂದರ್ಭದಲ್ಲಿ ಹೇಳುವುದುಂಟು, ರಾಜಕೀಯ ನೆಲೆಗಟ್ಟಿನಲ್ಲಿ ಮತ್ತು ಸಾರ್ವಜನಿಕವಾಗಿ ಅವರ ಈ ಹೇಳಿಕೆ ಅಷ್ಟೇನೂ ಮಹತ್ವ ಪಡೆದ ಉದಾಹರಣೆಗಳು ಕಮ್ಮಿ.

ಕಳೆದ ವಿಧಾನಸಭಾ ಚುನಾವಣೆಯ ವೇಳೆಯ ಗೌಡ್ರ ಕುಟುಂಬದೊಳಗೆ ಟಿಕೆಟ್ ವಿಚಾರದಲ್ಲಿ ಬಹಳ ಮನಸ್ತಾಪಗಳು ಇದ್ದವು ಎನ್ನುವುದು ಗೊತ್ತಿರುವ ವಿಚಾರ. ಪ್ರಜ್ವಲ್ ರೇವಣ್ಣಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಟಿಕೆಟ್ ನೀಡಬೇಕೆಂದು, ಸೊಸೆ ಭವಾನಿ ಬಹಳ ಪ್ರಯತ್ನಿಸಿದ್ದರು. ಕಾರ್ಯಕರ್ತರೂ ಒತ್ತಡವನ್ನು ಹೇರಿದ್ದರು.

ಆದರೆ ಕುಟುಂಬದಿಂದ ನಾನು ಮತ್ತು ರೇವಣ್ಣ ಮಾತ್ರ ಸ್ಪರ್ಧಿಸುವುದು ಎನ್ನುವ ಕುಮಾರಸ್ವಾಮಿಯವರ ಅಚಲ ನಿರ್ಧಾರದಿಂದ ಪ್ರಜ್ವಲ್ ಸ್ಪರ್ಧೆ ಸಾಧ್ಯವಾಗಿರಲಿಲ್ಲ. ಹಾಸನ ಕ್ಷೇತ್ರದ ಹಾಲೀ ಸಂಸದರು ಆಗಿರುವ ದೇವೇಗೌಡ್ರು, 2019ರ ಲೋಕಸಭಾ ಚುನಾವಣೆಯಲ್ಲಿ ಹಾಸನದಿಂದ ಪ್ರಜ್ವಲ್ ಸ್ಪರ್ಧಿಸುತ್ತಾರೆಂದು ಘೋಷಿಸಿದ್ದರು.

ತಾನು ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಹಾಸನ ಕ್ಷೇತ್ರದಲ್ಲಿ ನನ್ನ ಉತ್ತರಾಧಿಕಾರಿಯಾಗಿ ಪ್ರಜ್ವಲ್ ಸ್ಪರ್ಧಿಸುತ್ತಾನೆಂದು ಗೌಡ್ರು ಹೇಳಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ. ಒಲ್ಲದ ಮನಸ್ಸಿನಿಂದ ತಾತನ ಮಾತಿಗೆ ಪ್ರಜ್ವಲ್ ಕೂಡಾ ತಲೆಯಾಡಿಸಿದ್ದರು.

ಈಗ, ರಾಷ್ಟ್ರ ಮಟ್ಟದಲ್ಲಿ ಬದಲಾದ ರಾಜಕೀಯ ಲೆಕ್ಕಾಚಾರದಿಂದ, ಇನ್ಮುಂದೆ ನಾನು ಸ್ಪರ್ಧಿಸುವುದಿಲ್ಲ ಎನ್ನುವ ತಮ್ಮ ಈ ಹಿಂದಿನ ಮಾತನ್ನು ಮುರಿಯಲು ದೇವೇಗೌಡ್ರು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ. ಈ ಮೂಲಕ, ಪಕ್ಷದ ಬಲವನ್ನು ಕೇಂದ್ರದಲ್ಲಿ ಬಲಪಡಿಸುವುದು ಒಂದು ಕಾರಣವಾದರೆ, ಸಿದ್ದರಾಮಯ್ಯನವರ ಪ್ರಾಭಲ್ಯಕ್ಕೆ ಅಂಕುಶ ಹಾಕುವ ನಿರ್ಧಾರವಿದ್ದರೂ ಇರಬಹುದು ಎನ್ನುವ ಮಾತಿದೆ.

ಎರಡನೇ ಅವಧಿಗೆ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಪ್ರಯಾಸ

ಎರಡನೇ ಅವಧಿಗೆ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಪ್ರಯಾಸ

ಸದ್ಯದ ವಿರೋಧ ಪಕ್ಷಗಳ ಲೆಕ್ಕಾಚಾರದ ಪ್ರಕಾರ, ಎರಡನೇ ಅವಧಿಗೆ ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಪ್ರಯಾಸದ ವಿಚಾರ ಎನ್ನುವುದು. ಹಾಗಾಗಿ, ಒಂದು ವೇಳೆ ಅತಂತ್ರ ಫಲಿತಾಂಶ ಹೊರಬಿದ್ದಿದ್ದೇ ಆದಲ್ಲಿ ತೃತೀಯ ರಂಗ, ಸಂಯುಕ್ತ ರಂಗ ಮತ್ತು ಎಡಪಕ್ಷಗಳು ನಿರ್ಣಾಯಕ ಪಾತ್ರವಹಿಸಲಿವೆ. ಕುಮಾರಸ್ವಾಮಿಯವರ ಪ್ರಮಾಣವಚನದ ವೇಳೆ ವಿರೋಧ ಪಕ್ಷಗಳು ಒಂದು ರೌಂಡ್ ಒಗ್ಗಟ್ಟು ಪ್ರದರ್ಶಿಸಿದ್ದು ಗೊತ್ತೇ ಇದೆ.

ರಾಹುಲ್ ಪ್ರಧಾನಿ ಅಭ್ಯರ್ಥಿಯಾಗಲು ಅಭ್ಯಂತರವಿಲ್ಲ ಎನ್ನುವ ಗೌಡ್ರ ಹೇಳಿಕೆ

ರಾಹುಲ್ ಪ್ರಧಾನಿ ಅಭ್ಯರ್ಥಿಯಾಗಲು ಅಭ್ಯಂತರವಿಲ್ಲ ಎನ್ನುವ ಗೌಡ್ರ ಹೇಳಿಕೆ

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾಗಲು ನಮ್ಮದೇನೂ ಅಭ್ಯಂತರವಿಲ್ಲ ಎನ್ನುವ ಗೌಡ್ರ ಹೇಳಿಕೆಯ ಹಿಂದೆ, ಇನ್ನೊಂದು ರಾಜಕೀಯವಿದೆ ಎಂದೇ ಹೇಳಲಾಗುತ್ತಿದೆ. ಜೆಡಿಎಸ್ ಪ್ರಾಭ್ಯಲ್ಯವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಕ್ಕಾಗಿ ಪೂರ್ವಭಾವಿಯಾಗಿ ಗೌಡ್ರು ನೀಡಿದ ಹೇಳಿಕೆ ಇದು ಎಂದು ಚರ್ಚಿಸಲಾಗುತ್ತಿದೆ.

ದೇವೇಗೌಡ್ರು ಮತ್ತೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧಾರ

ದೇವೇಗೌಡ್ರು ಮತ್ತೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧಾರ

ಕೆಲವೊಂದು ಮಾಹಿತಿಗಳ ಪ್ರಕಾರ, ದೇವೇಗೌಡ್ರು ಮತ್ತೆ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಒಂದು ವೇಳೆ ಕೇಂದ್ರದಲ್ಲಿ ಚೌಚೌ ಸರಕಾರ ಬಂದರೆ, ಜೆಡಿಎಸ್ ಸಂಸದರ ಸಂಖ್ಯೆ ಜಾಸ್ತಿಯಿದ್ದರೆ, ತಮ್ಮ ಮಾತಿಗೆ ತೂಕವಿರುತ್ತದೆ ಎನ್ನುವುದು ಗೌಡ್ರ ಲೆಕ್ಕಾಚಾರ. ಜೊತೆಗೆ, ಮೊಮ್ಮಗನ ರಾಜಕೀಯ ಭವಿಷ್ಯವನ್ನು ಬೇರೊಂದು ಕ್ಷೇತ್ರದಿಂದ ಒರೆಗಚ್ಚಲು ಗೌಡ್ರು ನಿರ್ಧರಿಸಿದ್ದಾರೆ ಎನ್ನುವ ಮಾಹಿತಿಯಿದೆ.

ಪ್ರಜ್ವಲ್ ರೇವಣ್ಣನನ್ನು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಲು ಗೌಡ್ರು ಸಜ್ಜು

ಪ್ರಜ್ವಲ್ ರೇವಣ್ಣನನ್ನು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಲು ಗೌಡ್ರು ಸಜ್ಜು

ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ಪ್ರಜ್ವಲ್ ರೇವಣ್ಣನನ್ನು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಲು ಗೌಡ್ರು ಸಜ್ಜುಗೊಳಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ, ಮೈಸೂರು ಕ್ಷೇತ್ರವನ್ನು ಕಾಂಗ್ರೆಸ್ ಬಿಟ್ಟುಕೊಡುವುದು ಅಷ್ಟು ಸುಲಭದ ಮಾತಲ್ಲ. ಜೊತೆಗೆ, ಅದು ಮಾಜಿ ಸಿಎಂ ಸಿದ್ದರಾಮಯ್ಯನವರ ಕರ್ಮಭೂಮಿ. ಆದರೂ, ನೇರವಾಗಿ ಹೈಕಮಾಂಡ್ ಜೊತೆ ಮಾತುಕತೆ ನಡೆಸಿ, ಪ್ರಜ್ವಲ್ ನನ್ನು ಅಲ್ಲಿಂದ ಕಣಕ್ಕಿಳಿಸಿದರೆ, ಸಿದ್ದರಾಮಯ್ಯನವರ ಪ್ರಾಭಲ್ಯವನ್ನೂ ಕಮ್ಮಿಮಾಡಬಹುದು ಎನ್ನುವುದು ಗೌಡ್ರ ಲೆಕ್ಕಾಚಾರ.

ಹತ್ತು ಸೀಟು ಡಿಮಾಂಡ್ ಮಾಡುತ್ತಿರುವುದು ಗೊತ್ತಿರುವ ವಿಚಾರ

ಹತ್ತು ಸೀಟು ಡಿಮಾಂಡ್ ಮಾಡುತ್ತಿರುವುದು ಗೊತ್ತಿರುವ ವಿಚಾರ

ಸದ್ಯ ಸಂಸತ್ತಿನಲ್ಲಿ ಕೇವಲ ಒಂದು ಸದಸ್ಯರನ್ನು ಹೊಂದಿರುವ ಜೆಡಿಎಸ್ ಮುಂಬರುವ ಲೋಕಸಭಾ ಚುನಾವಣೆಗೆ ಹತ್ತು ಸೀಟು ಡಿಮಾಂಡ್ ಮಾಡುತ್ತಿರುವುದು ಗೊತ್ತಿರುವ ವಿಚಾರ. ಮೈಸೂರಿನಲ್ಲಿ ಜಾತಿಪ್ರಾಭಲ್ಯ ಮತ್ತು ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಎಸ್ ಗೆದ್ದಿರುವ ಸಂಖ್ಯೆಯನ್ನು ಆಧರಿಸಿ, ಮೊಮ್ಮಗ ಪ್ರಜ್ವಲ್ ಗೆ ಮೈಸೂರು ಕ್ಷೇತ್ರವೇ ಸೂಕ್ತ ಎನ್ನುವ ನಿರ್ಧಾರಕ್ಕೆ ಗೌಡ್ರು ಬಂದಿದ್ದಾರೆ.

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ಕ್ಷೇತ್ರಗಳು

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ಕ್ಷೇತ್ರಗಳು

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಎಂಟು ಅಸೆಂಬ್ಲಿ ಸ್ಥಾನಗಳ ಪೈಕಿ ಜೆಡಿಎಸ್ 3, ಬಿಜೆಪಿ 4 ಮತ್ತು ಕಾಂಗ್ರೆಸ್ 1ಸ್ಥಾನದಲ್ಲಿ ಗೆದ್ದಿದೆ. ಖುದ್ದು ಸಿದ್ದರಾಮಯಯ್ಯನವರೇ ಇಲ್ಲಿಂದ ಸೋತಿರುವುದು ಮತ್ತು ಈ ಲೋಕಸಭಾ ವ್ಯಾಪ್ತಿಯಲ್ಲಿ ಒಂದು ಸ್ಥಾನವನ್ನು ಮಾತ್ರ ಕಾಂಗ್ರೆಸ್ ಗೆದ್ದಿರುವುದರಿಂದ, ಈ ಕ್ಷೇತ್ರವನ್ನು ತಮಗೆ ಬಿಟ್ಟುಕೊಡಿ ಎಂದು ಗೌಡ್ರಿಗೆ ಚೌಕಾಸಿ ಮಾಡಲು ಸುಲಭವಾಗಬಹುದು.

English summary
JDS supremo HD Deve Gowda planning to contest from Hassan Loksabha segment in the upcoming general election 2019, as per Kannada print media sources. As per report Prajwal Revanna may contest from Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more