40% ಕಮಿಷನ್ ಹೊಡೆಯುತ್ತ, 'ಸಿಡಿ'ಗಳಲ್ಲಿ ಪ್ರತಾಪ ತೋರಿಸುತ್ತ ಹೋದರೆ ಬಡತನ ನಿರ್ಮೂಲನೆಯಾಗುವುದಿಲ್ಲ: ಜೆಡಿಎಸ್ ಕಿಡಿ

ಸಿ.ಡಿ.'ಗಳಲ್ಲಿ ಪ್ರತಾಪ ತೋರಿಸುತ್ತ, ಬಡವರ ಪರ ಯೋಜನೆಗಳ ಕತ್ತು ಹಿಸುಕುತ್ತಾ, ಹಸಿ ಸುಳ್ಳು ಹೇಳುತ್ತಾ, ಭಾವನಾತ್ಮಕ ವಿಷಯಗಳನ್ನು ಪ್ರಚೋದಿಸುತ್ತ, ಶ್ರೀಮಂತ ಉದ್ಯಮಿಗಳ ಬೂಟು ನೆಕ್ಕುತ್ತ ಹೊದರೆ ಬಡತನ ನಿರ್ಮೂಲನೆಯಾಗುವುದಿಲ್ಲ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

ಬೆಂಗಳೂರು,ಫೆಬ್ರವರಿ17: ಬಕೆಟ್ ಹಿಡಿಯುವ 'ಪ್ರಭಾವಿಗಳ' ಮನೆ ಸುತ್ತಿದರೆ ಬಡತನ ನಿರ್ಮೂಲನೆಯಾಗುವುದಿಲ್ಲ ಸಿಎಂ ಬಸವರಾಜ ಬೊಮ್ಮಾಯಿಯವರೇ ಎಂದು ರಾಜ್ಯ ಜೆಡಿಎಸ್ ಘಟಕ ಕಿಡಿಕಾರಿದೆ.

JDS Party Tweets Outrage On Basavaraj Bommai

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, 40% ಕಮಿಷನ್ ಹೊಡೆಯುತ್ತ, 'ಸಿ.ಡಿ.'ಗಳಲ್ಲಿ ಪ್ರತಾಪ ತೋರಿಸುತ್ತ, ಬಡವರ ಪರ ಯೋಜನೆಗಳ ಕತ್ತು ಹಿಸುಕುತ್ತಾ, ಹಸಿ ಸುಳ್ಳು ಹೇಳುತ್ತಾ, ಭಾವನಾತ್ಮಕ ವಿಷಯಗಳನ್ನು ಪ್ರಚೋದಿಸುತ್ತ, ಶ್ರೀಮಂತ ಉದ್ಯಮಿಗಳ ಬೂಟು ನೆಕ್ಕುತ್ತ ಹೊದರೆ ಬಡತನ ನಿರ್ಮೂಲನೆಯಾಗುವುದಿಲ್ಲಎಂದು ಸಿಎಂ ವಿರುದ್ದದ ಜೆಡಿಎಸ್‌ ವಾಗ್ದಾಳಿ ನಡೆಸಿದೆ.

ಕೆಟ್ಟು ಕೆರ ಹಿಡಿದು ತಳಕಚ್ಚಿರುವ ರಾಜ್ಯದ ಆಡಳಿತವನ್ನು ದೊಡ್ಡ ಸಾಧನೆ ಎಂದು ಹೇಳುತ್ತ ಸ್ವಕುಚ ಮರ್ಧನ ಮಾಡಿಕೊಳ್ಳುವಷ್ಟು ಬರಗೆಟ್ಟಿದ್ದೆ ರಾಜ್ಯ ಬಿಜೆಪಿ ಸರ್ಕಾರ. ಮಾಡಿದ ಕೆಲಸಗಳ ಬಗ್ಗೆ ಹೇಳಲು ಏನೂ ಇಲ್ಲದೆ, ಪರ ಪರ ತುರಿಸಿಕೊಳ್ಳುತ್ತ ಸುಖ ಅನುಭವಿಸುವ ರೋಗ ದಿನೇ ದಿನೇ ಉಲ್ಬಣವಾಗುತ್ತಿದೆ ಎಂದು ಟ್ವೀಟ್‌ ಮೂಲಕ ಜೆಡಿಎಸ್ ಟೀಕಿಸಿದೆ.

JDS Party Tweets Outrage On Basavaraj Bommai

ರೈತರು, ಬಡವರು, ದಲಿತರು, ಕಾರ್ಮಿಕರು, ಮಹಿಳೆಯರು, ಯುವಜನತೆಯ ಬದುಕಿಗೆ ನೆರವಾಗುವ, ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶ ನಮ್ಮ 'ಪಂಚರತ್ನ' ಕಾರ್ಯಕ್ರಮಕ್ಕಿದೆ. ಅಧಿಕಾರಕ್ಕೆ ಬಂದರೆ ಅದನ್ನೆಲ್ಲ ಜಾರಿ ಮಾಡುವ ಬದ್ಧತೆ, ಪ್ರಾಮಾಣಿಕತೆ, ನಾಡಿನ ಕುರಿತಾದ ನಿಷ್ಠೆ ನಮಗಿದೆ ಎಂದು ಜೆಡಿಎಸ್ ರಾಜ್ಯ ಘಟಕ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+