ಶೃಂಗೇರಿ ಮಠಕ್ಕೆ ನಡ್ಡಾ ಭೇಟಿ: ದೇಶ ಒಡೆದ ಪೇಶ್ವೆಗಳ ಅಧಿಕಾರ ಸ್ಥಾಪಿಸಲು ವೇದಿಕೆ ಸಜ್ಜಾಗುತ್ತಿದೆಯೆ?: ಜೆಡಿಎಸ್
ಮಹಾರಾಷ್ಟ್ರದ ಪೇಶ್ವೆ ಬ್ರಾಹ್ಮಣರ ವಂಶಸ್ಥರಿಗೆ ಸೇರಿದ ಪ್ರಹ್ಲಾದ್ ಜೋಶಿಯವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದರು.
ಬೆಂಗಳೂರು,ಫೆಬ್ರವರಿ20: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಇಂದು ಸಂಜೆ ಶೃಂಗೇರಿ ಮಠಕ್ಕೆ ಭೇಟಿ ನೀಡಿ ಅಲ್ಲಿಯೇ ವಾಸವಿರಲಿದ್ದಾರೆ ಎಂಬ ಅಧಿಕೃತ ಮಾಹಿತಿ ಇದೆ. ಮಹಾರಾಷ್ಟ್ರದ ಪೇಶ್ವೆ ಬ್ರಾಹ್ಮಣರು ಶೃಂಗೇರಿಯ ಮಠದ ಮೇಲೆ ದಾಳಿ ಮಾಡಿದ್ದರ ಬಗ್ಗೆ ಚರ್ಚೆಯಾಗುತ್ತಿರುವ ಈ ವೇಳೆ ನಡ್ಡಾ ಅವರ ಭೇಟಿ ಹಲವು ಪ್ರಶ್ನೆಗಳಿಗೆ ದಾರಿ ಮಾಡಿದೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಜೆಡಿಎಸ್ ರಾಜ್ಯ ಘಟಕ, ಇದರ ಹಿಂದಿನ ಲೆಕ್ಕಾಚಾರಗಳು ಏನೆಲ್ಲ ಇರಬಹುದು? ಪ್ರಹ್ಲಾದ್ ಜೋಶಿಯವರನ್ನೆ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುವುದಕ್ಕೆ ಈ ಭೇಟಿ ಮುನ್ನುಡಿಯೆ? ಯಡಿಯೂರಪ್ಪನವರ ಪ್ರಭಾವದಿಂದ ರಾಜ್ಯ ಬಿಜೆಪಿಯನ್ನು ಬಿಡಿಸಿ, ನಾಡಿನಲ್ಲಿ ದೇಶ ಒಡೆದ ಪೇಶ್ವೆಗಳ ಅಧಿಕಾರ ಸ್ಥಾಪಿಸಲು ವೇದಿಕೆ ಸಜ್ಜಾಗುತ್ತಿದೆಯೆ? ಎಂದು ಜೆಡಿಎಸ್ ಪ್ರಶ್ನಿಸಿದೆ.
ಮಹಾರಾಷ್ಟ್ರದ ಪೇಶ್ವೆ ಬ್ರಾಹ್ಮಣರ ವಂಶಸ್ಥರಿಗೆ ಸೇರಿದ @JoshiPralhadಯವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ @BJP4India ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದರಷ್ಟೆ! ಇದರ ನಂತರ ರಾಜ್ಯ @BJP4Karnataka ತಡಬಡಾಯಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.
— Janata Dal Secular (@JanataDal_S) February 20, 2023
2/7
ಮಹಾರಾಷ್ಟ್ರದ ಪೇಶ್ವೆ ಬ್ರಾಹ್ಮಣರ ವಂಶಸ್ಥರಿಗೆ ಸೇರಿದ ಪ್ರಹ್ಲಾದ್ ಜೋಶಿಯವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಹೇಳಿದ್ದರಷ್ಟೆ! ಇದರ ನಂತರ ರಾಜ್ಯ ಬಿಜೆಪಿ ತಡಬಡಾಯಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಸತ್ಯದ ತಲೆ ಮೇಲೆ ಹೊಡೆದು ಸುಳ್ಳು ಹೇಳುವುದನ್ನೇ ಕರಗತ ಮಾಡಿಕೊಂಡಿರುವ ಬಿಜೆಪಿ ಪಕ್ಷವು ಮಹಾರಾಷ್ಟ್ರದ ಪೇಶ್ವೆಗಳ ಹಿಡಿತದಲ್ಲಿರುವುದು ಗುಟ್ಟಾಗಿ ಉಳಿದಿಲ್ಲ. ಕರುನಾಡಿನ ಸುಸಂಸ್ಕೃತ ಶೃಂಗೇರಿ ಮಠಕ್ಕೆ ಭೇಟಿ ನೀಡಿ, ಈಗ ಪಕ್ಷಕ್ಕೆ ಬಿದ್ದಿರುವ ಹೊಡೆತವನ್ನು ಸರಿದೂಗಿಸಲು ಬಿಜೆಪಿ ಹೈಕಮಾಂಡ್ ಯತ್ನಿಸುತ್ತಿರಬೇಕು ಎಂದು ಜೆಡಿಎಸ್ ಹೇಳಿದೆ.
ಸರ್ವೆ ಜನಾಃ ಸುಖಿನೋ ಭವಂತು ಎನ್ನುವ ನಮ್ಮ ನಾಡಿನ ಸುಸಂಸ್ಕೃತ ಬ್ರಾಹ್ಮಣರ ವಂಶಕ್ಕೆ ಸೇರಿದವರ್ಯಾರು ಬಿಜೆಪಿಗೆ ಸಿಗಲಿಲ್ಲವೆ ಕುತಂತ್ರದ ರಾಜಕಾರಣ ಮಾಡುತ್ತ, ರಾಷ್ಟ್ರವನ್ನು ಒಡೆದಾಳುವ ಪೇಶ್ವೆ ಬ್ರಾಹ್ಮಣರಿಗೆ ಮಣೆ ಹಾಕುತ್ತಿರುವುದು ಏಕೆ? ಈ ದುಃಸ್ವಪ್ನ ನಿಜವಾದರೆ ರಾಜ್ಯ ಬಿಜೆಪಿ ಪೂರ್ಣವಾಗಿ ಆರ್ ಎಸ್ ಎಸ್ ಹಿಡಿತಕ್ಕೆ ಸಿಗಲಿದೆ. ಕುತಂತ್ರದ ಈ ರಾಜಕಾರಣಕ್ಕೆ ರಾಜ್ಯದ ಜನತೆ ಬಲಿಯಾಗಬಾರದು. ಮುಖವಾಡದ ರಾಜಕೀಯ ಮಾಡುತ್ತಾ, ಅಧಿಕಾರವನ್ನು ಪೇಶ್ವೆಗಳಿಗೆ ಧಾರೆ ಎರೆಯುವ ಈ ಹುನ್ನಾರ ಬಹು ಅಪಾಯಕಾರಿ. ರಾಜ್ಯದಲ್ಲಿ ಕೋಮುಗಳ ಮಧ್ಯೆ ಬೆಂಕಿ ಹಚ್ಚಿ, ಅದರ ಶಾಖದಲ್ಲಿ ಮೈ ಕಾಯಿಸಿಕೊಳ್ಳುವ ಇವರು ಯಾವುದೇ ಕಾರಣಕ್ಕೂ ನಂಬಿಕೆಗೆ ಅರ್ಹರಲ್ಲ ಕಿಡಿಕಾರಿದೆ.

'ಮನುಷ್ಯ ಜಾತಿ ತಾನೊಂದೆ ವಲಂ' ಎಂದ ಪಂಪನ ನಾಡಿನಲ್ಲಿ ಎಲ್ಲ ಜಾತಿ-ಧರ್ಮದವರು ಕೂಡಿ ಬಾಳುತ್ತಿದ್ದೇವೆ. ಕುವೆಂಪುರವರ ವಿಶ್ವಮಾನವ ತತ್ವ ನಮ್ಮ ನಾಡಿನ ಉಸಿರಾಗಿದೆ. ಈ ಸಾಮರಸ್ಯ, ಸಹಬಾಳ್ವೆಯನ್ನು ಹಾಳುಗೆಡವಲು ಕಾಯುತ್ತಿರುವವರನ್ನು ಚುನಾವಣೆಯಲ್ಲಿ ಸೋಲಿಸಬೇಕಿದೆ. ಇದು ಕನ್ನಡ ನಾಡಿನ ಮಣ್ಣಿಗೆ ಅತ್ಯಗತ್ಯ ಎಂದು ಜೆಡಿಎಸ್ ಟ್ವೀಟ್ ಮೂಲಕ ಹೇಳಿದೆ. h












Click it and Unblock the Notifications