JDS Pancharatna Yatra: ನಾಡಿನ ರೈತರ ಸಮಸ್ಯೆಗಳ ಪರಿಹಾರಕ್ಕೆ ಜೆಡಿಎಸ್ ಘೋಷಿಸಿದ ಯೋಜನೆಗಳಿವು: HDK

ಮೈಸೂರು, ಮಾರ್ಚ್‌ 26: ನಾವು ದೇವೇಗೌಡರ ಮಕ್ಕಳಾಗಿ, ರೈತರ ಮಕ್ಕಳಾಗಿ ಬೆಳೆದಿದ್ದೇವೆ. ರೈತರ ಮಕ್ಕಳಾಗೇ ಸಾಯುತ್ತೇವೆ. ರಥಯಾತ್ರೆ ವೇಳೆ ಆದ ಅನುಭವಗಳನ್ನು ರೈತರ ಸಮಸ್ಯೆಗಳು, ಮಹಿಳೆಯರ ಸಮಸ್ಯೆ ಆಲಿಸಿದ್ದೇನೆ. ಈ ಭಾರಿ ಅಧಿಕಾರಕ್ಕೆ ಬಂದರೆ ಅವೆಲ್ಲವು ಜಾರಿಗೆ ಬರಲಿವೆ ಎಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಜೆಡಿಎಸ್ ಕಳೆದ ವಷ ನವೆಂಬರ್‌ನಲ್ಲಿ ಆರಂಭಿಸಿದ್ದ 'ಪಂಚರತ್ನ ರಥಯಾತ್ರೆ'ಗೆ ತೆರೆ ಬಿದಿದ್ದು, ಅದರ ಅಂಗವಾಗಿ ಮೈಸೂರಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

JDS Pancharatna Ratha Yatra, HD Kumaraswamy Disclosed problems of karnataka farmer women,

ಈ ವೇಳೆ ರಥಯಾತ್ರೆ ವೇಳೆ ಒಟ್ಟು 90 ದಿನದಲ್ಲಿ ಸಾಕಷ್ಟು ಅನುಭವ ಆಗಿದೆ. ಸಾಕಷ್ಟು ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದೆ. ಅದರ ಮೇಲೆ ಅನೇಕ ಯೋಜನೆಗಳನ್ನು ಜೆಡಿಎಸ್ ರೂಪಿಸಿದೆ. ಅವರುಗಳ ಅನುಷ್ಠಾನಕ್ಕಾಗಿ ತಾಯಂದಿರು, ನಾಡಿನ ಜನ 2023ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಬರುವಂತೆ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.

ರೈತರಿಗೆ ಅಭಯ ನೀಡಿದ ಕುಮಾರಸ್ವಾಮಿ

ಕೋಲಾರದಿಂದ ಆರಂಭವಾದ ಯಾತ್ರೆಯಲ್ಲಿ ಜನ ನನ್ನ ಹೋರಾಟಕ್ಕೆ ಬೆಂಬಲಾರ್ಥವಾಗಿ 25ಸಾವಿರ ರೂ.ನಿಂದ ಒಂದು ಲಕ್ಷ ರೂ.ವರೆಗೆ ದೇಣಿಗೆ ನೀಡುವ ಮೂಲಕ ಜೆಡಿಎಸ್ ಬೆಂಬಲಿದ್ದಾರೆ. ರೈತರ ಮಕ್ಕಳನ್ನು ಹೆಣ್ಣು ಮಕ್ಕಳು ಅಸಡ್ಡೆಯಿಂದ ಕಾಣುತ್ತಾರೆ. ಹೀಗಾಗಬಾರದು ಎಂದು ಅದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಜೆಡಿಎಸ್ ಮಾಡಿದೆ.

JDS Pancharatna Ratha Yatra, HD Kumaraswamy Disclosed problems of karnataka farmer women,

ರೈತರ ಮಕ್ಕಳ ಮದುವೆಯಾಗುವ ಹೆಣ್ಣುಮಕ್ಕಳಿಗೆ 2 ಹಣ ಘೋಷಿಸಲಾಗಿದೆ. ರೈತರ ಬದುಕು ಹಸನಾಗಬೇಕು. ಬಿಜೆಪಿ ಸರ್ಕಾರದಿಂದ ರಸಗೊಬ್ಬರ ಬೆಲೆ ಏರಿಕೆ ಆಗಿದೆ. ಸಾಲಮನ್ನಾ ಜೊತೆಗೆ ರಸಗೊಬ್ಬರಕ್ಕೆ ಅನುಕೂಲ, ಮುಂದಿನ ಮಳೆಗಾಲ ವೇಳೆಗೆ ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ಒಂದು ಎಕರೆಗೆ ಹತ್ತು ಸಾವಿರ, ಎರಡು ಎಕರೆಗೆ 20ಸಾವಿರ ಹೆಚ್ಚು ಭೂಮಿ ಹೊಂದಿರುವವರಿಎ ಒಂದು ಲಕ್ಷ ರೂಪಾಯಿ ವರೆಗೆ ನೆರವು ಪಡೆಯಲು ಅವಕಾಶ, ಕಬ್ಬು ಬೆಳೆಗೆ ಎಫ್‌ಆರ್‌ಪಿ ದರ ಹೆಚ್ಚಳ ಮಾಡಲಾಗುವುದು ಎಂದ ಅವರು ಭರವಸೆ ನೀಡಿದರು.

ಇನ್ನೂ ಕೋಲಾರದಲ್ಲಿ ಕಾಂಗ್ರೆಸ್‌ ನಾಯಕರು ಓಟಿಂಗ್ ರಾಜಕಾರಣಕ್ಕಾಗಿ ಹೆಣ್ಣುಮಕ್ಕಳಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ಕೊಟ್ಟರು ಆದರೆ ಸಾಲ ಪಡೆದ ಹೆಣ್ಣು ಮಕ್ಕಳು ಸಾಲ ತೀರಿಸಲಾಗಿದೆ ಒದ್ದಾಡುತ್ತಿದ್ದಾರೆ. ಹೀಗಾಗಿ ಜೆಡಿಎಸ್ ಅಧಿಕಾರಕ್ಕೆ ಬಂದ ಕೂಡಲೇ ನಾಡಿನ ಸ್ತ್ರೀ ಶಕ್ತಿ ಸಂಘದಲ್ಲಿ ಸಾಲ ಪಡೆದ ಮಹಿಳೆಯರ ಸಾಲಮನ್ನ ಮಾಡಲು ಮನವಿ ಮೇರೆಗೆ ನಿರ್ಧರಿಸಿದ್ದೇನೆ ಎಂದರು.

JDS Pancharatna Ratha Yatra, HD Kumaraswamy Disclosed problems of karnataka farmer women,

ಲಿವರ್ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ 60ಲಕ್ಷ ಭರಿಸಲು ಸಾಲ ಮಾಡಿದ್ದರು. ನಮ್ಮ ರಕ್ಷಣೆ ಮಾಡುವಂತೆ ಅವರು ಕೋರಿದ್ದರು. 30-40 ಲಕ್ಷ ರೂ.ವಚ್ಚದ ಚಿಕಿತ್ಸೆಗಳು ಅತ್ಯಂತ ಕಡಿಮೆ ವೆಚ್ಚದಲ್ಲಿ ಸಿಗುವಂತೆ ಭವಿಷ್ಯದಲ್ಲಿ ಜೆಡಿಎಸ್ ಮಾಡಲಿದೆ. ದೆಲಿತರು, ಅಲ್ಪಸಂಖ್ಯಾತರ ಮಕ್ಕಳು,ಬಡವರು ಎಲ್ಲರಿಗೂ ಸರಿಸಮಾನ ಬದುಕು ನೀಡಲು ಜೆಡಿಎಸ್ ಕ್ರಮ ವಹಿಸಲಿದೆ. ನಮ್ಮ ಸರ್ಕಾರ ಬಂದರೆ ಇದೆಲ್ಲವನ್ನು ಮಾಡಲಿದೆ ಎಂದು ಅವರು ಪುನರುಚ್ಚರಿಸಿದರು.

ಪ್ರಮುಖ ವಿಷಯವೇನೆಂದರೆ ನಾನು ಅಧಿಕಾರದಾಸೆಗೆ ಕಳೆದ ಬಾರಿ ಕಾಂಗ್ರೆಸ್‌ ಜೊತೆಗೆ ಕೈಜೋಡಿಸಿರಲಿಲ್ಲ. ರೈತರ ಸಾಲ ಮಾಡಲು ಮನ್ನಾ ಮಾಡಲು ಅಧಿಕಾರಕ್ಕೆ ಬಂದಿದ್ದೆ. ರೈತರಿಗೆ ನೀಡಿದ ಮಾತಿನಂತೆ ನಡೆದುಕೊಳ್ಳಲು ಕಾಂಗ್ರೆಸ್‌ಗ ಅಡ್ಡಿಬರದಂತೆ ತಿಳಿಸಿ ಸಾಲಮನ್ನಾ ಮಾಡಿದ್ದೇನೆ. ರೈತರ ಆತ್ಮಹತ್ಯೆ ತಡೆಯಲು ಕಾರ್ಯ ನಿರ್ವಹಿದ್ದೇನೆ ಎಂದು ತಿಳಿಸಿದರು.

ಕನ್ನಡಿಗರ ಪಕ್ಷ ಅಧಿಕಾರಕ್ಕೆ ಬರಬೇಕು

ನಗರದ ಮಕ್ಕಳಂತೆ ಗ್ರಾಮೀಣ-ಹಳ್ಳಿ ಭಾಗದ ಮಕ್ಕಳಿಗೂ ಸಹ ಕನ್ನಡ ಮತ್ತು ಇಂಗ್ಲಿಷ್ ಸಿಗುವಂತೆ ಮಾಡಲು ಉಚಿತ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಿದ್ದೇವೆ. ಅದಕ್ಕಾಗಿ ರಾಜ್ಯದಲ್ಲಿ ಕನ್ನಡಿಗರ ಸರ್ಕಾರ ರಚನೆಯಾಗಬೇಕು ಎಂದರು.

ರಾಜ್ಯದಲ್ಲಿ ಕಿಡ್ನಿ ಸಮಸ್ಯೆಯಿಂದ ಸಾಕಷ್ಟು ಜನ ಸಾಯುತ್ತಿದ್ದಾರೆ. ಈ ಹಿಂದೆ ಚಾಮರಾಜನಗರದಲ್ಲಿ ಅನಾರೋಗ್ಯ ಸಮಸ್ಯೆ ಎದುರಾದಾಗ ಐಸಿಯು ಬೆಡ್, ಹಾಸಿಗೆ ಇಲ್ಲದೆ ಸಮಸ್ಯೆಯಾಗಿತ್ತು. ಸರ್ಕಾರಿಂದ ಎಲ್ಲರಿಗೂ ಸೌಲಭ್ಯ ದೊರೆಯುವಂತೆ ಮಾಡಲಾಗುವುದು. ರಾಜ್ಯ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಉತ್ತಮ ಆರೋಗ್ಯ ಸೌಲಭ್ಯ, ಪ್ರಯೋಗಾಲಯ, ಡಯಾಲಿಸಿಸ್ ಮಾಡುವ ವ್ಯವಸ್ಥೆ ತರಲಾಗುವುದು.

ರೈತರಿಗೆ ಲಾಭವಾಗುವ ಕಾರ್ಯಕ್ರಮ ಜೆಡಿಎಸ್ ರೂಪಿಸಿದೆ.

ಕಾಂಗ್ರೆಸ್‌ನವರು ನನ್ನ ಮುಗಿಸಲು ಸಜ್ಜಾಗಿದ್ದಾರೆ ಎಂದ ಪ್ರಧಾನಮಂತ್ರಿ ಹೇಳುತ್ತಾರೆ. ಈಗ ರಾಜ್ಯಕ್ಕೆ ಬಂದು ಪ್ರಧಾನಿ ರೋಡ್ ಶೋ ಬೆರೆ ನಡೆಸುತ್ತಿದ್ದಾರೆ. ಮೂರು ವರ್ಷದಲ್ಲಿ ಇಲ್ಲದ್ದು ಅಭಿವೃದ್ಧಿ ಕಾರ್ಯಕ್ರಮ, ಶಂಕುಸ್ಥಾಪನೆ ಈಗೇಕೆ? ಎಂದು ಪ್ರಶ್ನಿಸಿದರು.

ರೈತರ ಆತ್ಮಹತ್ಯೆಯಾದಾಗ ಉತ್ತರ ಕರ್ನಾಟಕ ಜನ, ಜಮೀನು, ಹೊಲ ಗದ್ದೆ ನೀರಲ್ಲಿ ಮುಳುಗಿದಾಗ ಬಂದು ಸಮಾಧಾನ ಮಾತು ಆಡಲಿಲ್ಲ. ಕಲಬುರಗಿ ಬೀದರ್‌ನಲ್ಲಿ ತೊಗರಿ ಬೆಳೆಗಾರರಲ್ಲಿ 26 ಕುಟುಂಬದಲ್ಲಿ ಆತ್ಮಹತ್ಯೆ ಯಾಗಿದೆ. ರೈತರ ಹಣದಲ್ಲಿ ಫಲಾನುಭವಿ ಅಂತ ಹೇಳಿ ಅವರಿಗೆ ಮರಳಿ ಪರಿಹಾರ ನೀಡುತ್ತಾರೆ. ಆದರೆ ಜೆಡಿಎಸ್ ಇಂತಹ ಕೆಲಸ ಮಾಡುವುದಿಲ್ಲ.

ಪ್ರಧಾನಿಗಳು ಸ್ವಚ್ಛ ಭಾರತ ಎಮದು ಹೇಳುತ್ತಾರೆ. ಆದರೆ ಉತ್ತರ ಕರ್ನಾಟಕದಲ್ಲಿ ಶೌಚಾಲಯವೇ ಇಲ್ಲ. ಈ ಭಾಗದ ಹೆಣ್ಣು ಮಕ್ಕಳು ಸ್ಥಿತಿ ಹೇಳತೀರದಾಗಿದೆ. ಉತ್ತರ ಕರ್ನಾಟಕ ನೀರಲ್ಲಿದ್ದಾಗ ನೀವು (ಬಿಜೆಪಿ) ಎಲ್ಲಿದ್ದೀರಿ?. ನಿಮ್ಮ ಬಿಜೆಪಿ ರೋಡ್ ಶೋಗು ಮಹಿಳೆಯುರ ಬಂದು ಆಶೀರ್ವಾದ ಮಾಡಿದ ಜೆಡಿಎಸ್ ಪಂಚರತ್ನ ಯಾತ್ರೆಗೆ ಸಾಕಷ್ಟು ವ್ಯತ್ಯಾಸ ಇದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+