ಸುಳ್ಳುರಾಮಯ್ಯ ಎಂದ ಜೆಡಿಎಸ್ ಮುಖಂಡ ನಿಖಿಲ್ ಕುಮಾರಸ್ವಾಮಿ!
ಕರ್ನಾಟಕ ಸರ್ಕಾರದ ಎರಡು ಪ್ರಮುಖ ಗ್ಯಾರಂಟಿ ಯೋಜನೆಗಳ ಬಗ್ಗೆ ಮತ್ತೆ ಚರ್ಚೆಯಾಗುತ್ತಿದೆ. ರಾಜ್ಯದಲ್ಲಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಣ ಕೆಲವು ಕಡೆ ಮೂರು ತಿಂಗಳಿನಿಂದ ಇನ್ನೂ ಕೆಲವು ಕಡೆ ಐದು ತಿಂಗಳಿನಿಂದ ಜಮೆ ಆಗಿಲ್ಲ ಎನ್ನುವ ಆರೋಪ ಇದೆ. ಈ ವಿಚಾರವಾಗಿ ವಿರೋಧ ಪಕ್ಷಗಳು ಕಾಂಗ್ರೆಸ್‌ನ ಮೇಲೆ ಮುಗಿಬಿದ್ದಿವೆ. ಇದೀಗ ಜೆಡಿಎಸ್ ಪಕ್ಷದ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರದ ದಿವಾಳಿ ತನಕ್ಕೆ ಇದೇ ಸಾಕ್ಷಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ನಿಖಿಲ್ ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯದ ಆರ್ಥಿಕತೆಯ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ನಡುವೆ ವಾಕ್ಸಮರ ನಡೆಯುತ್ತಿದೆ. ಈ ರೀತಿ ಇರುವಾಗಲೇ ಬಿಜೆಪಿ ನಾಯಕರ ಟೀಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತರ ಕೊಟ್ಟಿದ್ದು. ಕುಸಿಯುತ್ತಿದ್ದ ರಾಜ್ಯದ ಆರ್ಥಿಕತೆಯು ಇದೀಗ ಸದೃಢವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ಟಾಂಗ್ ಕೊಟ್ಟಿದ್ದು. ಇದಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

ಬೂಟಾಟಿಕೆಗೆ ಮತ್ತೊಂದು ಹೆಸರೇ ಕರ್ನಾಟಕ ಕಾಂಗ್ರೆಸ್. ನಿಮ್ಮ ಬಣ್ಣದ ಮಾತು, ಸುಳ್ಳುಕೋರರ ಸಂತೆ ಎನ್ನುವುದಕ್ಕೆ ಇದಕ್ಕಿಂತ ನೈಜ ಸಾಕ್ಷಿಬೇಕಾ. ರಾಜ್ಯದ ಆರ್ಥಿಕತೆ ಸದೃಢವಾಗಿದೆ ಎನ್ನುವ ಮಾನ್ಯ ಸಿಎಂ ಸಿದ್ದರಾಮಯ್ಯ ಅವರೇ, ವಿಶ್ವವಿದ್ಯಾಲಯಗಳಿಗೆ ಅನುದಾನ ನೀಡುವ ಬಗ್ಗೆ ಚಿಂತೆ ಯಾಕೆ ಹಾಗೂ ಒಂಬತ್ತು ವಿಶ್ವದ್ಯಾಲಯಗಳನ್ನು ಮುಚ್ಚಲು ಹೊರಟಿರುವುದು ಯಾಕೆ ಅಂತ ಪ್ರಶ್ನೆ ಮಾಡಿದ್ದಾರೆ.
ಒಂಬತ್ತು ವಿಶ್ವವಿದ್ಯಾನಿಲಯಕ್ಕೆ ಐದು ವರ್ಷಕ್ಕೆ 350 ಕೋಟಿ ಕೊಡಲು ಸಾಧ್ಯವಿಲ್ಲವೇ. ಎಸ್ಸಿ/ಎಸ್‌ಟಿ ವಿದ್ಯಾರ್ಥಿವೇತನವನ್ನು ಏಕೆ ನಿಲ್ಲಿಸಲಾಗಿದೆ. ಗ್ಯಾರಂಟಿ ಯೋಜನೆಗಳಾದ ಯುವನಿಧಿ ಮತ್ತು ಗೃಹಲಕ್ಷ್ಮಿ ಹಣ ಯಾಕೆ ವಿಳಂಬವಾಗಿದೆ. ಈ ಕುರಿತು ರಾಜ್ಯದ ಜನತೆಗೆ ಉತ್ತರಿಸಿ ಎಂದು ಅವರು ಸವಾಲು ಹಾಕಿದ್ದಾರೆ.
ಇನ್ನು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಹ ಟೀಕೆ ಮಾಡಿದೆ. ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಬಿಜೆಪಿ ಸರಣಿ ಟ್ವೀಟ್ ಮಾಡಿ ವ್ಯಂಗ್ಯವಾಡಿದೆ.

ಕರ್ನಾಟಕ ಮಾದರಿಯ ಎನ್ನುವ ಕಾಂಗ್ರೆಸ್ ಘೋಷಣೆಯನ್ನು "ದಿವಾಳಿ ಮಾಡೆಲ್ ಆಫ್ ಕರ್ನಾಟಕ" ಎಂದು ಟ್ವೀಟ್ ಮಾಡಿದೆ.
* ವಿಶ್ವವಿದ್ಯಾಲಯಗಳು ಕ್ಲೋಸ್
* ಸಾರಿಗೆ ನಿಗಮಗಳು ಬರ್ಬಾದ್
* ರಸ್ತೇಲಿ ಬಾಯ್ತೆರೆದ ಪಾತ್‌ಹೋಲ್ಸ್
* ರಾಜಧಾನಿ ಬೆಂಗಳೂರು ಧೂಳ್ ಸಿಟಿ
* ಆರೋಗ್ಯ ನೌಕರರಿಗೆ ಸಂಬಳವೇ ಇಲ್ಲ
* ಹಾಲು, ಆಲ್ಕೋಹಾಲ್, ವಾಟರ್, ಕರೆಂಟ್ ಹೈಕ್
* ನಮ್ಮ ಮೆಟ್ರೋ ಬಿಟ್ಟ ಜನ ಬೋಗಿಗಳು ಖಾಲಿ
* ಸಂಪೂರ್ಣ ಹದಗೆಟ್ಟ ಕಾನೂನು ಸುವ್ಯವಸ್ಥೆ
* ರೇಪ್, ಮರ್ಡರ್, ರಾಬರಿ, ರೌಡಿಸಂ ಕಾಮನ್ ಕಾಂಗ್ರೆಸ್ ಬಂದಿದೆ ದಿವಾಳಿ ಮಾಡಿದೆ ಎಂದು ಟ್ವೀಟ್ ಮಾಡಿದೆ.












Click it and Unblock the Notifications