ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಿ ಎಂದು ಆಹ್ವಾನ ಕೊಟ್ಟ ರೇವಣ್ಣ!

|
Google Oneindia Kannada News

ಬೆಂಗಳೂರು, ಜೂನ್ 14 : 'ರಾಜ್ಯಸಭೆ, ವಿಧಾನಪರಿಷತ್ ಚುನಾವಣೆಯಲ್ಲಿ ನಾನು ಇದುವರೆಗೂ 1 ರೂ. ಪಡೆದಿಲ್ಲ. ಈ ಬಗ್ಗೆ ಧರ್ಮಸ್ಥಳದ ಮಂಜುನಾಥನ ಮುಂದೆ ಅಥವ ಮೈಸೂರಿನ ಚಾಮುಂಡೇಶ್ವರಿ ಮುಂದೆ ಆಣೆ ಮಾಡಲು ನಾನು ಸಿದ್ಧವಾಗಿದ್ದೇನೆ' ಎಂದು ಎಚ್.ಡಿ.ರೇವಣ್ಣ ಅವರು ಸವಾಲು ಹಾಕಿದರು.

ಪಕ್ಷದಿಂದ ಅಮಾನತುಗೊಂಡ ಶಾಸಕರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ನೀಡಲು ಎಚ್.ಡಿ.ರೇವಣ್ಣ ಅವರು ವಿಧಾನಸೌಧದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದರು. '1977ರಿಂದ ನಾನು ರಾಜಕಾರಣವನ್ನು ಕೈಲಾದಷ್ಟು ಮಾಡಿದ್ದೇನೆ. ಆದರೆ, ನನ್ನ ವಿರುದ್ಧವೂ ಆರೋಪಗಳನ್ನು ಮಾಡಲಾಗುತ್ತಿದೆ. ಪತ್ರಿಕೆಗಳಲ್ಲಿ ನನ್ನ ವಿರುದ್ಧ ಬರೆಸಿ ಅಪಪ್ರಚಾರ ಮಾಡಲಾಗುತ್ತಿದೆ' ಎಂದರು. [ಚೆಲುವರಾಯ ಸ್ವಾಮಿ ಹೇಳಿದ್ದೇನು?]

revanna

ರೇವಣ್ಣ ಅವರು ಹೇಳಿದ್ದಿಷ್ಟು.....['ಕುಮಾರಸ್ವಾಮಿ ಅವರಿಗೆ ನಿಜವಾದ ಶನಿ ರೇವಣ್ಣ']

* 'ಕೆ.ಸಿ.ರಾಮಮೂರ್ತಿ ಅವರು ಬಂದು ನಾನು ಯಾರಿಗೂ ಕಾಸು ಕೊಟ್ಟಿಲ್ಲ. ಪೊಲೀಸ್ ಅಧಿಕಾರಿಯಾಗಿ ಉತ್ತಮ ಕೆಲಸ ಮಾಡಿದ್ದೇನೆ, ನನ್ನ ಸೇವೆ ಗುರುತಿಸಿ ಶಾಸಕರು 52 ಮತಗಳನ್ನು ಹಾಕಿ ಗೆಲ್ಲಿಸಿದ್ದಾರೆ ಎಂದು ಮಂಜುನಾಥನ ಮುಂದೆ ಬಂದು ಪ್ರಮಾಣ ಮಾಡಲಿ'. [ಸತ್ಯ ಸತ್ಯ ಸತ್ಯ: ಮಂಜುನಾಥನೆದುರು ಸ್ವಾಮಿ ಪ್ರಮಾಣ]

* 'ಅಂದು ನಾನು ಅಧಿಕಾರಕ್ಕೆ ಆಸೆ ಪಟ್ಟಿಲ್ಲ, ಇಂದಿಗೂ ಪಡುತ್ತಿಲ್ಲ. ತಂದೆಯ ಸಲಹೆಯಂತೆ ನಡೆಯುತ್ತಿದ್ದೇನೆ. ಮುಂದೆಯೂ ಅವರು ಹೇಳಿದಂತೆ ನಡೆಯುತ್ತೇನೆ.' [ಯಡ್ಡಿ - ಎಚ್ಡಿಕೆ ಧರ್ಮ ( ಡ್ರಾಮ ) ಯುದ್ಧ! ರೀಕ್ಯಾಪ್]

* 'ಜಮೀರ್ ಅಹಮದ್ ರಾಷ್ಟ್ರ ಮಟ್ಟದ ನಾಯಕರಾಗಿದ್ದಾರೆ. ಅವರಂತೆ ಕ್ಯಾ ಪೈಸಾ ಕರೇಗಾ ನಮಗೆ ಎಂಬ ಭಾಷೆ ನಮಗೆ ಬರಕ್ಕಿಲ್ಲ. ಕನ್ನಡ ಮಾಸ್ಟರ್ ಹೇಳಿಕೊಟ್ಟಿದ್ದು ಮಾತ್ರ ನನಗೆ ಗೊತ್ತು. ರಾಷ್ಟಮಟ್ಟದ ನಾಯಕರ ಪರಿಚಯ ನನಗಿಲ್ಲ'.

** 'ನನಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಯಾವ ಶಾಸಕರನ್ನು ಶನಿ ಎಂದು ಹೇಳಿಲ್ಲ. ಭಗವಂತ ಎಲ್ಲರಿಗೂ ಒಳ್ಳೆಯದು ಮಾಡಲಿ. ಶನಿ ದೃಷ್ಟಿ ಕಾಂಗ್ರೆಸ್‌ನತ್ತಲೂ ಬೀರಲಿ ಎಂದು ಮಾತ್ರ ಹೇಳಿದ್ದೆ'

* 'ಕಳೆದ ಆರು ತಿಂಗಳಿನಲ್ಲಿ ಭಿನ್ನಮತೀಯ ಶಾಸಕರು ನನ್ನ ವಿರುದ್ಧ ಮಾತನಾಡಿದ್ದನ್ನು ಕೇಳಿದ್ದೀರಾ?, ಈಗ ಅವರು ದೊಡ್ಡ ನಾಯಕರಾಗಿ ಬೆಳೆದಿದ್ದಾರೆ. ಆದ್ದರಿಂದ, ಆರೋಪ ಮಾಡುತ್ತಿದ್ದಾರೆ'.

* 'ನಾನು ಹೊಳೆನರಸೀಪುರದ ಜವಾನ. ಅಲ್ಲಿನ ಜನರು ಹೇಳಿದಂತೆ ನಾನು ನಡೆದುಕೊಳ್ಳುತ್ತಿದ್ದೇನೆ. ಅಲ್ಲಿನ ಜನರ ಗುಲಾಮ ನಾನು. ಯಾವುದೇ ಸಹಾಯ ಕೇಳಲು ಸಿದ್ದರಾಮಯ್ಯ ಬಳಿ ಹೋಗಿಲ್ಲ'.

* 'ನಾನು ಹಣ ಪಡೆದಿದ್ದೇನೆ ಎಂದು ಬಾಲಕೃಷ್ಣ ಅವರು ಆರೋಪ ಮಾಡಿದ್ದಾರೆ. ಅವರು ದೊಡ್ಡ ನಾಯಕರು. ಅವರು ನಾನು ಹಣ ಪಡೆದಿದ್ದೇನೆ ಎಂದು ಮಂಜುನಾಥನ ಮುಂದೆ ಬಂದು ಪ್ರಮಾಣ ಮಾಡಲಿ'.

* 'ಪದವೀಧರ ಕ್ಷೇತ್ರದ ಚುನಾವಣೆ 2018ರ ಚುನಾವಣೆಗೆ ದಿಕ್ಸೂಚಿ. ಕಾಂಗ್ರೆಸ್ ಪಕ್ಷವನ್ನು ವಿದ್ಯಾವಂತರು ತಿರಸ್ಕಾರ ಮಾಡಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುವುದು ಖಚಿತ. ಇದಕ್ಕೆ ದೇವರ ಅನುಗ್ರಹವಿದೆ'.

English summary
Former minister and JDS leader H.D. Revanna addressed press conference in Vidhana Soudha on June 14, 2016. Here are the highlights.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X