ಮೈತ್ರಿಗೆ ಅಸಮಾಧಾನ ಸ್ಟೋಟ: ಈ ಮೈತ್ರಿ ಬಿಜೆಪಿಗೆ ಬೇಕಿತ್ತಾ ಅಥವಾ ಜೆಡಿಎಸ್ಗೆ ಬೇಕಿತ್ತಾ?: ಸಿ.ಎಂ.ಇಬ್ರಾಹಿಂ
ಬೆಂಗಳೂರು, ಅಕ್ಟೋಬರ್ 04: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಜೆಡಿಎಸ್ ಮೈತ್ರಿ ವಿಚಾರವಾಗಿ ಜೆಡಿಎಸ್ ನಾಯಕರು ಅಸಮಾಧಾನ ಹೊರಹಾಕಿದ್ದು, ಈ ಮೈತ್ರಿ ಬಿಜೆಪಿಗೆ ಬೇಕಿತ್ತಾ ಅಥವಾ ಜೆಡಿಎಸ್ಗೆ ಬೇಕಿತ್ತಾ? ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದ್ದಾರೆ.
ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಅನ್ನೋದು ತಪ್ಪು. ಎಲ್ಲಾ ಜಿಲ್ಲೆಯವರು ಸಂಪರ್ಕದಲ್ಲಿದ್ದಾರೆ. ಜನತಾದಳ ಪಕ್ಷದ ಸಿದ್ಧಾಂತವನ್ನು ಬಿಜೆಪಿಯವರು ಒಪ್ಪಿದ್ದಾರಾ? ಬಿಜೆಪಿ ಸಿದ್ಧಾಂತವನ್ನ ಜೆಡಿಎಸ್ ಒಪ್ಪಿದೆಯಾ ಎಂಬುದನ್ನು ತಿಳಿಸಬೇಕು ಎಂದು ಕೇಳಿದರು.

ರಾಷ್ಟ್ರಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವುದಕ್ಕೆ ನಮಗೆ ಶಕ್ತಿ ಇಲ್ಲ. ಈ ಮೈತ್ರಿ ಕರ್ನಾಟಕಕ್ಕೆ ಮಾತ್ರ ಸೀಮಿತ ಆಗುತ್ತಿದೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಎಲ್ಲರನ್ನೂ ಕರೆದು ಅಭಿಪ್ರಾಯ ಪಡೆಯುವುದು ಸೂಕ್ತ ಎಂದು ಸಿ.ಎಂ.ಇಬ್ರಾಹಿಂ ಹೇಳಿದರು.
ಇನ್ನೂ ಅಕ್ಟೋಬರ್ 16 ರ ನಂತರ ನಾನು ನನ್ನ ತಿರ್ಮಾನವನ್ನ ಹೇಳುತ್ತೇನೆ ಎಂದು ಹೇಳಿದ್ದೆ.ನಾನು ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸ್ತಾಯಿಲ್ಲ ಅನ್ನೋದು ತಪ್ಪು, ನಾನು ಪಕ್ಷದ ಕೆಲಸವನ್ನು ಮಾಡುತ್ತಿದ್ದೇನೆ. ಎರಡು ಮೂರು ಜಿಲ್ಲೆಯ ಪ್ರವಾಸಕ್ಕೆ ಹೋಗಿದೆ ಎಂದರು.
ಕೇರಳದ ಘಟಕದ ಈ ಮೈತ್ರಿಗೆ ವಿರೋದ ವ್ಯಕ್ತಪಡಿಸಿದ್ದಾರೆ. ರಾಜಾಸ್ಥಾನ , ಮಹಾರಾಷ್ಟ್ರ ಮತ್ತು ಗುಜರಾತಿನ ಘಟಕಗಳ ಜೊತೆಗೆ ಮಾತಡಬೇಕು, ಅವರೆಲ್ಲ ಒಪ್ಪಲಿಲ್ಲ ಅಂದ್ರೆ ಪಾರ್ಟಿ ಚಿಹ್ನೆ ಉಳಿಯುತ್ತಾ ಎಂದ ಅವರು, ಮುಸ್ಲಿಂ ಸಮುದಾಯದ ಶೇಕಡಾ 20 ರಷ್ಟು ಮತಗಳು ಪಕ್ಷಕ್ಕೆ ಬಂದಿವೆ. ಇದನ್ನ ಕುಮಾರಸ್ವಾಮಿ ಸಹ ಒಪ್ಪಿಕೊಂಡಿದ್ದಾರೆ, ಕುಮಾರಸ್ವಾಮಿ ಗೆ 15 ಸಾವಿರ ಮತಗಳು ಬಂದಿವೆ. ಈಗ ಗೆದ್ದಿರುವ 19 ರಲ್ಲಿ ಇಬ್ಬರನ್ನ ಹೊರತು ಪಡಿಸಿದ್ರೆ, ಎಲ್ಲಾ ಶಾಸಕರು ಗೆದ್ದಿರುವುದು ಮುಸ್ಲಿಂ ಸಮುದಾಯದ ಮತಗಳಿಂದ ಎಂದು ಹೇಳಿದರು.
ಇದು ಶರಣರ ಸಂಸ್ಕ್ರತಿ ಇರುವ ಮನೆ. ಬಂದವರಿಗೆ ನಿರಾಸೆ ಮಾಡೋದಿಲ್ಲ, ಪಕ್ಷದ ಕೆಲಸದಲ್ಲಿ ಭಾಗವಹಿಸುತ್ತಿಲ್ಲ ಎನ್ನೊದು ತಪ್ಪು. ನಾನು ಪ್ರವಾಸವನ್ನು ಮಾಡ್ತಿದ್ದಿನಿ. ಬಿಜೆಪಿ ಸಿದ್ದಾಂತ ಒಪ್ಪಿ, ಜೆಡಿಎಸ್ ಮೈತ್ರಿ ಮಾಡ್ಕೊಳ್ಳುತ್ತಿದ್ದೆವೋ? ಅಥವಾ ಜೆಡಿಎಸ್ ಸಿದ್ದಾಂತವನ್ನು ಬಿಜೆಪಿ ಒಪ್ಪಿದೆಯೋ? ಎಂದು ಪ್ರಶ್ನಿಸಿದ ಅವರು, ಕುವೆಂಪು ಪಠ್ಯವನ್ನು ಕೈಬಿಟ್ಟಾಗ ಪ್ರತಿಭಟನೆ ಮಾಡಿದ್ದೆವು. ಈ ಬಗ್ಗೆ ಮೈತ್ರಿ ಬಗೆಗೆ ಚರ್ಚೆ ಮಾಡಿದ್ದಿರಿ. ಜಾತ್ಯಾತೀತ, ಸಮಾಜವಾದ,ಸಿಎಎನ್ ಆರ್ ಸಿ ಬಗ್ಗೆ ಚರ್ಚೆ ಮಾಡಿದ್ದಿರಾ? ಎಂದು ಪ್ರಶ್ನಿಸಿದರು.
ಬಿಜೆಪಿ ಸೋತ್ರು ಸರಿ ಜೆಡಿಎಸ್ ಮುಗಿಸಬೇಕು ಎನ್ನುವುದು ಬಿಜೆಪಿ ಗುರಿ. ಮೋದಿ 20 ಸಭೆಗಳನ್ನು ಎಲ್ಲಿ ಮಾಡಿದ್ರೂ? ಮೊದಲು ಜೆಡಿಎಸ್ ಮುಗಿಸ ಬೇಕು ಅನ್ನೋ ಬಿಜೆಪಿ ಗುರಿ. ಇಬ್ರಾಹಿಂ ಅವರನ್ನ ನಾವೇನ್ ಕರೆದಿಲ್ಲ ಅನ್ನೋ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಮಾತನಾಡಿದ ಇಬ್ರಾಹಿಂ, ನೀವು ನೋಡಿದ್ದೀರಿ ಕುಮಾರಸ್ವಾಮಿ ಎಷ್ಟು ಬಾರಿ ನಮ್ಮ ಮನೆಗೆ ಬಂದಿದ್ದರು ಅಂತ ಎಂದು ಹೇಳಿದರು.
ಇಬ್ರಾಹಿಂ ಕಾಂಗ್ರೆಸ್ ಗೆ ಸೇರ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆ ಕುರಿತು ಮಾತನಾಡಿ, ಶರತ್ ಪವರ್ ಮಾತಡಿದ್ದಾರೆ , ಎಎಪಿ ಅವರು ಮಾತಡಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ ನಾಯಕರು ಮಾತಡಿದ್ದಾರೆ. ಆದರೆ, ರಾಜ್ಯ ನಾಯಕರು ಮಾತಡಿಲ್ಲ ಎಂದು ಹೇಳಿದರು.












Click it and Unblock the Notifications