ಕಚೇರಿಗಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಜೆಡಿಎಸ್
ಬೆಂಗಳೂರು, ನ.28 : ಜೆಡಿಎಸ್ ಪಕ್ಷದ ಕಚೇರಿಯನ್ನು ಉಳಿಸಿಕೊಳ್ಳುವ ಅಂತಿಮ ಹೋರಾಟವನ್ನು ಆರಂಭಿಸಿದೆ. ಡಿಸೆಂಬರ್ 31ರೊಳಗೆ ಕಚೇರಿಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕು ಎಂದು ಸುಪ್ರೀಂಕೋರ್ಟ್ ನೀಡಿದ ಆದೇಶವನ್ನು ಪುನರ್ ಪರಿಶೀಲಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಲಾಗಿದೆ.
ಶುಕ್ರವಾರ ಜೆಡಿಎಸ್ ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಮತ್ತೊಂದು ಸುತ್ತಿಮ ಕಾನೂನು ಹೋರಾಟವನ್ನು ಆರಂಭಿಸಿದೆ. ಪಕ್ಷದ ಕಚೇರಿ ಕಾಂಗ್ರೆಸ್‌ಗೆ ಬಿಟ್ಟುಕೊಡಬೇಕು ಎಂಬ ಆದೇಶವನ್ನು ಪುನರ್ ಪರಿಶೀಲಿಸಬೇಕು ಎಂದು ಅರ್ಜಿಯಲ್ಲಿ ಜೆಡಿಎಸ್ ಮನವಿ ಮಾಡಿದೆ.

ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕಚೇರಿ ತಮಗೆ ಸೇರಿದ್ದು ಎಂದು ವಾದ ಮಂಡಿಸಲು ಪಕ್ಷ ನಿರ್ಧರಿಸಿದೆ. ದಾಖಲೆಗಳಲ್ಲಿನ ಕೆಲವು ದೋಷಗಳಿಂದಾಗಿ ಕಚೇರಿ ಕಾಂಗ್ರೆಸ್‌ಗೆ ಸೇರಿದ್ದು ಎಂಬ ಅಭಿಪ್ರಾಯ ಬಂದಿದೆ. ಮೂಲ ದಾಖಲೆಗಳ ಪ್ರಕಾರ ಅದು ಜನತಾದಳಕ್ಕೆ ಸೇರಿದ್ದು ಎಂದು ವಾದ ಮಂಡಿಸಲು ತೀರ್ಮಾನಿಸಲಾಗಿದೆ. [ಕಚೇರಿ ಖಾಲಿ ಮಾಡಲು ಸುಪ್ರೀಂ ಆದೇಶ]
ಸುಪ್ರೀಂಕೋರ್ಟ್ ಆದೇಶದಂತೆ ಜೆಡಿಎಸ್ ತನ್ನ ಕಚೇರಿ ಬಿಟ್ಟು ಕೊಡಬೇಕಾದದ್ದು ಅನಿವಾರ್ಯ ಎಂದು ತೀರ್ಮಾನಿಸಲಾಗಿತ್ತು. ಇದೀಗ ಕಾನೂನು ಸಮರ ಮುಂದುವರಿಸಲು ಜೆಡಿಎಸ್ ನಿರ್ಧರಿಸಿದ್ದು, ರೇಸ್‌ಕೋರ್ಸ್ ರಸ್ತೆ ಕಚೇರಿಗಾಗಿ ಪುನಃ ಹೋರಾಟ ಆರಂಭವಾಗಲಿದೆ.
ಆದೇಶವೇನು : ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್ ಕೇಂದ್ರ ಕಚೇರಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾಗಿದೆ ಎಂಬ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶ ಹಾಗೂ ಕರ್ನಾಟಕ ಹೈಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್ ಜ.21ರಂದು ಈ ಕುರಿತ ತೀರ್ಪು ನೀಡಿತ್ತು.












Click it and Unblock the Notifications