JDS Election Manifesto: ಪಂಚಾಯತ್ ಸ್ವಾವಲಂಬನೆಗೆ ಒತ್ತು; ಪ್ರತಿ ಗ್ರಾಮಕ್ಕೆ 1 ಕೋಟಿ ರೂ. ಅನುದಾನ

2023ರ ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ರಾಜ್ಯದಲ್ಲಿ ಜೋರಾಗಿದ್ದು, ಮೇ 10ರಂದು ನಡೆಯುವ ಮತದಾನ ನಡೆಯಲಿದೆ. ಇದಕ್ಕೂ ಮುನ್ನ ಮತದಾರರನ್ನು ಓಲೈಸಿಕೊಳ್ಳಲು ಎಲ್ಲ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಪ್ರಚಾರದ ಭರಾಟೆ ನಡೆಸಿದ್ದಾರೆ.

ಈ ಮಧ್ಯೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಜನತಾ ದಳ (ಜಾತ್ಯಾತೀತ) ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

JDS Election Manifesto 2023 Karnataka: Emphasis On Self-relianed Panchayats: 1 Cr For Each Village

ಬೆಂಗಳೂರಿನ ಜೆಪಿ ಭವನದ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ರಾಜ್ಯಾಧ್ಯಕ್ಷ ಸಿಎಂ ಇಬ್ರಾಯಿಂ ಸೇರಿದಂತೆ ಹಲವು ಮುಖಂಡರು ಜನತಾ ಪ್ರಣಾಳಿಕೆಯ ಹೆಸರಿನ ಚುನಾವಣಾ ಪ್ರಣಾಳಿಕೆ ಬಿಡುಗಡೆಗೊಳಿಸಿದರು.

2023ರ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳಲ್ಲಿ ಕರ್ನಾಟಕ ಅಭಿವೃದ್ಧಿಗೆ ರೂಪಿಸಿರುವ ಅಭಿವೃದ್ಧಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.

2023ರ ಚುನಾವಣೆಗಾಗಿ ಜೆಡಿಎಸ್ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಪಂಚಾಯತ್ ರಾಜ್ ಮತ್ತು ಸ್ಥಳೀಯ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಶ್ರೇಯೋಭಿವೃದ್ಧಿಗೆ ಭರವಸೆ ನೀಡಿದ್ದಾರೆ.

JDS Election Manifesto 2023 Karnataka: Emphasis On Self-relianed Panchayats: 1 Cr For Each Village

* ಭಾರತದ ಸಂವಿಧಾನದ 73ನೇ ಮತ್ತು74ನೇ ತಿದ್ದುಪಡಿಯಲ್ಲಿ ಪಂಚಾಯತ್ ರಾಜ್ ಮತ್ತು ಸ್ಥಳೀಯ ನಗರ ಸಂಸ್ಥೆಗಳಿಗೆ ಅಧಿಕಾರ ವಿಕೇಂದ್ರೀಕರಣ, ಸ್ವಾಯತ್ತತೆ ಮತ್ತು ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗುವುದು.

* ಆದರೆ, 20 ವರ್ಷಗಳು ಕಳೆದರೂ ಈ ಸ್ಥಳೀಯ ಸಂಸ್ಥೆಗಳ ಅಧಿಕಾರ ವಿಕೇಂದ್ರೀಕರಣವಿಲ್ಲದೆ ಮತ್ತು ಆರ್ಥಿಕ ಸಧೃಡತೆ ಇಲ್ಲದೆ ಸೊರಗಿವೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಬಲವರ್ಧನೆಗೆ ನಾವು ಕಟಿಬದ್ಧವಾಗಿದ್ದೇವೆ.

* ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್‌ಗಳ ಕಾಲಾವಧಿ ಮುಗಿದು, ಈ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ 2 ವರ್ಷ ಕಳೆದಿದ್ದರೂ ರಾಜ್ಯ ಸರ್ಕಾರ ಚುನಾವಣೆ ನಡೆಸಲು ಕ್ರಮ ಕೈಗೊಂಡಿಲ್ಲ.

* ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಕ್ಷೇತ್ರ ವಿಂಗಡಣೆ ಕ್ರಮ ಇನ್ನೂ ಮುಗಿದಿಲ್ಲ.

* ಹಿಂದುಳಿದ ವರ್ಗಗಳಿಗೆ ಕ್ಷೇತ್ರವಾರು ಮೀಸಲಾತಿಗೆ ಸಂಬಂಧಿಸಿದ ಕ್ರಮ ನೆನಗುದಿಗೆ ಬಿದ್ದಿದೆ.

* ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಮೀಸಲಾತಿ ಅಧಿಸೂಚನೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವ್ಯಾಜ್ಯಗಳ ದಾವೆ ಮುಖೇನ ನ್ಯೂನ್ಯತೆ ಸರಿಪಡಿಸಿ ನಾಗರೀಕರಿಗೆ ಉತ್ತಮ ಸೇವೆ ಒದಗಿಸಲು ಅನುವು ಮಾಡಿಕೊಡಲಾಗುವುದು.

* ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ನಿಯತಕಾಲಿಕವಾಗಿ ಕ್ಷೇತ್ರ ವಿಂಗಡಣೆ ಮತ್ತು ಕ್ಷೇತ್ರವಾರು ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಕಾನೂನಿನಂತೆ ಅನುಸರಿಸಿ ಚುನಾವಣೆಯನ್ನು ತುರ್ತಾಗಿ ನಡೆಸಲಾಗುವುದು.

* ಸ್ಥಳೀಯ ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರಿನ ಪೂರೈಕೆ, ರಸ್ತೆಗಳ ನಿರ್ಮಾಣ, ಚರಂಡಿಗಳ ಸ್ವಚ್ಛತೆ, ಸಮುದಾಯ ಭವನ, ಶಾಲಾ-ಕಾಲೇಜುಗಳ ಶೌಚಾಲಯಗಳ ನಿರ್ವಹಣೆ, ಬೀದಿ ದೀಪ, ಗ್ರಂಥಾಲಯಗಳ ನಿರ್ವಹಣೆ ಹಾಗೂ ಸಿಬ್ಬಂದಿ ನಿರ್ವಹಣೆಗಳನ್ನು ನಿಭಾಯಿಸುತ್ತಿವೆ. ಆದರೆ ಈ ವ್ಯವಸ್ಥೆಯಿಂದ ಆರ್ಥಿಕ ಸ್ಥಿತಿ ಕುಸಿದು ಹೋಗಿದೆ.

* ಆದ್ದರಿಂದ ಗ್ರಾಮ ಪಂಚಾಯಿತಿಗಳ ಆಯವ್ಯಯವನ್ನು ಕನಿಷ್ಠ 50-60 ಲಕ್ಷದಿಂದ 1 ಕೋಟಿ ರೂ.ವರೆಗೆ ಸರಿದೂಗಿಸಲು ಆರ್ಥಿಕ ಬೆಂಬಲ ನೀಡಲಾಗುವುದು.

* ಗ್ರಾಮ ಪಂಚಾಯಿತಿಗಳು ನಿರ್ವಹಿಸುವ ಇ-ಸ್ವತ್ತು ಮತ್ತು ಪಂಚತಂತ್ರ-2 ತಂತ್ರಾಂಶಗಳ ಅನುಷ್ಠಾನದಲ್ಲೂ ಸಾಕಷ್ಟು ನಾಗರಿಕರಿಗೆ ತೊಂದರೆ ಉಂಟಾಗುತ್ತಿದ್ದು, ಈ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಲಾಗುವುದು.

* ಕಂದಾಯ ಇಲಾಖೆ ಕಾವೇರಿ-2 ತಂತ್ರಾಂಶ ಮತ್ತುಇ-ಮೋಜಣಿ ತಂತ್ರಾಂಶದೊಂದಿಗೆ ಇ-ಸ್ವತ್ತು ತಂತ್ರಾಂಶಗಳು ಒಂದಕ್ಕೊಂದು ಸ್ಪರ್ಧಾತ್ಮಕವಾಗಿ ಇಲ್ಲದೆ ಹಲವಾರು ನ್ಯೂನ್ಯತೆಗಳಿಗೆ ಮತ್ತು ಸಮಸ್ಯೆಗಳಿಗೆ ಎಡೆಮಾಡಿ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಈ ತಂತ್ರಾಂಶಗಳಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ನಾಗರೀಕರಿಗೆ ಉತ್ತಮ ಸೇವೆ ಒದಗಿಸಲು ಅನುವು ಮಾಡಿಕೊಡಲಾಗುವುದು.

* ಮುಖ್ಯಮಂತ್ರಿ ಗ್ರಾಮವಿಕಾಸ ಯೋಜನೆಯನ್ನು ಪುನರ್‌ ಪ್ರಾರಂಭಿಸಿ ಪ್ರತಿ ಗ್ರಾಮಕ್ಕೆ 1 ಕೋಟಿ ರೂ. ಅನುದಾನದಂತೆ 1 ಸಾವಿರ ಗ್ರಾಮಗಳನ್ನು ಒಂದು ಸಾವಿರ ಕೋಟಿ ರೂ. ಅಂದಾಜು ಮೊತ್ತದಲ್ಲಿ ಮುಂದಿನ 3 ವರ್ಷಗಳಲ್ಲಿ ಕೈಗೊಳ್ಳಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+