ಬಿಜೆಪಿಗೆ ಅಮಾವಾಸ್ಯೆ ಕರಿ ಛಾಯೆ, ಕಾಂಗ್ರೆಸ್‌ಗೆ ದೀಪಾವಳಿ
ಬೆಂಗಳೂರು, ನವೆಂಬರ್ 6: ರಾಜ್ಯದ ಐದು ಕ್ಷೇತ್ರಗಳ ಉಪ ಚುನಾವಣೆ ಕೊನೆಗೊಂಡಿದ್ದು ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದಲ್ಲಿ ದೀಪಾವಳಿ ಹೊಸ ಭರವಸೆಯನ್ನು ಹುಟ್ಟಿಸಿದ್ದು, ವಿರೋಧ ಪಕ್ಷ ಬಿಜೆಪಿಯಲ್ಲಿ ಭಾರಿ ನಿರಾಸೆ ಹಾಗೂ ಸೋಲಿನ ದಟ್ಟ ಕರಿ ಛಾಯೆ ಆವರಿಸುವಂತೆ ಮಾಡಿದೆ.
ಐದು ಕ್ಷೇತ್ರಗಳ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆ ಮೈತ್ರಿ ಕೂಟದ ನಾಯಕರು ಗೆಲುವಿಗೆ ನಾನಾ ವಿಶ್ಲೇಷಣೆಗಳನ್ನು ಮಾಡಿದ್ದರೆ ಆತ್ಮಾವಲೋಕನದ ಮಾತುಗಳನ್ನಾಡುತ್ತಿದ್ದಾರೆ. ಮಾತ್ರವಲ್ಲ ಮೈತ್ರಿಕೂಟ ಸರ್ಕಾರ ಅಧಿಕಾರ ದುರುಪಯೋಗ ಹಾಗೂ ಹಣದ ಆಮಿಷಗಳನ್ನು ಒಡ್ಡುವ ಮೂಲಕ ಗೆಲುವು ಸಾಧಿಸಿದೆ ಎಂದು ಕೆಸರೆರೆಚುವ ಪ್ರಯತ್ನ ಮಾಡಿದ್ದಾರೆ.
ಈ ಎಲ್ಲಾ ಸೋಲು ಗೆಲುವಿನ ವಿಶ್ಲೇಷಣೆ ಸಂತೋಷ, ವಿಷಾದದ ನೋವುಗಳನ್ನಾಡಿರುವ ನಾಯಕರು ಯಾವ ಕಾರಣಕ್ಕೆ ಸೋಲಾಯಿತು, ಯಾವ ಕಾರಣಕ್ಕೆ ಗೆಲುವು ತಮ್ಮದಾಯಿತು ಎನ್ನುವುದನ್ನು ನಾನಾ ರೀತಿ ವ್ಯಾಖ್ಯಾನಿಸಿದ್ದಾರೆ. ನಾಯಕರ ಹೇಳಿಕೆಗಳು ಈ ರೀತಿ ಇವೆ.

ಭಾರಿ ಅಂತರದಿಂದ ಜಯಶಾಲಿಯಾಗಿ ಹೊರಹೊಮ್ಮಿದೆ
ಲೋಕಸಭಾ ಉಪ ಚುನಾವಣೆಯಲ್ಲಿ ಭಾರಿ ಅಂತರದಿಂದ ಜಯಶಾಲಿಗಳಾಗಿ ಹೊರಹೊಮ್ಮಿರುವ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಗಳಾದ ಎಲ್.ಆರ್.. ಶಿವರಾಮೇಗೌಡ ಮತ್ತು ವಿಎಸ್ ಉಗ್ರಪ್ಪ ಹಾಗೂ ವಿಧಾನಸಭಾ ಉಪಚುನಾವಣೆಯಲ್ಲಿ ವಿಯದುಂಧುಬಿ ಮೊಳಗಿಸಿರುವ ಅನಿತಾ ಕುಮಾರಸ್ವಾಮಿ ಮತ್ತು ಆನಂದ ಜಮಖಂಡಿ ಅವರಿಗೆ ಅಭಿನಂದನೆಗಳು ಎಂದು ಸಚಿವ ಆರ್. ದೇಶಪಾಂಡೆ ಹೇಳಿದ್ದಾರೆ.

ಶ್ರೀರಾಮುಲುಗೆ ಧನ್ಯವಾದ ಎಂದ ಡಿಕೆ ಶಿವಕುಮಾರ್
ಚುನಾವಣೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಬಳ್ಳಾರಿಯಲ್ಲಿ ಯಾವುದೇ ಸಂಘರ್ಷ ಇಲ್ಲದೆ ಶಾಂತಿಯುತ ಚುನಾವಣೆ ನಡೆಯಲು ಸಹಕರಿಸಿದ ಶ್ರೀರಾಮುಲು ಅಣ್ಣ ಅವರಿಗೆ ಅಭಿನಂದನೆ ಹೇಳುವುದಾಗಿ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಉಪಚುನಾವಣೆ ಫಲಿತಾಂಶದ ಬಳಿಕ ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ನಾನು ನಿಭಾಯಿಸಿದ್ದೇನೆ ಎಂದು ಹೇಳಿದರು.
|
ಬಿಜೆಪಿಗೆ ಸೋಲಿನ ಸರಮಾಲೆ ಆರಂಭ
ಭಾರತೀಯ ಜನತಾ ಪಕ್ಷಕ್ಕೆ ಸೋಲಿನ ಸರಮಾಲೆ ಆರಂಭವಾಗಿದೆ. ಇದು 2019ರ ಲೋಕಸಭಾ ಚುನಾವಣೆಯಲ್ಲೂ ಮುಂದುವರೆಯಲಿದೆ ರಾಜ್ಯದ ಮತದಾರರು ನಿರ್ಧರಿಸಿ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಜನರು ಕಾಂಗ್ರೆಸ್ ಮೇಲೆ ಇಟ್ಟಿರುವ ಪ್ರೀತಿ ಸಾಬೀತಾಗಿದೆ
ಕಾಂಗ್ರೆಸ್ ಮೇಲೆ ಜನರು ಇಟ್ಟಿರುವ ನಂಬಿಕೆ ಹಾಗೂ ವಿಶ್ವಾಸ ಸಾಬೀತಾಗಿದೆ, ಹಾಗಾಗಿ ಬಳ್ಳಾರಿಯಲ್ಲಿ ಉಗ್ರಪ್ಪ ಗೆಲ್ಲಲು ಸಾಧ್ಯವಾಗಿದೆ.ಹಾಗೆಯೇ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ ಎಂದು ಡಿಕೆ ಸುರೇಶ್ ಹೇಳಿದ್ದಾರೆ.












Click it and Unblock the Notifications