ಜೆಡಿಎಸ್ ತಾತ್ಕಾಲಿಕ ಕಚೇರಿ ಗುರುವಾರ ಉದ್ಘಾಟನೆ
ಬೆಂಗಳೂರು, ಮಾ. 25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜೆಡಿಎಸ್ ಕಚೇರಿಗೆ ನೀಡಿರುವ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದ್ದು, ಮಾ.26ರ ಗುರುವಾರ ಇದರ ಉದ್ಘಾಟನೆ ನಡೆಯಲಿದೆ ಎಂದು ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಮಂಗಳವಾರ ಸಂಜೆ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ನೂತನ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ದೇವೇಗೌಡರು, ಗುರುವಾರ ಬೆಳಗ್ಗೆ 9 ಗಂಟೆಗೆ ತಾತ್ಕಾಲಿಕವಾಗಿ ನಿರ್ಮಿಸಿರುವ ಶೆಡ್‌ನಲ್ಲಿ ಕಚೇರಿ ಉದ್ಘಾಟನೆಗೊಳ್ಳಲಿದ್ದು, ಶಾಶ್ವತ ಕಟ್ಟಡ ನಿರ್ಮಾಣಕ್ಕೂ ಚಾಲನೆ ನೀಡಲಾಗುತ್ತದೆ ಎಂದು ದೇವೇಗೌಡರು ತಿಳಿಸಿದರು. [ನೂತನ ಕಚೇರಿಗೆ ಗೌಡರಿಂದ ಶಂಕುಸ್ಥಾಪನೆ]

ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲಾ ಶಾಸಕರು, ಸಂಸದರು, ಮುಖಂಡರು ಪಾಲ್ಗೊಳ್ಳಲಿದ್ದಾರೆ. ಶಾಶ್ವತ ಕಟ್ಟಡ ನಿರ್ಮಾಣಕ್ಕಾಗಿ ಹುಂಡಿ ಇಟ್ಟು ನೆರವು ಸಂಗ್ರಹಿಸಲಾಗುವುದು. ಹಲವಾರು ಮಂದಿ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದು ಗೌಡರು ಹೇಳಿದರು. [ರೇಸ್ ಕೋರ್ಸ್ ರಸ್ತೆ ಕಚೇರಿ ಕಳೆದುಕೊಂಡ ಜೆಡಿಎಸ್]

ತಪ್ಪು ಮಾಡದಿದ್ದರೆ ಅವರಿಗೆ ಶಿಕ್ಷೆಯಾಗಲಿ : ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿದ್ದ ಹಳೆ ಜೆಡಿಎಸ್ ಕಚೇರಿಯನ್ನು ವಶಕ್ಕೆ ಪಡೆದಿರುವ ಕಾಂಗ್ರೆಸ್ ಪಕ್ಷ ಅಲ್ಲಿ ಹೋಮ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, ಅಲ್ಲಿ ನಾನು ವಾಮಾಚಾರ ಮಾಡಿಸಿದ್ದೆ ಎಂಬ ಆರೋಪ ಮಾಡಿದ್ದರು. ನಾನು ದೇವರನ್ನು ನಂಬುವವನು ಎಂದರು. [ಕಾಂಗ್ರೆಸ್ ಗೆ ಕಚೇರಿ ಬಿಗ ಕೊಟ್ಟ ಜೆಡಿಎಸ್]

ರೇಸ್‌ಕೋರ್ಸ್ ರಸ್ತೆಯಲ್ಲಿನ ಕಚೇರಿಯಲ್ಲಿ ಕಾಂಗ್ರೆಸ್‌ನವರು ಈಗ ಹೋಮ ಮಾಡಿಸುತ್ತಿದ್ದಾರೆ. 'ನಾನು ತಪ್ಪು ಮಾಡಿದ್ದರೆ ಶಿಕ್ಷೆಯಾಗಿ ಅವರಿಗೆ ಒಳ್ಳೆಯದಾಗಲಿ, ನಾನು ತಪ್ಪು ಮಾಡಿರದಿದ್ದರೆ ಅವರಿಗೆ ಶಿಕ್ಷೆಯಾಗಲಿ' ಎಂದು ಗೌಡರು ಹೇಳಿದರು.













Click it and Unblock the Notifications