2018 ರ ಚುನಾವಣೆಯಲ್ಲಿ ನಿಖರ ಅಂಕಿಅಂಶ ನೀಡಿದ್ದ ಜನ್ ಕಿ ಬಾತ್: ಈ ಬಾರಿಯೂ ಸಮೀಕ್ಷೆ ನಿಜವಾಗಲಿದೆಯೇ?

ಬೆಂಗಳೂರು, ಏಪ್ರಿಲ್. 15: ಚುನಾವಣೆಗಳು ಘೋಷಣೆಯಾಗುವ ಮೊದಲೆ ಹಲವು ಸಂಸ್ಥೆಗಳು, ಮಾಧ್ಯಮಗಳು ತಮ್ಮದೆ ಆದ ಸಮೀಕ್ಷೆಗಳನ್ನು ಬಿಡುಗಡೆ ಮಾಡುತ್ತವೆ. ಯಾವ ಕ್ಷೇತ್ರಗಳಲ್ಲಿ ಯಾವ ಪಕ್ಷಕ್ಕೆ ಅಧಿಕ ಸ್ಥಾನ ಸಿಗಲಿದೆ ಎಂಬುದರಿಂದ ಹಿಡಿದು, ಸರ್ಕಾರ ಯಾರದು, ಯಾವ ಪಕ್ಷದ ಅಭ್ಯರ್ಥಿ ಜಯಗಳಿಸಬಹುದು ಎಂಬ ಬಗ್ಗೆ ಭವಿಷ್ಯ ನುಡಿಯುತ್ತವೆ.

ಹೀಗೆ ಸಮೀಕ್ಷೆ ನಡೆಸಿದ ಹಲವು ಸಂಸ್ಥೆಗಳು ಮತದಾರರ ಮನದಾಳಕ್ಕೆ ತಲುಪಿರುತ್ತವೆ. ಅಂತಹದ್ದೆ ಒಂದು ಸಮೀಕ್ಷೆ ಜನ್ ಕಿ ಬಾತ್. ಕಳೆದ 2018 ರ ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಜನ್‌ ಕಿ ಬಾತ್ ಬಿಡುಗಡೆ ಮಾಡಿದ್ದ ಅಭಿಪ್ರಾಯ ಸಂಗ್ರಹದ ಅಂಕಿ ಅಂಶಗಳು ಫಲಿತಾಂಶಕ್ಕೆ ಭಾರೀ ಹತ್ತಿರಕ್ಕೆ ಬಂದಿದ್ದವು. ಫಲಿತಾಂಶವನ್ನು ಹೆಚ್ಚು ನಿಖರಾವಾಗಿ ಈ ಸಮೀಕ್ಷೆ ಹೊರಗೆಡವಿತ್ತು.

Jan Ki Baat 2018 poll survey: Actual result Vs survey prediction

ಕಳೆದ ಬಾರಿ ಸುವರ್ಣ ನ್ಯೂಸ್ ಸುದ್ದಿ ವಾಹಿನಿ ಜನ್ ಕಿ ಬಾತ್ ಸಮೀಕ್ಷೆ ಹೊರಹಾಕಿತ್ತು. ಇದರಲ್ಲಿ 1.2 ಲಕ್ಷ ಮಂದಿ ಭಾಗವಹಿಸಿದ್ದರು. ತಳಮಟ್ಟದಿಂದಲೂ ನಡೆಸಲಾಗಿದ್ದ ಈ ಸಮೀಕ್ಷೆಯಲ್ಲಿ 2013 ರ ಚುನಾವಣೆಗೆ ವಿರುದ್ಧವಾಗಿ ಬಿಜೆಪಿ ಕಡೆ ಭಾರೀ ಸಂಖ್ಯೆಯಲ್ಲಿ ಒಲವು ಹೆಚ್ಚಾಗಿರುವುದನ್ನು ಬಹಿರಂಗಪಡಿಸಿತ್ತು.

ಆ ಸಮಯದಲ್ಲಿ 2013 ರಲ್ಲಿ, ಕಾಂಗ್ರೆಸ್ 80 ರಿಂದ 122 ಸ್ಥಾನಗಳಿಗೆ ಜಿಗಿಯುವ ಮೂಲಕ ಅಧಿಕಾರಕ್ಕೆ ಬಂದಿತ್ತು. ಆದರೆ ಬಿಜೆಪಿ 110 ಸ್ಥಾನಗಳಿಂದ 40 ಸ್ಥಾನಕ್ಕೆ ಕುಸಿದಿತ್ತು. ಪ್ರಾದೇಶಿಕ ಪಕ್ಷ ಜೆಡಿಎಸ್ 2008 ರ 28 ಸ್ಥಾನಗಳಿಗೆ ಹೋಲಿಸಿದರೆ 40 ಸ್ಥಾನಗಳನ್ನು ಗಳಿಸಿತ್ತು. ಇದಾದ ಮೇಲೆ 2018ರಲ್ಲಿ ಜನ್‌ಕಿ ಬಾತ್‌ ಸಮೀಕ್ಷೆ ಭಾರಿ ಬದಲಾವಣೆ ಸೂಚಿಸಿತ್ತು.

2018ರ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಂದಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವ್ಯಾಪಕ ಪ್ರಚಾರ ನಡೆಸುತ್ತಿದ್ದರು. 224 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿಯು 102-108 ಸ್ಥಾನಗಳನ್ನು ಗೆಲ್ಲಬಹುದು ಎಂದು ಜನ್ ಕಿ ಬಾತ್ ಭವಿಷ್ಯ ನುಡಿದಿತ್ತು. ಇದರಂತೆಯೇ ಬಿಜೆಪಿ 104 ಸ್ಥಾನಗಳನ್ನು ಪಡೆದು ಭರ್ಜರಿ ಜಯಗಳಿಸಿತ್ತು.

Jan Ki Baat 2018 poll survey: Actual result Vs survey prediction

224 ಸ್ಥಾನಗಳ ವಿಧಾನಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ 72 ರಿಂದ 74 ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿತ್ತು. ಹಾಗೆಯೇ ಕಾಂಗ್ರೆಸ್ 80 ಸ್ಥಾನಗಳನ್ನು ಗೆದ್ದು, ತೀವ್ರ ಹಿನ್ನೆಡೆ ಅನುಭವಿಸಿತ್ತು. ಆ ಬಳಿಕ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು.

2018ರಲ್ಲಿ ಜನ್‌ಕಿ ಬಾತ್‌ ಸಮೀಕ್ಷೆಯಲ್ಲಿ ಜೆಡಿಎಸ್ 42 ರಿಂದ 44 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಲಾಗಿತ್ತು. ಅದೇ ರೀತಿ ಪಕ್ಷವು 37 ಸ್ಥಾನಗಳಲ್ಲಿ ಜಯ ಗಳಿಸಿ, ಕಿಂಗ್ ಮೇಕರ್ ಆಗಿ ಸರ್ಕಾರ ರಚನೆಗೆ ತನ್ನ ಬೆಂಬಲ ಸೂಚಿಸಿತ್ತು.

2018ರಲ್ಲಿ ಜನ್‌ಕಿ ಬಾತ್‌ ಸಮೀಕ್ಷೆ ಮತ ಹಂಚಿಕೆಯ ನಿಯಮಗಳ ಪ್ರಕಾರ ಬಿಜೆಪಿ 40% ಮತಗಳನ್ನು ಗಳಿಸಬಹುದು ಮತ್ತು ಕಾಂಗ್ರೆಸ್ 38% ಮತಗಳನ್ನು ಪಡೆಯಬಹುದು ಮತ್ತು ಜೆಡಿಎಸ್ 20% ಮತಗಳನ್ನು ಪಡೆಯಬಹುದು ಎಂದಿತ್ತು.

ಈ ಬಾರಿಯೂ ಶುಕ್ರವಾರ ಜನ್ ಕಿ ಬಾತ್ ನಡೆಸಿದ ಸಮೀಕ್ಷೆ ವರದಿಯನ್ನು ಸುವರ್ಣ ನ್ಯೂಸ್ ಬಿಡುಗಡೆ ಮಾಡಿದೆ. ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 98 ರಿಂದ 109 ಕ್ಷೇತ್ರಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಲಿದೆ. ಕಾಂಗ್ರೆಸ್ 89 ರಿಂದ 97 ಸ್ಥಾನಗಳನ್ನು ಗೆಲ್ಲಲಿದೆ. ಜೆಡಿಎಸ್‌ 25 ರಿಂದ 29 ಮತ್ತು ಇತರರು 0-1 ಸ್ಥಾನದಲ್ಲಿ ಜಯಗಳಿಸಲಿದೆ. ಒಟ್ಟಾರೆ ಜನ್ ಕಿ ಬಾತ್ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+