ಶ್ರೀರಾಮ ಮಂದಿರದ ಬಗ್ಗೆ ಜಗದೀಶ್ ಶೆಟ್ಟರ್ ಹೀಗೆ ಹೇಳಿದ್ರು!
2023ರ ಕರ್ನಾಟಕ ವಿಧಾನಸಭೆ ಚುನಾವಣೆ, ಸಂಚಲನ ಸೃಷ್ಟಿ ಮಾಡಿತ್ತು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದು ಬಿರುಗಾಳಿ ಎಬ್ಬಿಸಿತ್ತು. ಸಾಲು ಸಾಲು ವಿವಾದದ ನಡುವೆ, ಬಿಜೆಪಿ ಆಡಳಿತ ವಿರೋಧಿ ಅಲೆಗೆ ಸಿಲುಕಿ ಸೋಲು ಕಂಡಿತ್ತು. ಈಗ ಅದೇ ಶೆಟ್ಟರ್ ಅವರು ಬಿಜೆಪಿ ನಾಯಕರ ಬಗ್ಗೆ ಮಾತನಾಡಿ, ಶ್ರೀರಾಮ ಮಂದಿರದ ಕುರಿತು ಹೇಳಿಕೆ ನೀಡಿದ್ದಾರೆ.
ಹೌದು, ಶ್ರೀರಾಮ ಮಂದಿರ ಉದ್ಘಾಟನೆ ಬಗ್ಗೆ ಇಂದು ಬಿಜೆಪಿ ಮಾಜಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಗೇ ಬಿಜೆಪಿ ಬಗ್ಗೆ ಇದೇ ವೇಳೆ ವಾಗ್ದಾಳಿ ನಡೆಸಿರುವ ಅವರು, ಬಿಜೆಪಿ ಕೇಂದ್ರ ನಾಯಕರ ವಿರುದ್ಧ ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದೇನು? ಆ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ, ಮುಂದೆ ಓದಿ.

ಶ್ರೀರಾಮ ಮಂದಿರವನ್ನು ಬಿಜೆಪಿ ದಾಳ..
ಅಂದಹಾಗೆ ಇದೀಗ ಜಗದೀಶ್ ಶೆಟ್ಟರ್ ಅವರು ಶ್ರೀರಾಮ ಮಂದಿರದ ಬಗ್ಗೆ ನೀಡಿರುವ ಹೇಳಿಕೆ ಸಂಚಲನ ಸೃಷ್ಟಿ ಮಾಡಿದೆ. ಈ ಕುರಿತಾಗಿ ಮಾತನಾಡಿದ ಅವರು, ಶ್ರೀರಾಮ ಮಂದಿರವನ್ನ ಬಿಜೆಪಿ ಈಗ ದಾಳವಾಗಿ ಮಾಡಿಕೊಳ್ಳುತ್ತಿದ್ದು. ರಾಜಕಾರಣದಲ್ಲಿ ಧರ್ಮವು ಇರಬೇಕೆ ಹೊರತು ಧರ್ಮದಲ್ಲಿ ರಾಜಕಾರಣ ಇರಬಾರ್ದು ಆದ್ರೆ ಬಿಜೆಪಿ ಈಗ ಧರ್ಮದಲ್ಲಿ ರಾಜಕಾರಣ ಬೆರೆಸೋ ಕೆಲಸ ಮಾಡ್ತಿದೆ. ಕಾಂಗ್ರೆಸ್‌ಗೆ ಆಹ್ವಾನ ನೀಡಿರುವುದು ದೇವಸ್ಥಾನ ಟ್ರಸ್ಟ್ ಹೊರತು, ಬಿಜೆಪಿ ಪಕ್ಷ ಅಲ್ಲ ಎಂದಿದ್ದಾರೆ ಜಗದೀಶ್ ಶೆಟ್ಟರ್.
ಬಿಜೆಪಿಗೂ ರಾಮ ಮಂದಿರಕ್ಕೂ ಏನು ಸಂಬಂಧ?
ಹಾಗೇ ಕಾಂಗ್ರೆಸ್ ಆಹ್ವಾನ ನಿರಾಕರಿಸಿರುವ ಕುರಿತು ಟ್ರಸ್ಟ್ ಬೇಕಿದ್ದರೆ ಮಾತನಾಡಲಿ ಅಂತ ಜಗದೀಶ್ ಶೆಟ್ಟರ್ ಹೇಳಿದ್ರು. ಅದನ್ನು ಬಿಟ್ಟು ಬಿಜೆಪಿ ಅವರು ಯಾಕೆ ಮಾತಾಡ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ರು. ಅಲ್ಲದೆ ಬಿಜೆಪಿಗೂ ಶ್ರೀರಾಮ ಮಂದಿರಕ್ಕೂ ಏನು ಸಂಬಂಧ? ಶ್ರೀರಾಮ ಮಂದಿರ ವಿಚಾರ ರಾಜಕಾರಣ ಆಗಲೇಬಾರದು. ನನ್ನನ್ನು ಸೇರಿ ರಾಮಮಂದಿರ ಆಗಬೇಕು ಎಂಬುದು ನೂರಾರು ಕೋಟಿ ಜನರ ಅಭಿಲಾಷೆ ಎಂದರು ಜಗದೀಶ್ ಶೆಟ್ಟರ್.

ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿಲ್ಲ!
ಸೋನಿಯಾ ಗಾಂಧಿ, ಖರ್ಗೆ ಅವರಿಗೆ ಟ್ರಸ್ಟ್ ಅವರು ಆಹ್ವಾನ ಪತ್ರಿಕೆ ಕೊಟ್ಟಿದ್ದಾರೆ. ಆದರೆ ಸಿಎಂ & ಡಿಸಿಎಂಗೆ ಅಹ್ವಾನ ಕೊಟ್ಟಿಲ್ಲ. ಅದು ಟೆಸ್ಟ್ ಅವರಿಗೆ ಬಿಟ್ಟ ವಿಚಾರ. ಕಾಂಗ್ರೆಸ್ ನಾಯಕರು ನಾನು ಹೋಗುವುದಿಲ್ಲ ಅಂದಿದ್ದಾರೆ ಹೊರತು ಬಹಿಷ್ಕಾರ ಅಂದಿಲ್ಲ. ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರಿಗೆ ಹೋಗಬೇಡಿ ಎಂದಿಲ್ಲ, ಅವರು ಹೋಗಲ್ಲ ಅಂದಾಗ ನೀವು ಬಲವಂತವಾಗಿ ಯಾಕೆ ಕರ್ಕೊಂಡು ಹೋಗ್ತೀರಿ? ಶ್ರೀರಾಮ ಮಂದಿರ ಸ್ಥಾಪನೆ ಮುಖ್ಯವೋ ಅಥವಾ ಕಾಂಗ್ರೆಸ್ ಟೀಕೆ ಮಾಡುವ ಗುರಿ ಬಿಜೆಪಿ ಅವರಿಗೆ ಇದೆಯೋ? ಎಂದು ಈ ವೇಳೆ ಪ್ರಶ್ನೆ ಮಾಡಿದ್ರು.
ಚುನಾವಣೆಗೆ ಬಳಕೆ ಆಗುತ್ತಿದೆಯಾ?
ರಾಮ ಮಂದಿರ ಉದ್ಘಾಟನೆಗೆ ಬರದೇ ಹೋದ್ರೆ ಹಿಂದೂ ವಿರೋಧಿ ಅನ್ನೋದು ಸರಿಯಲ್ಲ ಎಂದರು ಜಗದೀಶ್ ಶೆಟ್ಟರ್. ಲೋಕಸಭಾ ಚುನಾವಣೆ ಹಿನ್ನೆಲೆ ಶ್ರೀರಾಮ ಮಂದಿರವನ್ನ ಉಪಯೋಗಿಸಿಕೊಳ್ತಾ ಇದ್ದಾರಾ? ಕಾಂಗ್ರೆಸ್‌ನಲ್ಲಿ ಇರುವಂಥ ಎಷ್ಟೋ ನಾಯಕರು ರಾಮ ಭಕ್ತರೆ ಆಗಿದ್ದಾರೆ. ಅಯೋಧ್ಯೆ ವಿಚಾರ ಶತಮಾನಗಳ ಕಾಲ ಇದ್ದು, ಆದ್ರೆ ಬಿಜೆಪಿ ಈ ಬಗ್ಗೆ ರಾಜಕೀಯ ಮಾಡ್ತಿದೆ ಅಂದ್ರು ಜಗದೀಶ್ ಶೆಟ್ಟರ್. ಧರ್ಮ ಮುಂದೆ ಇಟ್ಕೊಂಡು ಹೀಗೆ ರಾಜಕಾರಣ ಮಾಡಿದರೆ ಬಹಳ ದಿನ ನಡೆಯಲ್ಲ ಎಂದರು.
ಒಟ್ನಲ್ಲಿ ಬಿಜೆಪಿ ಹಾಗೂ ಜಗದೀಶ್ ಶೆಟ್ಟರ್ ಅವರ ನಡುವೆ ಮತ್ತೊಮ್ಮೆ ವಾರ್ ಶುರು ಆದಂತೆ ಕಾಣುತ್ತಿದೆ. ಅದರಲ್ಲೂ ಬಿಜೆಪಿ ನಾಯಕರಿಗೆ, ಶ್ರೀರಾಮ ಮಂದಿರದ ವಿಚಾರ ಮುಂದಿಟ್ಟುಕೊಂಡು ಜಗದೀಶ್ ಶೆಟ್ಟರ್ ಈಗ ಭರ್ಜರಿ ತಿರುಗೇಟು ನೀಡಿದ್ದಾರೆ. ಆದರೆ ಶೆಟ್ಟರ್ ಹೇಳಿಕೆಗೆ ಬಿಜೆಪಿ ನಾಯಕರು ಯಾವ ರೀತಿ ಪ್ರತಿಕ್ರಿಯೆ ನೀಡ್ತಾರೆ? ಅನ್ನೊದನ್ನ ಕಾದು ನೋಡಬೇಕಿದೆ.












Click it and Unblock the Notifications