ಜಗದೀಶ್ ಶೆಟ್ಟರ್ ಲೋಕಸಭೆ ಚುನಾವಣೆ ಹೊತ್ತಿಗೆ ಬಿಜೆಪಿಗೆ ವಾಪಸ್? ಕಾಂಗ್ರೆಸ್ ಸೇರುವವರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೇಳಿದ್ದು ಏನು?
ಲೋಕಸಭೆ ಚುನಾವಣೆ 2024ಕ್ಕೆ ಮೊದಲು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಡೆ ತೀವ್ರ ಕುತೂಹಲ ಕೆರಳಿಸಿದೆ. ಅದ್ರಲ್ಲೂ 2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಜಗದೀಶ್ ಶೆಟ್ಟರ್ ಈಗ ವಾಪಸ್ ಬಿಜೆಪಿಗೆ ಹೋಗ್ತಾರಾ? ಎನ್ನುವ ಪ್ರಶ್ನೆ ಬಲು ಜೋರಾಗಿದೆ. ಹಾಗಾದ್ರೆ ಇದೀಗ ಜಗದೀಶ್ ಶೆಟ್ಟರ್ ಈ ಬಗ್ಗೆ ಹೇಳಿರುವುದು ಏನು? ಹಾಗೇ ಕಾಂಗ್ರೆಸ್ ಸೇರುವವರ ಬಗ್ಗೆ ಜಗದೀಶ್ ಶೆಟ್ಟರ್ ರಿಯಾಕ್ಷನ್ ಏನು? ಮುಂದೆ ಓದಿ.
2023ರ ಕರ್ನಾಟಕ ವಿಧಾನಸಭೆ ಚುನಾವಣೆ ಸಂಚಲನ ಸೃಷ್ಟಿ ಮಾಡಿತ್ತು ಒಂದ್ಕಡೆ ಮಾಜಿ ಸಿಎಂ ಯಡಿಯೂರಪ್ಪ ಅವ್ರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಿದ ಬಳಿಕ, ನಡೆದ ಎಲೆಕ್ಷನ್ ಇದಾಗಿತ್ತು. ಇನ್ನೊಂದ್ಕಡೆ ಮತ್ತೊಬ್ಬರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಕನಿಷ್ಠ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದು. ಹೀಗೆ ಸಾಲು ಸಾಲು ವಿವಾದದ ನಡುವೆ ಬಿಜೆಪಿ ಆಡಳಿತ ವಿರೋಧಿ ಅಲೆಗೆ ಸಿಲುಕಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಆಗಾಗ ಶೆಟ್ಟರ್ ಮತ್ತೆ ಬಿಜೆಪಿ ಸೇರ್ತಾರೆ ಅನ್ನೋ ಗಾಳಿ ಸುದ್ದಿ ಸಂಚಲನ ಸೃಷ್ಟಿಸುತ್ತಿದೆ.

ಜಗದೀಶ್ ಶೆಟ್ಟರ್ ಸ್ಫೋಟಕ ಹೇಳಿಕೆ!
ಹೌದು 2024ರ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವ ಬೆನ್ನಲ್ಲೇ ಜಗದೀಶ್ ಶೆಟ್ಟರ್, ಇದೀಗ ಕಾಂಗ್ರೆಸ್ ಸೇರ್ಪಡೆ ಆಗುವವರ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಶಂಕರ ಪಾಟೀಲ ಮುನಿಯನಕೊಪ್ಪ ಅವರು, ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಬರುತ್ತಾರೆ ಅನ್ನೋ ಬಗ್ಗೆ ಕೂಡ ಸ್ಪಷ್ಟನೆ ನೀಡಿದ್ದಾರೆ. ಇದೇ ಹೊತ್ತಲ್ಲಿ ಆಪರೇಷನ್ ಕಾಂಗ್ರೆಸ್ ಬಗ್ಗೆಯೂ ಜಗದೀಶ್ ಶೆಟ್ಟರ್ ಮಾತನಾಡಿದ್ದಾರೆ.
ನಾನು ಯಾವತ್ತೂ ಆಪರೇಷನ್ ಮಾಡಿಲ್ಲ!
ಹೌದು, ಇದೀಗ ಎದ್ದಿರುವ ಆಪರೇಷನ್ ಕಾಂಗ್ರೆಸ್ ಸುದ್ದಿಗೆ ಖಡಕ್ ಉತ್ತರ ನಿಡಿದ್ದಾರೆ ಜಗದೀಶ್ ಶೆಟ್ಟರ್. ನಾನು ಯಾವತ್ತೂ ಆಪರೇಷನ್ ಮಾಡಿಲ್ಲ, ಅವರಾಗಿಯೇ ಕಾಂಗ್ರೆಸ್ ಸೇರ್ತೀನಿ ಅಂದವರಿಗಷ್ಟೇ ಸ್ವಾಗತ ಕೋರಿದ್ದೇನೆ. ಯಾವುದೇ ಬಿಜೆಪಿ ನಾಯಕರ ಕಾಂಗ್ರೆಸ್ ತರುವಂತಹ ಕೆಲಸ ನಾನು ಮಾಡಿಲ್ಲ. ತಾವಾಗಿ ಬಂದವರನ್ನು ಸಿಎಂ & ಡಿಸಿಎಂ ಜೊತೆಗೆ ಭೇಟಿ ಮಾಡಿಸಿದ್ದೇನೆ. ಆಪರೇಷನ್ ಅಂತಾರಲ್ಲ ಆ ರೀತಿ ನಾನು ಎಂದೆಂದಿಗೂ ಮಾಡಿಲ್ಲ, ಈಗಲೂ ಮಾಡಲ್ಲ ಎಂದು ಖಡಕ್ ಆಗಿ ಉತ್ತರ ನೀಡಿದ್ದಾರೆ ಜಗದೀಶ್ ಶೆಟ್ಟರ್.
ಹಾಗೇ ಈ ವೇಳೆ ಶಂಕರ ಪಾಟೀಲ ಮುನಿಯನಕೊಪ್ಪ ಅವರ ಬಗ್ಗೆಯೂ ಮಾತನಾಡಿದ್ರು. ಶಂಕರ ಪಾಟೀಲ ಮುನಿಯನಕೊಪ್ಪ ಅವರ ಮುಂದಿನ ರಾಜಕೀಯ ನಿರ್ಧಾರ ಬಗ್ಗೆ ಅವರೆ ಹೇಳಬೇಕಿದೆ. ಶಂಕರ ಪಾಟೀಲ ಅವರ ಜೊತೆ ನಾನು ಈವರೆಗೆ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿಲ್ಲ. ಅದರ ಬಗ್ಗೆ ನನಗೆ ಏನು ಗೊತ್ತಿಲ್ಲ ಅಂತಾ ಈ ವೇಳೆ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದರು.
ಬಿಜೆಪಿಗೂ ರಾಮ ಮಂದಿರಕ್ಕೂ ಏನು ಸಂಬಂಧ?
ಹಾಗೇ ಕಾಂಗ್ರೆಸ್ ಆಹ್ವಾನ ನಿರಾಕರಿಸಿರುವ ಕುರಿತು ಟ್ರಸ್ಟ್ ಬೇಕಿದ್ದರೆ ಮಾತನಾಡಲಿ ಅಂತ ಜಗದೀಶ್ ಶೆಟ್ಟರ್ ಹೇಳಿದ್ರು. ಅದನ್ನು ಬಿಟ್ಟು ಬಿಜೆಪಿ ಅವರು ಯಾಕೆ ಮಾತಾಡ್ತಿದ್ದಾರೆ? ಎಂದು ಪ್ರಶ್ನೆ ಮಾಡಿದ್ರು. ಅಲ್ಲದೆ ಬಿಜೆಪಿಗೂ ಶ್ರೀರಾಮ ಮಂದಿರಕ್ಕೂ ಏನು ಸಂಬಂಧ? ಶ್ರೀರಾಮ ಮಂದಿರ ವಿಚಾರ ರಾಜಕಾರಣ ಆಗಲೇಬಾರದು. ನನ್ನನ್ನು ಸೇರಿ ರಾಮಮಂದಿರ ಆಗಬೇಕು ಎಂಬುದು ನೂರಾರು ಕೋಟಿ ಜನರ ಅಭಿಲಾಷೆ ಎಂದರು ಜಗದೀಶ್ ಶೆಟ್ಟರ್.
ರಾಮ ಮಂದಿರದ ಆಹ್ವಾನದ ಬಗ್ಗೆ
ಸೋನಿಯಾ ಗಾಂಧಿ, ಖರ್ಗೆ ಅವರಿಗೆ ಟ್ರಸ್ಟ್ ಅವರು ಆಹ್ವಾನ ಪತ್ರಿಕೆ ಕೊಟ್ಟಿದ್ದಾರೆ. ಆದರೆ ಸಿಎಂ & ಡಿಸಿಎಂಗೆ ಅಹ್ವಾನ ಕೊಟ್ಟಿಲ್ಲ. ಅದು ಟೆಸ್ಟ್ ಅವರಿಗೆ ಬಿಟ್ಟ ವಿಚಾರ. ಕಾಂಗ್ರೆಸ್ ನಾಯಕರು ನಾನು ಹೋಗುವುದಿಲ್ಲ ಅಂದಿದ್ದಾರೆ ಹೊರತು ಬಹಿಷ್ಕಾರ ಅಂದಿಲ್ಲ. ಅಲ್ಲದೆ ಕಾಂಗ್ರೆಸ್ ಕಾರ್ಯಕರ್ತರಿಗೆ ಹೋಗಬೇಡಿ ಎಂದಿಲ್ಲ, ಅವರು ಹೋಗಲ್ಲ ಅಂದಾಗ ನೀವು ಬಲವಂತವಾಗಿ ಯಾಕೆ ಕರ್ಕೊಂಡು ಹೋಗ್ತೀರಿ? ಶ್ರೀರಾಮ ಮಂದಿರ ಸ್ಥಾಪನೆ ಮುಖ್ಯವೋ ಅಥವಾ ಕಾಂಗ್ರೆಸ್ ಟೀಕೆ ಮಾಡುವ ಗುರಿ ಬಿಜೆಪಿ ಅವರಿಗೆ ಇದೆಯೋ? ಎಂದು ಈ ವೇಳೆ ಪ್ರಶ್ನೆ ಮಾಡಿದ್ರು.
-
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications