ವಿಜಯಪುರ ಜೈಲಿನಲ್ಲಿ ಐಟಂ ಡ್ಯಾನ್ಸ್, ಮೂವರ ಅಮಾನತು

Posted By:
Subscribe to Oneindia Kannada

ವಿಜಯಪುರ, ಜನವರಿ 28 : ವಿಜಯಪುರ ಜೈಲಿನಲ್ಲಿ ಗಣರಾಜ್ಯೋತ್ಸವದಂದು ನಡೆದ ಐಟಂ ಡ್ಯಾನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಜನವರಿ 26ರಂದು 38 ಕೈದಿಗಳನ್ನು ಸನ್ನಡೆತೆ ಆಧಾರದ ಮೇಲೆ ಬಿಡುಗಡೆ ಮಾಡಿದ ಬಳಿಕ ಜೈಲಿನಲ್ಲಿ ಐಟಂ ಡ್ಯಾನ್ಸ್ ನಡೆದಿತ್ತು.

ಕಾರಾಗೃಹ ಇಲಾಖೆ ಎಡಿಜಿಪಿ ಸತ್ಯನಾರಾಯಣರಾವ್ ಅವರು ಗುರುವಾರ ವಿಜಯಪುರ ಜೈಲಿಗೆ ಭೇಟಿ ನೀಡಿದ್ದರು. ಭೇಟಿಯ ಬಳಿಕ ಜೈಲಿನ ಪ್ರಭಾರಿ ಅಧೀಕ್ಷಕ ಅಂಬೇಕರ್, ಮುಖ್ಯ ವಾರ್ಡರ್ ಜಿ.ಎಂ.ಗುಂಡಹಳ್ಳಿ, ವಾರ್ಡ್‌ರ್ ಸಂಪತ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. [ಪುನಃ ಜೈಲಿಗೆ ಹಾಕಿ ಎನ್ನುವ ಮೈಸೂರು ಮಹಿಳೆ ಗೋಳು ಏನು?]

karnataka

ಜೈಲಿನಲ್ಲಿ ಐಟಂ ಡ್ಯಾನ್ಸ್ ನಡೆದ ಬಗ್ಗೆ ತನಿಖೆ ನಡೆಸಲು ವಿಜಯಪುರ ಎಸ್ಪಿ ಎಸ್‌.ಎನ್.ಸಿದ್ದರಾಮಪ್ಪ ಅವರ ನೇತೃತ್ವದಲ್ಲಿ ತನಿಖಾ ತಂಡ ರಚನೆ ಮಾಡಲಾಗಿತ್ತು. ಪ್ರಾಥಮಿಕ ವರದಿಯಲ್ಲಿ ಐಟಂ ಡ್ಯಾನ್ಸ್ ನಡೆದಿರುವುದು ನಿಜ ಎಂದು ತಿಳಿದುಬಂದ ಹಿನ್ನಲೆಯಲ್ಲಿ ಮೂವರನ್ನು ಅಮಾನತು ಮಾಡಿ, ಆದೇಶ ಹೊರಡಿಸಲಾಗಿದೆ. [ಗಣರಾಜ್ಯೋತ್ಸವದಲ್ಲಿ ಸೇನಾ ಶಕ್ತಿ ಅನಾವರಣ]

ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಗಣರಾಜ್ಯೋತ್ಸವದಂದು 38 ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಸಚಿವರು, ಹಿರಿಯ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಳಿಕ ಸಮಾರಂಭ ನಡೆದ ವೇದಿಕೆಯಲ್ಲಿಯೇ ಯುವತಿಯೊಬ್ಬಳು ಐಟಂ ಡ್ಯಾನ್ಸ್‌ ಮಾಡಿದ್ದಳು. ಡ್ಯಾನ್ಸ್‌ ಮಾಡಿದ ಯುವತಿ ಮೇಲೆ ವ್ಯಕ್ತಿಯೊಬ್ಬ ದುಡ್ಡಿನ ಸುರಿಮಳೆಗೈದ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಶಿಕ್ಷೆ ಪೂರ್ಣಗೊಳ್ಳದ ನೂರಾರು ಕೈದಿಗಳು ಈ ಐಟಂ ಡ್ಯಾನ್ಸ್‌ಗೆ ಸಾಕ್ಷಿಯಾಗಿದ್ದರು. ಡ್ಯಾನ್ಸ್‌ ಮಾಡಲೆಂದೇ ಯುವತಿಯನ್ನು ಮುಂಬೈನಿಂದ ಕರೆಸಲಾಗಿತ್ತು ಎಂಬ ಆರೋಪವೂ ಇದೆ. ಈ ಟ್ಯಾನ್ಸ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ಬೆಂಗಳೂರಿನಿಂದ ವಿಶೇಷ ತಂಡ ಆಗಮಿಸಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three jail officials were today suspended after item songs performance by a woman dancer in the Vijayapura Jail on the Republic Day. Action had been taken against the jail in charge P.S. Ambekar, Warden Sampat and Gundalli based on the report from Vijayapura District Superintendent of Police Siddaramappa said, DGP (Prisons) Satyanarayana Rao.
Please Wait while comments are loading...