• search

ಮಹತ್ವದ ಯೋಜನೆಗೆ ಇಸ್ರೋ ಸಜ್ಜು: ಉತ್ತರ ಧ್ರುವದಲ್ಲಿ ಉಪಗ್ರಹ ನಿಲ್ದಾಣ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಸೆಪ್ಟೆಂಬರ್ 4: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ) ಉತ್ತರ ಧ್ರುವದಲ್ಲಿ ತನ್ನ ಮೊದಲ ಸಾಗರೋತ್ತರ ಉಪಗ್ರಹ ನಿಲ್ದಾಣ ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದೆ.

  ಇದು ವಿಪತ್ತು ನಿರ್ವಹಣೆಯಂತಹ ಸಂದರ್ಭಗಳಲ್ಲದೆ, ಸಶಸ್ತ್ರಪಡೆಗಳಿಗೂ ಅತ್ಯಂತ ಅಗತ್ಯವಾದ ಭಾರತೀಯ ದೂರ ಸಂವೇದಿ (ಐಆರ್‌ಎಸ್‌) ಕಾರ್ಯಾಚರಣೆಗಳನ್ನು ವೃದ್ಧಿಸಲು ನೆರವಾಗಲಿದೆ.

  ಸ್ಪಿಟ್ಜರ್‌ನ 15ನೇ ವಾರ್ಷಿಕೋತ್ಸವಕ್ಕೆ ನಾಸಾ ನೀಡಿದ 15 ಚೆಂದದ ಉಡುಗೊರೆ

  ಉತ್ತರ ಧ್ರುವದಲ್ಲಿ ಚೀನಾ ಅಧ್ಯಯನ ಕೇಂದ್ರ ಆರಂಭಿಸಿದ ಎರಡು ವರ್ಷಗಳಲ್ಲಿ ಭಾರತದ ಇಸ್ರೋ ಕೂಡ ಈ ಪ್ರಯತ್ನಕ್ಕೆ ಮುಂದಾಗಿದೆ.

  ಇನ್ನೂ ಸಮಯ ಬೇಕು

  ಇನ್ನೂ ಸಮಯ ಬೇಕು

  ಆದರೆ, ಈ ಯೋಜನೆಯನ್ನು ಕಾರ್ಯಗತಗೊಳಿಸಲು ಇನ್ನೂ ಸಾಕಷ್ಟು ಸಮಯ ತಗುಲಲಿದೆ. ಏಕೆಂದರೆ ಅದಕ್ಕೆ, ಸಾಗಾಣಿಕೆಯ ಬೃಹತ್ ಸವಾಲುಗಳು, ಅಂತಾರಾಷ್ಟ್ರೀಯ ಅನುಮತಿ ಮತ್ತು ಸಹಕಾರಗಳು ಅಗತ್ಯ ಎಂದು ಇಸ್ರೋದ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

  ಉತ್ತರ ಧ್ರುವದ ವಿಪರೀತ ಚಳಿಯ ವಾತಾವರಣದಲ್ಲಿ ಹಾರ್ಡ್‌ವೇರ್ ಅಳವಡಿಕೆ ಅತ್ಯಂತ ಕ್ಲಿಷ್ಟಕರ ಕೆಲಸವಾಗಲಿದೆ.

  ಕಳೆದ 50 ವರ್ಷಗಳಲ್ಲಿ ಇದೇ ಮೊದಲ ಬಾರಿ ನಾಸಾದಲ್ಲಿ ಇಂಥ ಘಟನೆ...

  ಎರಡು ಕೇಂದ್ರಗಳಿವೆ

  ಎರಡು ಕೇಂದ್ರಗಳಿವೆ

  ಇಸ್ರೋ ಈಗಾಗಲೇ ಹೈದರಾಬಾದ್‌ನ ಶಾದ್‌ನಗರ್‌ದಲ್ಲಿ ಐಎಂಜಿಇಒಸ್ ಮತ್ತು ಅಂಟಾರ್ಟಿಕಾದಲ್ಲಿ ಎಜಿಇಒಎಸ್ ಎರಡು ಕೇಂದ್ರಗಳನ್ನು ಹೊಂದಿದೆ.

  ಅಂಟಾರ್ಟಿಕಾದ ನಿಲ್ದಾಣದಿಂದ ಈ ವರ್ಷದಲ್ಲಿಯೇ ಭೂ ಗ್ರಹಿಕಾ ಉಪಗ್ರಹಗಳಿಗಾಗಿ ಎರಡನೆಯ ದತ್ತಾಂಶ ಸ್ವೀಕೃತಿ ಆಂಟೆನಾಗಳನ್ನು ಸ್ಥಾಪಿಸುವ ಉದ್ದೇಶ ಹೊಂದಲಾಗಿತ್ತು. ಆದರೆ, ಅದು ಮುಂದಿನ ವರ್ಷ ಜಾರಿಯಾಗಲಿದೆ. 2013ರಲ್ಲಿ ಅಲ್ಲಿ ಮೊದಲ ಆಂಟೆನಾವನ್ನು ಅಳವಡಿಸಲಾಗಿತ್ತು.

  ಅಂಟಾರ್ಟಿಕಾದಲ್ಲಿರುವ ಎಜಿಇಒಎಸ್ ನಿಲ್ದಾಣದಿಂದ ರಿಸ್ಯಾಟ್-2, ಸರಳ್, ರಿಸೋರ್ಸ್‌ಸ್ಯಾಟ್-2, ಓಷಿಯಾನ್‌ ಸ್ಯಾಟ್ ಮತ್ತು ಕಾರ್ಟೊಸ್ಯಾಟ್ ಉಪಗ್ರಹ ಕುಟುಂಬಗಳಿಗೆ ಐಆರ್‌ಎಸ್‌ ದತ್ತಾಂಶಗಳನ್ನು ರವಾನಿಸಲಾಗುತ್ತಿದೆ. ಅದನ್ನು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ ಶಾದ್‌ನಗರ್ ಕೇಂದ್ರಕ್ಕೆ ವರ್ಗಾಯಿಸಲಾಗುತ್ತಿದೆ.

  ಚಂದ್ರಯಾನ-2 ಉಡಾವಣೆಗೆ ಇನ್ನು ನಾಲ್ಕೇ ತಿಂಗಳು ಬಾಕಿ

  ಉತ್ತರ ಧ್ರುವದಲ್ಲಿಯೇ ಏಕೆ?

  ಉತ್ತರ ಧ್ರುವದಲ್ಲಿಯೇ ಏಕೆ?

  ಉತ್ತರ ಧ್ರುವದಲ್ಲಿನ ಕೇಂದ್ರವು ಸಂಪೂರ್ಣ ದತ್ತಾಂಶವನ್ನು ಒಂದೇ ಕಕ್ಷೆಯೊಳಗೆ ಡೌನ್‌ಲೋಡ್ ಮಾಡಲು ಅವಕಾಶ ಒದಗಿಸುತ್ತದೆ. ಹೀಗಾಗಿ ಅದರ ವ್ಯಾಪ್ತಿಯನ್ನು 14 ಕಕ್ಷೆಗಳಷ್ಟು ಹಿಗ್ಗಿಸಲು ಇಸ್ರೋ ಯೋಜನೆ ರೂಪಸಿದೆ. ಹೀಗೆ ಪಡೆದ ಕಚ್ಚಾ ದತ್ತಾಂಶಗಳನ್ನು ಶಾದ್‌ನಗರ್‌ಗೆ ತತ್‌ಕ್ಷಣದಲ್ಲಿ ಪೂರೈಸುತ್ತದೆ.

  ಚೀನಾದ ಮೊದಲ ಸ್ವತಂತ್ರ ಕೇಂದ್ರ

  ಚೀನಾದ ಮೊದಲ ಸ್ವತಂತ್ರ ಕೇಂದ್ರ

  2016ರಲ್ಲಿ ಚೀನಾ ತನ್ನ ಸಂಪೂರ್ಣ ಸ್ವಾಮ್ಯದ ಸಾಗರೋತ್ತರ ಉಪಗ್ರಹ ನಿಲ್ದಾಣ ಕೇಂದ್ರವನ್ನು ಉತ್ತರ ಧ್ರುವದಲ್ಲಿ ಆರಂಭಿಸಿತ್ತು. ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ವಿವಿಧ ದೇಶಗಳಲ್ಲಿ ಜಂಟಿ ಸಹಭಾಗಿತ್ವದಲ್ಲಿ ಅದು ಅನೇಕ ಉಪಗ್ರಹ ಸೌಲಭ್ಯ ಕೇಂದ್ರಗಳನ್ನು ಈ ಹಿಂದೆ ಸ್ಥಾಪಿಸಿತ್ತು.

  19 ಉಡಾವಣಾ ಯೋಜನೆ

  ಚಂದ್ರಯಾನ 2 ಸೇರಿದಂತೆ 19 ಉಡಾವಣಾ ಯೋಜನೆಗಳಿಗೆ ಇಸ್ರೋ ಸಿದ್ಧತೆ ನಡೆಸಿದೆ. ಈ ಎಲ್ಲಾ ಉಡಾವಣೆಗಳೂ ಮುಂದಿನ ಏಳು ತಿಂಗಳ ಒಳಗೆ ನಡೆಯಲಿದೆ. ಈ ಸೆಪ್ಟೆಂಬರ್‌ನಿಂದ ಮುಂದಿನ ಮಾರ್ಚ್ ತಿಂಗಳವರೆಗೆ ಸತತವಾಗಿ ಉಡಾವಣಾ ಚಟುವಟಿಕೆಗಳು ನಡೆಯಲಿವೆ.

  ಪ್ರತಿ 30 ದಿನಗಳಿಗೆ ಎರಡು ಉಪಗ್ರಹಗಳ ಉಡಾವಣೆ ನಡೆಯಲಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Indian Space Research Organisation (ISRO) plans to set up its overseas satellite ground station near the North Pole.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more