ಅಂತರ್ಜಲ ಪತ್ತೆಗೆ ಇಸ್ರೋ ಮೊರೆಹೋದ ಸರ್ಕಾರ

Subscribe to Oneindia Kannada

ನವದೆಹಲಿ, ಫೆಬ್ರವರಿ, 25: ಈಗಾಗಲೇ ಬೇಸಿಗೆ ಕಾವು ರಾಜ್ಯದಲ್ಲಿ ಆರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಜಲಾಶಯಗಳ ನೀರಿನ ಸಂಗ್ರಹಣೆಯಲ್ಲೂ ಕೊರತೆ ಇದೆ.
ಬೇಸಿಗೆಯಲ್ಲಿ ಜನರು ಮತ್ತು ಜಾನುವಾರುಗಳು ಕುಡಿವ ನೀರಿಗೆ ಹಾಹಾಕಾರ ಹಾಕುವುದು ಖಂಡಿತ. ಪರ್ಯಾಯ ನೀರಿನ ಮೂಲದ ಪತ್ತೆಗಾಗಿ ರಾಜ್ಯ ಸರ್ಕಾರ ಇದೀಗ ಇಸ್ರೋ(ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಮೊರೆಹೋಗಿದೆ.[ಉಪಗ್ರಹ ಉಡಾವಣೆ: ದೊಡ್ಡೋರೆಲ್ಲ ಇಸ್ರೋ ಬಳಿ ಬರೋದು ಯಾಕೆ?]

ISRO to map Karnataka villages to find water resources

ಕೊಳವೆಬಾವಿಗಳು ಬತ್ತಿ ಹೋಗಿವೆ. ಪರ್ಯಾಯ ಅಂತರ್ಜಲ ಮೂಲಗಳ ಶೋಧಕ್ಕೆ ಇಸ್ರೋ ನೆರವಾಗಲಿದೆ. ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ 600 ಗ್ರಾಮಗಳಲ್ಲಿ ಇಸ್ರೋ ಮೊದಲಿಗೆ ಕಾರ್ಯೋನ್ಮುಖವಾಗಲಿದೆ.

ಈ ಬಗ್ಗೆ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್‌ಕುಮಾರ್ ಅವರನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ. ಪಾಟೀಲ್ ಭೇಟಿ ಮಾಡಿ ಚರ್ಚಿಸಿದರು. ಇಸ್ರೋ ತಂತ್ರಜ್ಞಾನ, ದೂರಸಂವೇದಿ ಸೌಲಭ್ಯ ಬಳಸಿ ರಾಜ್ಯದಲ್ಲಿ ಲಭ್ಯ ಅಂತರ್ಜಲ ಪ್ರಮಾಣದ ಅಂಕಿ-ಅಂಶ ಮತ್ತು ನಕಾಶೆ ಸಿದ್ಧಪಡಿಸಿ ಜನರಿಗೆ ನೀರನ್ನು ಒದಗಿಸಲಾಗುವುದು ಎಂದು ಪಾಟೀಲ್ ತಿಳಿಸಿದ್ದಾರೆ.[ಕೆ ಆರ್ ಎಸ್ ಡ್ಯಾಂ ಖಾಲಿ, ಬೆಂಗಳೂರು ಬೇಸಿಗೆ ಬಲು ಭೀಕರ!]

ವಿದ್ಯುತ್ ಮತ್ತು ನೀರಿನ ಸಮಸ್ಯೆ ಈ ಬಾರಿ ರಾಜ್ಯವನ್ನು ಕಾಡುವುದು ಖಂಡಿತ. ಅತ್ತ ಜಲಾಶಯಗಳಲ್ಲಿ ನೀರು ಕಡಿಮೆಯಾಗಿದ್ದರೆ ಇತ್ತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆ ದೋರುತ್ತಿದೆ. ಒಟ್ಟಿನಲ್ಲಿ ಮತ್ತೆ ಬರ ಪರಿಸ್ಥಿತಿ ಎದುರಿಸುವ ಸವಾಲು ಈ ಬಾರಿ ರಾಜ್ಯ ಸರ್ಕಾರಕ್ಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Government said that ISRO would map villages to identify availability of water resources to tide over water problems in the state. "ISRO will map villages to find out availability of water resources to solve the water problems of the state," Rural Development and Panchayati Raj Minister HK Patil informed.
Please Wait while comments are loading...