ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್ಐಎಸ್ ನೇಮಕಾತಿಯ ಕೊಂಡಿ ಭಟ್ಕಳದ ಸುಲ್ತಾನ್

By ವಿಕ್ಕಿ ನಂಜಪ್ಪ
|
Google Oneindia Kannada News

ಭಾರತದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಹಾಗೂ ಇಂಟೆಲಿಜೆನ್ಸ್ ಬ್ಯೂರೋ ಈ ವ್ಯಕ್ತಿಗಾಗಿ ಹುಡುಕದ ಸ್ಥಳವಿಲ್ಲ. ಜಗತ್ತಿಗೆ ಅತಿದೊಡ್ಡ ಕಂಟಕವಾಗಿ ಬದಲಾಗುತ್ತಿರುವ ಐಎಸ್ಐಎಸ್ ಸಂಘಟನೆಗೆ ಭಾರತದಿಂದ ಸದಸ್ಯರ ನೇಮಕಾತಿಯಲ್ಲಿ ಈತನದ್ದೇ ಅತಿ ದೊಡ್ಡ ಪಾತ್ರ.

ಆತನ ಹೆಸರು ಅಬ್ದುಲ್ ಖಾದಿರ್ ಸುಲ್ತಾನ್ ಅರ್ಮರ್ ಅಲಿಯಾಸ್ ಸುಲ್ತಾನ್. ಈತನಿಗೆ ಟ್ವಿಟ್ಟರ್‌ನಲ್ಲಿ ಹಲವು ಖಾತೆಗಳಿವೆ. @ Sult, @ Mulla, @Moulana, @Nakhwa, @ Pandit, @ Shekhu, @ Sheikh-Ul-Hadees and @ Pujari ಅವುಗಳಲ್ಲಿ ಕೆಲವು ಮಾತ್ರ. ಈತನ ಜನ್ಮಸ್ಥಳ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನವಾಯತ್ ಕಾಲೋನಿಯ ಹಾಜಿ ಮಂಜಿಲ್ ಎಂಬ ಮನೆ. ಜನನ ದಿನಾಂಕ 1975ರ ಡಿಸೆಂಬರ್ 12. [ಐಎಸ್ಐಎಸ್ ಸೇರಿದವರಿಗೆ ದೇಶಕ್ಕೆ ಮರಳೋ ಆಸೆ]

ಅಲ್ ಖೈದಾದಿಂದ ಐಎಸ್ಐಎಸ್‌ನತ್ತ : ಕಳೆದ ವರ್ಷವಷ್ಟೇ ಬಂಧನಕ್ಕೊಳಗಾದ ಇಂಡಿಯನ್ ಮುಜಾಹಿದೀನ್ ಮುಖಂಡ ಯಾಸಿನ್ ಭಟ್ಕಳ್‌ ಜೊತೆ ಉಗ್ರಲೋಕದಲ್ಲಿ ಸುಲ್ತಾನ್ ಸಂಚಾರ ಆರಂಭಿಸಿದ. ಈತನ ಹೆಸರು ಬೆಳಕಿಗೆ ಬಂದಿದ್ದೇ ಯಾಸಿನ್ ಭಟ್ಕಳ್‌ನಿಂದ.

ಉತ್ತರ ವಜಿರಿಸ್ತಾನದಲ್ಲಿ ತರಬೇತಿ ಪಡೆದಿದ್ದ ಇಂಡಿಯನ್ ಮುಜಾಹಿದೀನ್ ತಂಡದ ಸದಸ್ಯರಲ್ಲಿ ಸುಲ್ತಾನ್ ಕೂಡ ಓರ್ವನಾಗಿದ್ದ. ಅನ್ವರ್ ಭಟ್ಕಳ್, ಶಫಿ ಸುಲ್ತಾನ್, ಹುಸೇನ್ ಫರ್ಹಾನ್ ಮೊಹಮ್ಮದ್, ಸಲೀಂ ಇಶಾಕಿ ಮತ್ತು ಅಫೀಫ್ ಮೋಟಾ ತಂಡದಲ್ಲಿದ್ದ ಇತರ ಸದಸ್ಯರು. [ಅಲ್ಲಿ ಐಎಸ್ಐಎಸ್-ಅಲ್ ಖೈದಾ, ಇಲ್ಲಿ ಐಎಂ-ಸಿಮಿ ಸ್ನೇಹ]

ಆಗ ಅವರು ಅಲ್ ಖೈದಾಗಾಗಿ ತರಬೇತಿ ಪಡೆಯಲು ತೆರಳಿದ್ದರು. ಇಂಡಿಯನ್ ಮುಜಾಹಿದೀನ್ ಸಂಘಟನೆ ಕೂಡ ಐಎಸ್ಐ ಹಿಡಿತದಿಂದ ತಪ್ಪಿಸಿಕೊಂಡು ಜಾಗತಿಕ ಮಟ್ಟದಲ್ಲಿ ಹೊರಹೊಮ್ಮಲು ಯತ್ನಿಸುತ್ತಿತ್ತು.

sultan

ಅನ್ಸರ್ ಉಲ್ ತವಹಿದ್‌ನ ಜನ್ಮ : ಐಎಸ್ಐಎಸ್ ಜನ್ಮ ತಳೆದ ನಂತರ ಇಂಡಿಯನ್ ಮುಜಾಹಿದೀನ್ ಮನಸ್ಸು ಕೂಡ ಬದಲಾಗತೊಡಗಿತ್ತು. ಬಾಗ್ದಾದಿ ಆಡುತ್ತಿದ್ದ ಮಾತುಗಳು ಇಂಡಿಯನ್ ಮುಜಾಹಿದೀನ್‌ ಮನಸ್ಥಿತಿಗೆ ಹೊಂದಿಕೊಳ್ಳುತ್ತಿದ್ದವು. ಆದ್ದರಿಂದ ಅವರೆಲ್ಲ ಐಸ್ಐಎಸ್‌ನತ್ತ ಆಕರ್ಷಿತಗೊಂಡರು. ಆ ಸಂಘಟನೆಗಾಗಿ ಯುವಕರನ್ನು ನೇಮಿಸುವತ್ತ ಗಮನ ಹರಿಸಿದರು. [ಭಾರತದಲ್ಲಿ ಹೆಚ್ಚುತ್ತಿದೆ ಐಎಸ್ಐಎಸ್ ಹಿಡಿತ]

ಒಸಾಮಾ ಬಿನ್ ಲಾಡೆನ್ ಸಾವಿನ ನಂತರ ಸಾಮರ್ಥ್ಯ ಕಳೆದುಕೊಳ್ಳುತ್ತಿರುವ ಅಲ್ ಖೈದಾ ಮೇಲೆ ಇವರಿಗೆ ನಂಬಿಕೆ ಹೋಗಿತ್ತು. ಜೊತೆಗೆ ಅಲ್ ಖೈದಾ ಹಿಡಿತದಲ್ಲಿದ್ದ ಉಗ್ರರು ಕೂಡ ಐಎಸ್ಐಎಸ್‌ನತ್ತ ವಾಲುತ್ತಿದ್ದರು.

ಈ ಸಂದರ್ಭದಲ್ಲಿಯೇ ಅನ್ಸರ್-ಉಲ್-ತವಹಿದ್ ಸಂಘಟನೆ ಜನ್ಮತಳೆಯಿತು. ಈ ಸಂಘಟನೆಯು ಐಎಸ್ಐಎಸ್, ಐಎಂ ಹಾಗೂ ತೆಹ್ರೀಕ್ ಇ ತಾಲಿಬಾನ್‌ಗಳನ್ನು ಒಗ್ಗೂಡಿಸಿತು.

ಎಸ್ಐಎಸ್‌ಗಾಗಿ ಯುವಕರನ್ನು ನೇಮಿಸಲು ಆರಂಭಿಸಿದ ಮೇಲೆ ಬಾಗ್ದಾದಿಯೇ ನೇರವಾಗಿ ಸುಲ್ತಾನ್‌ನನ್ನು ಮುಖಂಡನಾಗಿ ನೇಮಿಸಿದ. ಈ ಕುರಿತು ಘೋಷಣೆ ಹೊರಡಿಸಿದ ವಿಡಿಯೋವನ್ನು ಐಎಸ್ಐಎಸ್ ಸಂಪರ್ಕ ಮಾಧ್ಯಮ 'ಅಲ್-ಇಸಾಬಾಹ್‌'ದಲ್ಲಿ ಪ್ರಸಾರ ಮಾಡಿದ.

ಸುಲ್ತಾನ್ ಈ ಪ್ರಮಾಣದಲ್ಲಿ ಬೆಳೆದ ಮೇಲೆಯೇ ಈತನ ಕುರಿತು ಭಾರತೀಯ ಗುಪ್ತಚರ ದಳಗಳಿಗೆ ಅರಿವಾಗಿ, ಹುಡುಕಾಟ ಆರಂಭಿಸಿದ್ದರು. ಪ್ರಸ್ತುತ ಈತ ಅರಬ್ ದೇಶದಲ್ಲಿದ್ದು ಅಲ್ಲಿಂದಲೇ ಯುವಕರ ನೇಮಕಾತಿ ನಡೆಸುತ್ತಿದ್ದಾನೆ. [ಭಟ್ಕಳ್ ಮೂಲದ ಉಗ್ರ ಯಾರಿಗೂ ಬೇಡ]

ಸಾಮಾಜಿಕ ತಾಣಗಳ ಬಳಕೆ : ಉಗ್ರವಾದಕ್ಕೆ ಯುವಕರನ್ನು ನೇಮಿಸಿಕೊಳ್ಳಲು ಸುಲ್ತಾನ್ ಫೇಸ್‌ಬುಕ್, ಟ್ವಿಟ್ಟರ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುತ್ತಾನೆ. ಹಲವು ಖಾತೆಗಳನ್ನು ಬೇರೆ ಬೇರೆ ಹೆಸರಿನಲ್ಲಿ ನಿರ್ವಹಿಸಿ ಉಗ್ರವಾದದ ಸಂದೇಶ ಹರಡುತ್ತಿದ್ದಾನೆ.

ಈಚೆಗಷ್ಟೇ ರಾಜಸ್ತಾನದ ಕೆಲವು ಯುವಕರನ್ನು ಆತ ನೇಮಕ ಮಾಡಿಕೊಂಡಿದ್ದಾನೆ. ಅವರ ಜೊತೆ ಆನ್ ಲೈನ್‌ನಲ್ಲಿ ಮಾತನಾಡಿ ಖಚಿತಪಡಿಸಿಕೊಂಡ ನಂತರವೇ ಆತ ಮುಂದುವರಿದಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಸುಲ್ತಾನ್ ತನ್ನ ಹೆಸರನ್ನು ಮೊಹಮ್ಮದ್ ಅಟಾ ಎಂದು ಬದಲಾಯಿಸಿಕೊಂಡಿದ್ದ. ಆತನ ಹತ್ತಿರ ಅತ್ಯಂತ ಅಪಾಯಕಾರಿ ಏಜೆಂಟರಿದ್ದಾರೆಂದು ಐಬಿ ಹೇಳಿದೆ.

ಯುವಕರನ್ನು ಐಎಸ್ಐಎಸ್‌ಗೆ ನೇಮಿಸುವಾಗ ಅವರ ಸಾಮರ್ಥ್ಯವನ್ನು ಸುಲ್ತಾನ್ ಕೂಲಂಕಷವಾಗಿ ಪರಿಶೀಲಿಸುತ್ತಾನೆ. ಮತ್ತೋರ್ವ ವ್ಯಕ್ತಿ ಅವರನ್ನು ಆಯ್ಕೆ ಮಾಡಿದ ನಂತರವೇ ಸುಲ್ತಾನ್ ಪರೀಕ್ಷಿಸಲು ಆರಂಭಿಸುತ್ತಾನೆ. ಸಂಪೂರ್ಣ ನೇಮಕಾತಿಯ ಕಾರ್ಯವನ್ನು ಆತ ಎಂದಿಗೂ ನಿರ್ವಹಿಸುವುದಿಲ್ಲ. ನಂತರ ಆಯ್ಕೆಯಾದವರಿಗೆ ಮಾಹಿತಿ ನೀಡುವುದು ಮತ್ತೊಂದು ತಂಡದ ಕೆಲಸ.

ಭಯೋತ್ಪಾದನೆ ಜಾಲದ ಮುಖ್ಯ ವ್ಯಕ್ತಿ : ಪ್ರಸ್ತುತ ಭಯೋತ್ಪಾದನೆಯ ಜಾಲವನ್ನು ಪತ್ತೆ ಹಚ್ಚಲು ಸುಲ್ತಾನ್ ಪ್ರಮುಖ ವ್ಯಕ್ತಿ ಎನ್ನಿಸಿಕೊಂಡಿದ್ದಾನೆ. ಐಎಸ್ಐಎಸ್ ಪ್ರಸ್ತುತ ಭಾರತದ ಮೇಲೆ ಕಣ್ಣಿಟ್ಟಿದೆ. ಗ್ಲೋಬಲ್ ಇಸ್ಲಾಮಿಕ್ ಕೌನ್ಸಿಲ್ ಇಂಡಿಯಾ ಸಂಘಟನೆಯು ಈ ಕುರಿತು ಕಾರ್ಯನಿರತವಾಗಿದೆ.

ಈ ಕುರಿತು ಸಂಪೂರ್ಣ ಅರಿವು ಹೊಂದಿರುವ ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಐಎಸ್ಐಎಸ್ ಸಂಘಟನೆಗೆ ಭಾರತದಿಂದ ಯುವಕರ ಸೇರ್ಪಡೆ ಅತ್ಯಂತ ಕಡಿಮೆಯಾಗಿದೆ.

ಮಂಗಳವಾರವಷ್ಟೇ ಸುಲ್ತಾನ್‌ನನ್ನು ಬಂಧಿಸಲು ಸಿಕ್ಕಿದ್ದ ಅವಕಾಶವನ್ನು ಪೊಲೀಸರು ಕೈಚೆಲ್ಲಿದ್ದಾರೆ. ಸುಲ್ತಾನ್ ಸಿಕ್ಕಿಬಿದ್ದಿದ್ದರೆ ಭಯೋತ್ಪಾದನೆ ಜಾಲದ ಬಹುದೊಡ್ಡ ಕೊಂಡಿ ಅಥವಾ ಆಧಾರ ಸ್ಥಂಭ ಕಳಚುತ್ತಿತ್ತು.

English summary
The police, National Investigating Agency and the Intelligence Bureau are desperate for Abdul Khadir Sultan Armar. When it comes to ISIS recruitments in India, he is the real big deal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X