ಕೊರೊನಾ: ಸರ್ವ ರೋಗಕ್ಕೂ ಸಾರಾಯಿ ಮದ್ದು, ಮದ್ಯ ಮಾರಾಟದಲ್ಲಿ ಭಾರೀ ಏರಿಕೆ!

ಸರ್ವ ರೋಗಕ್ಕೂ ಸಾರಾಯಿ ಮದ್ದು ಎನ್ನುವ ಗಾದೆಮಾತು, ರಾಜ್ಯದ ಸದ್ಯದ ಪರಿಸ್ಥಿತಿಯಲ್ಲಿ ನಿಜವಾಗುವತ್ತ ಸಾಗುತ್ತಿದೆ. ಕೊರೊನಾ ವಿಶ್ವದೆಲ್ಲಡೆ ದಾಂಧಲೆ ಎಬ್ಬಿಸುತ್ತಿರುವ ಈ ವೇಳೆ, ರಾಜ್ಯದಲ್ಲಿ ಮದ್ಯಮಾರಾಟ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ.

Recommended Video

      Is Brandy And Beer The Best Medicine For Coronavirus | Oneindia Kannada

      ಕೊರೊನಾ ಮತ್ತು ಮದ್ಯದ ವಿಚಾರ, ಕರ್ನಾಟಕದ ಅಸೆಂಬ್ಲಿಯಲ್ಲೂ ಗುರುವಾರ (ಮಾ 13) ಹಾಸ್ಯಭರಿತ ಚರ್ಚೆಗೆ ನಾಂದಿ ಹಾಡಿತ್ತು. ಸಾರಾಯಿ ಮಹತ್ವವನ್ನು ಕೆಲವು ಸದಸ್ಯರು ಉದಾಹರಣೆ ಸಹಿತ ವಿವರಿಸಿದ್ದರು.

      ಹಿಂದೊಮ್ಮೆ ಪ್ಲೇಗ್ ರೋಗ ರಾಜ್ಯದೆಲ್ಲಡೆ ವ್ಯಾಪಕವಾದಾಗ, ಪ್ಲೇಗಮ್ಮ ದೇವಾಲಯ ಅಲ್ಲಲ್ಲಿ ಹುಟ್ಟಿಕೊಂಡಿತ್ತು, ಈಗ ಕೊರೊನಮ್ಮ ದೇವಾಲಯ ಹುಟ್ಟಿಕೊಳ್ಳಬಹುದು ಎಂದು ಹಲವು ಸದಸ್ಯರು, ಅಸೆಂಬ್ಲಿಯಲ್ಲಿ ವ್ಯಂಗ್ಯವಾಡಿದ್ದಾರೆ.

      ಆಲ್ಕೋಹಾಲ್ ಹೆಚ್ಚಿರುವ ಸ್ಯಾನಿಟೈಸರ್ ಅನ್ನು ಹೆಚ್ಚಾಗಿ ಬಳಸಲು ವೈದ್ಯರು ಸಲಹೆ ನೀಡುತ್ತಿದ್ದಾರೆ. ಹಾಗಾಗಿ, ಕೊರೊನಾ ವೈರಸ್ ಗೆ ಸಾರಾಯಿ ಮದ್ದು ಎನ್ನುವುದು ಕೆಲವು ಸದಸ್ಯರ ವಾದವಾಗಿತ್ತು. ಈ ಮಾತಿಗೆ ಪುಷ್ಟಿ ನೀಡುವಂತೆ, ಮದ್ಯ ಮಾರಾಟ ಕಳೆದ ಕೆಲವು ದಿನಗಳಿಂದ ಹೆಚ್ಚಾಗುತ್ತಿದೆ.

      ಮದ್ಯ ಸೇವನೆ ಮಾಡಿದರೆ ಕೊರೊನಾ ವೈರಸ್ ನಿಂದ ಪಾರು

      ಮದ್ಯ ಸೇವನೆ ಮಾಡಿದರೆ ಕೊರೊನಾ ವೈರಸ್ ನಿಂದ ಪಾರು

      ಮದ್ಯ ಸೇವನೆ ಮಾಡಿದರೆ ಕೊರೊನಾ ವೈರಸ್ ನಿಂದ ಪಾರಾಗಬಹುದು ಎನ್ನುವ ಸುದ್ದಿ ಜೋರಾಗಿ ಹರಡುತ್ತಿದೆ. ಇದನ್ನು, ವೈದ್ಯರಾಗಲಿ, ಸರಕಾರವಾಗಲಿ ಎಲ್ಲೂ ಹೇಳಿಲ್ಲ. ಆದರೆ, ಸಾಮಾಜಿಕ ತಾಣದಲ್ಲಿ ಬ್ರಾಂದಿ ಕುಡಿದರೆ, ಈ ವೈರಸ್ ಹತ್ತಿರವೂ ಬರುವುದಿಲ್ಲ ಎನ್ನುವ ಸುದ್ದಿ ಹರಿದಾಡುತ್ತಿದೆ.

      ಎಂಎಸ್ಐಎಲ್ ಮತ್ತು ಎಂಆರ್ಪಿ ಅಂಗಡಿ

      ಎಂಎಸ್ಐಎಲ್ ಮತ್ತು ಎಂಆರ್ಪಿ ಅಂಗಡಿ

      ಇನ್ನು, ಕೊರೊನಾ ವೈರಸ್ ಜೋರಾಗಿ ಸದ್ದು ಮಾಡುತ್ತಿರುವ ದಿನದಿಂದ ಮದ್ಯ ಮಾರಾಟ ಜೋರಾಗಿ ನಡೆಯುತ್ತಿದೆ. ಪ್ರಮುಖವಾಗಿ, ಎಂಎಸ್ಐಎಲ್ ಮತ್ತು ಎಂಆರ್ಪಿ ಅಂಗಡಿಗಳಲ್ಲು ಮದ್ಯ ಮಾರಾಟ ಶೇ. 20-30ರಷ್ಟು ಹೆಚ್ಚಾಗಿದೆ ಎನ್ನುವ ವಿಷಯ ತಿಳಿದುಬರುತ್ತಿದೆ.

      ಬ್ರಾಂದಿ ಮತ್ತು ಬಿಯರ್ ಹೆಚ್ಚಾಗಿ ಮಾರಾಟ

      ಬ್ರಾಂದಿ ಮತ್ತು ಬಿಯರ್ ಹೆಚ್ಚಾಗಿ ಮಾರಾಟ

      ಬ್ರಾಂದಿ ಮತ್ತು ಬಿಯರ್ ಹೆಚ್ಚಾಗಿ ಮಾರಾಟವಾಗುತ್ತಿದೆ. ಬಿರು ಬೇಸಿಗೆ ಮಾರ್ಚ್ ತಿಂಗಳಲ್ಲೇ ಆರಂಭವಾಗಿರುವುದು ಬಿಯರ್ ಮಾರಾಟ ಹೆಚ್ಚಾಗಲು ಕಾರಣವಿದ್ದರೂ ಇರಬಹುದು. ಆದರೆ, ಎಲ್ಲಡೆ ಕೊರೊನಾ ಭಾರೀ ಸದ್ದು ಮಾಡುತ್ತಿರುವುದು ಮತ್ತು ಇನ್ನೊಂದೆಡೆ ಮದ್ಯ ಮಾರಾಟ ಹೆಚ್ಚಾಗುತ್ತಿರುವುದು ಕಾಕತಾಳೀಯ ಎನ್ನುವಂತಿದೆ.

      ಸರ್ವ ರೋಗಕ್ಕೂ ಸಾರಾಯಿ ಮದ್ದು

      ಸರ್ವ ರೋಗಕ್ಕೂ ಸಾರಾಯಿ ಮದ್ದು

      "ಮುಕ್ಕೋಟಿ ದೇವರುಗಳು, ಟಿವಿಯಲ್ಲಿ ಬರುವ ಜ್ಯೋತಿಷಿಗಳಿಗೆ ಕೊರೊನಾ ವೈರಸ್ ಅನ್ನು ಏನೂ ಮಾಡಲು ಆಗುತ್ತಿಲ್ಲ. ಯಾರೂ ಮಾಡದ ಕೆಲಸವನ್ನು ಬ್ರಾಂದಿ ಮಾಡಬಹುದು. ಬ್ರಾಂದಿಯನ್ನು ಹೊಟ್ಟೆಗೆ ಮತ್ತು ಕೈಗೆ ಹಾಕಿಕೊಂಡರೆ, ಕೊರೊನಾ ವೈರಾಣು ಸತ್ತು ಹೋಗುತ್ತದೆ. ಹಾಗಾಗಿ, ಏನು ಬೇಕಾದರೂ ಬಂದ್ ಮಾಡಿ ಆದರೆ, ಬಾರ್ ಮಾತ್ರ ಬಂದ್ ಮಾಡಬೇಡಿ" ಎಂದು ಜೆಡಿಎಸ್ ಮುಖಂಡ ಮರಿತಿಬ್ಬೇಗೌಡ ಎಂದು ತಮಾಷೆಯಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+