CM Ibrahim: ಮುನಿಸು ಮರೆತು ಸಿಎಂ ಇಬ್ರಾಹಿಂ ‘ಕೈ’ ಹಿಡಿಯುತ್ತಾರಾ ಸಿದ್ದರಾಮಯ್ಯ! ಇಬ್ರಾಹಿಂ ಮುಂದಿನ ನಡೆಯೇನು?
ಬೆಂಗಳೂರು, ಅಕ್ಟೋಬರ್ 19: 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಪಕ್ಷದ ನಾಯಕತ್ವದ ನಿರ್ಧಾರದಿಂದ ಅಸಮಾಧಾನಗೊಂಡಿರುವ ಸಿಎಂ ಇಬ್ರಾಹಿಂ ಬಹಿರಂಗವಾಗಿ ಮಾಜಿ ಕುಮಾರಸ್ವಾಮಿ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ಇಬ್ರಾಹಿಂ ಅವರನ್ನ ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಹೌದು, ಸಿಎಂ ಇಬ್ರಾಹಿಂ ಅವರನ್ನ ರಾಜ್ಯಾಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿದ್ದು, ನೂತನ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರು ಆಯ್ಕೆಯಾಗಿದ್ದಾರೆ. ಇನ್ನೂ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿ ಹಿನ್ನೆಲೆ ದೇವೇಗೌಡರ ವಿರುದ್ದವಾಗಿಯೂ ಬಹಿರಂಗವಾಗಿ ಅಸಮಾಧಾನವನ್ನ ಸಿಎಂ ಇಬ್ರಾಹಿಂ ಹೊರಹಾಕಿದ್ದಾರೆ.

ಅಲ್ಲದೇ ಈ ಹಿಂದೆ ಲೋಕಸಭಾ ಚುನಾವಣೆ ಹಿನ್ನಲೆ ಜೆಡಿಎಸ್-ಬಿಜೆಪಿ ಮೈತ್ರಿ ಘೋಷಣೆಯಾದ ಬಳಿಕ ಇಬ್ರಾಹಿಂ ನೀಡಿದ್ದ ಹೇಳಿಕೆಗಳು ಜೆಡಿಎಸ್ ಪಕ್ಷದಲ್ಲಿ ಇರುಸು-ಮುರುಸಿಗೂ ಕಾರಣವಾಗಿತ್ತು. ತಮ್ಮ ಬೆಂಬಲಿಗರ ಸಭೆಯನ್ನು ನಡೆಸಿ, ನಮ್ಮದೇ ಒರಿಜಿನಲ್ ಜೆಡಿಎಸ್ , ಅದಕ್ಕೆ ನಾನೇ ಅಧ್ಯಕ್ಷ ಎಂದು ಹೇಳುವ ಮೂಲಕ ಅಸಮಾಧಾನ ಹೊರಹಾಕಿದ್ದರು. ಇಂಡಿಯಾ ಒಕ್ಕೂಟಕ್ಕೆ ನನ್ನ ಬೆಂಬಲ ಎಂದು ನೇರವಾಗಿಯೇ ಹೇಳಿಕೆ ನೀಡಿದ್ದರು.
ಈ ಎಲ್ಲಾ ಬೆಳವಣೆಗೆಯನ್ನ ಗಮನಿಸಿದರೇ ಸಿಎಂ ಇಬ್ರಾಹಿಂ ಅವರನ್ನ ಏಕಾಏಕಿ ಪಕ್ಷದಿಂದ ತೆಗೆದು ಹಾಕಿದಾರೆ ಮುಸ್ಲೀಂ ಸಮುದಾಯದ ಮತಗಳು ಕೈತಪ್ಪಲಿದೆ ಎನ್ನುವ ಚರ್ಚೆ ಜೆಡಿಎಸ್ ಪಾಳಯದಲ್ಲಿ ಹುಟ್ಟಿಕೊಂಡಿದೆ. ಹೀಗಾಗಿ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡ್ರು ಪಕ್ಷದಿಂದ ಹೊರಹಾಕಿಲ್ಲ. ಇತ್ತ ಸಿಎಂ ಇಬ್ರಾಹಿಂ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಹಿನ್ನೆಲೆ ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ.
ಇನ್ನೂ ಜೆಡಿಎಸ್ ನಾಯಕರ ಜೊತೆಗೆ ಸಿಎಂ ಇಬ್ರಾಹಿಂ ಸಂಬಂಧ ಅಳಸಿದ್ದು, ಸಿಎಂ ಇಬ್ರಾಹಿಂ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮರುಳುತ್ತಾರಾ ಎಂಬ ಚರ್ಚೆ ರಾಜ್ಯ ರಾಜಕಾರಣದಲ್ಲಿ ಹುಟ್ಟಿಕೊಂಡಿದೆ. ಜಾತ್ಯತೀತ ಪಕ್ಷ ಎನಿಸಿಕೊಂಡಿರುವ ಜೆಡಿಎಸ್ ಮುಸ್ಲಿಮರ ಬಗ್ಗೆ ಕಡಿಮೆ ಒಲವು ಹೊಂದಿರುವ ಕೇಸರಿ ಪಕ್ಷದೊಂದಿಗೆ ಕೈಜೋಡಿಸುವುದರ ಬಗ್ಗೆ ಅಸಮಾಧಾನಗೊಂಡಿದ್ದು, ರಾಜಕೀಯ ವಿಶ್ಲೇಷರ ಪ್ರಕಾರ, ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷಕ್ಕೆ ಮರಳುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಗಾಗಲೇ ಕಾಂಗ್ರೆಸ್ ಹೈಕಮಾಂಡ್, ಎಎಪಿ, ಎನ್‌ಸಿಪಿಗಳಿಂದ ಕರೆಗಳು ಬಂದಿವೆ ಎಂದು ಮಾಜಿ ಕೇಂದ್ರ ಸಚಿವ ಸಿಎಂ ಇಬ್ರಾಹಿಂ ಇತ್ತೀಚೆಗೆ ಹೇಳಿಕೊಂಡಿದ್ದರು. ಆದರೆ ಈ ಹಿಂದೆ 2023 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಸಿಎಂ ಇಬ್ರಾಹಿಂ ಅವರು, ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿಯನ್ನ ನಡೆಸಿದ್ರು, ಅಲ್ಲದೇ ಸಿದ್ದರಾಮಯ್ಯ 2018 ರ ಚುನಾವಣೆಯಲ್ಲಿ ಗೆಲ್ಲಲ್ಲು ನಾನು ಕಾರಣ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ರು. ಆದ್ರೆ ಈ ಎಲ್ಲಾ ಮುನಿಸುಗಳನ್ನ ಮರೆತು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಪಡೆ ಮಾಡಿಕೊಳ್ಳುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಅಲ್ಲದೇ ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಸರಣಿ ವಾಗ್ದಾಳಿ ನಡೆಸಿದರು. ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳ ಪೈಕಿ 20 ಸ್ಥಾನಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದ್ದು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿ ಅಸಮಾಧಾನಗೊಂಡ ಹಲವು ನಾಯಕರನ್ನ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪರೇಷನ್ ಹಸ್ತದ ಮೂಲಕ ಗಾಳ ಹಾಕುತ್ತಿದ್ದಾರೆ.
ಇದೀಗ ಜೆಡಿಎಸ್ ನಿಂದ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಸಿಎಂ ಇಬ್ರಾಹಿಂ ಬರ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಈ ಹಿಂದೆ ಕಾಂಗ್ರೆಸ್ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರೂ ಸಹ ಕಾಂಗ್ರೆಸ್ ನ ಹೈಕಮಾಂಡ್ ನಾಯಕರು ಸಿಎಂ ಇಬ್ರಾಹಿಂ ಅವರನ್ನ ಸಂಪರ್ಕಿಸಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲ, ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹಿಂದಿನ ಮುನಿಸು ಮರೆತು ಸಿಎಂ ಇಬ್ರಾಹಿಂ ಅವರನ್ನ ಪಕ್ಷಕ್ಕೆ ಆಹ್ವಾನಿಸುತ್ತಾರಾ ಎಂಬುದನ್ನ ಕಾದುನೋಡ್ಬೇಕಾಗಿದೆ.












Click it and Unblock the Notifications