Get Updates
Get notified of breaking news, exclusive insights, and must-see stories!

ಲೋಕಸಭಾ ಚುನಾವಣೆ: ಜಯಪ್ರಕಾಶ್‌ ಹೆಗ್ಡೆ ನಡೆ ಯಾವ ಕಡೆ? ಪಕ್ಷಾಂತರದ ಬಗ್ಗೆ ಸಿಕ್ಕ ಸುಳಿವೇನು?

ಉಡುಪಿ, ಡಿಸೆಂಬರ್‌ 30: ಕರಾವಳಿಯ ಪ್ರಬಲ ರಾಜಕೀಯ ನಾಯಕರಲ್ಲಿ ಜಯಪ್ರಕಾಶ್‌ ಹೆಗ್ಡೆ ಪ್ರಮುಖರು. ಸುಮಾರು ನಾಲ್ಕು ದಶಕಗಳಿಂದಲೂ ರಾಜಕೀಯದಲ್ಲಿ ತೊಡಗಿಸಿಕೊಂಡಿರುವ ಇವರು ಇಂದಿಗೂ ಕರಾವಳಿ ಭಾಗದ ಜನ ಮೆಚ್ಚಿದ ನಾಯಕ. ಕೆಲವು ನಿರ್ಧಾರಗಳಿಂದ ರಾಜಕೀಯ ಏರಿಳಿತಗಳನ್ನು ಕಂಡಿರುವ ಜಯಪ್ರಕಾಶ್‌ ಹೆಗ್ಡೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಆರಂಭವಾಗಿದೆ.

ರಾಜಕೀಯ ಜೀವನದಲ್ಲಿ ಗೆಲವಿಗಿಂತ ಸೋಲನ್ನು ಹೆಚ್ಚಾಗಿ ಕಂಡಿರುವ ಜಯಪ್ರಕಾಶ್‌ ಹೆಗ್ಡೆ ಎಂದಿಗೂ ಈ ಕ್ಷೇತ್ರದಿಂದ ಹಿಂದೆ ಸರಿದವರಲ್ಲ. ಸೋಲಿನ ಬಳಿಕವು ಪಿನಿಕ್ಸ್ ಹಕ್ಕಿಯಂತೆ ಎದ್ದು ಬಂದು ಜನರ ಜೊತೆಗೆ ಬೆರೆತವರು. ಸದಾ ಚುನಾವಣೆಯಲ್ಲಿ ಚಾಲ್ತಿಯಲ್ಲಿದ್ದ ಜಯಪ್ರಕಾಶ್‌ ಹೆಗ್ಡೆ ಕೆಲ ವರ್ಷಗಳಿಂದ ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಗುರುತಿಸಿಕೊಂಡಿಲ್ಲ.

Is K.Jayaprakash Hegde Contest In Lok Sabha Election 2024

ಕರಾವಳಿ ಭಾಗದಲ್ಲಿ ಒಳ್ಳೆಯ ಉತ್ತಮ ರಾಜಕಾರಣಿ ಎಂದೆಸಿಕೊಂಡಿರುವ ಜಯಪ್ರಕಾಶ್‌ ಹೆಗ್ಡೆ ಈ ಬಾರಿ ಲೋಕಸಭಾ ಚುನಾವಣೆಗೆಯಲ್ಲಿ ಸ್ಪರ್ಧೆಗಿಳಿಯಬಹುದು ಎನ್ನುವುದು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಮಾತಾಗಿದ್ದು, ಯಾವ ಪಕ್ಷದಿಂದ ಎನ್ನುವ ಪ್ರಶ್ನೆ ಕೂಡ ಉದ್ಭವಿಸಿದೆ. ಸದ್ಯ ಬಿಜೆಪಿಯಲ್ಲಿರುವ ಇವರು ಮತ್ತೆ ಕಾಂಗ್ರೆಸ್‌ನತ್ತ ಮುಖ ಮಾಡಿ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕಣಕ್ಕಿಳಿಬಹುದಾ ಎನ್ನುವ ಮಾತು ಕೇಳಿಬರುತ್ತಿದೆ.

ಜಯಪ್ರಕಾಶ್‌ ಹೆಗ್ಡೆ ರಾಜಕೀಯ ಜೀವನ

ಜನತಾದಳದ ಮೂಲಕ ರಾಜ್ಯದ ರಾಜಕೀಯ ರಂಗಕ್ಕೆ ಪ್ರವೇಶ ಪಡೆದ ಜಯಪ್ರಕಾಶ್ ಹೆಗ್ಡೆ, 1985ರ ಮೊದಲ ಪ್ರಯತ್ನದಲ್ಲೇ ಸೋಲು ಕಾಣುತ್ತಾರೆ. ಬಳಿಕ 1994ರಲ್ಲಿ ಬ್ರಹ್ಮಾವರ ಕ್ಷೇತ್ರದಲ್ಲೇ ಮೊದಲ ಬಾರಿ ಜಯಗಳಿಸುವ ಮೂಲಕ ರಾಜ್ಯ ವಿಧಾನಸಭೆಯನ್ನು ಪ್ರವೇಶಿಸಿದ್ದರು. ನಂತರ ಬ್ರಹ್ಮಾವರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವವರೆಗೆ ಸತತ 11 ವರ್ಷ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ ಮೀನುಗಾರಿಕಾ ಸಚಿವರಾಗಿ ಸೇವೆ ಸಲ್ಲಿಸಿದ್ದರು. 1994, 2004ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.

ಮೊದಲ ಸೋಲಿನ ಬಳಿಕ ಗೆಲುವಿನ ನಾಗಾಲೋಟದಲ್ಲಿದ್ದ ಜಯಪ್ರಕಾಶ್ ಹೆಗ್ಡೆ 2008 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಂದಾಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಹಾಲಾಡಿ ಶ್ರೀನಿವಾಸ ಶೆಟ್ಟರ ವಿರುದ್ಧ ಸೋಲನುಭವಿಸಿದರು. 2009ರ ಲೋಕಸಭಾ ಚುನಾವಣೆಯಲ್ಲೂ ಸೋಲುಕಂಡರು. ಆದರೆ ಮತ್ತೆ 2012ರಲ್ಲಿ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ, 2014ರ ಚುನಾವಣೆಯಲ್ಲಿ ಸೋಲು ಅನುಭವಿಸಿದರು.

Is K.Jayaprakash Hegde Contest In Lok Sabha Election 2024

ರಾಜಕೀಯದಲ್ಲಿ ಜಯಪ್ರಕಾಶ್‌ ಹೆಗ್ಡೆ ತಪ್ಪು ಹೆಜ್ಜೆ

2014ರ ಸೋಲಿನ ಬಳಿಕ ದೇಶದಲ್ಲಿ ಮೋದಿ ಅಲೆಯಿಂದ ಜಯಪ್ರಕಾಶ್‌ ಹೆಗ್ಡೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ಹಿರಿಯ ಮುಖಂಡ ಅನಂತ್‌ ಕುಮಾರ್‌ ಅವರ ಸ್ನೇಹದ ಮೇಲೆ ಬಿಜೆಪಿಗೆ ಬಂದ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಅನಂತ್‌ ಕುಮಾರ್‌ ನಿಧನ ಬಳಿಕ ಬಿಜೆಪಿಯಲ್ಲಿ ಗಾಡ್‌ಫಾದರ್‌ ಇಲ್ಲದಂತಾಯಿತು. ಹೀಗಾಗಿ ಮುಂಬರುವ ಯಾವ ಚುನಾವಣೆಯಲ್ಲೂ ಜಯಪ್ರಕಾಶ್‌ ಹೆಗ್ಡೆ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಪರಿಣಿಸಲೇ ಇಲ್ಲ. ಒಂದು ವೇಳೆ ಜಯಪ್ರಕಾಶ್‌ ಹೆಗ್ಡೆ ಕಾಂಗ್ರೆಸ್‌ನಲ್ಲೇ ಇದ್ದಿದ್ದರೆ ಈಗ ರಾಜ್ಯ ಸಂಪುಟದಲ್ಲಿ ಸಚಿವರಾಗುವ ಅವಕಾಶ ಖಂಡಿತ ಸಿಗುತ್ತಿತ್ತು. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದೇ ರಾಜಕೀಯ ಜೀವನದಲ್ಲಿ ಜಯಪ್ರಕಾಶ್‌ ಹೆಗ್ಡೆ ಅವರ ತಪ್ಪು ಹೆಜ್ಜೆ ಎನ್ನುವುದು ಕೆಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಯಡಿಯೂರಪ್ಪ ಬಳಗ ಸೇರದ ಜಯಪ್ರಕಾಶ್‌ ಹೆಗ್ಡೆ

ಜಯಪ್ರಕಾಶ್‌ ಹೆಗ್ಡೆ ಬಿಜೆಪಿಗೆ ಬಂದರೂ ಸಹ ರಾಜ್ಯದ ಪ್ರಮುಖ ಬಿಜೆಪಿ ನಾಯಕರ ಜೊತೆ ಒಡನಾಟ ಅಷ್ಟಕಷ್ಟೇ ಎಂಬಂತಿತ್ತು. ಒಂದು ವೇಳೆ ಜಯಪ್ರಕಾಶ್‌ ಹೆಗ್ಡೆ ಅವರಿಗೆ ಟಿಕೆಟ್‌ ನೀಡಿ ಬಿಜೆಪಿ ಸ್ಪರ್ಧೆಗಳಿಸಿದರೂ ಕೂಡ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಂತಹ ಬಿಜೆಪಿ ಮುಖಂಡರು, ಇವರ ಪರ ಪ್ರಚಾರಕ್ಕಿಳಿಯುತ್ತಿರಲಿಲ್ಲ. ಯಾಕೆಂದರೆ ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಇದೇ ಬಿಜೆಪಿ ಮುಖಂಡರು ಕಾಂಗ್ರೆಸ್‌ನಲ್ಲಿದ್ದ ಜಯಪ್ರಕಾಶ್‌ ಹೆಗ್ಡೆ ವಿರುದ್ಧ ಪ್ರಚಾರ ನಡೆಸಿದ್ದರು, ಹಾಗೂ ಅವರ ವಿರುದ್ಧ ಕೆಲಸ ನಡೆಸಿದ್ದರು. ಹೀಗಾಗಿ ಮತ್ತೆ ಅವರ ಪರ ಚುನಾವಣಾ ಕಣಕ್ಕಿಳಿಯುವ ಸಾಧ್ಯತೆ ಕೂಡ ಕಡಿಮೆಯಾಗಿತ್ತು.

ಮತ್ತೆ ಕಾಂಗ್ರೆಸ್‌ ಸೇರ್ತಾರಾ ಜಯಪ್ರಕಾಶ್‌ ಹೆಗ್ಡೆ ಸಿಕ್ಕ ಸುಳಿವೇನು..?

ಜಯಪ್ರಕಾಶ್‌ ಹೆಗ್ಡೆ ಬಿಜೆಪಿಗೆ ಬಂದರೂ ಸಹ ಬಿಜೆಪಿಯ ಕೆಲ ಸಿದ್ಧಾಂತಗಳನ್ನು ಅವರು ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಹೀಗಾಗಿ ಅವರಿಗೆ ಇನ್ನೂ ಕಾಂಗ್ರೆಸ್‌ ಪರ ಒಲವರಬಹುದು. ಹಾಗೂ ಕಾಂಗ್ರೆಸ್‌ ನಾಯಕರಿಗೂ ಮತ್ತೆ ಜಯಪ್ರಕಾಶ್‌ ಹೆಗ್ಡೆಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಲೆಕ್ಕಾಚಾರವಿರಬಹುದು.

Is K.Jayaprakash Hegde Contest In Lok Sabha Election 2024

ಇಲ್ಲಿ ನಾವು ಗಮನಿಸಬೇಕಾದ ವಿಚಾರವೆಂದರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಯಪ್ರಕಾಶ್‌ ಹೆಗ್ಡೆ ಬಿಜೆಪಿ ಅಭ್ಯರ್ಥಿಗಳ ಪ್ರಚಾರ ಕಾರ್ಯದಲ್ಲಿ ಅಷ್ಟಾಗಿ ತೊಡಗಿಸಿಕೊಂಡಿಲ್ಲ. ತಮ್ಮದೇ ಆತ ಮತಗಳನ್ನು ಅಥವಾ ತಮ್ಮ ಬೆಂಬಲಿಗರ ಮತಗಳನ್ನು ಬಿಜೆಪಿಗೆ ವರ್ಗಾಹಿಸುವ ಕೆಲಸ ಕೂಡ ಮಾಡಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಸದ್ಯ ಜಯಪ್ರಕಾಶ್‌ ಹೆಗ್ಡೆ ಕರ್ನಾಟಕ ಹಿಂದುಳಿದ ವರ್ಗ ಆಯೋಗದ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಬಹುತೇಕ ಎಲ್ಲಾ ಆಯೋಗದ ಅಧ್ಯಕ್ಷರನ್ನು ಬದಲಿಸಿದರೂ, ಜಯಪ್ರಕಾಶ್‌ ಹೆಗ್ಡೆ ಸ್ಥಾನಕ್ಕೆ ಮಾತ್ರ ಕುತ್ತು ತಂದಿಲ್ಲ. ಬದಲಿಗೆ ಅವರನ್ನೇ ಮರು ನೇಮಕ ಮಾಡಿತ್ತು. ಈ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಜಯಪ್ರಕಾಶ್‌ ಹೆಗ್ಡೆ ಮತ್ತೆ ಕಾಂಗ್ರೆಸ್‌ ಪಕ್ಷಕ್ಕೆ ತೆರಳುವ ಸಾಧ್ಯತೆಗಳು ಕೂಡ ಕಂಡು ಬರುತ್ತಿದೆ.

ಜಯಪ್ರಕಾಶ್‌ ಹೆಗ್ಡೆ ಪಕ್ಷ ಬದಲಿಸಿರೆ ಬಿಜೆಪಿಗೆ ಸಿಂಹ ಸ್ವಪ್ನ ಗ್ಯಾರಂಟಿ

ಒಂದು ವೇಳೆ ಜಯಪ್ರಕಾಶ್‌ ಹೆಗ್ಡೆ ಪಕ್ಷ ಬದಲಿಸಿ ಕಾಂಗ್ರೆಸ್‌ ಪಕ್ಷದಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆಗಳಿಗೆದರೆ ಬಿಜೆಪಿಗೆ ಸಿಂಹ ಸ್ವಪ್ನವಾಗುವುದು ಗ್ಯಾರಂಟಿಯಾಗಿದೆ. ಯಾಕೆಂದರೆ ಜಯಪ್ರಕಾಶ್‌ ಹೆಗ್ಡೆ ಕರಾವಳಿ ಭಾಗದಲ್ಲಿ ಜನ ನಾಯಕನಾಗಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯ ಅಧಿಕಾರಿಗಳ ಮೇಲೆ ಹಿಡಿತ ಇಟ್ಟುಕೊಂಡಿರುವ ಅವರು, ಜನರು ಯಾವುದೇ ಸಮಸ್ಯೆಗಳನ್ನು ಹೇಳಿದರೂ ಅದನ್ನು ತಾನೇ ಖುದ್ದು ಫಾಲೋಅಪ್‌ ಮಾಡಿ ಪರಿಹಾರ ನೀಡುತ್ತಾರೆ. ಹೀಗಾಗಿ ಇತ್ತೀಚಿಗೆ ಇವರು ಪಕ್ಷದ ಕಾರ್ಯಕ್ರಮಗಳಿಗಿಂತ ಜನ ಸಾಮಾನ್ಯರು ಆಯೋಜಿಸುವ ಕಾರ್ಯಕ್ರಮಗಳಲ್ಲೇ ಹೆಚ್ಚಾಗಿ ಭಾಗಿಯಾಗುತ್ತಾರೆ.

Is K.Jayaprakash Hegde Contest In Lok Sabha Election 2024

ಇನ್ನು ಲೋಕಸಭಾ ಚುನಾವಣೆ ಪರಿಸ್ಥಿತಿ ಕಳೆದ ಬಾರಿಯಂತೆ ಈ ಬಾರಿ ಇಲ್ಲ. ಕಳೆದ ಎರಡು ಅವಧಿಗಳಲ್ಲಿ ಮೋದಿ ಅಲೆಯಿಂದ ರಾಜ್ಯದ ಬಿಜೆಪಿ ನಾಯಕರಿಗೆ ಗೆಲುವು ಸುಲಭ ಮಾರ್ಗವಾಗಿತ್ತು. ಆದರೆ ಈ ಬಾರಿ ರಾಜ್ಯದಲ್ಲೂ ಬಿಜೆಪಿ ಸೋತಿರುವುದರಿಂದ ಗೆಲುವಿಗೆ ಹರಸಾಹಸ ಪಡಬೇಕಾಗಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆಯ ಮೇಲೆ ಮತದಾರರಿಗೆ ಅಸಮಾಧಾನವಿದ್ದು, ಈ ಬಾರಿ ಅವರನ್ನೇ ಕಣಕ್ಕಿಳಿಸಿದರೆ ಬಿಜೆಪಿಗೆ ಗೆಲುವು ಕಷ್ಟದ ಹಾದಿಯಾಗುವ ಸಾಧ್ಯತೆ ಇದೆ. ಇನ್ನು ಈ ಬಾರಿ ಒಂದು ವೇಳೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜಯಪ್ರಕಾಶ್‌ ಹೆಗ್ಡೆ ಕಣಕ್ಕಿಳಿದರೆ ಬಿಜೆಪಿಯಿಂದ ಯಾವುದೇ ಅಭ್ಯರ್ಥಿ ಕಣಕ್ಕಿಳಿದದೂ, ಜಿದ್ದಾಜಿದ್ದಿಯ ಫೈಟ್ ನಡೆಯಲಿದೆ. ತಮ್ಮ ವೈಯಕ್ತಿಕ ವರ್ಚಸ್ಸು ಹಾಗೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ಛಾಪಿನ ಮೇಲೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೂ ಸಹ ಗೆಲುವಿನ ಹಾದಿ ಸಲುಭವಾಗುತ್ತದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+