ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಪಾ ಅವರೇ, ಅದೇನು ಸಾಹಿತ್ಯ ಸಮ್ಮೇಳನವೋ, ಕಾಂಗ್ರೆಸ್ ಸಮಾವೇಶವೋ?

|
Google Oneindia Kannada News

ಭುವನೇಶ್ವರಿಗೆ ಪೂಜೆ ಮಾಡಲಿಲ್ಲ, ಕರ್ನಾಟಕದ ಹೆಮ್ಮೆಯ ಪ್ರತೀಕವಾದ ಮೈಸೂರು ಪೇಟ ತೊಡಲಿಲ್ಲ.. ಮಹಾನ್ ನಾಸ್ತಿಕರಾಗಿರುವ ಚಂದ್ರಶೇಖರ ಪಾಟೀಲ ಯಾನೆ ಚಂಪಾ, ಅದನ್ನೆಲ್ಲಾ ನಂಬೋದಿಲ್ಲಾ,. ಒಪ್ಪಿಕೊಳ್ಳೋಣ. ಅದು ಅವರವರ ನಂಬಿಕೆಗೆ ಬಿಟ್ಟ ವಿಚಾರ. ಆದರೆ, ಕನ್ನಡ ಸಾಹಿತ್ಯ ಸಮ್ಮೇಳನವನ್ನು ಚಂಪಾ ಅವರು ಕಾಂಗ್ರೆಸ್ ಸಮಾವೇಶ ಅನ್ಕೊಂಡಿದ್ರಾ ಎನ್ನುವುದು ಇಲ್ಲಿ ಪ್ರಶ್ನೆ?

ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ

ರಾಜಕೀಯದ ಗಂಧಗಾಳಿ ಸುಳಿಯಬಾರದಂತಹ ಅಕ್ಷರ ತೇರಿನ ಜಾತ್ರೆಯಲ್ಲಿ ಚಂಪಾ, ಬಹುಷ: ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಅಧ್ಯಕ್ಷರ ವೇದಿಕೆಯನ್ನು ಮೋದಿಯನ್ನು ತೆಗಳಲು, ಇನ್ನೊಬ್ಬರನ್ನು ಹೊಗಳಲು ಬಳಸಿಕೊಂಡು, ಸಮ್ಮೇಳನವನ್ನು ರಾಜಕೀಯ ಸಮಾವೇಶದಂತೆ ಮಾಡಿಕೊಂಡಿದ್ದು ವಿಷಾದನೀಯ.

ಮೋದಿಯನ್ನು ತೆಗಳಬಾರದು, ಸಿದ್ದರಾಮಯ್ಯನವರನ್ನು ಅಟ್ಟಕ್ಕೇರಿಸಬಾರದು ಎಂದು ಇಲ್ಲಿ ಯಾರೂ ಹೇಳುವುದಿಲ್ಲವಾದರೂ, ಎಲ್ಲದಕ್ಕೂ ಒಂದು ವೇದಿಕೆ ಅನ್ನೋದು ಇರುತ್ತದೆ ಎನ್ನುವುದನ್ನು ಹಿರಿಯ ಬಂಡಾಯ ಸಾಹಿತಿ ಚಂಪಾ ಅರ್ಥಮಾಡಿಕೊಳ್ಳದೇ ಇದ್ದದ್ದು ಬೇಸರ ತರುವ ಸಂಗತಿ.

ಕನ್ನಡದ ಸಂಕಟಗಳಿಗೆಲ್ಲ ಕುಲಕಂಟಕರೇ ಕಾರಣ : ಚಂಪಾಕನ್ನಡದ ಸಂಕಟಗಳಿಗೆಲ್ಲ ಕುಲಕಂಟಕರೇ ಕಾರಣ : ಚಂಪಾ

ಅಧ್ಯಕ್ಷರ ಮೆರವಣಿಗೆಗೆ ಮುನ್ನವೇ, ಸಾಹಿತ್ಯ ಸಮ್ಮೇಳನದ ಆರಂಭದಿಂದ ನಡೆದುಕೊಂಡು ಬರುತ್ತಿರುವ ಪದ್ದತಿಗೆ ಚಂಪಾ ಒಲ್ಲೆ ಅಂದಾಗಲೇ, ಬಹಳಷ್ಟು ಕನ್ನಡಿಗರಿಗೆ ಇವರ ನಡೆ ಬೇಸರ ತಂದಿತ್ತು. ಇವರ ನಾಸ್ತಿಕತನ ಆಮೇಲೆ, ಮೊದಲು ಇವರು ಸಮ್ಮೇಳನದ ಅಧ್ಯಕ್ಷರಾಗಿ ಇಲ್ಲಿ ನಡೆದುಕೊಳ್ಳಬೇಕಿತ್ತಲ್ಲವೇ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು.

ಭುವನೇಶ್ವರಿ ದೇಗುಲಕ್ಕೆ ಹೋಗದ, ಮೈಸೂರು ಪೇಟ ನಿರಾಕರಿಸಿದ ಚಂಪಾಭುವನೇಶ್ವರಿ ದೇಗುಲಕ್ಕೆ ಹೋಗದ, ಮೈಸೂರು ಪೇಟ ನಿರಾಕರಿಸಿದ ಚಂಪಾ

ರಾಜ್ಯದ ಏಕೈಕ ಭುವನೇಶ್ವರಿ ದೇವಾಲಯದ ಗೇಟಿನ ತನಕ ತೆರಳಿದರೂ, ದೇಗುಲದೊಳಗೆ ಚಂಪಾ ಪ್ರವೇಶಿಸಲಿಲ್ಲ. ಸಚಿವ ಮಹಾದೇವಪ್ಪ, ಕಸಾಪ ಅಧ್ಯಕ್ಷ ಮನು ಬಳಿಗಾರ್, ಸರ್..ಇದು ಕನ್ನಡ ದೇವತೆ, ಬನ್ನಿ ಸರ್ ಎಂದು ಇಬ್ಬರೂ ಮನವಿ ಮಾಡಿಕೊಂಡರೂ, ಚಂಪಾ ದೇಗುಲದೊಳಗೆ ಪ್ರವೇಶಿಸಲಿಲ್ಲ. ಹಾಗೆಯೇ, ಮೈಸೂರು ಪೇಟ ತೊಡಲಿಲ್ಲ. ಅಲ್ಲಿ ನೆರೆದಿದ್ದ ಜನ ಮೈಸೂರು ಪೇಟ ಹಾಕಿಕೊಳ್ಳಿ ಸರ್ ಎಂದು ಕೇಳಿಕೊಂಡರೂ, ಚಂಪಾ ಒಲ್ಲೆ ಅಂದರು. ಮುಂದೆ ಓದಿ..

ಸಚಿವ ಸ್ಥಾನದಿಂದ ಕಿತ್ತೊಗೆಯಿರಿ ಎಂದು ಚಂಪಾ ಆಗ್ರಹ

ಸಚಿವ ಸ್ಥಾನದಿಂದ ಕಿತ್ತೊಗೆಯಿರಿ ಎಂದು ಚಂಪಾ ಆಗ್ರಹ

ಮೊದಲಿಗೆ ಶಿಕ್ಷಣ ಸಚಿವ, ತನ್ವೀರ್ ಸೇಠ್ ಅವರಿಗೆ ಕ್ಲಾಸ್ ತೆಗೆದುಕೊಂಡ ಚಂಪಾ, ಅವರನ್ನು ಸಚಿವ ಸ್ಥಾನದಿಂದ ಮೊದಲು ಕಿತ್ತೊಗೆಯಿರಿ ಎಂದು ವೇದಿಕೆಯಲ್ಲೇ, ಸಿದ್ದರಾಮಯ್ಯನವರನ್ನು ಅಗ್ರಹಿಸಿದರು. ಜೊತೆಗೆ, ಚುನಾವಣೆಯಲ್ಲಿ ಸೆಕ್ಯೂಲರ್ ಪಕ್ಷಕ್ಕೇ ಮತನೀಡಿ ಎಂದು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ರಾಜಕೀಯ ಕಹಳೆ ಊದಿದರು.

ತನ್ವೀರ್ ಸೇಠ್ ರನ್ನು ಸಂಪುಟದಿಂದ ಕೈ ಬಿಡಿ ಎಂದ ಚಂಪಾತನ್ವೀರ್ ಸೇಠ್ ರನ್ನು ಸಂಪುಟದಿಂದ ಕೈ ಬಿಡಿ ಎಂದ ಚಂಪಾ

ಮುಖ್ಯಮಂತ್ರಿಗಳನ್ನು ' ಕನ್ನಡದ ಸಿದ್ದರಾಮಯ್ಯ' ಅಂದ ಚಂಪಾ

ಮುಖ್ಯಮಂತ್ರಿಗಳನ್ನು ' ಕನ್ನಡದ ಸಿದ್ದರಾಮಯ್ಯ' ಅಂದ ಚಂಪಾ

ಕನ್ನಡದ ಸಿದ್ದರಾಮಯ್ಯ ಎಂದು ಮುಖ್ಯಮಂತ್ರಿಗಳನ್ನು ಹೊಗಳಿದ ಚಂಪಾ, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಜಾತ್ಯೀತೀತ ಪಕ್ಷಕ್ಕೆ ಮತನೀಡಿ ಎಂದು ಹೇಳಿದ್ದು, ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಮತನೀಡಿ ಎನ್ನುವಂತಿತ್ತು. ಜೊತೆಗೆ, ಪ್ರಧಾನಿ ಮೋದಿಯವರ ವಿರುದ್ದವೂ ವೇದಿಕೆಯಲ್ಲಿ ವ್ಯಂಗ್ಯವಾಡಿದರು.

ಜನಪ್ರಿಯ ಪ್ರಧಾನಿಗೆ ಮನ್ ಕಿ ಬಾತ್ ನಲ್ಲಿ ಪುರುಷೊತ್ತು ಇರುತ್ತಾ

ಜನಪ್ರಿಯ ಪ್ರಧಾನಿಗೆ ಮನ್ ಕಿ ಬಾತ್ ನಲ್ಲಿ ಪುರುಷೊತ್ತು ಇರುತ್ತಾ

ನಮ್ಮ ಜನಪ್ರಿಯ ಪ್ರಧಾನಿಗೆ ಮನ್ ಕಿ ಬಾತ್ ನಲ್ಲಿ ಇದಕ್ಕೆಲ್ಲಾ ಪುರುಷೊತ್ತು ಇರುತ್ತಾ ಗೊತ್ತಿಲ್ಲ ಎಂದು ಮೋದಿಯವನ್ನು ಅಣಕವಾಡಿದ ಚಂಪಾ, ಕೇಂದ್ರೀಕೃತ ವ್ಯವಸ್ಥೆಯೇ ಕನ್ನಡಕ್ಕೆ ಬಹುದೊಡ್ಡ ಕಂಟಕ. ಕಲ್ಬುರ್ಗಿ, ಗೌರಿ ಹತ್ಯೆಯ ವಿಚಾರದಲ್ಲಿ ಮೋದಿ ಉತ್ತರಿಸಲಿಲ್ಲ ಎಂದು ನಮ್ಮ ಮುಖ್ಯಮಂತ್ರಿಗಳು ಸುಮ್ಮನಿರಬಾರದು. ಜಾಗತೀಕರಣ, ಉದಾರೀಕರಣ, ಖಾಸಗೀಕರಣದ ಜೊತೆ ಕೇಸರೀಕರಣ ಸೇರಿಕೊಂಡು ಪರಿಸ್ಥಿತಿ ಉಲ್ಬಣಗೊಂಡಿದೆ ಎಂದು ಚಂಪಾ ಹೇಳಿದರು. ಅವರ ಈ ಕೇಸರೀಕರಣ ಹೇಳಿಕೆ, ಇದ್ಯಾವುದು ಕಾಂಗ್ರೆಸ್ ಪಕ್ಷದ ಸಮಾವೇಶವೇ ಅನ್ನುವ ಅನುಮಾನ ಮೂಡಿಸದೇ ಇರದು.

ಕನ್ನಡ ಭಾಷೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಸಮಸ್ಯೆಗಳಿವೆ

ಕನ್ನಡ ಭಾಷೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಸಮಸ್ಯೆಗಳಿವೆ

ಕುಟುಕುವುದರಲ್ಲಿ, ವ್ಯಂಗ್ಯವಾಡುವುದರಲ್ಲಿ ಪರಿಣತರಾಗಿರುವ ಚಂಪಾ, ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಯಾಕೆ ಅವರ ಜೊತೆ ಗುರುಸಿಕೊಂಡರೋ ಗೊತ್ತಿಲ್ಲಾ? ಕನ್ನಡ ಭಾಷೆಗೆ ಸಂಬಂಧಪಟ್ಟ ಹಾಗೆ ಸಾಕಷ್ಟು ಸಮಸ್ಯೆಗಳಿವೆ. ಭಾಷೆ, ನೆಲ, ಜಲ, ಜಾತಿ, ಮೀಸಲಾತಿಯ ವಿಷಯದಲ್ಲಿ ಸರಕಾರವನ್ನು ಬಡಿದೆಬ್ಬಿಸುವ ಕೆಲಸವನ್ನು ಮಾಡುವುದು ಬಿಟ್ಟು, 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣ, ಒಂದು ರೀತಿಯ ಚುನಾವಣಾ ಸಮಾವೇಶದಲ್ಲಿ ಚಂಪಾ ಮಾತನಾಡಿದಂತಿತ್ತು ಅಂದರೆ ಸಾಹಿತ್ಯಾಸಕ್ತರು ಅಪಾರ್ಥ ಮಾಡಿಕೊಳ್ಳಬಾರದು.

English summary
83rd Akhila Bharata Kannada Sahitya Sammela President Chandrashekhar Patil (Champa) speech in Mysuru politically motivated?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X