ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ, ಕುಮಾರಸ್ವಾಮಿ ಹೇಳಿಕೆ ಹಿಂದೆ ಬಿಜೆಪಿ ನಾಯಕರು?

|
Google Oneindia Kannada News

ಬೆಂಗಳೂರು, ಆಗಸ್ಟ್ 26 : ಮೈತ್ರಿ ಸರ್ಕಾರ ಪತನಗೊಂಡ ಬಳಿಕ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಮತ್ತು ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಹೇಳಿಕೆಗಳ ಹಿಂದೆ ಬಿಜೆಪಿ ಇದೆಯೇ?.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಂಸದ ವಿ. ಎಸ್. ಉಗ್ರಪ್ಪ ಈ ಕುರಿತು ಪಶ್ನೆ ಮಾಡಿದರು. "ಮೈತ್ರಿ ಸರ್ಕಾರ ಬೀಳಲು ಬಿಜೆಪಿ ಕಾರಣ ಎಂದು ಗೊತ್ತಿದ್ದೂ ವ್ಯತಿರಿಕ್ತ ಹೇಳಿಕೆ ನೀಡಲು ಕಾರಣವೇನು?" ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ- ದೇವೇಗೌಡರ ಮಧ್ಯೆ ಹಸಿ ಹುಲ್ಲು ಹಾಕಿದರೂ ಧಗ್ಗೆನ್ನುವ 23 ವರ್ಷದ ಹಗೆತನಸಿದ್ದರಾಮಯ್ಯ- ದೇವೇಗೌಡರ ಮಧ್ಯೆ ಹಸಿ ಹುಲ್ಲು ಹಾಕಿದರೂ ಧಗ್ಗೆನ್ನುವ 23 ವರ್ಷದ ಹಗೆತನ

"ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಇಂತಹ ಹೇಳಿಕೆ ನೀಡುತ್ತಿರುವುದಕ್ಕೆ ಕಾರಣ, ಅವರ ಜಾತ್ಯಾತೀತ ನಿಲುವು ಬದಲಾಗಿದ್ದೇ ಅಥವಾ ಬಿಜೆಪಿ ಒತ್ತಡ ಹೇರಿ ಹೇಳಿಕೆ ಕೊಡಿಸುತ್ತಿದೆಯೇ?" ಎಂದರು.

ಸಿದ್ದರಾಮಯ್ಯ ವಿರುದ್ಧ ಕದನದ ಬಳಿಕ ಮತ್ತೆ ಮೈತ್ರಿಯ ಮಾತಾಡಿದ ದೇವೇಗೌಡಸಿದ್ದರಾಮಯ್ಯ ವಿರುದ್ಧ ಕದನದ ಬಳಿಕ ಮತ್ತೆ ಮೈತ್ರಿಯ ಮಾತಾಡಿದ ದೇವೇಗೌಡ

"ಕರ್ನಾಟಕದಲ್ಲಿ ಬಿಜೆಪಿಯವರು ವಾಮ ಮಾರ್ಗದ ಮೂಲಕ ಸರ್ಕಾರ ರಚಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ನ 17 ಶಾಸಕರನ್ನು ದಾರಿ ತಪ್ಪಿಸಿ, ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ" ಎಂದು ವಿ. ಎಸ್. ಉಗ್ರಪ್ಪ ಆರೋಪಿಸಿದರು.

ಸಿದ್ದರಾಮಯ್ಯ-ದೇವೇಗೌಡ ಯುದ್ಧ: ಕುಮಾರಸ್ವಾಮಿ ಶಾಂತಿ ಮಂತ್ರಸಿದ್ದರಾಮಯ್ಯ-ದೇವೇಗೌಡ ಯುದ್ಧ: ಕುಮಾರಸ್ವಾಮಿ ಶಾಂತಿ ಮಂತ್ರ

ಬಿಜೆಪಿ ನೆನಪು ಮಾಡಿಕೊಳ್ಳಲಿ

ಬಿಜೆಪಿ ನೆನಪು ಮಾಡಿಕೊಳ್ಳಲಿ

"ಕಾಂಗ್ರೆಸ್‌ನ ಚಳವಳಿ, ಹೋರಾಟದ ಬಗ್ಗೆ ಸಂಘ ಪರಿವಾರದವರು ಮಾತನಾಡುತ್ತಿದ್ದಾರೆ. ಆದರೆ, ಸ್ವಾತಂತ್ರ್ಯ ಚಳವಳಿಗೆ ಅವರ ಕೊಡುಗೆ ಏನು?. ಆ ವೇಳೆಯಲ್ಲಿ ಬ್ರಿಟಿಷರೊಂದಿಗಿನ ಅವರ ಪತ್ರ ವ್ಯವಹಾರಗಳ ಬಗ್ಗೆ ನೆನಪಿಸಿಕೊಳ್ಳಲಿ. ಸಂವಿಧಾನ, ಪ್ರಜಾಪ್ರಭುತ್ವವನ್ನು ನೀಡಿದ ಹೆಗ್ಗಳಿಕೆ ನೆಹರು, ಅಂಬೇಡ್ಕರ್, ಕಾಂಗ್ರೆಸ್ ನಾಯಕರದ್ದು" ಎಂದು ವಿ. ಎಸ್. ಉಗ್ರಪ್ಪ ಹೇಳಿದರು.

ಬಿಜೆಪಿಯ ಶಕುನಿ ತಂತ್ರಗಳು

ಬಿಜೆಪಿಯ ಶಕುನಿ ತಂತ್ರಗಳು

"ರಾಜ್ಯದಲ್ಲಿ ವಾಮ‌ ಮಾರ್ಗದ ಮೂಲಕ ಬಿಜೆಪಿ ಮತ್ತು ಯಡಿಯೂರಪ್ಪ ಸರ್ಕಾರ ರಚಿಸಿದ್ದಾರೆ. ಕಾಂಗ್ರೆಸ್ - ಜೆಡಿಎಸ್‌ನ 17 ಶಾಸಕರನ್ನು ದಾರಿ ತಪ್ಪಿಸಿ, ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಈ ಶಾಸಕರ ರಾಜಕೀಯ ಭವಿಷ್ಯ ನಿರ್ನಾಮಕ್ಕೆ ಶಕುನಿ ತಂತ್ರಗಳನ್ನು ಬಿಜೆಪಿ ರೂಪಿಸಿದೆ" ಎಂದು ವಿ. ಎಸ್. ಉಗ್ರಪ್ಪ ಆರೋಪಿಸಿದರು.

ಸರ್ಕಾರ ಏನು ಮಾಡುತ್ತಿದೆ?

ಸರ್ಕಾರ ಏನು ಮಾಡುತ್ತಿದೆ?

"ಪ್ರವಾಹದಿಂದ ಎಲ್ಲವನ್ನೂ ಕಳೆದುಕೊಂಡಿರುವ ಸಂತ್ರಸ್ತರ ಪುನರ್ವಸತಿಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ?. ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಸ್ಪಂದಿಸಿದೆ?. ಯಡಿಯೂರಪ್ಪ ಸರ್ಕಾರ ವಾಸ್ತವ ಸ್ಥಿತಿಯನ್ನು ಕೇಂದ್ರಕ್ಕೆ ತಿಳಿಸುವಲ್ಲಿ, ಪರಿಹಾರ ತರುವಲ್ಲಿ ವಿಫಲವಾಗಿದೆ. ಜನ ಜೀವನದ ಬಗ್ಗೆ ಕಾಳಜಿ ಇಲ್ಲದ
ಈ ಸರ್ಕಾರ ನಿರ್ಜೀವವಾಗಿದೆ" ಎಂದು ವಿ. ಎಸ್. ಉಗ್ರಪ್ಪ ದೂರಿದರು.

ಬಿಜೆಪಿ ನಾಯಕರ ಒತ್ತಡ

ಬಿಜೆಪಿ ನಾಯಕರ ಒತ್ತಡ

"ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ ಅವರು ಇಂತಹ ಹೇಳಿಕೆ ನೀಡುತ್ತಿರುವುದಕ್ಕೆ ಕಾರಣ, ಅವರ ಜಾತ್ಯಾತೀತ ನಿಲುವು ಬದಲಾಗಿದ್ದೇ ಅಥವಾ ಬಿಜೆಪಿ ಒತ್ತಡ ಹೇರಿ ಹೇಳಿಕೆ ಕೊಡಿಸುತ್ತಿದೆಯೇ?. ಮೈತ್ರಿ ಸರ್ಕಾರ ಬೀಳಲು ಬಿಜೆಪಿ ಕರ್ನಾಟಕ ಕಾರಣ ಎಂದು ಗೊತ್ತಿದ್ದೂ ವ್ಯತಿರಿಕ್ತ ಹೇಳಿಕೆ ನೀಡಲು ಏನು ಕಾರಣ?" ಎಂದು ವಿ. ಎಸ್. ಉಗ್ರಪ್ಪ ಪ್ರಶ್ನಿಸಿದರು.

English summary
Senior Congress leader V.S.Ugrappa asked that is Bharatiya Janata Party (BJP) leaders behind H.D.Deve Gowda and H.D.Kumaraswamy statement against Congress leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X